ಅಡಿಗರ ಭೂಮಿಗೀತದ ನಾಯಕ: ‘ಈಡಿಪಸ್’

Main Article Content

ಚಾಂದ್ ಪಾಷ

Abstract

ದೊರೆ ಈಡಿಪಸ್ ನ ತಲ್ಲಣ, ಪಾಪ ಪ್ರಜ್ಞೆ, ತಾಯಿಯನ್ನು ಭೋಗಿಸಿದನೆಂಬ ಕಳಂಕ ಇತ್ಯಾದಿ ಎಲ್ಲ ಗುಣಗಳು ಕೂಡ ಅಡಿಗರ ‘ಭೂಮಿಗೀತ’ ದ ನಾಯಕನಿಗೆ ಹೋಲುವಂಥದ್ದು. ಕಣ್ಣು ಕಳೆದುಕೊಳ್ಳುವ ರೂಪಕವು ಪ್ರಭುತ್ವದ ಅತೀವ ದುರಾಸೆ ಮತ್ತು ಅಜ್ಞಾನವನ್ನು ಸೂಚಿಸುತ್ತದೆ. ಸ್ವಸಂಬಂಧಗಳಲ್ಲಿ ಲೈಂಗಿಕತೆ ಅಕ್ರಮವೂ, ಅಪರಾಧವೂ ಆಗಿ ಇರುವ ಈ ದೇಶದಲ್ಲಿ, ಈಡಿಪಸ್ ನ ಹೋಲುವ ಕ್ರಿಯೆಗಳು ನಡೆಯುತ್ತಿವೆ. ಭೂಮಿಯನ್ನು ತಾಯಿ ಎನ್ನುತ್ತಲೇ ಉತ್ತು, ಬಿತ್ತುವ ಪ್ರಕ್ರಿಯೆ ಮಗನೇ ತಾಯಿಯನ್ನು ಭೋಗಿಸಿದ ಹೋಲಿಕೆ ನೀಡಬಲ್ಲದು. ಹಾಗಾಗಿ ಭೂಮಿಗೀತದ ನಾಯಕನಾಗಿ ದೊರೆ ಈಡಿಪಸ್ ನನ್ನು ಅಡಿಗರು ರೂಪಕವಾಗಿ ತಂದಿದ್ದಾರೆಂದು ಈ ಲೇಖನ ಸಾಧಿಸುತ್ತದೆ. 

Article Details

Section

Research Articles

Author Biography

ಚಾಂದ್ ಪಾಷ

ಸಂಶೋಧನಾ ವಿದ್ಯಾರ್ಥಿ, ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನ ಭಾರತಿ, ಬೆಂಗಳೂರು.

How to Cite

ಚಾಂದ್ ಪಾಷ. (2025). ಅಡಿಗರ ಭೂಮಿಗೀತದ ನಾಯಕ: ‘ಈಡಿಪಸ್’. ಅಕ್ಷರಸೂರ್ಯ (AKSHARASURYA), 6(06), 11 to 16. https://aksharasurya.com/index.php/latest/article/view/1152

References

ಸುಮತೀಂದ್ರ ನಾಡಿಗ (ಸಂ), (2010), ಅಡಿಗರ ಸಮಗ್ರ ಕಾವ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.

ಲಕ್ಷ್ಮಿನಾರಾಯಣ ಭಟ್ಟ ಎನ್.ಎಸ್., (2010), ಕಾವ್ಯ ಪ್ರತಿಭೆ, ಅಂಕಿತ ಪುಸ್ತಕ, ಬೆಂಗಳೂರು.

ಗುಂಡೂರ ಎನ್ಎ.ಸ್., (2022), ವರ್ತಮಾನದ ಇತಿಹಾಸಕಾರ ಮಿಶೆಲ್ ಫುಕೋ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು.