ನವರಸಪುರದ ಧಾರ್ಮಿಕೇತರ ಪಾರಂಪರಿಕ ಕಟ್ಟಡಗಳು ಮತ್ತು ಜವಾಬ್ದಾರಿ

Main Article Content

ಸಂಗಮೇಶ ಕಚ್ಚು
ಎಂ.ಎನ್. ಬೆನ್ನೂರ

Abstract

ನವರಸಪುರ - ಅದು ಕೇವಲ ಒಂದು ನಗರವಲ್ಲ, ಅದು ಆದಿಲ್ ಶಾಹಿಯ ಕಲಾ, ಸಂಸ್ಕೃತಿ, ಮತ್ತು ವೈಭವದ ಜೀವಂತ ಪ್ರತಿಮೆಯಾಗಿದೆ; ಇಲ್ಲಿ ನವರಸ್ ಮಹಲ್, ನಾರಿ ಮಹಲ್, ತಿಗಣಿ ಮಹಲ್, ಶಹನವಾಜ್ ಖಾನನ ವಾಡೆ ಇತ್ಯಾದಿ ಶಿಲ್ಪಕಲೆಯ ಮೌನ ಸಾರಥಿಗಳಾಗಿ ಇಂದಿಗೂ ಇತಿಹಾಸವನ್ನ ಕಥೆ ಹೇಳುತ್ತಿವೆ. ನವರಸಪುರ ನಗರವು ಆದಿಲ್ ಶಾಹಿ ಕಾಲದ ಸಾಂಸ್ಕೃತಿಕ ನಗರವಾಗಿತ್ತು. ಹಲವಾರು ರೀತಿಯ ಕಲಾತ್ಮಕ ಶಿಲ್ಪ ಶೈಲಿ ಮತ್ತು ವೈಭವಯುತವಾದ ಕಟ್ಟಡ ಹೊಂದಿದ ಯೋಜಿತ ನಗರವಾಗಿತ್ತು. ಧಾರ್ಮಿಕೇತರ ಎಂದರೆ ಸಾಮಾನ್ಯವಾಗಿ ಅರಮನೆ, ಉದ್ಯಾನವನಗಳು, ಕಾರಂಜಿಗಳು, ಸಂಗೀತಕ್ಕೆ ಕಟ್ಟಡಗಳನ್ನ ಒಳಗೊಂಡಿತ್ತು. ಹೀಗಾಗಿ ಎರಡನೇ ಇಬ್ರಾಹಿಂ ಆದಿಲ್ ಶಾಹಿಯು ತನ್ನ ಜೀವನದ ಬಹುಭಾಗವನ್ನ ಇಲ್ಲಿ ಕಳೆದನು. ನವರಸಪುರ ನಗರ ಆದಿಲ್ ಶಾಹಿ ಕಾಲದ ಉಪನಗರ ಮತ್ತು ನವರಸ್ ಮಹಲ್, ನಾರಿ ಮಹಲ್, ತಿಗಣಿ ಮಹಲ್, ಶಹನವಾಜ ಖಾನನ ವಾಡೆ ಕಾಣಬಹುದು. ನವರಸಪುರದ ಧಾರ್ಮಿಕೇತರ ಪಾರಂಪರಿಕ ಕಟ್ಟಡಗಳು ಸಾಂಸ್ಕೃತಿಕ, ಐತಿಹಾಸಿಕ ಮತ್ತು ವೈಶಿಷ್ಟ್ಯಪೂರ್ಣ ಶೈಲಿಯ ಪ್ರತಿರೂಪಗಳಾಗಿವೆ. ಇವು ಕಾಲಾನುಗತವಾಗಿ ಹಾಳಾಗುತ್ತಿರುವುದರಿಂದ ಸಂರಕ್ಷಣೆಯ ಅಗತ್ಯತೆ ಹೆಚ್ಚುತ್ತಿದೆ. ಈ ಕಟ್ಟಡಗಳು ಧಾರ್ಮಿಕ ಸ್ವರೂಪವಿಲ್ಲದಿದ್ದರೂ, ಸಮುದಾಯದ ಚರಿತ್ರೆ, ದಿನಚರಿ ಮತ್ತು ಸ್ಥಳೀಯ ಪರಂಪರೆಯ ಪ್ರತಿರೂಪವಾಗಿವೆ. ನಗರೀಕರಣ, ನಿರ್ಲಕ್ಷ್ಯ ಮತ್ತು ಸಂರಕ್ಷಣೆಯ ಕೊರತೆಯಿಂದ ದಡದಲ್ಲಿವೆ (ಇದು ‘ಅಪಾಯದಲ್ಲಿವೆ’ ಎಂಬ ಅರ್ಥ ಕೊಡುವ ಪದವಾಗಿರಬಹುದು, ಆದರೆ ಮೂಲ ಲೇಖನ ಬದಲಿಸಿಲ್ಲ). ಈ ಅಧ್ಯಯನ, ಇಂಥ ಕಟ್ಟಡಗಳ ಮಹತ್ವವನ್ನು ವಿವರಿಸುತ್ತಿದ್ದು, ಸ್ಥಳೀಯ ಸಂಸ್ಥೆಗಳು, ಸರ್ಕಾರ ಹಾಗೂ ನಾಗರಿಕರು ಸಂರಕ್ಷಣೆಯಲ್ಲಿ ಪಾತ್ರವಹಿಸುವ ಅಗತ್ಯವನ್ನು ಎತ್ತಿಹಿಡಿಯುತ್ತದೆ.

Article Details

Section

Research Articles

Author Biographies

ಸಂಗಮೇಶ ಕಚ್ಚು

ಎಂ.ಎ. ಪಿಜಿ ಡಿಪ್ಲೋಮಾ ಇನ್ ಅರ್ಕವಲ್, ಮೋಡಿ ಸ್ಟಡಿ.

ಎಂ.ಎನ್. ಬೆನ್ನೂರ

ಮುಖ್ಯಸ್ಥರು, ಇತಿಹಾಸ ವಿಭಾಗ, ಎಸ್. ಟಿ. ಸಿ. ಕಾಲೇಜು, ಬನಹಟ್ಟಿ.

How to Cite

ಸಂಗಮೇಶ ಕಚ್ಚು, & ಎಂ.ಎನ್. ಬೆನ್ನೂರ. (2025). ನವರಸಪುರದ ಧಾರ್ಮಿಕೇತರ ಪಾರಂಪರಿಕ ಕಟ್ಟಡಗಳು ಮತ್ತು ಜವಾಬ್ದಾರಿ. ಅಕ್ಷರಸೂರ್ಯ (AKSHARASURYA), 9(01), 08 to 13. https://aksharasurya.com/index.php/latest/article/view/1555

References

ಬೆನ್ನೂರ ಎಂ. ಎನ್., (2018) ಬಿಜಾಪುರ ಆದಿಲ್ ಶಾಹಿಗಳ ಕಾಲದ ಧಾರ್ಮಿಕೇತರ ಕಟ್ಟಡಗಳು ಪಿ. ಎಚ್. ಡಿ. ಮಹಾ ಪ್ರಬಂಧ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ.

ಚೌವ್ಹಾನ. ರವಿ. ಎನ್., (2004) ಆದಿಲ್ ಶಾಹಿಗಳ ಕಾಲದ ಸ್ಮಾರಕಗಳು, ಉಪನ್ಯಾಸ ಗ್ರಂಥ ಮಾಲೆ. ಪ್ರಕಾಶನ-ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಅಣ್ಣಿಗೇರಿ. ಎ. ಎಂ., (1980) ಶಿಲ್ಪಕಲಾ ವೈಭವ, ಪ್ರಕಾಶಕರು - ಶ್ರೀಮತಿ ಗಂಗೂತಾಯಿ ಅಣ್ಣಿಗೇರಿ ಹೊಸ ಪತ್ರಾವಳಿ ಚಾಳ, ಧಾರವಾಡ.

ಜೋಶಿ ಎಸ್. ಕೆ., (2007-08) ಬಿಜಾಪುರದ ನಾಡಿನ ಕೋಟಿ ಕೊತ್ತಲಗಳು ಭಾಗ -1, ಕರ್ನಾಟಕ ಇತಿಹಾಸ ಸಂಶೋಧನಾ ಮಂಡಲ ಧಾರವಾಡ.

Most read articles by the same author(s)