ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬನಹಟ್ಟಿಯ ಪಾತ್ರ
Main Article Content
Abstract
ಭಾರತವು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲು ಯತ್ನಿಸುತ್ತಿರುವಾಗ ಹಲವಾರು ಕಡೆಗಳಲ್ಲಿ ಯೋಧರು ಬ್ರಿಟಿಷರಿಗೆ ಅಸಹಕಾರ ತೋರುವ ಕೆಲಸಗಳನ್ನು ಮಾಡುತ್ತಿದ್ದರು. ಅದೇ ರೀತಿ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ (ಅಂದಿನ ಬಿಜಾಪುರ ಜಿಲ್ಲೆ ಜಮಖಂಡಿ ತಾಲೂಕಿನ) ಬನಹಟ್ಟಿ ವೀರರು ಆಂಗ್ಲರ ವಿರುದ್ಧ ಚಳುವಳಿ ಆರಂಭಿಸಿದರು. ಮಾಸ್ತರರ ತಂಡವು ಹಲವಾರು ಕಡೆಗಳಲ್ಲಿ ಸಿಂದಿ ಗಿಡ ಕಡಿಯುವುದು, ಚಾವಡಿಗೆ ಮತ್ತು ಅಂಚೆ ಕಚೇರಿಗೆ ಬೆಂಕಿ ಹಾಕುವುದು, ತಾರತಂತಿ ಕಿತ್ತು ಕಂಬ ಕೆಡವುವುದು, ಸೇತುವೆ ಮತ್ತು ರೈಲ್ವೆ ಹಳಿ ಕಿತ್ತು ಹಾಕುವ ಕಾರ್ಯ ಮಾಡಿ ಬ್ರಿಟಿಷರ ಆಡಳಿತಕ್ಕೆ ವಿರೋಧ ವ್ಯಕ್ತಪಡಿಸಿದರು. ಅಲ್ಲದೆ ಕ್ರಾಂತಿಕಾರಿ ಭಾಷಣ ಮಾಡಿ ಜನರನ್ನು ಸಂಘಟಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು. ಅಯ್ಯಪ್ಪ ಬಾಗಲಕೋಟೆ, ರಾಮಪ್ಪ ಚಿಂಚೂರ್ , ಬನ್ನಪ್ಪ ಅಜ್ಜಪ್ಪಗೊಳ, ಬಸವಂತ ಚನಾಳ, ಕಲ್ಯಾಣಪ್ಪ ತುಂಗಳ, ಚಿನ್ನಪ್ಪ ಕಾಡಪ್ಪ ದಬಾಡಿ, ಲಕ್ಷ್ಮಣಪ್ಪ ಮೋಪಗಾರ, ಮಲ್ಲಪ್ಪ ಬುಟ್ಟಿನವರ, ತುಕಾರಾಂ ಕೋಪರ್ಡೆ, ದಾದೋಬಾ ಜಾದವ , ಬಸಪ್ಪ ಪಟ್ಟಣ, ಸಿದ್ದಪ್ಪ ಹಾಲಸಿಕರ, ನಿಂಗಪ್ಪ ಆಂಟಿನ, ಸಿದ್ದಪ್ಪ ಕೆಸರಗೊಪ್ಪ, ಮಲ್ಲಪ್ಪ ಕುಂಬಾರ, ಬಸವಣ್ಣಪ್ಪ ಮಟ್ಟಿಕಲ್ಲಿ, ಗಂಗಾಧರ ಟೋಗುಲ್ಲ, ಇವರು ಸ್ವಾತಂತ್ರ್ಯದ ಕಡೆ ತಮ್ಮ ಒಲವನ್ನು ತೋರಿದರು. ಇದರಿಂದ ಬನಹಟ್ಟಿಯು ಸ್ವಾತಂತ್ರ್ಯ ವೀರರ ಆಯಕಟ್ಟಿನ ಸ್ಥಳವಾಯಿತು.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಅರುಣ್ ಕಿರಿ ಮಂಜೇಶ್ವರ, (2022), ಭಾರತದ ಸ್ವಾತಂತ್ರ್ಯ ಹೋರಾಟದ ಮಜಲುಗಳು, ಬೆಂಗಳೂರು: ಉತ್ಥಾನ ಟ್ರಸ್ಟ್.
ಅಪ್ಪಣ್ಣಪ್ಪ ರಾಮಪ್ಪ ಜಂಬಗಿ, (1992), ಸ್ವಾತಂತ್ರ್ಯ ಸಂಗ್ರಾಮದ ಬನಹಟ್ಟಿ ಬಂಟರು, ಬನಹಟ್ಟಿ: ಸ್ವಾತಂತ್ರ್ಯ ಸಮರ ಸೇನಾನಿ ಸಂಘ.
ಮಟೋಳ್ಳಿ ಎಸ್. ಬಿ., (2016), ಜಮಖಂಡಿ ಇತಿಹಾಸ ದರ್ಪಣ, ಜಮಖಂಡಿ: ಶ್ರೀರಂಗನಾಥ ಪ್ರಿಂಟರ್ಸ್.