ಡಾ. ಬಿ. ಆರ್. ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಚಿಂತನೆಗಳು
Main Article Content
Abstract
ಡಾ. ಬಿ.ಆರ್. ಅಂಬೇಡ್ಕರ್ ಒಬ್ಬ ಭಾರತೀಯ ಶ್ರೇಷ್ಠ ರಾಜಕೀಯ ನಾಯಕ, ತತ್ವಜ್ಞಾನಿ, ಸಾಮಾಜಿಕ ಚಿಂತಕ, ಇತಿಹಾಸ ಸಂಶೋಧಕ, ಆರ್ಥಿಕ ತಜ್ಞ, ಶ್ರೇಷ್ಠ ಬರಹಗಾರ, ಮಹಿಳಾ ಸಮಾನತೆಯ ಹರಿಕಾರ, ದಲಿತರ ಸೂರ್ಯ, ಕಾರ್ಮಿಕ ಬಂಧು, ಕಾನೂನು ತಜ್ಞ, ಸಂವಿಧಾನ ಶಿಲ್ಪಿ ಎಂದೆಲ್ಲಾ ಪ್ರಖ್ಯಾತರಾಗಿದ್ದಾರೆ. ಭಾರತೀಯ ಸಮಾಜವು ಶತ ಶತಮಾನಗಳಿಂದಲೂ ವರ್ಣ, ಜಾತಿಯ ಹೆಸರಿನಲ್ಲಿ ವರ್ಗೀಕರಣಗೊಂಡು ಇಡೀ ಮಾನವ ಸಂಬಂಧಗಳ ಮೌಲ್ಯವನ್ನೇ ಹಾಳು ಮಾಡಿದೆ. ಸಮಾಜದ ಬಹುಪಾಲು ಜನಾಂಗ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಬಲಿಷ್ಠವಾಗಿರುವ ಜಾತಿ, ವರ್ಗಗಳ ತುಳಿತಕ್ಕೆ ಸಿಲುಕಿ ನಲುಗಿವೆ. ಅಂಬೇಡ್ಕರ್‌ರವರು ಬಾಲ್ಯದಿಂದಲೂ ಕಂಡುಂಡ ಅಸ್ಪೃಶ್ಯತೆಯ ನೋವು ಅಪಮಾನಗಳು ಅವರನ್ನು ಸಾಮಾಜಿಕ ಚಿಂತನೆಡೆಗೆ ಮುಖ ಮಾಡುವಂತೆ ಪೇರೆಪಿಸಿದವು. ಅವರು ಶಿಕ್ಷಣ-ಸಂಘಟನೆ-ಹೋರಾಟ ಎಂಬ ತತ್ವಗಳನ್ನು ಪ್ರತಿಪಾದಿಸುವುದಷ್ಟೇ ಅಲ್ಲ ಅನುಷ್ಟಾನಗೊಳಿಸಿದ್ದಾರೆ. ಮೂಖನಾಯಕ, ಸಮತಾ, ಬಹಿಷ್ಕೃತ ಭಾರತ ಎಂಬ ಪತ್ರಿಕೆಗಳ ಮೂಲಕ ದಮನಿತರನ್ನು ಜಾಗೃತರಾಗಿಸಿದರು. 1924ರಲ್ಲಿ 'ಬಹಿಷ್ಕೃತ ಹಿತಕಾರಿಣಿ ಸಭಾ' ಸಂಸ್ಥೆಯನ್ನು ಪರಿಶಿಷ್ಟ ಜಾತಿಗಳ ಕಲ್ಯಾಣಕ್ಕೆ ಸ್ಥಾಪಿಸಿದರು. 'ಚೌಡಾರ್ ಕೆರೆ' ನೀರಿನ ಸತ್ಯಾಗ್ರಹ ಮತ್ತು ಕಾಲಾರಾಮ ದೇವಾಲಯ ಪ್ರವೇಶಕ್ಕಾಗಿ ಹೋರಾಟ ನಡೆಸಿ ಯಶಸ್ವಿಯಾದರು. ದುಂಡುಮೇಜಿನ ಸಮ್ಮೇಳನದಲ್ಲಿ ಅಸ್ಪೃಶ್ಯರ ಪ್ರತಿನಿಧಿಯಾಗಿ ಭಾಗವಹಿಸಿ ತಾರ್ಕಿಕ ವಾದ ಮಂಡಿಸಿ ಶಾಸನ ಸಭೆಗಳಲ್ಲಿ ಅಸ್ಪೃಶ್ಯರ ಮೀಸಲಾತಿಗಾಗಿ ಹೋರಾಡಿದರು. ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿ ಸಾಂವಿಧಾನಿಕ ಕಾನೂನಿನ ಚೌಕಟ್ಟಿನಲ್ಲಿ ದಲಿತರಿಗೆ, ಹಿಂದುಳಿದವರಿಗೆ, ಮಹಿಳೆಯರಿಗೆ ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಸೂಕ್ತ ಮೀಸಲಾತಿ ಸೌಲಭ್ಯ, ಸಮಾನತೆಯ ಹಕ್ಕು(ವಿಧಿ-14), ಅಸ್ಪೃಶ್ಯತೆ ನಿಷೇಧ(ವಿಧಿ-17), ಗೌರವದಿಂದ ಬದುಕುವ ಹಕ್ಕು(ವಿಧಿ-21) ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದ್ದಾರೆ. ಅಂಬೇಡ್ಕರ್‌ರವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸಂಸತ್ತಿನಲ್ಲಿ, ರಾಜ್ಯ ಶಾಸನಸಭೆಯಲ್ಲಿ ತಕ್ಕ ಪಾತಿನಿಧ್ಯವನ್ನು ಗಳಿಸಿಕೊಟ್ಟರು. ಕಾನೂನು ಮಂತ್ರಿಯಾಗಿ ಹಿಂದೂ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಕಲ್ಪಿಸುವುದಕ್ಕಾಗಿ 'ಹಿಂದೂ ಕೋಡ್ ಬಿಲ್ 'ನ್ನು ತಯಾರಿಸಿ ಸಂಸತ್ತಿನಲ್ಲಿ ಮಂಡಿಸಿ ಶತಾಯಗತಾಯ ಪ್ರಯತ್ನಿಸಿದಾಗ್ಯೂ ಒಪ್ಪಿತವಾಗದ ಕಾರಣ ತಮ್ಮ ಮಂತ್ರಿ ಸ್ಥಾನಕ್ಕೆ 1951 ಸೆಪ್ಟೆಂಬರ್ 27 ರಂದು ರಾಜಿನಾಮೆ ನೀಡಿದರು. ಸಾಮಾಜಿಕ ನ್ಯಾಯವನ್ನು ಭಾರತ ಸಂವಿಧಾನದ ಆಧಾರ ಮತ್ತು ಸ್ಪೂರ್ತಿಯಾಗಿಸಿದ್ದಾರೆ. ಅವರು ನಡೆಸಿದ ಹೋರಾಟಗಳಲ್ಲಿ, ಮಾಡಿದ ಭಾಷಣಗಳಲ್ಲಿ, ರಚಿಸಿದ ಕೃತಿಗಳಲ್ಲಿ ಅವರ ಸಾಮಾಜಿಕ ನ್ಯಾಯದ ಚಿಂತನೆಗಳನ್ನು ಕಾಣಬಹುದು. ಈ ಲೇಖನದಲ್ಲಿ ಅವರು ಸಾಮಾಜಿಕ ನ್ಯಾಯಕ್ಕಾಗಿ ನಡೆಸಿದ ಹೋರಾಟ ಮತ್ತು ಚಿಂತನೆಗಳನ್ನು ವಿಶ್ಲೇಷಿಸುವ ಪ್ರಯತ್ನ ಮಾಡಲಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ನಾನಕ್‌ಚಂದ್ ರತ್ತು (ಮೂಲ), ಶಿವರಾಂ ಎನ್. ಆರ್. (ಸಂ), (2019), ಡಾ. ಅಂಬೇಡ್ಕರ್ ಜೊತೆಗಿನ ಅನುಭವಗಳು, ಸಮತಾ ಪ್ರಕಾಶನ, ಮೈಸೂರು.
ಇನಾಂದಾರ್ ವಿ. ಎಂ., (2017), ಡಾ. ಬಿ.ಆರ್. ಅಂಬೇಡ್ಕರ್ ವ್ಯಕ್ತಿ ಮತ್ತು ವಿಚಾರ, ವಸಂತ ಪ್ರಕಾಶನ, ಬೇಂಗಳೂರು.
ಜಸ್ಟೀಸ್ ಕೊತ್ತಪಲ್ಲಿ ಪುನ್ನಯ್ಯ (ಮೂಲ), ಸುಜ್ಞಾನಮೂರ್ತಿ ಬಿ. (ಅನು), (2020), ಅಂಬೇಡ್ಕರ್ ದೃಷ್ಟಿಯಲ್ಲಿ ಸಾಮಾಜಿಕ ನ್ಯಾಯ, ಲಡಾಯಿ ಪ್ರಕಾಶನ, ಗದಗ.
ಸತ್ಪಾಲ್ ಪುಲಾನಿ & ನಾರಾಯಣ ಪಿ. ಎಸ್., (2018), ಭಾರತ ಸಂವಿಧಾನ, ಕರ್ನಾಟಕ ಲಾ ಜರ್ನಲ್ ಪಬ್ಲಿಕೇಶನ್ಸ್, ಬೆಂಗಳೂರು.
ವಸಂತ ಮೂನ್ (ಮೂಲ), ಸನದಿ ಬಿ ಎ. (ಅನು), (2019), ಡಾ. ಬಾಬಾಸಾಹೇಬ್ ಅಂಬೇಡ್ಕರ್, ನ್ಯಾಷನಲ್ ಬುಕ್ ಟ್ರಸ್ಟ್, ಇಂಡಿಯಾ.
ಶಂಕರ್‌ರಾವ್ ಚ. ನ., (2012), ಸಾಮಾಜಿಕ ಆಂದೋಲನಗಳ ಪಕ್ಷಿ ನೋಟ, ಜೈ ಭಾರತ ಪ್ರಕಾಶನ, ಮಂಗಳೂರು.