ದೈವತ್ವದಿಂದ ಕುಲಗುರು ತತ್ವಕ್ಕೇರಿದ ಕಾಯಕ ಶರಣರು

Main Article Content

ಅಕ್ಷತ ಎಂ.ಜಿ.

Abstract

ಸುಮಾರು ಹನ್ನೆರಡನೇ ಶತಮಾನದಲ್ಲಿ ಕರ್ನಾಟಕದಲ್ಲಿ ಉದಯಿಸಿದ ವೀರಶೈವ ಧರ್ಮದಲ್ಲಿದ್ದ ಭಕ್ತ-ಭಗವಂತ ಮೊದಲಾದ ಸಂಸ್ಕಾರಗಳು ಜನರನ್ನಾಕರ್ಷಿಸಿತು. ಜನರ ಬುದ್ಧಿ ಮತ್ತು ದೇಹವನ್ನು ಚುರುಕುಗೊಳಿಸಿತು. ಸಾಮಾಜಿಕ ಅಸಮಾನತೆಯಲ್ಲಿ ಹಿಂದುಳಿದವರು ಜಾತಿ, ಕಸುಬು, ಇತ್ಯಾದಿಗಳ ಹಂಗಿಲ್ಲದೆ ಮುಕ್ತವಾಗಿ ಸೇರಬಹುದಾದ ವೀರಶೈವ ಧರ್ಮಕ್ಕೆ ಆಕರ್ಷಿತರಾದರು. ಜನರಿಗೆ ಸಂಸ್ಕಾರದೊಂದಿಗೆ ಅರ್ಥಪೂರ್ಣ, ಸಾರ್ಥಕ್ಯದ ಬದುಕನ್ನು ಗಳಿಸಲು ಸಾಧ್ಯವಾಯಿತು. ಜೀವನ ಸಾರ್ಥಕ್ಯಕ್ಕಾಗಿ ಶಿವಭಕ್ತಿ ಮತ್ತು ಕಾಯಕ ನಿಷ್ಠೆಯಲ್ಲಿ ತೊಡಗಿದವರಲ್ಲಿ ಮಾದಾರ ಚೆನ್ನಯ್ಯ, ಮಡಿವಾಳ ಮಾಚಯ್ಯ, ಅಂಬಿಗರ ಚೌಡಯ್ಯ, ಮೊದಲಾದವರು ಪ್ರಮುಖರು. ಕಾಯಕ ಶರಣರಿಂದು ತಮ್ಮ ಸಮುದಾಯದವರ ಕುಲಗುರುಗಳಾಗಿ ಆರಾಧನೆಗೆ ಒಳಪಟ್ಟದ್ದಲ್ಲದೆ ಸರಕಾರದ ವಲಯದಲ್ಲೂ ಗೌರವಿಸಲ್ಪಟ್ಟಿರುವುದು ಗಮನಾರ್ಹ.
ಒಟ್ಟಿನಲ್ಲಿ ಅವರು ಸಮಾಜಕ್ಕೆ ಕೊಟ್ಟ ಕೊಡುಗೆಯ ನೆನಪಿನಾರ್ಥವಾಗಿ ಅವರ ಜಯಂತ್ಯುತ್ಸವವನ್ನು ಖಾಸಗಿ ಹಾಗೂ ಸರಕಾರದ ಮಟ್ಟಿನಲ್ಲಿ ಆಚರಿಸುವ ಮೂಲಕ ಶರಣರನ್ನು ಅವರ ಮೌಲ್ಯಗಳನ್ನು ಉಳಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ.

Article Details

Section

Research Articles

Author Biography

ಅಕ್ಷತ ಎಂ.ಜಿ.

ಸಂಶೋಧನಾರ್ಥಿ, ಡಾ. ಹಾ.ಮಾ.ನ ಸಂಶೋಧನಾ ಕೇಂದ್ರ, ಉಜಿರೆ.

How to Cite

ಅಕ್ಷತ ಎಂ.ಜಿ. (2025). ದೈವತ್ವದಿಂದ ಕುಲಗುರು ತತ್ವಕ್ಕೇರಿದ ಕಾಯಕ ಶರಣರು. ಅಕ್ಷರಸೂರ್ಯ (AKSHARASURYA), 7(02), 01 to 06. https://aksharasurya.com/index.php/latest/article/view/1173

References

ಗುಡ್ಡಪ್ಪ ಜಿ., (2000), ಶರಣರ ಅಭಿವ್ಯಕ್ತಿ ಮತ್ತು ಆಶಯ, ನೆಲಮಲೆ ಪಬ್ಲಿಕೇಶನ್ ಹೌಸ್, ಬೆಂಗಳೂರು.