ಬನಹಟ್ಟಿ ನೇಕಾರಿಕೆ: ಒಂದು ಅವಲೋಕನ
Main Article Content
Abstract
ಬನಹಟ್ಟಿ ನೇಕಾರಿಕೆಯ ತವರೂರು ಆಗಿದೆ. ‘ಬನ’ ಎಂದರೆ ಬಣ್ಣ, ‘ಹಟ್ಟಿ’ ಎಂದರೆ ವಾಸಿಸುವ ಸ್ಥಳ. ಹೀಗಾಗಿ, ಬನಹಟ್ಟಿಯನ್ನು ಬಣ್ಣಗಳ ತವರೂರು ಎಂದು ಕರೆಯಲಾಗಿದೆ. ಇಲ್ಲಿ ಕೈಮಗ್ಗಗಳು ಮತ್ತು ಪವರ್ ಲೂಮ್ ಸಹ ಇವೆ. ಜೊತೆಗೆ ನೂಲಿನ ಗಿರಣಿ ಸಹ ಇದೆ. ಬನಹಟ್ಟಿಯಲ್ಲಿ 4500 ನೇಕಾರ ಕುಟುಂಬಗಳಿವೆ. 21 ನೇಕಾರ ಸಹಕಾರಿ ಸಂಘಗಳಿವೆ. ಬನಹಟ್ಟಿಯಲ್ಲಿ ಅಂಚಿನ ವಿನ್ಯಾಸ ಸೀರೆ, ನಕ್ಷತ್ರ ಚಿತ್ರ ಸೀರೆ, ಚೆಸ್ (ಚದುರಂಗ) ವಿನ್ಯಾಸ ಸೀರೆ ಅಲ್ಲದೆ, 200ಕ್ಕೂ ಅಧಿಕ ವಿನ್ಯಾಸದ ಕಾಟನ್ ಸೀರೆ ತಯಾರಾಗುತ್ತವೆ. ಬನಹಟ್ಟಿಯಲ್ಲಿ ದೇವಾಂಗ, ಕುರುಹಿನಶೆಟ್ಟಿ, ಸ್ವಕುಳಸಾಲಿ, ಪದ್ಮಸಾಲಿ, ಶಿವಸಾಮಾಸಾಲಿ, ಪಟ್ಟಸಾಲಿ, ಪಟ್ಟೇಗಾರ, ತೊಗಟವೀರ ಹೀಗೆ ಹಲವಾರು ಪಂಗಡಗಳಿವೆ. ಬನಹಟ್ಟಿಯಲ್ಲಿ ತಯಾರಾಗುವ ಸೀರೆಗಳು ಕರ್ನಾಟಕದ ಮೈಸೂರು, ದಕ್ಷಿಣಕನ್ನಡ, ಬೆಂಗಳೂರು, ರಾಯಚೂರು, ಮಂಗಳೂರು ಈ ಸ್ಥಳಗಳಲ್ಲಿ ವ್ಯಾಪಾರ ಹೊಂದಿವೆ. ನಂತರದಲ್ಲಿ, ಮಹಾರಾಷ್ಟ್ರದ ಸಾಂಗ್ಲಿ, ಮಿರಜ್, ಪುಣೆ, ಮುಂಬೈ ಈ ಸ್ಥಳಗಳಲ್ಲಿ ಸಹ ವ್ಯಾಪಾರ ವಹಿವಾಟು ಇದೆ. ಬನಹಟ್ಟಿಯಲ್ಲಿ ನೇಕಾರ ಸಹಕಾರಿ ಸಂಘಗಳಿವೆ. ಇವುಗಳು ನೇಕಾರರಿಗೆ ಹಲವಾರು ಸೌಲಭ್ಯಗಳನ್ನು ನೀಡಿವೆ. ಅಂದರೆ, ಆರೋಗ್ಯ ವಿಮೆ, ಮಗ್ಗಗಳನ್ನು ಕೊಂಡುಕೊಳ್ಳಲು ಸಾಲದ ರೂಪದಲ್ಲಿ ಹಣ ನೀಡುತ್ತವೆ, ನೇಕಾರರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಾಲವನ್ನು ನೀಡುತ್ತವೆ. ಅಲ್ಲದೆ, ಬ್ರಿಟಿಷ್ ಕಾಲದಿಂದಲೂ ಮತ್ತು ಜಮಖಂಡಿ ಪಟ್ಟವರ್ಧನ್ ಆಳ್ವಿಕೆ ಕಾಲದಿಂದಲೂ ನೇಕಾರಿಕೆ ಇತಿಹಾಸ ಒಳಗೊಂಡಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಬೆನ್ನೂರ ನಾಗೇಂದ್ರಪ್ಪ ಮಂಜಪ್ಪ, (2024), ಬಾಗಲಕೋಟೆ ಜಿಲ್ಲೆಯ ಜೈನ ಕೇಂದ್ರಗಳು,, ಎಸ್.ಟಿ.ಸಿ. ಕಲಾ, ವಾಣಿಜ್ಯ, ಬಿ.ಬಿ.ಎ, ಬಿ.ಎಸ್.ಸಿ ಮತ್ತು ಸ್ನಾತಕೋತ್ತರ ಕೇಂದ್ರ, ಬನಹಟ್ಟಿ.
ಮಹದೇವಪ್ಪ, (2009), ನೇಕಾರ ಸಮಾಜ, ಸಂಸ್ಕೃತಿ, ಆರ್ಥಿಕ ಸ್ಥಿತಿಗತಿ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಸರಗಣಾಚಾರಿ & ಸಂಗಯ್ಯ ಪ., (2015), ಬಾಗಲಕೋಟೆ ಜಿಲ್ಲೆಯ ನೇಕಾರಿಕೆ ಒಂದು ಅಧ್ಯಯನ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.