‘ಗೌರ್ಮೆಂಟ್ ಬ್ರಾಹ್ಮಣ’ ಆತ್ಮಕಥೆಯು ದಲಿತ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಶೋಷಣೆಯ ಸಂಗತಿಗಳ ಸಂಕಥನ
Main Article Content
Abstract
ಅರವಿಂದ ಮಾಲಗತ್ತಿ ಅವರ ‘ಗೌರ್ಮೆಂಟ್ ಬ್ರಾಹ್ಮಣ’ ಆತ್ಮಕಥೆಯು ಕನ್ನಡದ ದಲಿತ ಸಾಹಿತ್ಯದಲ್ಲಿ ಮಹತ್ವದ ಸ್ಥಾನ ಪಡೆದ ಕೃತಿ. ಈ ಕೃತಿಯು ಕೇವಲ ಒಬ್ಬ ವ್ಯಕ್ತಿಯ ವ್ಯಕ್ತಿಗತ ಆತ್ಮಕಥೆ ಆಗಿರದೆ ಸಮಾಜದಲ್ಲಿನ ಜಾತೀಯತೆ, ಅಸಮಾನತೆ ಮತ್ತು ಸಾಮಾಜಿಕ ತಾರತಮ್ಯಗಳ ಹೋರಾಟದ ಸಾಕ್ಷಿಯಾಗಿದೆ. ಆತ್ಮಕಥೆಗಳು ಸಾಮಾನ್ಯವಾಗಿ ವ್ಯಕ್ತಿಯ ವೈಯಕ್ತಿಕ ಜೀವನ ಕಥನವನ್ನು ದಾಖಲಿಸುತ್ತವೆ. ಆದರೆ ಕನ್ನಡದಲ್ಲಿನ ದಲಿತ ಆತ್ಮಕಥೆಗಳು ತಮ್ಮ ವೈಯಕ್ತಿಕ ಅನುಭವವನ್ನು ಸಮಾಜದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ವಿಷಯಗಳೊಂದಿಗೆ ಜೋಡಿಸಿವೆ. ಆತ್ಮಕಥೆಯಲ್ಲಿ ಮಾಲಗತ್ತಿಯವರು ತಮ್ಮ ದಲಿತ ಬದುಕಿನ ವೈಯಕ್ತಿಕ ಅನುಭವಗಳನ್ನು ಸಾಮಾಜಿಕ ಸಂಗತಿಗಳೊಂದಿಗೆ ಸೇರಿಸಿ ಬರೆದಿರುವ ರೀತಿ ಓದುಗರನ್ನು ನೇರವಾಗಿ ಆಕರ್ಷಿಸಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಸಂಶೋಧನಾ ಲೇಖನದಲ್ಲಿ ಅವರ ಆತ್ಮಕಥೆ ಕೇವಲ ವೈಯಕ್ತಿಕ ನೆಲೆಗಟ್ಟಿನಿಂದ ಕೂಡಿರದೆ ಅದು ಇಡೀ ದಲಿತ ಜನಾಂಗ ಅಥವಾ ಸಮುದಾಯದ ಶೋಷಿತ ನೋವನ್ನು ಪ್ರತಿಬಿಂಬಿಸುವ ಆಯಾಮವಾಗಿದೆ ಎಂಬುದರ ಬಗ್ಗೆ ವಿವರವಾಗಿ ವಿಶ್ಲೇಷಣೆಗೆ, ವಿಮರ್ಶೆಗೆ ಒಳಪಡಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಅರವಿಂದ ಮಾಲಗತ್ತಿ, (2014), ಗೌರ್ಮೆಂಟ್ ಬ್ರಾಹ್ಮಣ, ಮೈಸೂರು: ಚೇತನ ಬುಕ್ ಹೌಸ್.
ಶಿವಮೂರ್ತಿ, (2011), ಕನ್ನಡ ಆತ್ಮಕಥನ ಸಾಹಿತ್ಯ, ಬಳ್ಳಾರಿ: ಸಂಸ್ಕೃತಿ ಪ್ರಕಾಶನ.
ಶಂಕರೇಗೌಡ, (2005), ಪ್ರೊ. ಅರವಿಂದ ಮಾಲಗತ್ತಿ ಅವರ ಸಾಹಿತ್ಯ- ಚಿಂತನೆ, ಪಿ.ಎಚ್‌ಡಿ ಮಹಾಪ್ರಬಂಧ.