Published: 2024-11-05

Table of Contents

Table of Contents

I to V

ಬುಡಕಟ್ಟು ಮಹಿಳೆ: ಸ್ಥಾಪಿತ ಗ್ರಹಿಕೆಗಳಿಗೆ ಭಿನ್ನಮತ

ಶೈಲಜ ಹಿರೇಮಠ

01 to 34

ಬುಡಕಟ್ಟು ಮತ್ತು ತಳಸಮುದಾಯದ ಮಹಿಳೆಯರ ಬದುಕು ಹಾಗೂ ಸಾಹಿತ್ಯವನ್ನು ನೋಡುವ ಸಾಂಪ್ರದಾಯಿಕ ದೃಷ್ಟಿಕೋನಗಳನ್ನು ಮುರಿದು, ಹೊಸ ವಿಶ್ಲೇಷಣಾ ವಿಧಾನವನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿದೆ. ಜನಪದ ಮತ್ತು ಬುಡಕಟ್ಟು ಕಾವ್ಯಗಳಾದ ಬೆಟ್ಟದ ಚಾಮುಂಡಿ, ಕೊರಾತಿ ಕಂಚಿ, ಈರಬಡಪ್ಪ ಹಾಗೂ ಜುಂಜಪ್ಪ ಕಾವ್ಯಗಳ ಉದಾಹರಣೆಗಳ ಮೂಲಕ ಬುಡಕಟ್ಟು ಮಹಿಳೆಯರ ಲೈಂಗಿಕತೆ, ತಾಯ್ತನ, ಬಂಜೆತನ ಮತ್ತು ಶ್ರಮದ ಮೇಲಿನ ಶೋಷಣೆಯ ವಾಸ್ತವಗಳನ್ನು ಅನಾವರಣಗೊಳಿಸಲಾಗಿದೆ. ಮಹಿಳೆಯರೆಲ್ಲರನ್ನೂ ಏಕಘಟಕವಾಗಿ ನೋಡುವ ಸ್ತ್ರೀವಾದಿ ಹಾಗೂ ಪಿತೃಪ್ರಧಾನ ನಿರೂಪಣೆಗಳನ್ನು ಪ್ರಶ್ನಿಸುತ್ತ, ಆಯಾ ಬುಡಕಟ್ಟು ಸಮುದಾಯಗಳ ಒಳಗೆ ಇರುವ ಲಿಂಗಸಂಬಂಧಿ ತಾರತಮ್ಯಗಳನ್ನು ಹಾಗೂ ಶೋಷಣೆಯ ಸಂರಚನೆಗಳನ್ನು ಸೂಕ್ಷ್ಮವಾಗಿ ಶೋಧಿಸಲಾಗಿದೆ. ಮಹಿಳಾ ಸಬಲೀಕರಣದ ಹೆಸರಿನಲ್ಲಿ ನಡೆಯುವ ವೈಭವೀಕರಣವನ್ನು ತಡೆದು, ನೈಜ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ತುರ್ತನ್ನು ಈ ಅಧ್ಯಯನವು ಒತ್ತಿಹೇಳುತ್ತದೆ.

Read More »

ಅಡಿಗರ ಕಾವ್ಯದಲ್ಲಿ ಮಹಿಳೆ

ಅಣ್ಣಮ್ಮ

35 to 41

ನವೋದಯದ ಜಾಡಿನಲ್ಲೇ ಮೊದಲ ಮೂರು ಸಂಕಲನ (ಭಾವತರಂಗ, ಕಟ್ಟುವೆವು ನಾವು, ನಡೆದು ಬಂದ ದಾರಿ) ಬರೆದ ಗೋಪಾಲಕೃಷ್ಣ ಅಡಿಗರು, ಈ ಮೂರು ಸಂಕಲನದಲ್ಲಿ ಮಹಿಳೆಯನ್ನು ಕುರಿತು ಅನೇಕ ಕವಿತೆಗಳನ್ನು ಬರೆಯುತ್ತಾರೆ. ರೊಮ್ಯಾಂಟಿಕ್ ಸಂಪ್ರದಾಯದಲ್ಲಿ ಕಂಡುಬರುವ ಅತಿಭಾವುಕತೆ, ಸೌಂದರ್ಯೋಪಾಸನೆ, ನಿಸ್ಸತ್ವವಾದ ಭಾಷೆ ತ್ಯಜಿಸಿ ವಾಸ್ತವಿಕ ಜೀವನಕ್ಕೆ ಸ್ಪಂದಿಸಿ ಕವಿತೆ ರಚಿಸುವ ಪ್ರಯೋಗಕ್ಕೆ ಕೈ ಹಚ್ಚಿದ್ದು ನಂತರ ಕಂಡು ಬರುತ್ತೆ.
1938ರಿಂದ 1942ರ ವರೆಗೆ ಅನೇಕ ಕವಿತೆಗಳನ್ನು ಬರೆದ ಅಡಿಗರು ‘ಜೀವನಸಖಿ’ ‘ನಗು ನನ್ನ ನಲ್ಲೆ’ ‘ಮುಗುದೆ ಇವಳು’ ‘ನನ್ನವಳೀ ಹೆಣ್ಣು’ ‘ನನ್ನ ಮೋಹದ ಮೂರ್ತಿ’ ‘ಒಡೆದು ಬಿದ್ದ ಕೊಳಲು’ ‘ಹೆಣ್ಣು: 1’ ‘ಹೆಣ್ಣು: 2’ ‘ಒಲವು’ ‘ಎಂಥ ಕಣ್ಣು’ ‘ತರಳೆ’ ‘ನಿಜವ ನುಡಿ ತಂಗಿ’ ‘ಮಾನವ ಹೃದಯವು’ ‘ನನ್ನ ನಿನ್ನ ಲೋಕ’ ‘ಒಂದು ಕಾಗದ’ ‘ನನ್ನ ನಿನ್ನ ನಡುವೆ’ ‘ಏಕತೆ’, ‘ಪರಿತಾಪ’- ಇಂಥ ಕವಿತೆಗಳು ಪ್ರಾರಂಭದ ಹೆಣ್ಣನ್ನು ಕುರಿತ ಕವಿತೆಗಳು.

Read More »

ತತ್ವಪದಕಾರ ಲಿಂಗಯ್ಯನವರ ತತ್ವಪದಗಳ ಜೀವಾಳ

ಬೋರಯ್ಯ ಪಿ. ಕೆ.

42 to 49

ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಹಾಗೂ ವೇದ ಉಪನಿಷತ್ತುಗಳಿಂದ ಪ್ರಭಾವಿತರಾದ ಲಿಂಗಯ್ಯನವರು ತತ್ವಪದಕಾರರಾಗಿ, ವೇದಾಂತಿಗಳಾಗಿ, ಒಬ್ಬ ಆದರ್ಶ ಶಿಕ್ಷಕರಾಗಿ, ಕವಿಗಳಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಆಧ್ಯಾತ್ಮಿಕ ಕಥೆಗಳು, ನಾಟಕ, ಜೀವನ ಚರಿತ್ರೆ, ಸಾವಿರಾರು ತತ್ವಪದಗಳನ್ನು ಬರೆದು, ಸಾಮಾಜಿಕ ವ್ಯವಸ್ಥೆಯಲ್ಲಿ ಬಡವರಿಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಹೋರಾಟವನ್ನು ಮಾಡುವುದರ ಮೂಲಕ ಜನರಲ್ಲಿ, ಶಾಂತಿ ಸಾಮರಸ್ಯದ ಬೆಳಕನ್ನು ಚೆಲ್ಲವುದರ ಕಡೆಗೆ ಮುಖ ಮಾಡಿ ಚಲಿಸಿದ್ದೆ ಅಪಾರ. ವೈದಿಕರನ್ನು ಮತ್ತು ವೈದಿಕತೆಯನ್ನು ತನ್ನ ಅಂತರಂಗದಿಂದಲೇ ಗ್ರಹಿಸಿ, ಅವರ ಆಚರಣೆಗಳನ್ನು ಪ್ರಶ್ನಿಸಿ, ಅವರು ತಮ್ಮ ತತ್ವಪದಗಳಲ್ಲಿ ವಿಶ್ಲೇಷಿಸಿರುವುದು ಗಮನಾರ್ಹ. ಹಾಗೆಯೇ ಸಮಾಜದಲ್ಲಿ ಅನೇಕ ರೀತಿಯ ಆಚರಣೆಗಳಲ್ಲಿ ಜಾತಿ, ಮತ, ಮಡಿ-ಮೈಲಿಗೆ ಎಂಬಂತಹ ಆಚರಣೆಗಳನ್ನು ಕುರಿತು ಲಿಂಗಯ್ಯನವರು ಕಟುವಾಗಿ ಟೀಕಿಸಿದ್ದಾರೆ ಹಾಗೂ ಬಡತನದ ಬಗ್ಗೆ ಅವರಿಗೆ ಇದ್ದ ನಿಲುವುಗಳನ್ನು ತತ್ವಪದಗಳಲ್ಲಿ ವಿಮರ್ಶಿಸಿದ್ದಾರೆ.

Read More »

ಲಂಕೇಶರ ಕಣ್ಣಲ್ಲಿ ಗಾಂಧೀಜಿ

ಕಾಂತರಾಜ ಯಾದವ್ ಸಿ.

50 to 60

ಗಾಂಧೀಜಿಯವರು ಹುಟ್ಟಿ 156 ವರ್ಷಗಳಾಗಿವೆ. ಅವರ ಬದುಕಿನ ಬಗೆಗೆ ಚರ್ಚೆ, ಬರಹ, ಸ್ಮರಣೆ-ಸ್ತುತಿ ನಡೆಯುತ್ತಲೇ ಇವೆ. ಭಾರತದ ಇತರೆ ವ್ಯಕ್ತಿಗಳು ಜಾತಿ, ಧರ್ಮ, ಪಂಥಗಳಿಗೆ ಒಳಗಾದಂತೆ ಮಹಾತ್ಮಗಾಂಧಿಯವರು ಸುಲಭಕ್ಕೆ ಒಳಗಾಗದೆ ಇರುವುದು ಅವರ ಬದುಕಿನ ರೀತಿಯನ್ನು ಬಿಂಬಿಸುವಂತದ್ದು. ದೀರ್ಘಕಾಲ ಭಾರತದ ರಾಜಕೀಯ, ಸಾಮಾಜಿಕ ಬದುಕಿನಲ್ಲಿದ್ದ ಗಾಂಧೀಜಿಯವರು ಇಂದಿಗೂ ʼಅನ್ಯʼರಾಗಿಯೇ ಇರುವಂತಾಗಿದೆ. ಅನ್ಯ ನಂತೆ ಕಂಡರೂ ಕೂಡ ಪ್ರಸ್ತುತದಲ್ಲಿಯೂ ಒಂದಲ್ಲಾ ಒಂದುರೀತಿಯಲ್ಲಿ ಪ್ರಸ್ತುತರಾಗುತ್ತಲೇ ಇದ್ಧಾರೆ. ಗಾಂಧೀಜಿಯವರ ಸತ್ಯಾಗ್ರಹ, ಉಪವಾಸ, ಶ್ರಮದ ಬದುಕು, ಅಸ್ಪೃಶ್ಯತೆಯ ನಿವಾರಣೆ, ಬ್ರಹ್ಮಚರ್ಯ, ಟ್ರಸ್ಟೀಶಿಪ್‌ ಹೀಗೆ ಹಲವು ನೆಲೆಗಳಲ್ಲಿ ಬದುಕಿದ್ಧ ಗಾಂಧೀಜಿಯವರ ಬದುಕು ಪರ-ವಿರೋಧ ಚರ್ಚೆಗಳಿಗೆ ಒಳಗಾಗುತ್ತಲೇ, ಪ್ರಸ್ತುತಕ್ಕೆ ಮುಖಾಮುಖಿಯಾಗುತ್ತಿರುತ್ತಾರೆ. ವಸಾಹತು ಬದುಕಿನ ಕ್ರಮಕ್ಕೆ ಒಳಗಾಗಿರುವ ಭಾರತೀಯರ ಬದುಕಿನ ಕ್ರಮವನ್ನು ಅರಿತ ಗಾಂಧೀಜಿ ಅವರ ಆಲೋಚನೆಗಳು ಮತ್ತೆ ಮುನ್ನೆಲೆಗೆ ಬರುವ ಅಗತ್ಯ ಈ ಹೊತ್ತಿನದು. ಭಾರತದಂತಹ ಜಾತಿವಾದಿ, ಕೋಮುಗ್ರಸ್ಥ ಮನಸ್ಥಿತಿಯ ದೇಶದಲ್ಲಿ ಕುವೆಂಪು, ಅಂಬೇಡ್ಕರ್‌, ಗಾಂಧೀಜಿ ಮುಂತಾದವರು ಇಂದು ಅವರದೇ ಹಿಂಬಾಲಕರ ಕೈಗೆ ಸಿಕ್ಕಿ ಅವರ ಆಲೋಚನೆಗಳು,ವ್ಯಕ್ತಿತ್ವ ಎಲ್ಲವೂ ಛಿದ್ರಗೊಳ್ಳುತ್ತಿರುವ ಹೊತ್ತಿನಲ್ಲಿ ಇಂತಹವರಿಂದ ರಕ್ಷಿಸಿಕೊಳ್ಳಬೇಕೆಂದು ಲಂಕೇಶ್‌ ಹೇಳುತ್ತಾರೆ. ಜಾತಿ, ಧರ್ಮಕ್ಕೆ ಇಂತಹ ವ್ಯಕ್ತಿಗಳನ್ನು ಆಲೋಚನೆಗಳನ್ನು ಸೀಮಿತಗೊಳಿಸುತ್ತಿರುವ ಅಂಬೇಡ್ಕರ್ವಾದಿ, ಕುವೆಂಪುವಾದಿ, ಗಾಂಧೀವಾದಿಗಳಿಂದ ವಿಮುಖರಾಗಿ ನೇರವಾಗಿ ಓದಿನ ಮೂಲಕ ತಮ್ಮದೇ ರೀತಿಯಲ್ಲಿ ಗಾಂಧೀಜಿಯನ್ನು ಕಟ್ಟಿಕೊಂಡವರು ಲಂಕೇಶ್. ಗಾಂಧೀಜಿ ಬದುಕಿನ ವಿವರಗಳನ್ನು ವಿಮರ್ಶೆಗೆ ಒಳಪಡಿಸಿದ್ದಾರೆ. 

Read More »

ಮುಳಬಾಗಿಲಿನ ಜನಪದ ಕಲೆ

ಸಿ. ನಾಗರಾಜ

61 to 72

ಜನಪದ ಕಲಾವಿದರು, ಗಾಯಕರು, ಕೇಳಿಕೆಯವರು, ಪಂಡರಿ ಭಜನೆಯವರು, ಗಾರುಡಿಗರು, ಗೊರವರು, ದೊಂಬಿದಾಸರು, ಬುರ್ರಕಥೆಯವರು, ಕರಗ ಸಂಪ್ರದಾಯದವರು, ತೊಗಲುಗೊಂಬೆಯಾಟದವರು, ಹಲಗೆ ಮೇಳದವರು, ಚೌಡಿಕೆ ಮೇಳದವರು, ಕೋಲಾಟದವರು ಹೀಗೆ ಹತ್ತು ಹಲವು ಕಲೆಗಳು ಕೋಲಾರ ಜಿಲ್ಲೆಯಾದ್ಯಂತ ಇರುವುದನ್ನು ಕಾಣಬಹುದು. ಒಂದೆರಡು ಕಲೆಗಳನ್ನು ಹೊರತು ಪಡಿಸಿ ಉಳಿದೆಲ್ಲವು ತಾಲೂಕಿನಲ್ಲಿ ಇಂದಿಗೂ ಅಸ್ಥಿತ್ವದಲ್ಲಿವೆ. ಈ ಹಿನ್ನೆಲೆಯಲ್ಲಿ ಮುಳಬಾಗಿಲು ತಾಲ್ಲೂಕಿನ ಜನಪದ ಸಂಸ್ಕೃತಿಯು ಪ್ರಮುಖವಾಗಿದೆ. ಸುಮಾರು 345 ಹಳ್ಳಿಗಳಿಂದ ಕೂಡಿರುವುದರಿಂದ, ಈ ಭಾಗದ ಜನಪದ ಸಂಸ್ಕೃತಿಯ ಜೊತೆಗೆ ಜನಪದ ಕಲೆ, ಜನಪದ ಕ್ರೀಡೆ, ಜನಪದ ಆಚರಣೆಗಳು, ವೈದ್ಯಪದ್ಧತಿ ಮೊದಲಾದವುಗಳನ್ನು ಅವಲೋಕಿಸುವುದು ಈ ಲೇಖನದ ಉದ್ದೇಶವಾಗಿದೆ.

Read More »

ಮುಳುಗಡೆ ಗ್ರಾಮಗಳಲ್ಲಿನ ಕೃಷಿ ಸಂಬಂಧಿ ಆಚರಣೆಗಳು

ಪವಾಡೆಪ್ಪ ವಿ. ಮನಗೂಳಿ

73 to 84

ಮನುಷ್ಯನಿಗೆ ಉಸಿರಾಡಲು ಗಾಳಿ ಎಷ್ಟು ಮುಖ್ಯವೋ ಜೀವಿಸಲು ನೀರು ಕೂಡ ಮುಖ್ಯ. ಪ್ರಾಚೀನ ಕಾಲದಿಂದಲೂ ಮನುಷ್ಯ ತಾನು ಬದುಕಲು, ತನಗೆ ಬೇಕಾದ ಆಹಾರ ಪದಾರ್ಥಗಳನ್ನು ಬೆಳೆಯಲು ನದಿ ಮೂಲಗಳನ್ನೇ ಅವಲಂಬಿಸಿರುವುದನ್ನು ಕಾಣುತ್ತೇವೆ. ಹಾಗಾಗಿಯೇ ಜಗತ್ತಿನ ಎಲ್ಲಾ ನಾಗರಿಕತೆಗಳು ನದಿ ಬಯಲು ಪ್ರದೇಶಗಳಲ್ಲಿಯೇ ಬೆಳೆದು ಬಂದಿವೆ. ನದಿಗಳು ಕೇವಲ ಹರಿಯುವ ಜಲರಾಶಿ ಮಾತ್ರವಲ್ಲದೆ ಸಜೀವ ಶಕ್ತಿವಾಹಿನಿಗಳಾಗಿ ನಮ್ಮ ಮುಂದಿವೆ. ಭಾರತದಂತಹ ಕೃಷಿ ಪ್ರಧಾನ ದೇಶದಲ್ಲಿ ಒಂದು ಕಾಲಕ್ಕೆ ಮನುಷ್ಯನ ಧಾರ್ಮಿಕ ಹಾಗೂ ಸಾಂಸ್ಕೃತಿಕತೆ ಬೆಳವಣಿಗೆಗೆ ಕಾರಣವಾಗಿದ್ದ ನದಿಗಳು ಇಂದು ಆರ್ಥಿಕ ಅಭಿವೃದ್ದಿ ದೃಷ್ಟಿಯಿಂದ ವಿವಿಧೋದ್ದೇಶ ನೀರಾವರಿ ಯೋಜನೆಗಳಿಗೆ ಆವಾಸ ಸ್ಥಾನಗಳಾಗಿವೆ. ಈ ನಿಟ್ಟಿನಲ್ಲಿ ಭಾರತದ ಪ್ರಮುಖ ನದಿಗಳಲ್ಲಿ ಒಂದಾದ ಕೃಷ್ಣಾ ನದಿಯ ನೀರನ್ನು ಉಪಯೋಗಿಸಿಕೊಳ್ಳುವ ಸಂಬಂಧ ಕರ್ನಾಟಕ ಸರ್ಕಾರ ಜಾರಿಗೆ ತಂದ ಕೃಷ್ಣಾ ಮೇಲ್ದಂಡೆ ಯೋಜನೆಯು ಬಾಗಲಕೋಟೆ ಜಿಲ್ಲಾ ಭಾಗದಲ್ಲಿ ಹಲವಾರು ಬಗೆಯ ಸ್ಥಿತ್ಯಂತರಗಳನ್ನು ಸೃಷ್ಟಿಸಿದೆ. ಆ ಸ್ಥಿತ್ಯಂತರಗಳನ್ನು, ಅದರ ಹಿಂದಿನ ಬಹುಮುಖಿ ಆಯಾಮಗಳನ್ನು ಚಾರಿತ್ರಿಕ ನೆಲೆಯಲ್ಲಿ ಈ ಸಂಶೋಧನಾ ಲೇಖನದಲ್ಲಿ ಅಧ್ಯಯನ ಮಾಡಲಾಗಿದೆ.

Read More »

The Impact of Social Media on Women-Owned Start-Ups in Kalyana Karnataka Region

Altaf Hussain, Mallikarjun Biradar

85 to 94

This study examines the impact of social media on women-owned start-ups in the Kalyana Karnataka region, focusing on how platforms like Facebook, Instagram, and WhatsApp enable entrepreneurs to overcome traditional barriers. Social media offers women business owners affordable tools for marketing, customer engagement, and brand building, essential in an economically and socially challenged region. The research, based on surveys and interviews, reveals that social media significantly contributes to the growth and visibility of these start-ups, though challenges such as digital literacy and access to technology persist. The study highlights the need for targeted training and support to help women entrepreneurs fully leverage social media for business success and regional economic development.

Read More »

Voter Turnout Trends in India: A Critical Analysis

Mahendra A. C.

95 to 101

This article examines the fluctuating trends in voter turnout in India from the first general elections in 1951-52 to the present, revealing both progress and persistent challenges. Despite a growing electorate and sustained efforts by the Election Commission of India (ECI) to encourage voter participation, turnout has remained relatively low, seldom crossing 65%. Through a critical analysis, the article delves into key issues such as regional disparities—especially the persistently low turnout in Jammu & Kashmir—gender-based voting gaps, and the divergence in participation between state and national elections. The comparison of India’s voter turnout with other democracies in South Asia underscores the systemic barriers to political engagement, including political apathy and logistical challenges. To strengthen democratic participation, the article argues for a multifaceted approach that addresses these deeper socio-political factors alongside continued electoral reforms.

Read More »

Present Status and Prospects of Organic Farming in Ramanathapuram District

M. Manikandan, A. S. Arachana, L. Mohammad Ghouse

102 to 111

The impact of technology and interference in natural ecosystems often comes with side effects. Over the past fifty years, the widespread use of pesticides and herbicides to boost crop yields has led to a growing interest in alternative, chemical-free farming methods like organic farming. Organic farming not only aligns with natural processes but also provides the opportunity to command premium prices, particularly in markets such as Tamil Nadu. Given that organic farming requires fewer prerequisites compared to conventional chemical-based methods, there is an increasing demand for organic products both domestically and internationally. Consumers are willing to pay more for assurance that their food is produced through natural systems, highlighting the need for robust certification processes in the country.
The potential for organic food industries to expand and contribute to the Indian economy is significant. Agriculture, with a rich and enduring history, is celebrated as a noble profession by Thiruvalluvar, who said, “They live, who plough for life; all others workship in the rear.” Organic farming presents a viable alternative to conventional high-input practices that rely on synthetic fertilizers, fungicides, and pesticides. It focuses on the principle that soil is a living system, thus excluding synthetic products and relying instead on crop rotation, animal manures, crop residues, green manures, and biological pest control to maintain soil health and productivity. Organic crops often fetch higher market values, and their production is on the rise. Advanced markets heavily regulate the sale of organic products, ensuring their authenticity. Organic farming, with its low environmental impact, offers a way to rehabilitate and enhance degraded agricultural land. It represents one of several innovative farming systems poised to contribute significantly to future global food and ecosystem security.

Read More »

ಭಾಗೀರಥಿ ಹೆಗಡೆ ಅವರ ಹೊಳೆಯ ಹಾದಿ ಕಾದಂಬರಿಯ ಪುರುಷ ಪಾತ್ರಗಳ ವಿಶ್ಲೇಷಣೆ

ಲೋಕಾಂಬಿಕಾ

112 to 122

ಸುಮಾರು ಎರಡು ಸಾವಿರ ವರ್ಷಗಳಷ್ಟು ಸುದೀರ್ಘವಾದ ಇತಿಹಾಸವನ್ನು ಹೊಂದಿರುವ ಕನ್ನಡ ಸಾಹಿತ್ಯ ಬಹು ಸಮೃದ್ಧವಾಗಿದ್ದು ಅದರಲ್ಲಿ ಆಧುನಿಕ ಕನ್ನಡ ಸಾಹಿತ್ಯ ಘಟ್ಟವು ಒಂದು. ಈ ಕಾಲಘಟ್ಟ ಒಂದು ರೀತಿಯಲ್ಲಿ ವಿಶೇಷ ಮತ್ತು ವಿಶಿಷ್ಟ. ಕಾರಣ ಆಧುನಿಕ ಕನ್ನಡ ಸಾಹಿತ್ಯವನ್ನು ಅಧ್ಯಯನದ ದೃಷ್ಟಿಯಿಂದ ಅದು ಬೆಳೆದು ಬಂದಿರುವ ಆಧಾರದ ಮೇಲೆ ನವೋದಯ, ನವ್ಯ, ಪ್ರಗತಿಶೀಲ, ದಲಿತ-ಬಂಡಾಯ ಮತ್ತು ಮಹಿಳಾ ಸಾಹಿತ್ಯ ಎಂದು ಅನೇಕ ಭಾಗಗಳಾಗಿ ವಿಂಗಡಿಸಿದ್ದೇವೆ. ಕಥೆ, ಕಾದಂಬರಿ, ನಾಟಕ, ಪ್ರಬಂಧ, ವಿಮರ್ಶೆ, ಕಾವ್ಯದಂತಹ ಅನೇಕ ಸಾಹಿತ್ಯ ಪ್ರಕಾರಗಳು ಈ ಕಾಲಘಟ್ಟದಲ್ಲಿ ಬೆಳೆದು ತನ್ನ ಸಾಹಿತ್ಯ ಕ್ಷೇತ್ರವನ್ನು ಹಿಗ್ಗಿಸಿಕೊಂಡಿವೆ. ಆದುದರಿಂದ ಈ ಕಾಲಘಟ್ಟವನ್ನು ಸಾಹಿತ್ಯ ಕ್ಷೇತ್ರದ ಸುಗ್ಗಿಯ ಕಾಲ ಎಂತಲೇ ಕರೆಯಬಹುದು. ಕೇವಲ ಬೆರಳೆಣಿಕೆಯಷ್ಟಿದ್ದ ಮಹಿಳಾ ಲೇಖಕಿಯರು ಹೊಸಗನ್ನಡ ಕಾಲಘಟ್ಟದಲ್ಲಿ ಆಧುನಿಕ ಶಿಕ್ಷಣ ಕಲಿತ ಹೆಣ್ಣು ಮಕ್ಕಳು ಬರವಣಿಗೆಯಲ್ಲಿ ತೊಡಗಿಸಿಕೊಂಡು ಪುರುಷರಷ್ಟೇ ಸಮರ್ಥವಾಗಿ ಮತ್ತು ಸಶಕ್ತವಾಗಿ ಭಿನ್ನ ನೆಲೆಗಳಲ್ಲಿ ಸಾಹಿತ್ಯ ಸೃಷ್ಟಿಸಿ ಇಂದು ಮಹಿಳಾ ಸಾಹಿತ್ಯ ಪರಂಪರೆಯನ್ನು ಸಾಕಷ್ಟು ಹಿರಿದಾಗಿಸಿ ಸೈ ಎನಿಸಿಕೊಂಡಿದ್ದಾರೆ. ಪರಿಣಾಮವಾಗಿ ಆಧುನಿಕ ಕನ್ನಡ ಸಾಹಿತ್ಯದ ಒಂದು ಪಂಥವಾಗಿರುವ ಮಹಿಳಾ ಸಾಹಿತ್ಯ ಕಾಲಘಟ್ಟದಲ್ಲಿ ನಂಜನಗೂಡು ತಿರುಮಲಾಂಬ, ಆರ್. ಕಲ್ಯಾಣಮ್ಮ, ಕೊಡಗಿನ ಗೌರಮ್ಮ, ತ್ರಿವೇಣಿ, ಸಾರಾ ಅಬೂಬಕ್ಕರ್, ಎಚ್. ಎಸ್. ಪಾರ್ವತಿ, ಮಾಲತಿ ಪಟ್ಟಣಶೆಟ್ಟಿ, ಪ್ರೇಮಾಭಟ್, ಎ. ಪಿ. ಮಾಲತಿ, ಭಾಗೀರಥಿ ಹೆಗಡೆ, ವೈದೇಹಿ ಹೀಗೆ ಇನ್ನೂ ಅನೇಕ ಮಹಿಳಾ ಲೇಖಕಿಯರು ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕೃಷಿ ಮಾಡುವುದರ ಮೂಲಕ ಈ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಮತ್ತಷ್ಟು ವಿಸ್ತಾರಗೊಳಿಸಿದರು. ಇವರುಗಳಲ್ಲಿ ಪ್ರಮುಖವಾಗಿ ಕಂಡುಬರುವ ಭಾಗೀರಥಿ ಹೆಗಡೆ ಅವರು ಕಥೆ, ಕಾದಂಬರಿ, ಕವನ, ಪ್ರಬಂಧ, ನಾಟಕ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಹೊಳೆಯ ಹಾದಿ ಮತ್ತು ಕಾಲಾಂತರ ಎಂಬ ಎರಡು ಕಾದಂಬರಿಗಳನ್ನು ಬರೆದಿದ್ದಾರೆ. ಪ್ರಸ್ತುತ ಹೊಳೆಯ ಹಾದಿ ಎಂಬ ಅವರ ಕಾದಂಬರಿಯನ್ನು ಆಧಾರವಾಗಿಟ್ಟುಕೊಂಡು ಅಲ್ಲಿ ಬರುವ ಪುರುಷ ಪಾತ್ರಗಳನ್ನು ಕುರಿತು ವಿವೇಚಿಸಲಾಗಿದೆ.

Read More »

ಚಾಜ ನಾಟಕದಲ್ಲಿ ಮಹಿಳಾ ಸಂವೇದನೆ

ಸುಮಾ ವಸಂತ ಸಾವಂತ

123 to 130

ಆಧುನಿಕ ಸಾಹಿತ್ಯದ ಸಂದರ್ಭದಲ್ಲಿ ಮಹಿಳೆಯರು ಕಥೆ-ಕಾದಂಬರಿ ಪ್ರಕಾರಗಳಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಆದರೆ ರಂಗಭೂಮಿಯಲ್ಲಿ ನಾಟಕರಚನೆಗೆ ಸಂಬಂಧಿಸಿದಂತೆ ಅಂತಹ ದೊಡ್ಡಸಾಧನೆ ಕಾಣಿಸುವುದಿಲ್ಲ. ಆದರೆ ಇತ್ತೀಚಿನ ದಶಕಗಳಲ್ಲಿ ಮಹಿಳೆ ಅನೇಕ ಮಹತ್ವದ ನಾಟಕ ಕೃತಿಗಳನ್ನು ಕೊಟ್ಟಿದ್ದಾಳೆ. ಅಂತಹ ನಾಟಕಗಳಲ್ಲಿ ಚಾಜ ನಾಟಕವು ಒಂದಾಗಿದೆ. ಹಿಂದಿನ ಕಾಲದಿಂದಲೂ ಪುರುಷ ಪ್ರಧಾನತೆ, ಸಾಮ್ರಾಜ್ಯಶಾಹಿಗಳು, ಮತ್ತು ಪುರೋಹಿತಶಾಹಿತ್ವಗಳು ಎಲ್ಲವೂ ಒಟ್ಟಾಗಿಯೇ ಮಹಿಳೆಯರ ಮೇಲೆ ಹಲವಾರು ಕಟ್ಟುಪಾಡುಗಳನ್ನು ಹೊರಿಸಿವೆ. ಹೆಣ್ಣು ಭೋಗದ ವಸ್ತು ಎಂದು ಪುರುಷಪ್ರಧಾನ ವ್ಯವಸ್ಥೆಯು ಭಾವಿಸುತ್ತದೆ. ಪುರುಷನ ಅಧಿಕಾರತ್ವದಿಂದ ಅವನೇ ಹುಟ್ಟು ಹಾಕಿದ ಧರ್ಮ, ನಿಯಮಗಳು, ಗೊಡ್ಡು ಸಂಪ್ರದಾಯಗಳು, ಕಟ್ಟುಪಾಡುಗಳು ಹೆಣ್ಣನ್ನು ನಿರ್ದಾಕ್ಷಿಣ್ಯವಾಗಿ ನಡೆಸಿಕೊಳ್ಳುತ್ತವೆ. ಕುಟುಂಬ, ಉತ್ಪಾದನೆ, ಆಸ್ತಿ ಹೀಗೆ ಎಲ್ಲದರ ಮೇಲೆ ಪುರಷಾಧಿಪತ್ಯವೇ ಇರುತ್ತದೆ. ಈ ಕಾರಣದಿಂದಾಗಿ ದೇವದಾಸಿ ಪದ್ಧತಿ, ಬಾಲ್ಯವಿವಾಹ, ವಿಧವಾ ಸಮಸ್ಯೆ, ವರದಕ್ಷಿಣೆ, ಬೆತ್ತಲೆ ಸೇವೆ, ಸತಿಪದ್ಧತಿ, ಬಹುಪತ್ನಿತ್ವ ಮುಂತಾದ ಅನಿಷ್ಟ ಸಂಪ್ರದಾಯಗಳಿಗೆ ಹೆಣ್ಣನ್ನು ಸಿಲುಕಿಸಿ ಅವಳನ್ನು ನಿರಂತರ ಶೋಷಣೆಗೆ ಒಳಗುಮಾಡಲಾಗಿದೆ. ಮನುಸ್ಮೃತಿ ಮೊದಲಾದ ಕೃತಿಗಳಿಂದ ಹೆಣ್ಣಿನ ಸ್ವಾತಂತ್ರ್ಯಹರಣ ಮಾಡಿ ಪುರುಷಾಧೀನಗೊಳಿಸಲಾಯಿತು. ಇದು ಹೆಣ್ಣನ್ನು ಸಮಾಜದಲ್ಲಿ ಅತ್ಯಂತ ಕನಿಷ್ಠ ಸ್ಥಾನಕ್ಕೆ ಇಳಿಸಲು ಕಾರಣವಾಯಿತು.
ಯಾವುದೇ ಒಂದು ಸಂಸ್ಕೃತಿಯು ಮನುಷ್ಯರನ್ನು ಸಮಾಜ ಸಂಘಜೀವಿಯನ್ನಾಗಿ ಮಾಡಬೇಕು, ಅದು ಉತ್ತಮ ಸಂಸ್ಕೃತಿ. ಆದರೆ ಸಮಾಜದಲ್ಲಿ ಹಲವು ಆಚರಣೆ ಪದ್ಧತಿಗಳ ಮೂಲಕ ಜನರನ್ನು ದೌರ್ಜನ್ಯ, ತಾರತಮ್ಯಕ್ಕೆ ಒಳಗಾಗುವಂತೆ ಮಾಡುವ ಕೆಲವು ನಂಬಿಕೆಯ ಆಚರಣೆಗಳು ಹೀನವಾಗಿ ಅಸಹ್ಯವಾಗಿ ಕಂಡುಬರುತ್ತವೆ. ಈ ನಿಟ್ಟಿನಲ್ಲಿ ಮಲ್ಲಿಕಾ ಘಂಟಿಯವರ ಚಾಜ ನಾಟಕವು ಪುರುಷ ಪ್ರಧಾನತೆಯು ಹೆಣ್ಣನ್ನು ಸಾಂಸ್ಕೃತಿಕತೆಯ ನೆಲೆಯನ್ನು ಬಳಸಿಕೊಂಡು ಅನುಭೋಗಿಸುವ ನಡೆಯನ್ನು ಕಥಾವಸ್ತುವಾಗಿಸಿಕೊಂಡಿದೆ. ದ್ವೇಷವನ್ನು ಪ್ರೀತಿಯಿಂದ ಗೆಲ್ಲುವ, ದೌರ್ಜನ್ಯವನ್ನು ಉಧಾರತೆಯ ಮೂಲಕ ಸೋಲಿಸುವ, ಹಿಂಸೆಯನ್ನು ಉದಾತ್ತ ಮೌಲ್ಯಗಳ ಮೂಲಕ ಎದುರಾಗುವ ಆಶಯ ಇಂದು ನಿನ್ನೆಯದ್ದಲ್ಲ ಹಿಂದಿನಿಂದಲೂ ರೂಢಿಯಲ್ಲಿದೆ. ‘ಚಾಜ’ ಎಂದರೆ ‘ನಿಯಮ’ ‘ಪದ್ಧತಿ’ ಎಂದರ್ಥ. ಉತ್ತರ ಕರ್ನಾಟಕದ ಹೆಚ್ಚಿನ ಹಳ್ಳಿಗಳಲ್ಲಿ ಈ ಚಾಜ ಪದ ಬಳಕೆಯಲ್ಲಿದೆ. ಜಮೀನ್ದಾರಿ ವ್ಯವಸ್ಥೆಯಲ್ಲಿ ಮದುವೆ ನಂತರ ಮನೆಗೆ ಬರಬೇಕಾದ ಸೊಸೆ ಊರ ಗೌಡನ ಅಥವಾ ದೇಸಾಯಿ ಮನೆಯಲ್ಲಿ ಅವನ ತೆಕ್ಕೆಯಲ್ಲಿ ಮೊದಲ ರಾತ್ರಿ ಕಳೆಯಬೇಕಾಗಿತ್ತು. ಹಬ್ಬ-ಹರಿದಿನದ ಎಲ್ಲಾ ಕ್ರಿಯೆಗಳು ಗೌಡ, ದೇಸಾಯಿಗಳ ಮನೆಯಿಂದ ಮತ್ತು ಅವರ ನಾಯಕತ್ವದಲ್ಲಿಯೇ ಆರಂಭಗೊಳ್ಳಬೇಕಾಗಿತ್ತು. ಮಹಿಳಾ ಸಂಘರ್ಷವನ್ನು ಬಿಂಬಿಸುವುದು ಈ ಲೇಖನದ ಉದ್ದೇಶವಾಗಿದೆ.

Read More »

ಕಾದಂಬರಿ ಸಾಹಿತ್ಯ: ಒಂದು ಅವಲೋಕನ

ಭೀಮಣ್ಣ ಎಚ್.

131 to 134

ಇಂಕು, ಕಾಗದ, ಸಾಕಷ್ಟು ವಿರಾಮ ಮತ್ತು ತಾಳ್ಮೆಗಳಿದ್ದರೆ ಯಾರು ಬೇಕಾದರೂ ಕಾದಂಬರಿ ಬರೆಯಬಹುದು ಎಂದು ಅಧ್ಯಯನದಿಂದ ತಿಳಿದು ಬರುತ್ತದೆ. ಕಾದಂಬರಿ ಸಾಹಿತ್ಯವನ್ನು “ಕರತಲ ರಂಗಭೂಮಿ” ಎಂದು ಹಿಂದಿನ ಕಾಲದಿಂದಲೂ ಕರೆದುಕೊಂಡು ಬರಲಾಗುತ್ತಿದೆ. ಕಾದಂಬರಿಯಲ್ಲಿ ಪಾತ್ರಗಳ ಸಂಭಾಷಣೆ, ಶೈಲಿ, ಜೀವನದ ಬಗೆಗಿನ ಒಂದು ನಿಶ್ಚಿತ ದೃಷ್ಟಿಕೋನ, ಬದುಕಿನ ಹಲವು ಸಮಸ್ಯೆಗಳು ನಿರೂಪಿಸಲ್ಪಟ್ಟಿರುತ್ತವೆ.

Read More »

ವಚನಗಳಲ್ಲಿನ ಜಾತಿ ಪದ್ಧತಿ ಮತ್ತು ಮೌಢ್ಯಗಳ ವಿಶ್ಲೇಷಣೆ

ಚನ್ನವೀರಯ್ಯ

135 to 142

ಹನ್ನೇರಡನೇ ಶತಮಾನವನ್ನು ವಚನ ಸಾಹಿತ್ಯದ ಪರ್ವಕಾಲ ಎಂದು ಕರೆಯಬಹುದು. ಏಕೆಂದರೆ ಜನಸಾಮಾನ್ಯರ ಆಡುಭಾಷೆಯ ಮೂಲಕ ಕನ್ನಡಭಾಷೆಯನ್ನು ಉತ್ತುಂಗಕ್ಕೆ ಏರಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ. ಬಹು ಮುಖ್ಯವಾಗಿ ಜಾತಿ, ಮತ, ವರ್ಗ, ವರ್ಣ, ಮೇಲು, ಕೀಳು ಹಾಗೂ ಸಾಮಾಜಿಕ ಪಿಡುಗುಗಳಾದ ಮೂಢನಂಬಿಕೆಗಳು ಅನಿಷ್ಟಪದ್ದತಿಗಳ ಆಚರಣೆಯಿಂದ ಸಮಾಜದ ಅಭಿವೃದ್ಧಿಗೆ ಮಾರಕವಾದುದು ಎಂಬುದನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿ ಸಾಮಾಜಿಕ ಬದಾಲಾವಣೆಗೆ ಮುನ್ನುಡಿ ಬರೆದು ನವಮನ್ವಂತರಕೆ ದಾರಿ ದೀಪವಾದವರು. ಆ ಮೂಲಕ ಸಮಾಜದ ಪರಿವರ್ತನೆಗೆ ಶ್ರಮಿಸಿದರು. ಸಾಮಾಜಿಕ ಬದಲಾಣೆಯ ಜೊತೆಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದರು. ಅಂತಹ ಕೆಲವು ವಚನಕಾರರ ವಚನಗಳ ವಿಶ್ಲೇಷಣೆ ಈ ಲೇಖನದಲ್ಲಿ ಚರ್ಚಿಸಲಾಗಿದೆ.

Read More »

ಭಾರತದಲ್ಲಿ ನಿರುದ್ಯೋಗ ಒಂದು ಅವಲೋಕನ

ಸಂಗನಗೌಡ ಶಿವನಗೌಡ, ವಿಜಯಲಕ್ಷ್ಮೀಕಟ್ಟಿ

143 to 147

ನಿರುದ್ಯೋಗವು ಸಾರ್ವತ್ರಿಕವಾಗಿದ್ದರೂ ಭಾರತದಲ್ಲಿ ಅದು ಹೆಚ್ಚು ಗುರುತಿಸಲ್ಪಟ್ಟಿದೆ. ಕನಿಷ್ಠ ಮೆಟ್ರಿಕ್ಯುಲೇಷನ್ ವಿದ್ಯಾರ್ಹತೆ ಹೊಂದಿರುವ ಒಟ್ಟು ನಿರುದ್ಯೋಗಿ ಯುವಕರ ಸಂಖ್ಯೆ ಸುಮಾರು ಐದು ಮಿಲಿಯನ್‌ ಎಂದು ಹೇಳಲಾಗಿದೆ. ಇದರಲ್ಲಿ ಸುಮಾರು 1.5 ಮಿಲಿಯನ್ ನಿರುದ್ಯೋಗಿ ಪದವೀಧರರು ಸೇರಿದ್ದಾರೆ. ಉದ್ಯೋಗ ವಿನಿಮಯ ನಿರ್ದೇಶನಾಲಯದ ಮಾನವ ಶಕ್ತಿ ವಿಭಾಗವು ಕೈಗೊಂಡ ಅಧ್ಯಯನದ ಪ್ರಕಾರ ಉದ್ಯೋಗ ಬಯಸುವ ನಿರುದ್ಯೋಗಿ ಪದವೀಧರರಲ್ಲಿ 93 ಪ್ರತಿಶತ ಪುರುಷರು ಮತ್ತು 7 ಪ್ರತಿಶತ ಮಹಿಳೆಯರು. 48.5 ಪ್ರತಿಶತ ನಿರುದ್ಯೋಗ ಪದವೀಧರರು ಬಿ.ಎ. 22.7, ಬಿ.ಎಸ್‌ಸಿ ಮತ್ತು 12.8 ಪ್ರತಿಶತ ಬಿ.ಕಾಂ. ನಿರುದ್ಯೋಗವು ವೃತ್ತಿಪರವಾಗಿ ತರಬೇತಿ ಪಡೆದ ಎಂಜಿನಿಯರ್‌ಗಳು, ವೈದ್ಯರು ಮತ್ತು ಇತರ ತಾಂತ್ರಿಕವಾಗಿ ಅರ್ಹತೆ ಹೊಂದಿರುವ ಜನರಲ್ಲಿ ವ್ಯಾಪಕವಾಗಿದೆ. ಹಾಗಾಗಿ ಈ ಸಂಶೋಧನಾ ಲೇಖನದಲ್ಲಿ ಭಾರತದಲ್ಲಿರುವ ನಿರುದ್ಯೋಗ ಸಮಸ್ಯೆಯನ್ನು ಅವಲೋಕಿಸಲಾಗಿದೆ.

Read More »

ಭೂಸುಧಾರಣೆ ಕಾಯ್ದೆಗಳು ಮತ್ತು ಕರ್ನಾಟಕ

ಶಿವರಾಜ

148 to 156

ಭಗತ್‌ಸಿಂಗ್ ಹೇಳಿರುವಂತೆ ರಾಷ್ಟ್ರೀಯತೆಯು ಹೇಗಿರಬೇಕೆಂದರೆ “ವಸಾಹತುಶಾಹಿಯೇ ಆಗಿರಲಿ, ಪ್ರಜಾಸತ್ತಾತ್ಮಕ ಮಾದರಿಯೇ ಆಗಿರಲಿ ಅದು ದೇಶದ ಸಂಪತ್ತಿನ ಲೂಟಿಯನ್ನು ಅಂತ್ಯಗೊಳಿಸುವಂತಿರಬೇಕು. ಕರ್ನಾಟಕದಲ್ಲಿ ಭೂಮಿ ಮತ್ತು ಕೃಷಿ ಕಾಯ್ದೆ-ಕಾನೂನುಗಳಿಗೆ ರೈತರಿಂದ ಪ್ರತಿರೋಧದ ಹೋರಾಟಗಳಿಲ್ಲದೆ ಅವುಗಳನ್ನು ಒಪ್ಪಿಕೊಂಡು ತಮ್ಮ ದಿನನಿತ್ಯದ ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುತ್ತಾರೆ. ಇದಕ್ಕೆ ಕಾರಣ ಅವರುಗಳು ಬೆಳೆದಿರುವ ಬೆಳೆಯನ್ನು ಸೂಕ್ತ ಬೆಲೆಗೆ ಮಾರಾಟ ಮಾಡುವುದಾಗಿರುತ್ತದೆ. ಭೂ ಬಳಕೆಗೆ ಸಂಬಂಧಿತ ಭೂ ಸುಧಾರಣೆ ಕಾಯ್ದೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾಲಕಾಲಕ್ಕೆ ರೂಪಿಸಿ ಜಾರಿಗೆ ತಂದಿರುತ್ತವೆ. ಇದರಿಂದ ರೈತರಿಗೆ ಮತ್ತು ಕೃಷಿಯಲ್ಲಿ ನಿರತರಾದವರಿಗೆ ಆಗುತ್ತಿರುವ ಸಾಧಕ-ಬಾಧಕಗಳನ್ನು ಕೇವಲ ವರಮಾನ, ಬಂಡವಾಳ ಮತ್ತು ಆರ್ಥಿಕ ನೆಲೆಗಳಲ್ಲಿ ವಿವೇಚಿಸದೆ ಅಲ್ಲಿನ ಭೂಸಂಬಂಧಗಳು, ಚಾರಿತ್ರಿಕ, ಸಾಮಾಜಿಕ, ರಾಜಕೀಯ ನೆಲೆಗಳಿಂದ ನೋಡುವುದು ಅವಶ್ಯಕವಾಗಿದೆ.

Read More »