ಭಾರತದ ಪ್ರಜಾಪ್ರಭುತ್ವದ ಪಿತಾಮಹರಾಗಿ ಡಾ. ಬಿ. ಆರ್. ಅಂಬೇಡ್ಕರ್

Main Article Content

ಎಲ್ಲಪ್ಪ ಜಿ.

Abstract

ವಿಸ್ತಾರವಾದ ದೇಶ, ವೈವಿಧ್ಯಮಯವಾದ ಸಂಸ್ಕೃತಿಗಳು, ಸಾವಿರಾರು ಭಾಷೆಗಳು, ಸಾವಿರಾರು ಜಾತಿಗಳು, ವಿಭಿನ್ನ ಮತಗಳು ಈ ಮಣ್ಣಿನಲ್ಲಿ ಜೀವಿಸುತ್ತಿವೆ. ಈ ಎಲ್ಲವುಗಳಿಗೆ ಜೀವ ಕೊಡುವ ತತ್ವ ಯಾವುದು? ಮತ್ತು ಇವುಗಳನ್ನು ಬೆಸೆಯುವ ಸೂತ್ರ ಯಾವುದು? ಎಂಬ ಆಲೋಚನೆಗಳ ಬೆನ್ನ ಹತ್ತಿದಾಗ ಸಿಗುವ ಪೂರಕ ಶಕ್ತಿಗಳ ಬಗ್ಗೆ ಅಧ್ಯಯನಕ್ಕೆ ಪ್ರಜಾಪ್ರಭುತ್ವವೊಂದು ಮುಖ್ಯವಾಗಿ ಮುನ್ನೆಲೆಗೆ ಬರುತ್ತದೆ. ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯ ನಂತರದಲ್ಲಿ ಇದು ಬೆಳೆದು ಬಂದ ಪರಂಪರೆ, ಅದು ಗಟ್ಟಿಗೊಂಡ ಹಿನ್ನೆಲೆಗಳು ಆಸಕ್ತಿದಾಯಕಗಳಾಗಿವೆ. ಬಾಬಾ ಸಾಹೇಬರು ಪ್ರಜಾಪ್ರಭುತ್ವವನ್ನು ಭಾರತೀಯ ಮಣ್ಣಿನಲ್ಲಿ ಕೃಷಿ ಮಾಡಿದ ಬಗ್ಗೆ ಗಮನಾರ್ಹವಾದದ್ದು. ಎಲ್ಲಾ ಜನರು ಬದುಕಲಿಕ್ಕೆ ಬೇಕಾದ ಜೀವನ ವಿಧಾನ ಮತ್ತು ಆಡಳಿತ ಕ್ರಮವಾಗಿಸುವಲ್ಲಿ ಸಶಕ್ತವಾದ ಸೂತ್ರವೊಂದನ್ನು ಪೋಣಿಸಿದ್ದಾರೆ. ದೇಹಕ್ಕೆ ಹೊಂದಿಕೊಳ್ಳುವ ಅಂಗಿಯನ್ನೆ ಹೊಲಿಯಬೇಕು. ಅಳತೆ ಮೀರಿದರೆ ಅದು ತನ್ನ ಬಾಹ್ಯ ಮತ್ತು ಅಂತರಂಗಕ್ಕೆ ಸರಿ ಹೊಂದುವುದಿಲ್ಲ. ಆಗ ಅದರ ನಿಜ ಸೌಂದರ್ಯವೂ ಹಾಳಾಗುತ್ತದೆ. ಹಾಗಾಗಿ ಭಾರತದಂತಹ ದೇಶಕ್ಕೆ ಸತ್ವಶಾಲಿಯಾಗಿ ಚಲಾವಣೆಗೊಳ್ಳುವ ಜೀವ ಸತ್ವವೆಂದರೆ ಅದು ಪ್ರಜಾಪ್ರಭುತ್ವ. ಎಲ್ಲರನ್ನೂ ಒಂದು ದಾರಕ್ಕೆ ಸೇರಿಸಿ ಕೊಂಡೊಯುವ ಬೇಸುಗೆ ಎಂಬುದನ್ನರಿತು ಸಂವಿಧಾನದಲ್ಲಿ ಇದಕ್ಕೆ ಒಂದು ಸ್ಪರ್ಶ ನೀಡಿದ್ದಾರೆ. ಪ್ರಜಾಪ್ರಭುತ್ವ ಎನ್ನುವುದು ಪ್ರಜೆಗಳಿಂದ ಉತ್ಪನ್ನಗೊಳ್ಳುವ ಅಧಿಕಾರ. ಆ ಅಧಿಕಾರದಿಂದ ಜನರ ಆಶೋತ್ತರಗಳಿಗೆ, ಆಕಾಂಕ್ಷೆಗಳಿಗೆ, ಮನೋಭಾವಗಳಿಗೆ ಸ್ಪಂದನೆ, ಸಂವೇದನೆ, ಸಹವರ್ತಿತನ, ಸಹಭಾಗಿತ್ವಗಳು ಹುಟ್ಟು ಹಾಕಬೇಕು. ಜನ ಕಲ್ಯಾಣಕ್ಕೆ ಅನುವು ಮಾಡಿಕೊಡಬೇಕು. ಏಕೆಂದರೆ ಪ್ರತಿಯೊಂದು ಜೀವಿಗೂ ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತೆಗಳು ಅಗತ್ಯ ಹಾಗೂ ಅನಿವಾರ್ಯವಾಗಿರುತ್ತವೆ. ಇವು ನೆಲೆಗೊಳ್ಳಲು ಪ್ರಜಾಪ್ರಭುತ್ವದಂತಹ ಅಂತಃಸತ್ವಬೇಕು. ದುರ್ದಮ್ಯವಾದ ಕಾಡಿನಂತೆ ಪ್ರತ್ಯೇಕತೆಯನ್ನು ಕಾಪಾಡಿಕೊಂಡು ಬಂದಿರುವ ವ್ಯವಸ್ಥೆಯು ಬೆರೆಯುವುದು ಕಷ್ಟಸಾಧ್ಯ. ಸಮಾಜಮುಖಿಯಾಗಿ, ಮುಖ್ಯವಾಹಿನಿಗೆ ತರಲು ಅವರ ಪ್ರಯತ್ನ ಅದಮ್ಯವಾದದ್ದು. ಪ್ರಜಾಪ್ರಭುತ್ವ ಎನ್ನುವುದು ಬಹು ಸಂಖ್ಯಾತರ ಪರವಾದ. ಅಲ್ಪ ಸಂಖ್ಯಾತರ ವಿರೋಧವಾದ ವರ್ತನೆಗಳು ಈ ಮಣ್ಣಿಗೆ ಒಗ್ಗವು. ಒಂದು ಸರ್ಕಾರ ಜನರಿಂದ ಆಯ್ಕೆಯಾದ ಮೇಲೆ ಅದರ ಕರ್ತವ್ಯ ಮತ್ತು ಜವಾಬ್ದಾರಿಗಳು ಮುಖ್ಯವಾಗುತ್ತವೆ. ಅದು ಸಂಧಿಸುವ ಹಾಗೂ ಕ್ರಮಿಸುವ ದಾರಿಯೂ ಗಮ್ಯವಾಗುತ್ತದೆ. ಕಟ್ಟಕಡೆಯ ವ್ಯಕ್ತಿಗೂ ಅವು ತಲುಪಬೇಕು. ಪ್ರಜಾಪ್ರಭುತ್ವದ ತತ್ವಗಳು ಸರ್ವಾಂಗೀಣ ಅಭಿವೃದ್ಧಿಗೆ ಕೊಟ್ಟ ಒತ್ತಾಸೆಗಳೇನು? ಅದರ ಸವಾಲುಗಳೇನು? ಎಂಬುದು ಚರ್ಚಿತ ವಿಷಯವಾಗುತ್ತದೆ. ಅಭಿವೃದ್ಧಿಯ ಪರಿಕಲ್ಪನೆಯಲ್ಲಿ ಸಾಮಾಜಿಕತೆ, ಶೈಕ್ಷಣಿಕತೆ, ಆರ್ಥಿಕತೆ ಹಾಗೂ ರಾಜಕೀಯ ಮುಂತಾದ ವಲಯಗಳಲ್ಲಿ ಅದು ಪ್ರವೇಶ ಪಡೆದು ಜನರ ಜೀವಾಳದಲ್ಲಿ ಅಸ್ಥಿತ್ವ ಪಡೆದ ರೀತಿಯೂ ಈ ಅಧ್ಯಯನದ ಪ್ರಧಾನ ಆಶಯವಾಗಿದೆ.

Article Details

Section

Research Articles

Author Biography

ಎಲ್ಲಪ್ಪ ಜಿ.

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಲಾದಗಿ, ಬಾಗಲಕೋಟೆ.

How to Cite

ಎಲ್ಲಪ್ಪ ಜಿ. (2025). ಭಾರತದ ಪ್ರಜಾಪ್ರಭುತ್ವದ ಪಿತಾಮಹರಾಗಿ ಡಾ. ಬಿ. ಆರ್. ಅಂಬೇಡ್ಕರ್. ಅಕ್ಷರಸೂರ್ಯ (AKSHARASURYA), 6(05), 36 to 45. https://aksharasurya.com/index.php/latest/article/view/1232

References

ಅಂಬೇಡ್ಕರ್ ಬಿ. ಆರ್. (ಮೂಲ), ವಿವಿಧ ಲೇಖಕರು (ಅನು), (2015), ಬಾಬಾ ಸಾಹೇಬ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-17, ಕನ್ನಡ ಮತ್ತು ಸಂಸ್ಕೃತಿ ಇಲಾಖೆ & ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು.

ಅಂಬೇಡ್ಕರ್ ಬಿ. ಆರ್. (ಮೂಲ), ವಿವಿಧ ಲೇಖಕರು (ಅನು), (2015), ಬಾಬಾ ಸಾಹೇಬ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು ಸಂಪುಟ-20, ಕನ್ನಡ ಮತ್ತು ಸಂಸ್ಕೃತಿ ಇಲಾಖೆ & ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು.

ಮೂಡ್ನಾಕೂಡು ಚಿನ್ನಸ್ವಾಮಿ, (2019), ಸಮಗ್ರ ಸಾಹಿತ್ಯ: ಸಂಪುಟ-4, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

ಶಿವರಾಂ ಎನ್. ಆರ್., (2022), ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್, ಸಮತ ಪ್ರಕಾಶನ, ಮೈಸೂರು.