ಅಂಬೇಡ್ಕರ್: ಮೀಸಲಾತಿ

Main Article Content

ದೊಡ್ಡನಾಯ್ಕ ಹೆಚ್‌.

Abstract

ಬಾಬಾ ಸಾಹೇಬ್ ಅಂಬೇಡ್ಕರ್ ಭಾರತ ಕಂಡ ಮಹಾನ್ ಮಾನವತವಾದಿ. ಭಾರತದಲ್ಲಿದ್ದ ವರ್ಣ, ವರ್ಗ ಮತ್ತು ಜಾತಿ ವ್ಯವಸ್ಥೆಯನ್ನು ಬುಡ ಸಮೇತ ನಾಶ ಮಾಡದ ಹೊರತು, ಭಾರತದ ಸಮಾಜ ಸುಧಾರಣೆಗೊಳ್ಳಲು ಸಾಧ್ಯವಿಲ್ಲವೆಂದು ಹೇಳಿದ ಸಮಾಜ ಸುಧಾರಕರು. ಸಾಮಾಜಿಕ ಸ್ತರಗಳ ಮೂಲಕ ಇದ್ದ ತಾರತಮ್ಯವನ್ನು ಹೋಗಲಾಡಿಸಲು ಜನಸಾಮಾನ್ಯರಲ್ಲಿ ವಿಚಾರಧಾರೆಗಳನ್ನು ಕಟ್ಟಿಕೊಟ್ಟ ಮಹಾನ್ ವಿಚಾರವಾದಿ. ಹೀಗಾಗಿಯೇ ಬಾಬಾ ಸಾಹೇಬರು ಭಾರತೀಯ ಸಮಾಜದ ಪ್ರಗತಿಯು ಸಮಾನತೆಯಲ್ಲಿ ಅಡಗಿದೆ ಎಂದು ಬಲವಾಗಿ ನಂಬಿದ್ದರು. ವರ್ಣಗಳು ಪುರುಷನಿಂದ, ಮನುವಿನಿಂದ, ಪ್ರಜಾಪತಿಯಿಂದ, ವಾರ್ತ್ ನಿಂದ ಮತ್ತು ಸೋಮನಿಂದ ಹುಟ್ಟಿವೆ ಎಂದು ವೇದಗಳು ಪ್ರತಿಪಾದಿಸುತ್ತವೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ನಾಲ್ಕು ವರ್ಣಗಳು ಋಗ್ವದದಲ್ಲಿ ಪ್ರತಿಪಾದಿತವಾಗಿದೆ. ವರ್ಣ ವ್ಯವಸ್ಥೆಯ ಹುಟ್ಟಿನ ಕುರಿತು ಎಷ್ಟು ಚರ್ಚೆಗಳಿವೆಯೋ ಅಷ್ಟೇ ವರ್ಣಾಶ್ರಮ ವ್ಯವಸ್ಥೆಯ ಸಂಖ್ಯೆಯ ಬಗ್ಗೆಗಿನ ಚರ್ಚೆಗಳು ಇವೆ. ಭಾರತೀಯ ಸಮಾಜ ವ್ಯವಸ್ಥೆಯಲ್ಲಿ ಶೂದ್ರರನ್ನು ಅತ್ಯಂತ ಹೀನವಾಗಿ ಕಾಣಲಾಗುತ್ತಿತ್ತು. ಸಾರ್ವಜನಿಕ ದೇವಾಲಯವನ್ನು ಅವರು ಪ್ರವೇಶಿಸುವಂತಿರಲಿಲ್ಲ. ಸಾರ್ವಜನಿಕ ಕೆರೆಕಟ್ಟೆಗಳ ನೀರನ್ನು ಮುಟ್ಟುವಂತಿರಲಿಲ್ಲ. ಕೃಷಿಯನ್ನು ಮಾಡುವಂತಿರಲಿಲ್ಲ. ಅವರದೆಂದು ಹೇಳಿಕೊಳ್ಳಲಿಕ್ಕೆ ಸ್ವಂತ ವಸ್ತುವನ್ನು ಇಟ್ಟುಕೊಳ್ಳುವಂತಿರಲಿಲ್ಲ. ಓದು ಕಲಿಕೆ, ಮಾತು, ಅಭಿವ್ಯಕ್ತಿ, ಹೋರಾಟ, ಪ್ರತಿಭಟನೆ ಮತ್ತು ನ್ಯಾಯ ಕೇಳುವ ಹಕ್ಕು ಸಾಧ್ಯವೇ ಇರಲಿಲ್ಲ. ಮನುಷ್ಯ ಮನುಷ್ಯರ ನಡುವೆ ಇರುವ ಈ ತಾರತಮ್ಯ ಬಾಬಾ ಸಾಹೇಬರ ಹೃದಯವನ್ನು ಕಲುಕಿತು. ಅದಕ್ಕಾಗಿ ಬಾಬಾ ಸಾಹೇಬರು ಸಾಮಾಜಿಕ ನ್ಯಾಯದ ಹೋರಾಟದ ಪರಿವರ್ತನೆಯ ಬಾಗಿಲನ್ನು ತೆರೆದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಸ್ಪೃಶ್ಯತಾ ಆಚರಣೆಯನ್ನು ವಿರೋಧಿಸಿ 'ಬಹಿಷ್ಕೃತ ಹಿತಕಾರಣಿ' ಎಂಬ ಸಂಘಟನೆಯನ್ನು ಸ್ಥಾಪಿಸಿದರು. ಅಸ್ಪೃಶ್ಯ ಎಂದು ಕರೆದು ಎಲ್ಲಾ ಸೌಲಭ್ಯಗಳಿಂದ ದೂರವಿಟ್ಟಿದ್ದನ್ನು ಸಾರ್ವಜನಿಕ ವಲಯಗಳಲ್ಲಿ ಪ್ರಶ್ನಿಸುವಂತೆ ಮಾಡಲಾಯಿತು. ದಲಿತರಿಗೆ ವಿಶೇಷ ಸೌಲಭ್ಯಕ್ಕಾಗಿ ಅವರು ನಡೆಸಿದ ಹೋರಾಟವೇ ಆಧುನಿಕ ಮೀಸಲಾತಿಯ ಹೋರಾಟವಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

Article Details

Section

Research Articles

Author Biography

ದೊಡ್ಡನಾಯ್ಕ ಹೆಚ್‌.

ಉಪನ್ಯಾಸಕರು, ಕನ್ನಡ ವಿಭಾಗ, ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಶಿವಮೊಗ್ಗ.

How to Cite

ದೊಡ್ಡನಾಯ್ಕ ಹೆಚ್‌. (2025). ಅಂಬೇಡ್ಕರ್: ಮೀಸಲಾತಿ. ಅಕ್ಷರಸೂರ್ಯ (AKSHARASURYA), 6(05), 30 to 35. https://aksharasurya.com/index.php/latest/article/view/1231

References

ಮಹೇಶ್ ಸಿ. ಕೆ., (2000), ಅಂಬೇಡ್ಕರ್ ಮತ್ತು ಮೀಸಲಾತಿ ವರ್ಗಿಕರಣ, ವಿಮೋಚನ ಪ್ರಕಾಶನ, ಚಿತ್ರದುರ್ಗ.

ಲಿಂಗಪ್ಪ ಹೆಚ್., (2005), ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ ಸಾಮಾಜಿಕ, ಆರ್ಥಿಕ, ರಾಜಕೀಯ ನೆಲೆಗಳು, ರಶ್ಮಿ ಪ್ರಕಾಶನ, ಬೆಂಗಳೂರು.

ಅಂಬೇಡ್ಕರ್ ಬಿ. ಆರ್. (ಮೂಲ), ವಿವಿಧ ಲೇಖಕರು (ಅನು), (2012), ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬರಹಗಳು ಮತ್ತು ಭಾಷಣಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.

ಮಹೇಶ್ ಸಿ. ಕೆ., (2002), ಮೀಸಲಾತಿ ಮತ್ತು ಭವಿಷ್ಯದ ಪಥಗಳು, ವಿಮೋಚನ ಪ್ರಕಾಶನ, ಚಿತ್ರದುರ್ಗ.

ಸಣ್ಣರಾಮ, (2008), ಅಂಬೇಡ್ಕರ್ ಮತ್ತು ಮೀಸಲಾತಿ, ಪ್ರೀತಮ್ ಪ್ರಕಾಶನ, ಶಿವಮೊಗ್ಗ.

ಜಾಫೆಟ್ ಎಸ್., (2015), ಅಂಬೇಡ್ಕರ್ ಚಿಂತನೆಗಳ ಪ್ರವೇಶಿಕೆ, ಸಂಚಾಲಕರು ಡಾ. ಬಿ.ಆ‌ರ್ ಅಂಬೇಡ್ಕರ್ 125ನೇ ಜಯಂತಿಯ ವರ್ಷಾಚರಣೆಯ ಅಂತರಾಷ್ಟ್ರೀಯ ಸಮ್ಮೇಳನಾ ಆಯೋಜನಾ ಸಮಿತಿ, ಬೆಂಗಳೂರು.

ನಾಗ ಮೋಹನ್ ದಾಸ್ ಎಚ್. ಎನ್., (2018), ಸಂವಿಧಾನ ಓದು, ಸಹಯಾನ, ಕೆರೆಕೋಣ.

ಅಂಜನಪ್ಪ ಕೆ., (2007), ಅಂಬೇಡ್ಕರ್ ಮತ್ತು ಅಸ್ಪೃಶ್ಯತೆ, ಡಾ. ಬಿ.ಆರ್. ಅಂಬೇಡ್ಕ‌ರ್ ಅಧ್ಯಯನ ಕೇಂದ್ರ, ಕುವೆಂಪು ವಿಶ್ವವಿದ್ಯಾನಿಲಯ, ಶಂಕರಘಟ್ಟ.

ಇಂದಿರ ಕೃಷ್ಣಪ್ಪ (ಸಂ), (2010), ಪ್ರೊಫೆಸರ್ ಬಿ. ಕೃಷ್ಣಪ್ಪನವರ ಬರಹಗಳು ಮತ್ತು ಭಾಷಣಗಳು: ಭಾಗ-2, ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್, ಬೆಂಗಳೂರು.