ಬಸವಣ್ಣನವರ ವಚನಗಳಲ್ಲಿ ತಳವರ್ಗದ ಅಭಿವ್ಯಕ್ತಿಯ ಸ್ವರೂಪ

Main Article Content

ರಮೇಶ್ ಎಮ್. ಗೋನಾಳ್

Abstract

೧೨ನೇ ಶತಮಾನದ ವಚನ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದವರು ಬಸವಣ್ಣನವರು. ಬಾಲ್ಯದಿಂದಲೇ ಉಪನಯನವನ್ನು ತಿರಸ್ಕರಿಸುವ ಮೂಲಕ ಸಮಾಜ ವಿರೋಧಿ ಚಟುವಟಿಕೆಗಳ ವಿರುದ್ಧ ತಮ್ಮ ಧ್ವನಿ ಎತ್ತಿದರು. ಜಾತಿ, ಲಿಂಗ, ಬಡವ-ಬಲ್ಲಿದ, ಮೇಲು-ಕೀಳು ಎಂಬಂತಹ ತಾರತಮ್ಯಗಳ ವಿರುದ್ಧ ಹೋರಾಡಿ ಜಾಗತಿಕ ನಾಯಕರೆನಿಸಿದ್ದಾರೆ. ವೈದಿಕ ಧರ್ಮದ ಚಾತುರ್ವರ್ಣ ಪದ್ಧತಿಯಿಂದಾಗಿ ಶೂದ್ರ ಮತ್ತು ಪಂಚಮ ವರ್ಗದವರನ್ನು ಪ್ರಾಣಿಗಳಿಗಿಂತಲೂ ಕೀಳಾಗಿ ನಡೆಸಿಕೊಳ್ಳಲಾಗುತ್ತಿತ್ತು. ಶಾಸ್ತ್ರಗಳ ಹೆಸರಿನಲ್ಲಿ ಜನರನ್ನು ಸುಲಿಗೆ ಮಾಡಲಾಗುತ್ತಿತ್ತು. ಬಿಟ್ಟಿ ದುಡಿಮೆ ಮಾಮೂಲಾಗಿತ್ತು. ಶೂದ್ರರು ಅಸ್ಪೃಶ್ಯರು ಎಂದು ತಳಬುಡವಿಲ್ಲದ ಭೇದಭಾವ ಮಾಡಿ ಅವರನ್ನು ಶೋಷಣೆ, ಸುಲಿಗೆ ಮಾಡುತ್ತಿದ್ದರು. ಇದೆಲ್ಲವನ್ನೂ ಕಣ್ಣಾರೆ ಕಂಡ ಬಸವಣ್ಣನವರು 12ನೇ ಶತಮಾನದಲ್ಲಿ ವಚನ ಚಳುವಳಿಯ ಮೂಲಕ ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡುವ ಜಾಗತಿಕ ಆಂದೋಲನ ಮಾಡಿದರು. ಬಸವಣ್ಣನವರು ತಮ್ಮ ನಡೆ-ನುಡಿಗಳಲ್ಲಿಯೂ ತಳವರ್ಗದವರನ್ನು, ಶೂದ್ರರನ್ನು ಆತ್ಮೀಯವಾಗಿ ಕಂಡು ಅವರಿಗೂ ಬದುಕುವ ಹಕ್ಕಿದೆ ಮತ್ತು ಸಮಾಜದಲ್ಲಿ ಗೌರವಯುತ ಬದುಕು ನಡೆಸಲು ಅನುವು ಮಾಡಿಕೊಟ್ಟರು. ಭವಿಗಳನ್ನು ಶರಣರನ್ನಾಗಿ ಮಾಡಿದರು. ತಮ್ಮ ವಚನಗಳಲ್ಲಿ ತಳವರ್ಗದವರನ್ನು ತಮ್ಮ ಬಂಧುವಂತೆ, ಅಣ್ಣ, ಅಪ್ಪ ಮೊದಲಾದ ಸಂಬಂಧ ಸೂಚಕ ಶಬ್ದಗಳನ್ನು ಬಳಸಿ, ಅವರನ್ನು ಬಿಗಿದಪ್ಪಿಕೊಂಡಿದ್ದಾರೆ. “ಇವನಾರವ ಇವನಾರವ ಇವನಾರವ ಎಂದೆನಿಸದೆ ನಿಮ್ಮ ಮನೆಯ ಮಗನೆಂದೆನಿಸಯ್ಯ” ಎಂದು ತಳವರ್ಗದ ಕುರಿತು ತಮ್ಮ ವಚನಗಳಲ್ಲಿ ವ್ಯಕ್ತಪಡಿಸಿದ್ದಾರೆ. ಬಸವಣ್ಣನವರ ವಚನಗಳಲ್ಲಿ ತಳವರ್ಗದ ಕುರಿತು ವ್ಯಕ್ತಗೊಂಡ ಚಿಂತನೆಗಳನ್ನು ಚರ್ಚಿಸುವುದು ಈ ಲೇಖನದ ಗುರಿ ಮತ್ತು ಉದ್ದೇಶವಾಗಿದೆ.

Article Details

Section

Research Articles

Author Biography

ರಮೇಶ್ ಎಮ್. ಗೋನಾಳ್

ಸಂಶೋಧನ ವಿದ್ಯಾರ್ಥಿ, ಕನ್ನಡ ವಿಭಾಗ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ.

References

ಕಲ್ಬುರ್ಗಿ ಎಮ್.ಎಮ್., (2001), ಷಟ್ ಸ್ಥಲ ವಚನಗಳು, ಬಸವಯುಗದ ವಚನ ಮಹಾಸಂಪುಟ-1, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು