ಕನ್ನಡದಲ್ಲಿ ಮೀಸಲಾತಿ ಚಳವಳಿಯ ಇತಿಹಾಸ: ಒಂದು ಅವಲೋಕನ
Main Article Content
Abstract
ಪ್ರಸ್ತುತ ಈ ಲೇಖನದಲ್ಲಿ ಭಾರತದಲ್ಲಿನ ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆ ಶೂದ್ರರು ಅನುಭವಿಸಿದ ಯಾತನೆಗಳು, ಹನ್ನೆರಡನೇ ಶತಮಾನದಲ್ಲಿ ಆದ ಸಾಮಾಜಿಕ ಕ್ರಾಂತಿಗಳು, ಸ್ವಾತಂತ್ರ ಪೂರ್ವದಲ್ಲಿನ ಮೀಸಲಾತಿ ಕ್ರಮಗಳು ನಂತರದ ಬೆಳವಣಿಗೆಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಕೊಲ್ಲಾಪುರದ ಶಾಹುಮಹಾರಾಜರು ಹಿಂದುಳಿದವರಿಗೆ ಶೇಕಡ 50ರಷ್ಟು ಮೀಸಲಾತಿಯನ್ನು ಜಾರಿಗೆ ತಂದ ಮೊದಲ ಭಾರತೀಯ ರಾಜ ಎಂಬ ಹೆಗ್ಗಳಿಕೆ ಪಾತ್ರವಾದ ರೀತಿ ಹಾಗೂ ಅವರ ಕೈಗೊಂಡ ಕಾರ್ಯವೈಖರಿಗಳನ್ನು ಇಲ್ಲಿ ತಿಳಿಸಲಾಗಿದೆ.
ಜೊತೆಗೆ ನಾಲ್ವಡಿ ಕೃಷ್ಣರಾಜ ಒಡೆಯರು ಹಿಂದುಳಿದವರಿಗೆ ನೀಡಿದ ಕೊಡುಗೆಗಳು ಅವರ ಅಧಿಕಾರವಧಿಯಲ್ಲಿ ಜಾರಿಗೆ ತಂದ ಮಿಲ್ಲರ್ ಆಯೋಗ, ಮಿಲ್ಲರ್ ಆಯೋಗವು ಆ ಸಂದರ್ಭದಲ್ಲಿ ಅಧಿಕಾರಿಗಳಿಗೆ ನೀಡುತ್ತಿದ್ದ ತಾರತಮ್ಯ ಸಂಬಳದ ಸೌಲತ್ತುಗಳು ಇತರ ಸೌಲತ್ತುಗಳು ಹಾಗೂ ಆಯೋಗ ಕೈಗೊಂಡ ನಿರ್ಣಯವನ್ನು ಇಲ್ಲಿ ಉಲ್ಲೇಖಿಸಲಾಗಿದೆ.
ಮುಂದೆ ದೇಶ್ಯಾದ್ಯಂತ ಹುಟ್ಟಿಕೊಂಡ ಒಕ್ಕೂಟಗಳು ಜಾತಿ ಸಂಘಟನೆಗಳು, ಸೈಮನ್ ಕಮಿಷನ್, ಡಾ. ಬಿ.ಆರ್. ಅಂಬೇಡ್ಕರ್ ಅವರು ದುಂಡು ಮೇಜಿನ ಸಮ್ಮೇಳನಗಳಲ್ಲಿ ಭಾಗವಹಿಸಿ ಅಸ್ಪೃಶ್ಯರ ಪರವಾಗಿ ಧ್ವನಿ ಎತ್ತಿ ಅದರಲ್ಲಿ ಸರ್ಕಾರ ಕೈಗೊಳ್ಳಬಹುದಾದ ಯೋಜನೆಗಳನ್ನು ಇಲ್ಲಿ ಸ್ಮರಿಸಲಾಗಿದೆ. ಮೈಸೂರು ಸಂಸ್ಥಾನದ ಕೊಡುಗೆ ಮಿಲ್ಲರ್ ಆಯೋಗದಿಂದ ಹಿಡಿದು ಕಾಕಾ ಕಾಲೇಲ್ಕರ್ ಆಯೋಗದ ವರದಿ, ನಾಗನಗೌಡನ ವರದಿ, ಹಿಂದುಳಿದ ವರ್ಗಗಳ ಬೈಬಲ್ ಎಂದೇ ಪ್ರಖ್ಯಾತವಾದ ಹಾವನೂರು ವರದಿ, ವೆಂಕಟಸ್ವಾಮಿ ಆಯೋಗ, ಚಿನ್ನಪ್ಪ ರೆಡ್ಡಿ ಆಯೋಗ, ದ್ವಾರಕನಾದ ಆಯೋಗ ಮುಂತಾದವುಗಳ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಪ್ರಸ್ತುತ ಲೇಖನದಲ್ಲಿ ಚಿತ್ರಿಸಲಾಗಿದೆ.
ಪ್ರತಿ ವರದಿಯ ಮುಖ್ಯಾಂಶಗಳು ಅದರ ರಚನೆ ರಚನೆಯಾಗಲು ಕಾರಣವಾದ ಅಂಶಗಳು ವರದಿಯ ಪರಿಣಾಮ ಅದರ ಮುಖ್ಯ ಅಂಶಗಳು ಇದರ ಪರಿಣಾಮದಿಂದಾಗಿ ಮುಂದೆ ಬಂದ ಆಯೋಗಗಳ ಕೊಡುಗೆಗಳನ್ನು ಇಲ್ಲಿ ತಿಳಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಹಾವನೂರರ ಎಲ್.ಜಿ., (1975), ಎಲ್.ಜಿ. ಹಾವನೂರರ ವರದಿ-1975, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ಬೆಂಗಳೂರು.
ನಾಗಮೋಹನದಾಸ್ ಹೆಚ್.ಎನ್., (2022), ಮೀಸಲಾತಿ ಭ್ರಮೆ ಮತ್ತು ವಾಸ್ತವ, ಜನಪ್ರಕಾಶನ, ಬೆಂಗಳೂರು.
ಚಂದ್ರಶೇಖರ ಟಿ.ಆರ್., (2020), ಭಾರತದಲ್ಲಿ ಮೀಸಲಾತಿ ಇತಿಹಾಸ ಮತ್ತು ಮಿಲ್ಲರ್ ಸಮಿತಿ ವರದಿ: ಒಂದು ಅಧ್ಯಯನ, ನವ ಕರ್ನಾಟಕ ಪ್ರಕಾಶನ, ಬೆಂಗಳೂರು.
ಕೃಷ್ಣಮೂರ್ತಿ ಚಮರಂ (ಸಂ), (2015), ಮೀಸಲಾತಿಯ ಮರ್ಮ, ಲಿಪಿ ಗ್ರಾಫ್ ಪ್ರಕಾಶನ, ಮೈಸೂರು.
ನಾಗ ಸಿದ್ದಾರ್ಥ ಹೊಲೆಯಾರ ಹೊ.ಬ., (2017), ಮೀಸಲಾತಿ ಮತ್ತು ಬಡ್ತಿ ಮೀಸಲಾತಿ, ಬೌದ್ಧ ಸಾಹಿತ್ಯ ಸಂಘ (ರಿ), ಮೈಸೂರು.