ಕನ್ನಡ ಭಾಷೆ ಮತ್ತು ಕನ್ನಡ ಮಾಧ್ಯಮ ಅನುಷ್ಠಾನದ ಬಗ್ಗೆ ಕುವೆಂಪು ಅವರ ವೈಚಾರಿಕ, ವೈಜ್ಞಾನಿಕ ಚಿಂತನೆಗಳು

Main Article Content

ಉಮೇಶ

Abstract

ಕುವೆಂಪು ತಮ್ಮದಲ್ಲದ ಭಾಷೆಯಲ್ಲಿ ಪ್ರಭುತ್ವ ಸಾಧಿಸಿ ಮೊದಲಿಗೆ ಇಂಗ್ಲಿಷ್ ಭಾಷೆಯಲ್ಲಿ ಕವಿತೆಗಳನ್ನು ರಚಿಸಿದರು. ಆದರೆ ಜೇಮ್ಸ್ ಎಚ್. ಕಸಿನ್ಸ್ ಅವರನ್ನು ಭೇಟಿ ಮಾಡಿದ ನಂತರ ಅವರ ಮಾರ್ಗದರ್ಶನದಂತೆ ಕನ್ನಡಕ್ಕೆ ಹೊರಳಿದ ಕುವೆಂಪು ಅವರ ಬದುಕಿನಲ್ಲಿ ಒಂದು ದಿವ್ಯ ತಿರುವು ಮೂಡಿತು. ಅನಂತರ ಕನ್ನಡ ಭಾಷೆ ಹಾಗೂ ಕನ್ನಡ ಸಾಹಿತ್ಯ ಮತ್ತು ಕನ್ನಡ ಮಾಧ್ಯಮದ ಬಗೆಗೆ ಕಂಕಣ ಕಟ್ಟಿಕೊಂಡ ಕುವೆಂಪು ತಮ್ಮ ಬದುಕಿನ ಕೊನೆಯ ಕ್ಷಣದವರೆವಿಗೂ ಕನ್ನಡವನ್ನೇ ಉಸಿರಾಗಿಸಿಕೊಂಡವರು. ಈ ಹಿನ್ನೆಲೆಯಲ್ಲಿ ಕುವೆಂಪು ಅವರು ಪ್ರಾಧ್ಯಾಪಕರಾದಾಗ ಮತ್ತು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಮೇಲೆ ಕನ್ನಡ ಭಾಷೆ ಮತ್ತು ಕನ್ನಡ ಮಾಧ್ಯಮದ ಅನುಷ್ಠಾನಕ್ಕಾಗಿ ಅವಿರತವಾಗಿ ಶ್ರಮಿಸಿದರು. ಆದ್ದರಿಂದ ಪ್ರಸ್ತುತ ಸಂಶೋಧನಾ ಲೇಖನದಲ್ಲಿ ಕನ್ನಡ ಭಾಷೆ ಮತ್ತು ಕನ್ನಡ ಮಾಧ್ಯಮದ ಅನುಷ್ಠಾನದ ಬಗ್ಗೆ ಕುವೆಂಪು ಅವರು ಹೊಂದಿದ್ದ ವೈಚಾರಿಕ, ವೈಜ್ಞಾನಿಕ ಚಿಂತನೆಗಳನ್ನು ಹಲವಾರು ಲೇಖಕರ ಉಲ್ಲೇಖಗಳೊಂದಿಗೆ ವಿವರವಾಗಿ ವಿಶ್ಲೇಷಣೆ ಮಾಡಲಾಗಿದೆ.

Article Details

Section

Research Articles

Author Biography

ಉಮೇಶ

ಸಹ ಪ್ರಾಧ್ಯಾಪಕ, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಳೆನರಸೀಪುರ, ಹಾಸನ.

How to Cite

ಉಮೇಶ. (2025). ಕನ್ನಡ ಭಾಷೆ ಮತ್ತು ಕನ್ನಡ ಮಾಧ್ಯಮ ಅನುಷ್ಠಾನದ ಬಗ್ಗೆ ಕುವೆಂಪು ಅವರ ವೈಚಾರಿಕ, ವೈಜ್ಞಾನಿಕ ಚಿಂತನೆಗಳು. ಅಕ್ಷರಸೂರ್ಯ (AKSHARASURYA), 7(06), 108 to 118. https://aksharasurya.com/index.php/latest/article/view/1343

References

ರಾಮೇಗೌಡ, (2015), ಕುವೆಂಪು ಅಧ್ಯಯನ ಆಯಾಮ, ಕರ್ನಾಟಕ ಸಂಘ, ಮಂಡ್ಯ.

ಜವರೇಗೌಡ ದೇ., (1970), ರಾಷ್ಟ್ರಕವಿ ಕುವೆಂಪು, ಸುರುಚಿ ಪ್ರಕಾಶನ, ಮೈಸೂರು.

ಪೂರ್ಣಚಂದ್ರ ತೇಜಸ್ವಿ ಕೆ.ಪಿ., (1996), ಅಣ್ಣನ ನೆನಪು, ಪುಸ್ತಕ ಪ್ರಕಾಶನ, ಮೈಸೂರು.

ನಾರಾಯಣಸ್ವಾಮಿ ಜ.ಹೊ., (2004), ಚೈತನ್ಯರೂಪಿ ಕುವೆಂಪು, ಶಕ್ತಿ ಪ್ರಿಂಟ್ಸ್, ಬೆಂಗಳೂರು.

ಕೃಷ್ಣಕುಮಾರ್ ಸಿ.ಪಿ., (1995), ಕುವೆಂಪು ಸಾಹಿತ್ಯ ಸಂಧಾನ, ಪ್ರಸಾರಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.

ಕುವೆಂಪು, (2015), ವಿಚಾರ ಕ್ರಾಂತಿಗೆ ಆಹ್ವಾನ, ಉದಯರವಿ ಪ್ರಕಾಶನ, ಮೈಸೂರು.

Most read articles by the same author(s)