೨೧ನೆಯ ಶತಮಾನದ ಕನ್ನಡ ನಾಟಕ ಮತ್ತು ರಂಗಭೂಮಿಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್
Main Article Content
Abstract
ರಂಗಭೂಮಿಯೊಂದು ಜಾಗತೀಕ ಕಲಾಭಿವ್ಯಕ್ತಿ ಮಾಧ್ಯಮವಾಗಿದೆ, ನಾಟಕವು ಜಗತ್ತಿನ ಸಾಂಸ್ಕೃತಿಕ ಸೃಜನಶೀಲತೆಯ ಅಸ್ಮಿತೆಯ ಭಾಗವಾಗಿ ಲೋಕದರ್ಶನವನ್ನು ಒಡಮೂಡಿಸುವಲ್ಲಿ ಪ್ರಮುಖ ಸಾಹಿತ್ಯ ಪ್ರಕಾರವಾಗಿದೆ. ಶ್ರೇಷ್ಠ ದಾರ್ಶನಿಕರಾದ ಬುದ್ಧ, ಬಸವಣ್ಣ, ಡಾ. ಬಿ. ಆರ್. ಅಂಬೇಡ್ಕರ್, ಜ್ಯೋತಿ ಬಾ ಪುಲೆ, ಪೆರಿಯಾರ್, ನಾರಾಯಣಗುರುಗಳಂತಹ ಆದರ್ಶಪ್ರಾಯರಾದವರ ಜೀವನ ಆಧಾರಿತ ನಾಟಕಗಳನ್ನು ರಂಗರೂಪಕ್ಕೆ ತಂದು ಸಮುದಾಯಗಳತ್ತ ತೆಗೆದುಕೊಂಡು ಹೋಗುವ ಅನಿವಾರ್ಯತೆ ಈ ನಾಡಿಗಿದೆ. ಅಂಬೇಡ್ಕರ್ ಅವರು 'ತಳಸಮುದಾಯಗಳಿಗೆ ಮಾತ್ರವಲ್ಲದೆ ಎಲ್ಲ ಸಮುದಾಯಗಳಿಗೂ ಅಕ್ಷರದ ಮೂಲಕ ವಿಮೋಚನೆ ಸಾಧ್ಯ' ಎಂಬುದನ್ನು ತಿಳಿಸಿಕೊಟ್ಟರು. ಇವರ ಬದುಕು, ಬರಹ ಮತ್ತು ಭಾಷಣಗಳಲ್ಲಿನ ಚಿಂತನಾಧಾರೆಗಳನ್ನು ಕನ್ನಡ ನಾಟಕ ಮತ್ತು ರಂಗಭೂಮಿಗೆ ಅಳವಡಿಕೊಳ್ಳುವುದರ ತುರ್ತು ಇದೆ. ಈ ನಿಟ್ಟಿನಲ್ಲಿ ಸಾಕಷ್ಟು ರಂಗಕರ್ಮಿಗಳು ಮತ್ತು ನಾಟಕಕಾರರು ದಾಪುಗಾಲು ಇಟ್ಟಿರುವುದು ಭವಿಷ್ಯದ ಭರವಸೆಯ ಧೋತಕವಾಗಿದೆ. ಹೊಸ ತಲೆಮಾರಿನ ರಂಗ ನಿರ್ದೇಶಕರಾದ ಕೆ. ಪಿ. ಲಕ್ಷ್ಮಣ್ ಅವರು ತಮ್ಮ ರಂಗರೂಪಗಳಾದ 'ದಕ್ಷಕಥಾ ದೇವಿ ಕಾವ್ಯ', 'ಪಂಚಮ ಪದ' ಮತ್ತು 'ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ' ನಾಟಕಗಳಲ್ಲಿ ಡಾ ಬಿ. ಆರ್. ಅಂಬೇಡ್ಕರ್ ಅವರ ತತ್ವಸಿದ್ಧಾಂತಗಳನ್ನು ಅಳವಡಿಸಿಕೊಂಡಿರುವುದು ವಿಶೇಷವಾಗಿದೆ. 'ಪಂಚಮ ಪದ ರಂಗರೂಪದಲ್ಲಿ ತಳಸಮುದಾಯಗಳ ಜೀವನಚರಿತ್ರೆಯನ್ನು ದೃಶ್ಯಕಾವ್ಯವಾಗಿಸಿರುವುದು ದಲಿತ ಚಳುವಳಿಗಳು ರೂಪುಗೊಂಡ ಇತಿಹಾಸವನ್ನು ನೆನಪಿಸುತ್ತದೆ. ಈ ರಂಗರೂಪವು ವ್ಯಕ್ತಿ ಘನತೆಯ ಗುರುತುಗಳನ್ನು ಕಂಡುಕೊಳ್ಳುವ ಮಾರ್ಗವಾಗಿದೆ. ಈಗೆ ಹಲವಾರು ನಾಟಕಕಾರರು ಹಾಗೂ ನಾಟಕ ಕಾರ್ತಿಯರು ತಮ್ಮ ನಾಟಕಗಳಲ್ಲಿ ಸಂವಿಧಾನಾತ್ಮಕ ಚಿಂತನೆಗಳ ಎಳೆಗಳನ್ನು ತಂದಿರುವುದು ಗುರುತಿಸಬಹುದು.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಗುರುರತ್ನ ಬಾಬು ಡಿ., (1990), ಭಾರತದ ಜೀವಂತ ಧ್ವನಿ, ಯುವವಾಣಿ ಕ್ರಿಯೇಟಿವ್ ಪ್ರಕಾಶನ, ಮೈಸೂರು.
ಜವರಯ್ಯ ಮ. ನ., (2007), ಯುಗಾಂತರ, ಶೃತಿ ಗ್ರಾಫಿಕ್ಸ್ ಮೈಸೂರು.
ಭಾಸ್ಕರ್ ಟಿ. ಎಂ., (2017), ನೀರು ಬೇಕು ನೀರು, ವಸಂತ ಪ್ರಕಾಶನ, ಬೆಂಗಳೂರು.
ಮುನಿವೆಂಕಟಪ್ಪ ವಿ., (1994), ಬಾಲಕ ಅಂಬೇಡ್ಕರ್, ವಿಚಾರವಾದಿ ಪ್ರಕಾಶನ, ಮೈಸೂರು.
ಹನುಮಂತಯ್ಯ ಎಲ್., (1998), ಅಂಬೇಡ್ಕರ್, ರಂಗನಿರಂತರ, ಬೆಂಗಳೂರು.
ರಂಗ ಪಠ್ಯಗಳು:
ಲಕ್ಷ್ಮಣ್ ಕೆ. ಪಿ., ದಕ್ಷಕಥಾ ದೇವಿ ಕಾವ್ಯ.
ಲಕ್ಷ್ಮಣ್ ಕೆ. ಪಿ., ಪಂಚಮ ಪದ.
ಲಕ್ಷ್ಮಣ್ ಕೆ. ಪಿ., ಬಾಬ್ ಮಾರ್ಲಿ ಪ್ರಮ್ ಕೋಡಿಹಳ್ಳಿ.
ಬೇಲೂರು ರಘನಂದನ್, ಅಕ್ಕಯ್.