ವಚನ ಚಳುವಳಿ ಮತ್ತು ಸಮಾಜ ಪರಿವರ್ತನೆ
Main Article Content
Abstract
ಆತ್ಮಾನುಭಾವದ ಚೈತನ್ಯ ಮತ್ತು ಸಮಾಜಕಲ್ಯಾಣದ ತೀವ್ರಕಾಳಜಿಯೊಂದಿಗೆ ಮೂಢನಂಬಿಕೆ, ಕಂದಾಚಾರಗಳಿಂದ ಜಡವಾಗಿದ್ದ ಸಮಾಜವನ್ನು ಪರಿವರ್ತಿಸುವ ಸಂಕಲ್ಪದಿಂದ ಅವರು ಒಂದು ವಿನೂತನ ಚಳುವಳಿಯನ್ನೇ ಪ್ರಾರಂಭಿಸಿದರು. ಮೇಲು-ಕೀಳು ಎಂಬ ವರ್ಣ ಅಸಮಾನತೆ;ಬಡವ ಬಲ್ಲಿದ ಎಂಬ ವರ್ಗ ತಾರತಮ್ಯ;ಹೆಣ್ಣು-ಗಂಡು ಎಂಬ ಲಿಂಗಭೇದ ಇವೆಲ್ಲ ತರತಮ ವ್ಯವಸ್ಥೆಯನ್ನು ಹೋಗಲಾಡಿಸಿ ಸಮಾನತೆಯ ಆಧಾರದ ಮೇಲೆ ಹೊಸ ಸಮಾಜವನ್ನು ಅವರು ಕಟ್ಟಬಯಸಿದರು. ಇದಕ್ಕಾಗಿ ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪನೆಯಾಯಿತು. ಬಸವಣ್ಣ ಸಂಚಾಲಕನಾಗಿ ಮುಂದೆ ನಿಂತ. ಮಹಾನುಭಾವಿ ಅಲ್ಲಮಪ್ರಭುವಿನ ಮಾರ್ಗದರ್ಶನ ದೊರೆಯಿತು. ಚೆನ್ನಬಸವ, ಅಕ್ಕನಾಗಮ್ಮ, ಹಡಪದ ಅಪ್ಪಣ್ಣ, ಮಡಿವಾಳ ಮಾಚಯ್ಯ ಮೊದಲಾದ ನೂರಾರು ವಚನಕಾರರು ಕಾರ್ಯಕರ್ತರಾಗಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡರು. ಬಸವಾದಿ ಶರಣರು ಕಲ್ಯಾಣದಲ್ಲಿ ಹೊತ್ತಿಸಿದ ಈ ಬೆಳಕಿನ ಕಿರಣಗಳು ಕನ್ನಡ ನಾಡಿನಾದ್ಯಂತ ಮತ್ತು ಅದರಾಚೆಗೂ ವ್ಯಾಪಕವಾಗಿ ಹರಡಿದವು. ಉಡುತಡಿಯಿಂದ ಅಕ್ಕಮಹಾದೇವಿ, ಬಳ್ಳಿಗಾವೆಯಿಂದ ಪ್ರಭುದೇವ, ಸೊನ್ನಲಿಗೆಯಿಂದ ಸಿದ್ದರಾಮ ಶಿವಯೋಗಿ, ನೆರೆಯ ಪ್ರಾಂತ್ಯದಿಂದ ತೆಲುಗು ಜೊಮ್ಮಯ್ಯ ದೂರದ ಕಾಶ್ಮೀರದಿಂದ ಮಹಾದೇವ-ಮಹಾದೇವಮ್ಮ-ಹೀಗೆ ನೂರಾರು ಚೈತನ್ಯಗಳು ಬಂದು ಕಲ್ಯಾಣದಲ್ಲಿ ಸಂಗಮಿಸಿದವು. ಈ ಇಡೀ ಸಮುದಾಯ ಸಾಮೂಹಿಕವಾಗಿ; ಅಸಮಾನತೆ, ದುಃಖ-ದಾರಿದ್ರ, ಹಿಂಸೆ ಕ್ರೌರ್ಯ ಮೌಡ್ಯತೆಗಳಿಂದ ತತ್ತರಿಸಿ ಹೋಗಿದ್ದ ಸಮಾಜವನ್ನು ಪರಿವರ್ತಿಸಿ, ಅಲ್ಲಿ ಸಮಾನತೆ, ಸುಖ, ಸಂತೋಷ, ಶಾಂತಿ, ಆತ್ಮ ಜ್ಞಾನದ ಬೀಜ ಬಿತ್ತಿ ಹೊಸ ವಾತಾವರಣ ನಿರ್ಮಿಸುವ ಶುಭಸಂಕಲ್ಪ ಮಾಡಿದರು. ಇದು ಕೇವಲ ಕರ್ನಾಟಕದ ವ್ಯಾಪ್ತಿಯಲ್ಲಿ ಮಾತ್ರವಲ್ಲ, ಇಡೀ ಭರತಖಂಡದ ವ್ಯಾಪ್ತಿಯಲ್ಲಿ ಒಂದು ಐತಿಹಾಸಿಕ ಮಹತ್ವದ ಸಂದರ್ಭವೆಂದೇ ಹೇಳಬಹುದು.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಬಸವರಾಜು ಎಲ್., (2016), ಅಕ್ಕನ ವಚನಗಳು, ಸ್ವಪ್ನ ಬುಕ್ ಹೌಸ್, ಬೆಂಗಳೂರು.
ತಿಪ್ಪೇರುದ್ರಸ್ವಾಮಿ ಎಚ್., (2019), ಶರಣರ ಅನುಭಾವ ಸಾಹಿತ್ಯ, ಡಿ.ವಿ.ಕೆ. ಮೂರ್ತಿ ಪ್ರಕಾಶನ, ಮೈಸೂರು.
ಗುರುಲಿಂಗ ಕಾಪಸೆ, (2022), ಅಕ್ಕಮಹಾದೇವಿ, ಸಾಹಿತ್ಯ ಆಕಾಡೆಮಿ, ದೆಹಲಿ.
ಶ್ರೀನಿವಾಸಮೂರ್ತಿ ಎಂ.ಆರ್., (1968), ವಚನಧರ್ಮಸಾರ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.
ತಿಪ್ಪೇರುದ್ರಸ್ವಾಮಿ ಎಚ್., (2016), ಕದಳಿ ಕರ್ಪುರ, ಡಿ.ವಿ.ಕೆ. ಮೂರ್ತಿ ಪ್ರಕಾಶನ, ಮೈಸೂರು.