ಎಸ್. ಎಲ್. ಭೈರಪ್ಪನವರ ʼಭಿತ್ತಿʼ ಆತ್ಮಕಥೆ: ಸಾಮಾಜಿಕ, ಸಾಂಸ್ಕೃತಿಕ ವಿಶ್ಲೇಷಣೆ
Main Article Content
Abstract
ಆಧುನಿಕ ಕಾಲಘಟ್ಟದ ಪ್ರಮುಖ ಕಾದಂಬರಿಕಾರರಲ್ಲಿ ಎಸ್. ಎಲ್. ಭೈರಪ್ಪನವರು ಒಬ್ಬರಾಗಿದ್ದಾರೆ. ಇವರ ಕೃತಿಗಳು ಇಂಗ್ಲಿಷ್ ಹಾಗೂ ಇತರ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ. ʼಭಿತ್ತಿʼ ಎಸ್. ಎಲ್. ಭೈರಪ್ಪನವರ ಆತ್ಮಕಥನ. ಯಾವುದೇ ಆತ್ಮಕಥನಗಳು ಕೇವಲ ಒಬ್ಬ ವ್ಯಕ್ತಿಯ ಜೀವನ ಚರಿತ್ರೆಗಳಾಗಿರುವುದಿಲ್ಲ. ಬದಲಾಗಿ ಆ ಕೃತಿಯಲ್ಲಿ ಅವರು ಬದುಕಿದ್ದ ತಮ್ಮ ಕಾಲಘಟ್ಟದ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಚಿತ್ರಣಗಳು ಬಿತ್ತರಗೊಂಡಿರುತ್ತವೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಸಂಶೋಧನಾ ಲೇಖನದಲ್ಲಿ ಎಸ್.ಎಲ್. ಭೈರಪ್ಪ ಅವರ ಆತ್ಮಕಥೆಯಲ್ಲಿ ಅನಾವರಣಗೊಂಡಿರುವ ಜಾತೀಯತೆ, ಸಾಮಾಜಿಕ ಅಸಮಾನತೆ, ಅವರ ಶೈಕ್ಷಣಿಕ ವಿಚಾರಗಳ ವಿಶಿಷ್ಟ ಅನುಭವಗಳು ಮತ್ತು ರಾಷ್ಟ್ರಾಭಿಮಾನ ಕುರಿತಂತೆ ವಿಸ್ತೃತವಾಗಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಭೈರಪ್ಪ ಎಸ್.ಎಲ್., (1996 ), ಭಿತ್ತಿ, ಸಾಹಿತ್ಯ ಬಂಡಾರ, ಬೆಂಗಳೂರು.
ವೆಂಕಟೇಶ ಕೆ. (ಸಂ), (2005), ಭೈರಪ್ಪಾಭಿನಂದನ, ಕೊಂಡಜ್ಜಿ ಪ್ರಕಾಶನ, ಬೆಂಗಳೂರು.
ಕುಲಕರ್ಣಿ ಡಿ., (2006), ಎಸ್.ಎಲ್. ಭೈರಪ್ಪ, ನವ ಕರ್ನಾಟಕ ಪ್ರಕಾಶನ, ಬೆಂಗಳೂರು.
ಸುಮತೀಂದ್ರ ನಾಡಿಗ, (2002), ಎಸ್.ಎಲ್. ಭೈರಪ್ಪ ಅವರ ಕೃತಿಗಳ ವಿಮರ್ಶೆ, ಸುಂದರ ಪ್ರಕಾಶನ, ಬೆಂಗಳೂರು.
ಹೆಗ್ಡೆ ಎಚ್.ಬಿ., (2014), ಭಿತ್ತಿಯೊಳಗಿನ ಕ್ರೌರ್ಯ ಮತ್ತು ಕಾರುಣ್ಯ, ಅಕ್ಷರ ಪ್ರಕಾಶನ, ಮೈಸೂರು.
ಶಿವಪ್ರಕಾಶ್ ಎಚ್.ಎಸ್., ಭಿತ್ತಿ ಆತ್ಮಕಥೆಯ ಸತ್ಯ ಅನ್ವೇಷಣಾ ಯಾತ್ರೆ, ಉಡುಪಿ ಸಾಹಿತ್ಯ ಸಂಚಿಕೆ.