ನೇಯ್ಗೆ ಕಾಯಕದ ಶರಣ ಮತ್ತು ಶರಣೆಯರ ವಚನಗಳ ಮಹತ್ವ

Main Article Content

ಮೋಹನ್‌ ಕುಮಾರ್‌ ಆರ್‌.

Abstract

ಆದ್ಯವಚನಕಾರರಾದ ಜೇಡರ ದಾಸಿಮಯ್ಯನವರು ನೇಯ್ಗೆ ಕಾಯಕವನ್ನು ಮಾಡುತ್ತಿದ್ದ ಶ್ರೇಷ್ಠ ಶಿವಶರಣ ಹಾಗೆಯೇ ದೊರೆತಿರುವ ಆಧಾರಗಳ ಮೇರೆಗೆ ದಾಸಿಮಯ್ಯನ ಪತ್ನಿ ದುಗ್ಗಳೆ, ಅಮುಗಿ ದೇವಯ್ಯ, ಅಮುಗೆ ರಾಯಮ್ಮ, ಆದಯ್ಯ, ಕದಿರ ರೆಮ್ಮವ್ವೆ, ಕದಿರ ಕಾಯಕದ ಕಾಳವ್ವೆಯರು ಕೂಡ ನೇಯ್ಗೆ ಕಾಯಕವನ್ನು ಮಾಡುತ್ತ ಸಮಾಜಕ್ಕೆ ತಮ್ಮದೇ ಆದ ವಚನಗಳ ಮೂಲಕ ಸಮಾಜದ ಸರ್ವೋನ್ನತಿಗೆ ಶ್ರಮಿಸಿದ ಕಾಯಕ ಶರಣ ಮತ್ತು ಶರಣೆಯರು. ನೇಯ್ಗೆ ಕಾಯಕವನ್ನು ಮಾಡುತ್ತಿದ್ದ ಈ ಶರಣ ಮತ್ತು ಶರಣೆಯರು ತಮ್ಮ ಅನುಭವ, ಆತ್ಮಾನುಭೂತಿಯನ್ನು ಸಮಾಜದ ಜನರೊಂದಿಗೆ ಹಂಚಿಕೊಳ್ಳಲು ಪ್ರಯತ್ನಿಸಿದರು. ಸರಳ ಮತ್ತು ಸ್ಪಷ್ಟ ನುಡಿಗಳಲ್ಲಿ ವಚನಗಳನ್ನು ಕಟ್ಟಿಕೊಟ್ಟು ದಾಂಪತ್ಯದಿಂದಲೂ ಮೋಕ್ಷ ಸಂಪಾದನೆ ಸಾಧ್ಯವೆಂಬ ಅಧ್ಯಾತ್ಮಿಕ ಚಿಂತನೆಯನ್ನು ತೋರಿದವರು. ಸತ್ಯದ ಪ್ರತಿಪಾದನೆ, ಸ್ತ್ರೀಪರ ಕಾಳಜಿ, ಸ್ತ್ರೀಸಮಾನತೆ, ವೈಶಾಲ್ಯ ಮನೋಭಾವ, ವಿಶ್ವಮಾನವತ್ವದ ಭಾವನೆ, ಸಂಕುಚಿತತೆಯ ವಿರೋಧ, ಆಡಂಬರ ಮೌಢ್ಯ ಚಿಂತನೆಗಳ ಖಂಡನೆ, ಡಾಂಭಿಕ ಭಕ್ತಿಯ ವಿಡಂಬನೆ, ಅಧ್ಯಾತ್ಮಿಕ ಚಿಂತನೆ, ಅಧ್ಯಾತ್ಮಿಕ ನಿಷ್ಠೆ, ಏಕದೇವೋಪಾಸನೆಯ ನಿಷ್ಠೆ, ನೈಜಭಕ್ತಿ ಪ್ರತಿಪಾದನೆ, ಪುರೋಹಿತಶಾಹಿಯ ನಿರಾಕರಣೆ, ದೃಢ ಭಕ್ತಿ, ಸತ್ಸಂಗಕ್ಕೆ ಆದ್ಯತೆ, ಜಾತಿ ಮತ್ತು ಅಸ್ಪೃಶ್ಯತೆಯ ನಿರಾಕರಣೆ ಮುಂತಾದ ಶ್ರೇಷ್ಠ ಚಿಂತನೆಗಳನ್ನು ಈ ನೇಯ್ಗೆ ಕಾಯಕದ ಶರಣರಲ್ಲಿ ಕಾಣಲು ಸಾಧ್ಯ. 

Article Details

Section

Research Articles

Author Biography

ಮೋಹನ್‌ ಕುಮಾರ್‌ ಆರ್‌.

ಸಂಶೋಧನಾ ವಿದ್ಯಾರ್ಥಿ, ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

How to Cite

ಮೋಹನ್‌ ಕುಮಾರ್‌ ಆರ್‌. (2025). ನೇಯ್ಗೆ ಕಾಯಕದ ಶರಣ ಮತ್ತು ಶರಣೆಯರ ವಚನಗಳ ಮಹತ್ವ. ಅಕ್ಷರಸೂರ್ಯ (AKSHARASURYA), 6(06), 47 to 60. https://aksharasurya.com/index.php/latest/article/view/1156

References

ಜತ್ತಿ ಬಿ.ಡಿ. (ಸಂ), (1989), ಬಸವೇಶ್ವರರ ಸಮಕಾಲೀನರು, ಬಸವ ಸಮಿತಿ, ಹುಬ್ಬಳ್ಳಿ.

ವಿಠ್ಠಪ್ಪ ಗೋರಂಟ್ಲಿ, (2019), ಮೊದಲ ವಚನಕಾರ ದೇವರ ದಾಸಿಮಯ್ಯನ ವಚನಗಳ ಪ್ರಸ್ತುತತೆ, ಪ್ರಸಾರಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಶಿವಪ್ಪ ಕೆ.ಸಿ., (2017), ವಚನದರ್ಶನ, ಅಭಿನವ ಪ್ರಕಾಶನ, ಬೆಂಗಳೂರು.

ಮುಗಳಿ ರಂ.ಶ್ರೀ., (2022), ಕನ್ನಡ ಸಾಹಿತ್ಯ ಚರಿತ್ರೆ, ಗೀತಾ ಬುಕ್ ಹೌಸ್, ಮೈಸೂರು.