ಮುಳಬಾಗಿಲಿನ ಕೃಷಿ ಸಂಸ್ಕೃತಿ ಮತ್ತು ನಂಬಿಕೆಗಳು
Main Article Content
Abstract
ಕೃಷಿ ಸಂಸ್ಕೃತಿ ಎನ್ನುವುದು ವ್ಯಾಪಕಾರ್ಥವುಳ್ಳಂಥದ್ದು. ಮಾನವ ತನ್ನ ಜೀವನ ನಿರ್ವಹಣೆಗಾಗಿ ಮಾಡುವ ಪ್ರತಿಯೊಂದು ಕೆಲಸವೂ ಕೃಷಿಯೇ. ಪಶುಪಾಲನೆ, ಮೀನುಗಾರಿಕೆ ಹಾಗೂ ಸಮುದ್ರೋತ್ಪನ್ನಗಳು, ಅರಣ್ಯೋತ್ಪನ್ನಗಳು, ಭೂ ಉತ್ಪನ್ನಗಳು ಇದರಲ್ಲಿ ಸೇರಿವೆ. ಸಾಂಪ್ರದಾಯಿಕವಾಗಿ ಹೇಳುವುದಾದರೆ ಭೂಮಿಯನ್ನು ಸಾಗುವಳಿ ಮಾಡಿ ಪಡೆಯುವ ಫಲವನ್ನು ಕೃಷಿ ಎನ್ನಬಹುದು. ಇದಕ್ಕೆ ಬೇಸಾಯ, ವ್ಯವಸಾಯ, ಆರಂಬ, ಸಾಗುವಳಿ ಮುಂತಾದವು ಸಮಾನಾರ್ಥ ಪದಗಳಿವೆ. ಕೃಷಿಯಿಂದಲೇ ಜೀವನ ಮಾಡುವ ರೈತ ಕಡಿಮೆ ಭೂಮಿಯಲ್ಲಿ ಪ್ರಮುಖ ಹಾಗೂ ಮಿಶ್ರ ಬೆಳೆ ತೆಗೆದು, ಜಾನುವಾರುಗಳ ಅಭಿವೃದ್ಧಿ, ತೋಟಗಾರಿಕೆ, ದ್ವಿದಳ ಧಾನ್ಯ, ಎಣ್ಣೆಬೀಜಗಳ ಕೃಷಿ ಹಾಗೂ ಹುಲ್ಲುಗಾವಲಿನಲ್ಲಿ ತನಗೆ ಬೇಕಾದ ರೀತಿಯಲ್ಲಿ ಆರ್ಥಿಕ ಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಲು ಮಾಡುವ ಉಪಕಸುಬೇ ಕೃಷಿ. ಕೃಷಿ ಸಂಸ್ಕೃತಿ ಎನ್ನುವುದು ವ್ಯವಸಾಯದ ಜೊತೆ ಜೊತೆಗೆ ಪ್ರಾರಂಭವಾಯಿತು. ಆದಿಮಾನವ ಹಿಂದೆ ಗುಹೆ, ಪೊಟರೆಗಳಲ್ಲಿ ವಾಸ ಮಾಡಿಕೊಂಡು ಬೇಟೆಯಾಡಿ ಜೀವಿಸುತ್ತಿದ್ದ. ತಮ್ಮ ಆಹಾರಕ್ಕೆ ಪ್ರಾಣಿ-ಪಕ್ಷಿಗಳು ಸಿಗದಿದ್ದಾಗ ಗೆಡ್ಡೆಗೆಣಸು, ಸೊಪ್ಪುಗಳನ್ನು ತಿನ್ನಲಾರಂಭಿಸಿದ. ತದನಂತರ ಅವುಗಳನ್ನು ತಾವೇ ಬೆಳೆಯಲಾರಂಭಿಸಿದರು. ಇದರಿಂದ ಸಂಸ್ಕೃತಿಯ ಉಗಮ ಕೃಷಿಯಿಂದ ಪ್ರಾರಂಭವಾಯಿತು ಎಂದು ಹೇಳಬಹುದು.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಕೃಷ್ಣಪ್ಪ (೨೦೦೭). ಕೋಗಿಲಹಳ್ಳಿ ಕೋಲಾರ ವೈಭವ (ಕವನ ಸಂಕಲನ). ಕಿರಣ ಕಿಶೋರ ಪ್ರಕಾಶನ, ಕೆ.ಜಿ.ಎಫ್.
ನರಸಿಂಹನ್, ಕೆ.ಆರ್. (೨೦೧೨). ಮುಳಬಾಗಿಲು ಇತಿಹಾಸ. ದರ್ಶನ ಪ್ರಿಂಟ್ಸ್, ಬೆಂಗಳೂರು.
ಮಂಜುಳಾ ಹುಲ್ಲಹಳ್ಳಿ (೨೦೦೦). ನಂಜನಗೂಡು: ಒಂದು ಸಾಂಸ್ಕೃತಿಕ ಅಧ್ಯಯನ. ಸಂವಹನ ಪ್ರಕಾಶನ, ಮೈಸೂರು.
ವೆಂಕಟರಾಮಣ್ಣ, ಬಿ. (೨೦೧೦). ವಿಜಯನಗರ ಇತಿಹಾಸಕ್ಕೆ ಕೋಲಾರ ಜಿಲ್ಲೆಯ ಕೊಡುಗೆ. ಸಿಂಚು ಮಲ್ಟಿಗ್ರಾಫ್, ಮೈಸೂರು.
ಶಿವಪ್ಪ, ಜಿ. (೨೦೧೨). ಮುಳಬಾಗಿಲು ತಾಲ್ಲೂಕಿನ ಚರಿತ್ರೆ ಮತ್ತು ಸಂಸ್ಕೃತಿ. ಎಸ್ ಅಂಡ್ ಎಸ್ ಪಬ್ಲಿಕೇಶನ್, ಬೆಂಗಳೂರು.
ಕೋಲಾರ ಜಿಲ್ಲೆ ಗ್ಯಾಸೆಟಿಯರ್ (೨೦೦೫). ಪರಿಶ್ರೀ ಪ್ರಿಂಟ್ಸ್, ಬೆಂಗಳೂರು.
ಜಾನಪದ ವಿಶ್ವಕೋಶ (೧೯೮೫). ಕನ್ನಡ ಸಾಹಿತ್ಯ ಅಕಾಡಮಿ, ಬೆಂಗಳೂರು.
ನಲ್ಲೂರು ಪ್ರಸಾದ್ (೨೦೧೧). ಜಾನಪದ ಸುಗ್ಗಿ. ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೋಲಾರ.