ಬಾಬಾ ಸಾಹೇಬ್ ಅಂಬೇಡ್ಕರ್: ಸಾಮಾಜಿಕ ನ್ಯಾಯದ ರೂವಾರಿ

Main Article Content

ಅಶ್ವಿನಿ ಎಂ. ಎಸ್.

Abstract

ಭಾರತ ಕಂಡ ಅತ್ಯಂತ ಶ್ರೇಷ್ಠ ಪ್ರತಿಭೆಗಳಲ್ಲಿ ಬಾಬಾ ಸಾಹೇಬ್ ಅಂಬೇಡ್ಕ‌ರ್ ಅವರು ಅಗ್ರಮಾನ್ಯರು. ಅವರು ರಾಜಕೀಯ ತಜ್ಞರು, ಕಾನೂನು ತಜ್ಞರು, ಆರ್ಥಿಕ ಚಿಂತಕರು, ಸಾಮಾಜಿಕ ನ್ಯಾಯದ ಹೋರಾಟಗಾರರು, ತತ್ವಜ್ಞಾನಿಗಳು, ಲೇಖಕರು, ಬಹುಭಾಷ ವಿದ್ವಾಂಸರು, ಭಾರತ ರಾಷ್ಟ್ರದ ಮಹಾನ್ ನೇತಾರ, ಭಾರತದ ಶ್ರೇಷ್ಠ ಮಾನವತಾವಾದಿ, ಪ್ರಜಾತಂತ್ರ ಕಾರಣಿ ಮತ್ತು ಸಾಮಾಜಿಕ ಕ್ರಾಂತಿಕಾರಿ, ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ಮಹಾಜ್ಞಾನಿ ಹಾಗೂ ಭಾರತದ ಸಂವಿಧಾನ ರಚನ ಕರಡು ಸಮಿತಿಯ ಅಧ್ಯಕ್ಷರು. ಹೀಗೆ ಇವರ ಶ್ರೇಷ್ಠತೆಗಳನ್ನು ಪಟ್ಟಿ ಮಾಡುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇಂಥ ಶ್ರೇಷ್ಠ ವ್ಯಕ್ತಿ ಭಾರತದಲ್ಲಿದ್ದ ವರ್ಣ ವ್ಯವಸ್ಥೆಯ ವಿರುದ್ಧ ಹೋರಾಡಿ, ತಾನೇ ಸಂವಿಧಾನವನ್ನು ರಚಿಸಿ ಸಾಮಾಜಿಕ ನ್ಯಾಯವನ್ನು ನೀಡಿದ ಸಾಮಾಜಿಕ ಚಿಂತಕ ಎಂದರೆ ತಪ್ಪಾಗಲಾರದು. ಭಾರತದಲ್ಲಿ ಮೊದಲು ವರ್ಣ ವ್ಯವಸ್ಥೆ ರೂಡಿಯಲ್ಲಿತ್ತು. ಅದು ಯಾವಾಗ ಯಾವ ಕಾರಣಗಳಿಂದ ಆರಂಭಗೊಂಡಿತು ಎಂದು ಹೇಳುವುದು ಕಷ್ಟ. ಏಕೆಂದರೆ ಯಾವುದೇ ಸಾಮಾಜಿಕ ವ್ಯವಸ್ಥೆಯ ಉಗಮದ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲವಾದರೂ, ವೇದಗಳಿಂದಲೇ ವರ್ಣವಸ್ಥೆ ಆರಂಭವಾಗಿದೆ ಎನ್ನುವುದು ಬಹುಜನ ಒಪ್ಪಿತವಾದ. ಚಾತುರ್ವಣ ಎಂಬುದು ಹಿಂದೂ ಧರ್ಮದ ಒಂದು ಸಾಮಾಜಿಕ ವಿಭಜನಾ ವ್ಯವಸ್ಥೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ಈ ವರ್ಣ ವ್ಯವಸ್ಥೆಯು ಪ್ರಾಚೀನ ಸಮಾಜದಲ್ಲಿ ಶ್ರಮ ವಿಭಜನೆ ತತ್ವದಲ್ಲಿ ರೂಪಿತವಾಗಿದೆ. ಅಧ್ಯಯನ ಅಧ್ಯಾಪನ ಯಜ್ಞ ಯಾಗಾದಿಗಳ ಕಾರಣದಿಂದ ಬ್ರಾಹ್ಮಣ, ರಾಜ ಆಡಳಿತ, ರಾಜ್ಯ ಸುಭಿಕ್ಷತೆಯ ಕಾರಣದಿಂದ ಕ್ಷತ್ರಿಯ, ವ್ಯಾಪಾರ ವ್ಯವಹಾರಗಳ ಕಾರಣದಿಂದ ವೈಶ್ಯ, ಕೃಷಿ ಮತ್ತು ಕೂಲಿಕಾರ್ಯಗಳು ಕಾರಣದಿಂದ ಶೂದ್ರ ಎಂದು ನಿರ್ವಹಿಸಿರುವ ಬಗೆಯನ್ನು ಕಾಣಬಹುದು. ಓದುವ ಕಾರಣದಿಂದ ಬ್ರಾಹ್ಮಣ ಮೇಲ್ವರ್ಗದವರಾಗಿ, ಕಾಯಕದ ಕಾರಣದಿಂದ ಶೂದ್ರ ಕೆಳ ವರ್ಗದವನಾಗಿ ಗುರುತಿಸಲ್ಪಡುತ್ತಿರುವುದು ದುರಾದೃಷ್ಟಕರ.


 

Article Details

Section

Research Articles

Author Biography

ಅಶ್ವಿನಿ ಎಂ. ಎಸ್.

ಉಪನ್ಯಾಸಕರು, ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಶಿವಮೊಗ್ಗ.

How to Cite

ಅಶ್ವಿನಿ ಎಂ. ಎಸ್. (2025). ಬಾಬಾ ಸಾಹೇಬ್ ಅಂಬೇಡ್ಕರ್: ಸಾಮಾಜಿಕ ನ್ಯಾಯದ ರೂವಾರಿ. ಅಕ್ಷರಸೂರ್ಯ (AKSHARASURYA), 6(05), 10 to 16. https://aksharasurya.com/index.php/latest/article/view/1226

References

ಮಹೇಶ್ ಸಿ. ಕೆ., (2000), ಅಂಬೇಡ್ಕರ್ ಮತ್ತು ಮೀಸಲಾತಿ ವರ್ಗಿಕರಣ, ವಿಮೋಚನ ಪ್ರಕಾಶನ, ಚಿತ್ರದುರ್ಗ.

ಲಿಂಗಪ್ಪ ಹೆಚ್., (2005), ಡಾ. ಬಿ.ಆರ್. ಅಂಬೇಡ್ಕರ್ ರವರ ಸಾಮಾಜಿಕ-ಆರ್ಥಿಕ-ರಾಜಕೀಯ ನೆಲೆಗಳು, ರಶ್ಮಿ ಪ್ರಕಾಶನ, ಬೆಂಗಳೂರು.

ಅಂಬೇಡ್ಕರ್ ಬಿ. ಆರ್., (2012), ಡಾಕ್ಟರ್ ಬಾಬಾಸಾಹೇಬ್ ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.

ಮಹೇಶ್ ಸಿ. ಕೆ., (2002), ಮೀಸಲಾತಿ ಮತ್ತು ಭವಿಷ್ಯದ ಪಥಗಳು, ವಿಮೋಚನ ಪ್ರಕಾಶನ, ಚಿತ್ರದುರ್ಗ.

ಸಣ್ಣರಾಮ, (2008), ಅಂಬೇಡ್ಕರ್ ಮತ್ತು ಮೀಸಲಾತಿ, ಪ್ರೀತಮ್ ಪ್ರಕಾಶನ, ಶಿವಮೊಗ್ಗ.

ಜಾಫೆಟ್ ಎಸ್ , (2015), ಅಂಬೇಡ್ಕರ್ ಚಿಂತನೆಗಳ ಪ್ರವೇಶಿಕೆ, ಸಂಚಾಲಕರು ಡಾ. ಬಿ.ಆ‌ರ್ ಅಂಬೇಡ್ಕರ್ 125ನೇ ಜಯಂತಿಯ ವರ್ಷಾಚರಣೆಯ ಅಂತರಾಷ್ಟ್ರೀಯ ಸಮ್ಮೇಳನಾ ಆಯೋಜನಾ ಸಮಿತಿ, ಬೆಂಗಳೂರು.

ನಾಗಮೋಹನದಾಸ್ ಎಚ್. ಎನ್., (2018), ಸಂವಿಧಾನ ಓದು, ಸಹಯಾನ, ಕೆರೆಕೋಣ.

ಅಂಜನಪ್ಪ ಕೆ., (2007), ಅಂಬೇಡ್ಕರ್ ಮತ್ತು ಅಸ್ಪೃಶ್ಯತೆ, ಡಾ. ಬಿ.ಆರ್. ಅಂಬೇಡ್ಕ‌ರ್ ಅಧ್ಯಯನ ಕೇಂದ್ರ, ಕುವೆಂಪು ವಿಶ್ವವಿದ್ಯಾನಿಲಯ, ಶಂಕರಘಟ್ಟ.

ಇಂದಿರ ಕೃಷ್ಣಪ್ಪ (ಸಂ), (2010), ಪ್ರೊಫೆಸರ್ ಬಿ ಕೃಷ್ಣಪ್ಪನವರ ಬರಹಗಳು ಮತ್ತು ಭಾಷಣಗಳು: ಭಾಗ-2, ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್, ಬೆಂಗಳೂರು.