ಕೊಡಗಿನ ಗೌರಮ್ಮನವರ ಕತೆಗಳಲ್ಲಿ ಪ್ರತಿಭಟನೆ
Main Article Content
Abstract
ಪ್ರಸ್ತುತ ಲೇಖನವು ನವೋದಯ ಕಾಲದ ಪ್ರಖ್ಯಾತ ಕತೆಗಾರ್ತಿ ಕೊಡಗಿನ ಗೌರಮ್ಮನವರ ಕತೆಗಳಲ್ಲಿನ ʼಪ್ರತಿಭಟನೆಯʼ ಸ್ವರೂಪವನ್ನು ವಿಶ್ಲೇಷಿಸುತ್ತದೆ. ಸ್ತ್ರೀಯರ ಅಭಿವ್ಯಕ್ತಿಗೆ ಅವಕಾಶವಿಲ್ಲದ ಕಾಲದಲ್ಲಿ, ಅವರು ವಿಧವಾ ಸಮಸ್ಯೆ, ವರದಕ್ಷಿಣೆ ಮತ್ತು ಸ್ತ್ರೀ ಶೋಷಣೆಯಂತಹ ಸಾಮಾಜಿಕ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಿದರು. ಪ್ರತಿಭಟನೆಯು ತೀಕ್ಷ್ಣ ಮತ್ತು ಮಂದ ಸ್ವರೂಪದಲ್ಲಿ ಕಾಣಿಸಿಕೊಂಡಿದೆ. ಈ ಅಧ್ಯಯನಕ್ಕಾಗಿ ʼಒಂದು ಪುಟ್ಟಚಿತ್ರʼದಲ್ಲಿನ ಬಾಲವಿಧವೆಯ ಆತ್ಮಹತ್ಯೆಯ ಪರೋಕ್ಷ ಪ್ರತಿಭಟನೆ, ʼಪುನರ್ವಿವಾಹʼದಲ್ಲಿನ ವಿಧುರನ ಕಾಮಕ್ಕೆ ರಾಜಿಯ ಪ್ರತಿರೋಧ ಹಾಗೂ ʼಆಹುತಿʼಯಲ್ಲಿ ವರದಕ್ಷಿಣೆ ವಿರುದ್ಧದ ಸಿಟ್ಟಿನ ಪ್ರತಿಭಟನೆಯನ್ನು ಆಯ್ದುಕೊಳ್ಳಲಾಗಿದೆ. ಗೌರಮ್ಮನವರ ಪಾತ್ರಗಳು, ಸಾಮಾಜಿಕ ಕಟ್ಟುಪಾಡುಗಳು ಮತ್ತು ದಬ್ಬಾಳಿಕೆಯನ್ನು ಪ್ರಶ್ನಿಸಿ, ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತವೆ ಎಂಬುದನ್ನು ಈ ಲೇಖನವು ಕಂಡುಕೊಳ್ಳುತ್ತದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಕೊಡಗಿನ ಗೌರಮ್ಮ, (2008), ಕೊಡಗಿನ ಗೌರಮ್ಮನವರ ಸಮಗ್ರ ಸಣ್ಣಕಥೆಗಳು, ಅನನ್ಯ ಪ್ರಕಾಶನ, ಮೈಸೂರು.
ಕರೀಗೌಡ ಬೀಚನಹಳ್ಳಿ, (2011), ಶತಮಾನದ ಸಣ್ಣಕಥೆಗಳ ಸಮೀಕ್ಷೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.
ಶಾಂತಾ ಇಮ್ರಾಪುರ, (2012), ಮಹಿಳಾ ಅಧ್ಯಯನಗಳು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮೈಸೂರು.
ಸುಮಿತ್ರಾಬಾಯಿ ಬಿ.ಎನ್., (2014), ವಿಚಯ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.