ಪರಿಶಿಷ್ಟ ಜಾತಿಯ ಕೃಷಿ ಕಾರ್ಮಿಕ ಮಹಿಳೆಯರ ಮಾಧ್ಯಮ ಬಳಕೆ ಕುರಿತು ಒಂದು ಅಧ್ಯಯನ
Main Article Content
Abstract
ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದೆ. ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯು ಗಮನಾರ್ಹವಾಗಿದೆ. ಆದರೂ ಆಕೆ ವೇತನ ತಾರತಮ್ಯ ಎದುರಿಸುತ್ತಿದ್ದಾಳೆ. ಎರಡನೇ ದರ್ಜೆ ಎಂದು ಕರೆಯಲ್ಪಡುವ ಮಹಿಳೆಯರು ಅನೇಕ ಕಾರಣಗಳಿಂದ ಅವಕಾಶ ವಂಚಿತರಾಗಿದ್ದಾರೆ, ಅದರಲ್ಲಿ ಜಾತಿ ಹಿನ್ನೆಲೆಯೂ ಒಂದು. ಇವುಗಳ ನಿರ್ಮೂಲನೆಗಾಗಿ ಸರ್ಕಾರಗಳು ಮಹಿಳಾ ಸಬಲೀಕರಣಕ್ಕಾಗಿ ಹಾಗೂ ಕೃಷಿ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿವೆ. ಇಂತಹ ವಿಷಯಗಳನ್ನು ತಿಳಿಸಲು ಮತ್ತು ತಿಳಿಯಲು ಮಾಧ್ಯಮ ಪೂರಕವಾಗಿ ಕಾರ್ಯನಿರ್ವಹಿಸಬಹುದು. ಪ್ರಜಾಪ್ರಭುತ್ವದ ನಾಲ್ಕನೆ ಅಂಗ ಎನಿಸಿಕೊಂಡಿರುವ ಮಾಧ್ಯಮದ ಮುಖ್ಯ ಉದ್ದೇಶ ಮಾಹಿತಿ, ಶಿಕ್ಷಣ ಮತ್ತು ಮನರಂಜನೆ. ಇವುಗಳನ್ನು ಮುದ್ರಣ ಮಾಧ್ಯಮ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಾದ ರೇಡಿಯೋ ಹಾಗೂ ಟೆಲಿವಿಷನ್ ಕಾರ್ಯಕ್ರಮಗಳ ಮೂಲಕ ಪ್ರಸಾರ ಮಾಡುತ್ತಿದೆ. ಮಹಿಳೆಯರಿಗಾಗಿ ಮುದ್ರಣ ಮಾಧ್ಯಮದಲ್ಲಿ ಪುರವಣಿಗಳು, ರೇಡಿಯೋ ಮತ್ತು ಟೆಲಿವಿಷನ್‌ನಲ್ಲಿ ಮಹಿಳೆಯರಿಗಾಗಿ ಆರೋಗ್ಯ, ಅಡುಗೆ, ಕಸೂತಿಗೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದರೂ, ಮಹಿಳೆಯರಲ್ಲಿ ಅವುಗಳ ಬಳಕೆ ತಿಳಿಯುವುದು ಅಗತ್ಯವಾಗಿದೆ. ಮಾಧ್ಯಮಗಳ ಬಳಕೆ ಮತ್ತು ಗ್ರಾಮೀಣ ಪ್ರದೇಶದ ಮಹಿಳೆಯರ ಮೇಲೆ ಮಾಧ್ಯಮ ಬೀರಿರಬಹುದಾದ ಪ್ರಭಾವಗಳನ್ನು ಅರಿಯುವ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿಯ ಕೃಷಿ ಕೂಲಿ ಕಾರ್ಮಿಕ ಮಹಿಳೆಯರ ಆರ್ಥಿಕ ಒಡೆತನ, ರೈತ ಸಂಘಟನೆಗಳಲ್ಲಿ ಪಾಲ್ಗೊಳ್ಳುವಿಕೆ ಮತ್ತು ಮಾಧ್ಯಮ ಬಳಕೆಯ ಉದ್ದೇಶವನ್ನು ತಿಳಿಯುವುದು ಈ ಅಧ್ಯಯನದ ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಪ್ರಶ್ನಾವಳಿಯ ಸಹಾಯದಿಂದ ದತ್ತಾಂಶ ಸಂಗ್ರಹಿಸಿ ಪರಿಮಾಣಾತ್ಮಕ ವಿಷಯ ವಿಶ್ಲೇಷಣಾ ವಿಧಾನವನ್ನು ಬಳಸಿಕೊಂಡು ಅಧ್ಯಯನ ಮಾಡಲಾಗಿದೆ. ದತ್ತಾಂಶಗಳ ಮೂಲಕ ಪರಿಶಿಷ್ಟ ಜಾತಿಯ ಕೂಲಿ ಕಾರ್ಮಿಕರು ಪುರುಷರಷ್ಟು ಮನೆ ಮತ್ತು ಜಮೀನಿನ ಯಜಮಾನಿಕೆಯನ್ನು ಪಡೆದಿಲ್ಲ ಹಾಗೂ ಇವರು ಅಸಂಘಟಿತರಾಗಿರುವುದು, ಸರ್ಕಾರದ ಕೃಷಿ ಯೋಜನೆಗಳ ಅರಿವು ತಲುಪದೆ ಇರುವುದು ತಿಳಿದುಬಂದಿದೆ. ಹಾಗೆಯೇ, ಮಾಧ್ಯಮಗಳನ್ನು ಹೆಚ್ಚಾಗಿ ಮನರಂಜನೆಯ ಮೂಲವಾಗಿ ಬಳಸುತ್ತಿರುವುದು ಕಂಡುಬಂದಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
Singariya M.R. (2014). Dr B R Ambedkar and women empowerment in India. In. Journal of research in humanities and social science. Volume 2, Issue 1. pp: 01-04
ವಿಜಯಾ ದಬ್ಬೆ. (1989). ಮಹಿಳಾ ಸಾಹಿತ್ಯ ಸಮಾಜ. ರಚನಾ ಪ್ರಕಾಶನ. ಮೈಸೂರು.
ಮಹೇಶಚಂದ್ರ ಗುರು. (2014). ಅಭಿವೃದ್ಧಿ ಸಂವಹನ ಮತ್ತು ಪತ್ರಿಕೋದ್ಯಮ. ಕರ್ನಾಟಕ ಮಾಧ್ಯಮ ಅಕಾಡೆಮಿ. ಬೆಂಗಳೂರು.
ಪವಿತ್ರ. (2019). ಮಹಿಳಾ ಸಬಲೀಕರಣ. ಸುವ್ವಿ ಪಬ್ಲಿಕೇಶನ್ಸ್. ಶಿಕಾರಿಪುರ.
ಚಂದ್ರಶೇಖರ. (2015). ಗ್ರಾಮೀಣ ಮಹಿಳೆಯರ ಸಾಮರ್ಥ್ಯ ಹೆಚ್ಚಿಸುವಲ್ಲಿ ಮಹಿಳೆಯರ ಪಾತ್ರ. ಇನ್: ಗ್ರಾಮೀಣ ಅಭಿವೃದ್ಧಿ: ಸವಾಲುಗಳು ಮತ್ತು ಪರಿಹಾರಗಳು. ಮೊದಲ ಮುದ್ರಣ. ಸಂಪಾದಕರು ಶೇಖರ್ ಮತ್ತು ಸುನೀಲ್ ಕುಮಾರ್. ದೇಸಿ ಪುಸ್ತಕ ಪ್ರಕಾಶನ. ಬೆಂಗಳೂರು. ಪು.ಸ 13-19.
ಮುನಿಯಪ್ಪ ಮತ್ತು ಮರಿಸ್ವಾಮಿ (2012). ಸಮಗ್ರ ಗ್ರಾಮಾಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ಮಾಧ್ಯಮಗಳ ಪಾತ್ರ. ಇನ್: ಮಹಿಳೆ, ಮಾಧ್ಯಮ ಮತ್ತು ರಂಗಭೂಮಿ, ಸಂಪಾದಕರು ವೆಂಕಟೇಶ್, ರೋಹಿಣಿ ಎಂಟರ್‌ಪ್ರೈಸಸ್. ಬೆಂಗಳೂರು.
Anita, G. & Murali Krishna Mohan, G. (2017). Coverage of women’s issues by print media: A study of newspapers from 2010 to 2015. Global Journal of Research Analysis. Volume 6, Issue-9, September-2017