ವಚನ ಚಳುವಳಿ ಮತ್ತು ಸಮಾಜ ಪರಿವರ್ತನೆ

Main Article Content

ಮುಕ್ತಾ ಪೈ.
ಜ್ಯೋತಿ ಶಂಕರ್

Abstract

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಚನ ಸಾಹಿತ್ಯಕ್ಕೊಂದು ವಿಶಿಷ್ಟವಾದ ಸ್ಥಾನವಿದೆ. ಇದು ಎಲ್ಲಾ ವರ್ಗ, ವರ್ಣದ ಜನಸಾಮಾನ್ಯರು ತಮ್ಮ ಮನಸ್ಸಿನಲ್ಲಿದ್ದ ಭಾವನೆಗಳನ್ನು ವ್ಯಕ್ತಪಡಿಸಿದ ಅದ್ಭುತವಾದ ಭಕ್ತಿ ಸಾಹಿತ್ಯ. ಮೇಲು-ಕೀಳು, ಜಾತಿ-ಮತ, ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಎಲ್ಲರೂ ಸಾಮೂಹಿಕವಾಗಿ ಪಾಲ್ಗೊಂಡ ಸಾಹಿತ್ಯ ಜಗತ್ತಿನ ಇತಿಹಾಸದಲ್ಲಿಯೇ ವಿರಳವಾಗಿದೆ. ಶರಣ ಧರ್ಮದ ವಿಶಿಷ್ಟತೆ ಎಂದರೆ ಪೂಜೆ ಪುನಸ್ಕಾರಗಳಿಗೆ, ಯಜ್ಞ ಯಾಗಾದಿಗಳಿಗೆ, ಆಚರಣೆಗಳಿಗೆ ಅವಕಾಶ ನೀಡಲಿಲ್ಲ. ವಚನಾಕಾರರು 12ನೇ ಶತಮಾನದಲ್ಲಿ ಸಾಮಾಜಿಕ, ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಹೀಗೆ ಹಲವು ಕ್ಷೇತ್ರಗಳಲ್ಲಿ ಬದಲಾವಣೆಗಳನ್ನು ತಂದು ಸಮಾಜದಲ್ಲಿ ನಿರ್ಲಕ್ಷಕ್ಕೆ ಒಳಗಾದ ಜನ ಸಮೂಹವನ್ನು ಒಂದೆಡೆ ಸೇರಿಸುವ ಕಾರ್ಯವನ್ನು ಮಾಡಿದರು. ವಚನ ಚಳುವಳಿಯ ದೀಪವನ್ನು ನೂರಾರು ವಚನಕಾರರು ಹಚ್ಚಿ ಬೆಳಗಿಸಿದ್ದಾರೆ. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಚೆನ್ನಬಸವಣ್ಣ, ದೇವರ ದಾಸಿಮಯ್ಯ ಹೀಗೆ ಇನ್ನೂ ಹಲವಾರು ಶರಣರು ತಮ್ಮ ಮೌಲ್ಯಯುತವಾದ ವಚನಗಳಿಂದ ಸಮಾಜದ ಬದಲಾವಣೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಜಗತ್ತಿನ ಯಾವ ಭಾಷೆಯಲ್ಲಿ ಆಗದ ಸಾಹಿತ್ಯ ರಚನೆ ಈ ಕಾಲದಲ್ಲಿ ಹುಲುಸಾಗಿ ಬೆಳೆಯಿತು.


 

Article Details

Section

Research Articles

Author Biographies

ಮುಕ್ತಾ ಪೈ.

ಸಂಶೋಧನಾರ್ಥಿ, ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮುಕ್ತ ಗಂಗೋತ್ರಿ, ಮೈಸೂರು.

ಜ್ಯೋತಿ ಶಂಕರ್

ಸಹಾಯಕ ಪ್ರಾಧ್ಯಾಪಕಿ, ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮುಕ್ತ ಗಂಗೋತ್ರಿ, ಮೈಸೂರು.

How to Cite

ಮುಕ್ತಾ ಪೈ., & ಜ್ಯೋತಿ ಶಂಕರ್. (2025). ವಚನ ಚಳುವಳಿ ಮತ್ತು ಸಮಾಜ ಪರಿವರ್ತನೆ. ಅಕ್ಷರಸೂರ್ಯ (AKSHARASURYA), 6(05), 84 to 93. https://aksharasurya.com/index.php/latest/article/view/1237

References

ಚಿದಾನಂದಮೂರ್ತಿ ಎಮ್., (1975), ವಚನ ಸಾಹಿತ್ಯ, ಸ್ವಪ್ನ ಬುಕ್ ಹೌಸ್, ಬೆಂಗಳೂರು.

ವೀರಣ್ಣ ರಾಜೂ‌ರ್, (1993), ಶಿವಶರಣೆಯರು ವಚನ ಸಂಪುಟ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

ರುದ್ರಮೂರ್ತಿ ಶಾಸ್ತ್ರಿ ಸು., (2023), ಅಕ್ಕಮಹಾದೇವಿಯವರ ನೂರಾರು ವಚನಗಳು, ಕಾಮಧೇನು, ಪುಸ್ತಕ ಭವನ, ಬೆಂಗಳೂರು.

ಮಲ್ಲೇಶಯ್ಯ ಕೆ. ಬಿ., (2018), ಕಮ್ಮಟ ಕೀಲಿ, ಅರವಿಂದ್ ಇಂಡಿಯಾ, ಬೆಂಗಳೂರು.

ಬಳ್ಳಾರಿ ಎನ್. ಬಿ., (2025), ಅಂಬಿಗರ ಚೌಡಯ್ಯನವರ ವಚನಗಳು, ಜ್ಯೋತಿಶ್ರೀ ಪ್ರಕಾಶನ, ಗುಲ್ಬರ್ಗ.

ಅಲ್ಲಮಪ್ರಭುದೇವರ ವಚನ ಸಂಪುಟ, (1993), ಶೀ ಸಿದ್ದರಾಮ ಶರಣರು ಬೆಲ್ದಾಳ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.