ಕರ್ನಾಟಕದಲ್ಲಿ ಮಹಾತ್ಮ ಗಾಂಧೀಜಿಯವರ ಸಾಮಾಜಿಕ ಜಾಗೃತಿ
Main Article Content
Abstract
ಮಹಾತ್ಮ ಗಾಂಧೀಜಿಯವರು ಕರ್ನಾಟಕದಲ್ಲಿ ಸಾಮಾಜಿಕ ಜಾಗೃತಿಗೆ ಮಹತ್ತರ ಕೊಡುಗೆ ನೀಡಿದರು. ಅವರು ಸಮಾಜದಲ್ಲಿ ಅಸ್ಪೃಶ್ಯತೆ, ಜಾತಿ ಭೇದ, ಅಸಮಾನತೆಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಗಾಂಧೀಜಿ ತಮ್ಮ ಪ್ರವಾಸಗಳಲ್ಲಿ ಹಳ್ಳಿಗಳಿಗೆ ಭೇಟಿ ನೀಡಿ ಜನರೊಂದಿಗೆ ನೇರ ಸಂವಾದ ನಡೆಸಿದರು. ಸ್ವಚ್ಛತೆ, ಶ್ರಮದ ಮಹತ್ವ, ಸತ್ಯ ಮತ್ತು ಅಹಿಂಸೆಯ ಮೇಲಿನ ನಂಬಿಕೆಯಿಂದ ಜನರಲ್ಲಿ ಬದಲಾವಣೆ ತರಲು ಶ್ರಮಿಸಿದರು. ಹೆಣ್ಣುಮಕ್ಕಳ ಶಿಕ್ಷಣ, ಶ್ರಮಿಕರ ಹಕ್ಕುಗಳು, ಗ್ರಾಮೀಣ ಅಭಿವೃದ್ಧಿ ಇವರ ಗಮನದ ಕೇಂದ್ರವಾಗಿದ್ದವು. ಅವರ ಉಪದೇಶಗಳು ಮತ್ತು ನಡೆನುಡಿಗಳು ಕರ್ನಾಟಕದ ಸಾಮಾಜಿಕ ಚಿಂತನೆಗೆ ಪ್ರಭಾವ ಬೀರಿದವು.
ಈ ಮೂಲಕ ಅವರು ಹೃದಯದಿಂದ ಸಮಾಜ ಸುಧಾರಕನಾಗಿ ಬೆಳೆದರು. ಅಲ್ಲದೆ ಗಾಂಧೀಜಿ ಅವರು ಕರ್ನಾಟಕದೊಂದಿಗೆ ಹೊಂದಿರುವ ಸಂಪರ್ಕ ಹಾಗೂ ಅಸ್ಪೃಶ್ಯತೆ ನಿವಾರಣೆ, ಮಹಿಳೆಯರ ಸಬಲೀಕರಣ, ಅಸಹಕಾರ ಚಳುವಳಿ, ಖಾದಿ ಗ್ರಾಮೋದ್ಯೋಗ, ಸತ್ಯಾಗ್ರಹದ ಕುರಿತಾಗಿ ವಿದ್ಯಾರ್ಥಿಗಳಿಗೆ ನೀಡಿದ ಸಂದೇಶಗಳು, ಈ ವಿಚಾರಧಾರೆಗಳ ಕುರಿತಾಗಿ ತಿಳಿದುಕೊಳ್ಳಬಹುದು.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಪ್ರೊ. ಶೇಕ್ ಅಲಿ ಬಿ, ಪ್ರೊ. ಚಂದ್ರಶೇಖರ್ ಎಸ್., (1997), ಕರ್ನಾಟಕ ಚರಿತ್ರೆ ಸಂಪುಟ 7. ಪ್ರಕಾಶಕರು, ಪ್ರೊ ಎ ವಿ ನಾವಡ ನಿರ್ದೇಶಕರು, ಪ್ರಸಾರಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ
ಎಂ ವಿ ಕೃಷ್ಣರಾವ್ ಹಾಗೂ ಹಾಲಪ್ಪ. ಗ ಸ., (1962), ಹಿಸ್ಟರಿ ಆಫ್ ಫ್ರೀಡಂ ಮೂವ್ಮೆಂಟ್ ಇನ್ ಕರ್ನಾಟಕ, ಸಂಪುಟ 1. ಬೆಂಗಳೂರು.
ಕಾಮತ್ ಸೂರ್ಯನಾಥ್., (1974,1977,1980) ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು. ಸಂಪುಟ 1,2,3.
ಗಾಂಧಿ ಎಂ ಕೆ., (1942), ವಿಮೆನ್ ಅಂಡ್ ಸೋಶಿಯಲ್ ಇಂಜಸ್ಟಿಸ್. ಅಹಮದಾಬಾದ್ ಪು.175
ಕರಮರಕರ್ ಡಿ ಪಿ., (1970), ಸ್ವಾತಂತ್ರ್ಯದ ಪ್ರಮುಖ ಆಂದೋಲನಗಳು. ಮೈಸೂರು ಸರ್ಕಾರದ ಪ್ರಕಟಣೆ.
ಕರ್ನಾಟಕದ ಪರಂಪರೆ, ಸಂಪುಟ 2, ಬೆಂಗಳೂರು. ಪು.216 530