ವೈಚಾರಿಕ ಸಂಸ್ಕೃತಿಯ ನಿರ್ಮಾಣ ಮತ್ತು ಎಚ್.ಜಿ. ಸಣ್ಣಗುಡ್ಡಯ್ಯ
Main Article Content
Abstract
ಸಣ್ಣಗುಡ್ಡಯ್ಯನವರು ಕನ್ನಡ ನಾಡಿನ ತುಮಕೂರು ಸ್ಥಳೀಯ ಭಾಗದ ಗ್ರಾಮೀಣ ಪ್ರತಿಭೆ. ಇವರು ಕವಿಯಾಗಿ, ಉತ್ತಮ ಅನುವಾದಕರಾಗಿ, ಶ್ರೇಷ್ಠ ಪ್ರಬಂಧಕಾರರಷ್ಟೇ ಅಲ್ಲದೆ, ಉತ್ತಮ ಅಧ್ಯಾಪಕರಾಗಿ ತಮ್ಮದೇ ಸೃಜನಶೀಲ ವ್ಯಕ್ತಿತ್ವವನ್ನು ಗಳಿಸಿಕೊಂಡಿದ್ದರು. ಇವರು ಬೆರಳೆಣಿಕೆಯಷ್ಟು ಸೃಜನಶೀಲ, ಸೃಜನೇತರ ಕೃತಿಗಳನ್ನು ರಚಿಸಿದ್ದು ಗಾತ್ರದಲ್ಲಿ ಕಿರಿದಾಗಿದ್ದರೂ ಸತ್ವದಲ್ಲಿ ಉತ್ಕೃಷ್ಟ ರಚನೆ ಎನಿಸಿವೆ.
ಸಣ್ಣಗುಡ್ಡಯ್ಯನವರು ತಮ್ಮ ಸ್ಥಳೀಯ ವಲಯದಲ್ಲಿ (ತುಮಕೂರು) ಆರೋಗ್ಯಕರ ಪರಿಸರವನ್ನು ನಿರ್ಮಾಣ ಮಾಡಲು ಅವಿರತವಾಗಿ ಶ್ರಮಿಸಿದ್ದಾರೆ. ತಮ್ಮದೇ ಎಡಪಂಥೀಯ ಚಿಂತನ ಗ್ರಹಿಕೆಗಳಿಂದ ಮಾರ್ಕ್ಸ್ವಾದ ತುಮಕೂರಿನ ಸ್ಥಳೀಯ ಮಟ್ಟದಲ್ಲಿ ನೆಲೆಯೂರಲು ಅವರು ತೋರಿದ ಶ್ರದ್ಧೆ ಅನನ್ಯವಾದುದು. ಇದು ಸ್ಥಳೀಯ ಭಾಗದ ಕಿರಿಯ ತಲೆಮಾರಿನ ಸಾಹಿತಿಗಳಿಗೆ ಸ್ಪೂರ್ತಿದಾಯಕವಾಗಿದೆ. ಇವರ ಎಡಪಂಥೀಯ ಚಿಂತನೆಗಳಿಗೆ, ಮಾರ್ಕ್ಸ್‌ವಾದಿ ವಿಚಾರಗಳಿಗೆ ಹಲವಾರು ಸಹೃದಯ ವಿಚಾರವಂತರು ತುಮಕೂರಿನ ಕೇಂದ್ರಸ್ಥಾನವಾದ ಒಕ್ಕಲಿಗರ ಹಾಸ್ಟೆಲ್‌ನ ಪಕ್ಕದಲ್ಲಿದ್ದ ಟೈಲರಿಂಗ್ ಹಾಲ್‌ನಲ್ಲಿ ಸೇರಿಕೊಂಡು ನಾಡು-ನುಡಿಗೆ ಸಂಬಂಧಿಸಿದಂತೆ ಚರ್ಚೆ ನಡೆಸುತ್ತಿದ್ದು, ಇದೆಲ್ಲವೂ ಜಿಲ್ಲೆಯಲ್ಲಿ ಸಾಹಿತ್ಯಿಕ ಪರಿಸರ ಬೆಳೆಯಲು ಕಾರಣವಾಗಿದ್ದನ್ನು ಸ್ಮರಿಸಬಹುದು. ಜೊತೆಗೆ ಸಮಕಾಲೀನ ಬರಹಗಾರರಿಗೆ ಮಾರ್ಗದರ್ಶಕರಾಗಿದ್ದ ಬಗೆಯನ್ನು ತಿಳಿಯುವುದು ಇಲ್ಲಿ ಹೆಚ್ಚು ಪ್ರಸ್ತುತವಾಗುತ್ತದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಲೋಹಿತಾಶ್ವ ಟಿ.ಎಸ್., (2009), ಅಕ್ಕಡಿಸಾಲು, ಭದ್ರಹವೇಲಿ ಪ್ರಕಾಶನ, ಬೆಂಗಳೂರು.
ದೊಡ್ಡರಂಗೇಗೌಡ, (3.7.2005), ಪ್ರಭಾವ ಬೀರಿದ ಪಂಡಿತರು, ಕರ್ಮವೀರ ಪತ್ರಿಕೆ, ಬೆಂಗಳೂರು