ಸಮ್ಮೇಳನಾಧ್ಯಕ್ಷರ ಭಾಷಣಗಳ ತಾತ್ವಿಕ ಸ್ವರೂಪ
Main Article Content
Abstract
ಕನ್ನಡ ಸಾಹಿತ್ಯ ಪರಿಷತ್ತು ಈ ನಾಡಿನ ಸರ್ಕಾರೇತರ, ಸಾರ್ವಜನಿಕ ಹಿತದ ಹಿರಿಯ ಸಂಸ್ಥೆ. ನಮ್ಮ ಪ್ರಾತಿನಿಧಿಕ ಸಂಸ್ಥೆಯೂ ಹೌದು. ಕನ್ನಡದ ಕೆಲಸಗಳನ್ನು ಮಾಡಬೇಕೆಂಬ ಒತ್ತಾಸೆಯಿಂದ ಆರಂಭವಾಗಿದೆ. 1915 ರಲ್ಲಿ ಆರಂಭಗೊಂಡಂತಹ ಕನ್ನಡ ಸಾಹಿತ್ಯ ಪರಿಷತ್ತು ಭಾಷೆ, ನಾಡು, ನುಡಿ ಅಭಿವೃದ್ಧಿಯ ಬಗ್ಗೆ ಹಲವಾರು ಕಾರ್ಯ ಯೋಜನೆಗಳನ್ನು ಹಾಕಿಕೊಂಡಿದೆ. ಯಾವ ವಿಶ್ವವಿದ್ಯಾಲಯವು ಮಾಡದ ಬೃಹತ್ ಪ್ರಮಾಣದ ನಿಘಂಟನ್ನು ಒಂಬತ್ತು ಸಂಪುಟಗಳಲ್ಲಿ ಹೊರ ತಂದಿದೆ. ಕನ್ನಡ ನಾಡು ನುಡಿಗೆ ಪೂರಕವಾದ ಗ್ರಂಥಗಳನ್ನು ಪ್ರಕಟಿಸಿದೆ. ಜೊತೆಗೆ ಅಖಿಲ ಭಾರತ ಸಮ್ಮೇಳನಗಳನ್ನು ಹಮ್ಮಿಕೊಂಡು ಬಂದಿದೆ. ಪ್ರಮುಖವಾದವು ಕನ್ನಡ ಸಾಹಿತ್ಯ ಸಮ್ಮೇಳನಗಳು. ಇಂದಿಗೂ ಸಾರ್ವಜನಿಕ ಜೀವನದಲ್ಲಿ ಮಹತ್ವದ ಸ್ಥಾನವನ್ನು ಪಡೆದಿವೆ. ನಾಡು ನುಡಿಯ ಬಗ್ಗೆ ಅವುಗಳ ಅಭಿವೃದ್ಧಿಯ ಬಗ್ಗೆ ಹಲವಾರು ವಿಷಯಗಳನ್ನು ಸಾಹಿತ್ಯ ಸಮ್ಮೇಳನಗಳಲ್ಲಿ ಚರ್ಚಿತವಾಗಿವೆ ಮತ್ತು ಚರ್ಚಿತವಾಗುತ್ತಿವೆ.
ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ರಾಜಕೀಯ, ಐತಿಹಾಸಿಕ ಚರ್ಚೆಗಳು ನಡೆಯುತ್ತವೆ. ಅದರಲ್ಲೂ ಮುಖ್ಯವಾಗಿ ಅಧ್ಯಕ್ಷೀಯ ಭಾಷಣ ಪ್ರಮುಖವಾಗಿರುತ್ತದೆ. ಈ ಅಧ್ಯಕ್ಷೀಯ ಭಾಷಣಗಳನ್ನು ಅವುಗಳ ಕಾಲದ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಒತ್ತಡಗಳ ಹಿನ್ನೆಲೆಯಲ್ಲಿಯೂ ಗಮನಿಸಬೇಕಾಗಿದೆ. ಏಕೆಂದರೆ ಅಂದಿನ ಒತ್ತಡಗಳು ಸಹ ಈ ಭಾಷಣಗಳ ಮೂಲಕ ವ್ಯಕ್ತಗೊಂಡಿವೆ. ಇಲ್ಲಿ ಶಿಕ್ಷಣ ಮಾಧ್ಯಮ, ಕನ್ನಡ ಮಾಧ್ಯಮದ ಸವಾಲುಗಳು, ಕನ್ನಡ ಉಳಿಯುವ, ಬೆಳಯುವ ಚಿಂತನೆಗಳು, ಕನ್ನಡ ಭಾಷೆಯ ಸವಾಲುಗಳು, ಗಡಿ ಸಮಸ್ಯೆಗಳು, ಕನ್ನಡ ಪರ ಚಿಂತನೆಗಳು, ಹಿಂದಿ ಹೇರಿಕೆ, ಭಾಷಾ ಅಭಿವೃದ್ಧಿ, ಕನ್ನಡ ಭಾಷಾ ಬಳಕೆ, ಭಾಷಾ ರಚನೆ, ಸಾರ್ವಜನಿಕ ಜೀವನದಲ್ಲಿ ಭಾಷೆ, ಆಡಳಿತದಲ್ಲಿ ಭಾಷೆ, ಕನ್ನಡ ನಿಘಂಟುಗಳ ರಚನೆ, ಭಾಷಿಕ ಅಂಶಗಳನ್ನು ಕುರಿತು ಅಧ್ಯಕ್ಷೀಯ ಭಾಷಣಗಳಲ್ಲಿ ಚರ್ಚೆ ಮಾಡಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಮುಗುಳಿ ರಂ.ಶ್ರೀ. (ಸಂ), (1970), ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾಷಣಗಳು: ಸಂಪುಟ – 1, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
ಮುಗುಳಿ ರಂ.ಶ್ರೀ. (ಸಂ), (1972), ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾಷಣಗಳು: ಸಂಪುಟ – 2, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
ಮುಗುಳಿ ರಂ.ಶ್ರೀ. (ಸಂ), (1972), ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾಷಣಗಳು: ಸಂಪುಟ – 3, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
ಹಂಪ ನಾಗರಾಜಯ್ಯ (ಸಂ), (1985), ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾಷಣಗಳು: ಸಂಪುಟ – 4, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
ಚನ್ನಬಸಪ್ಪ ಗೊ.ರು. (ಸಂ), (1995), ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾಷಣಗಳು: ಸಂಪುಟ – 5, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
ಧರ್ಮದರ್ಶಿ ಹರಿಕೃಷ್ಣ ಪುನರೂರು (ಸಂ), (2003), ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾಷಣಗಳು: ಸಂಪುಟ – 6, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
ಅಶ್ವತ್ಥ ನಾರಾಯಣ ಜಿ. (ಸಂ), (2006), ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾಷಣಗಳು: ಸಂಪುಟ – 7, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
ಗವಿಮಠ ಬಿ.ಎಸ್., (2011), ಬೆಳಗಾವಿ ಕನ್ನಡ-ಕನ್ನಡಿಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.
ಗೀತಾಚಾರ್ಯ ನಾ., (2013), ಶಾಸ್ತ್ರೀಯ ಕನ್ನಡ ಪರಿಚಯ, ಶಾಸ್ತ್ರೀಯ ಕನ್ನಡ ವೇದಿಕೆ, ಬೆಂಗಳೂರು.
ಗುರುಪಾದಪ್ಪ ಮರಿಗುದ್ದಿ(ಸಂ), (2014), ತೇರನೆಳೆವ ಜನ, ಕನ್ನಡ ಜಾಗೃತಿ ಪುಸ್ತಕ ಮಾಲೆ, ಚಿಕ್ಕೋಡಿ.
ಗೋವಿಂದರಾಜು ಸಿ.ಆರ್., (1999), ಕನ್ನಡ ಚಳವಳಿಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಗೋವಿಂದರಾಜ ಸಿ.ಆರ್., (2006), ಗೋಕಾಕ ವರದಿ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
ಚಂದ್ರಶೇಖರ ಪಾಟೀಲ್, (2005), ಚಂಪಾದಕೀಯ, ನವಕರ್ನಾಟಕ ಪ್ರಕಾಶನ, ಬೆಂಗಳೂರು.
ಚಂದ್ರಶೇಖರ ರಾ.ನಂ.(ಸಂ), (2014), ಕನ್ನಡದ ವಿರಸೇನಾನಿ ಮ.ರಾಮಮೂರ್ತಿ ಅವರ ನಾಡು-ನುಡಿ ಚಿಂತನೆ, ಅಂಕಿತ ಪುಸ್ತಕ, ಬೆಂಗಳೂರು.
ಚಂದ್ರಶೇಖರ ರಾ.ನಂ., (2017), ಕನ್ನಡವೆನ್ನಿ ಜೊತೆಯಲ್ಲಿ ಬನ್ನಿ, ಸಪ್ನ ಬುಕ್ ಹೌಸ್, ಬೆಂಗಳೂರು.