ಸಾಮ್ರಾಟ ಅಶೋಕನ ಕಾಲ ಮತ್ತು ಸಾಮಾಜಿಕ ಕ್ರಾಂತಿ

Main Article Content

ವಿನುತ ಬಿ.

Abstract

ಇತಿಹಾಸಕಾರ ಹೆಚ್.ಜಿ. ವೆಲ್ಸ್ "ಇತಿಹಾಸದ ಆಗಸದಲ್ಲಿ ಸಾವಿರಾರು ಜನ ರಾಜ ಮಹಾರಾಜರು ಆಳಿ ಹೋಗಿದ್ದಾರೆ. ಆದರೆ, ಸಾಮ್ರಾಟ ಅಶೋಕ ಮಾತ್ರ ಅಂದಿನಿಂದ, ಇಂದಿನವರೆಗೂ ಪ್ರಕಾಶಮಾನವಾದ ನಕ್ಷತ್ರವಾಗಿ ಪ್ರಜ್ವಲಿಸುತ್ತಿದ್ದಾನೆ” ಎಂದು ಹೇಳಿದ್ದಾರೆ. ಮೌರ್ಯ ಸಾಮ್ರಾಜ್ಯದ ಸ್ಥಾಪಕರಾದ ಚಂದ್ರಗುಪ್ತ ಮೌರ್ಯನ ಮೊಮ್ಮಗ ಹಾಗೂ ರಾಜ ಬಿಂದುಸಾರನ ಮಗನಾದ ಸಾಮ್ರಾಟ ಅಶೋಕ ಕ್ರಿಸ್ತ ಪೂರ್ವ 304 ರಿಂದ ಕ್ರಿ.ಪೂ. 232ರ ವರೆಗೆ ಬದುಕಿದ್ದ. ಕ್ರಿ.ಪೂ. 268 ರಿಂದ 232ರ ವರೆಗೆ ಏಷಿಯಾದ ಅತಿ ದೊಡ್ಡ ಭೂಭಾಗವನ್ನು ಆಳಿದ ದೊರೆ. ಸಾಮ್ರಾಟ ಅಶೋಕನ ಕಾಲ ಮತ್ತು ಆಳ್ವಿಕೆ ಭಾರತದ ಇತಿಹಾಸದ ಗತಿ ಮತ್ತು ಮಾರ್ಗವನ್ನೇ ಬದಲಿಸಿತು. ಅಶೋಕ ಗೌತಮ ಬುದ್ಧನು ಕಾಲವಾಗಿ ಸುಮಾರು 300 ವರ್ಷಗಳ ನಂತರ ಬದುಕಿದ್ದ ರಾಜ. ಗೌತಮ ಬುದ್ಧರ ಪ್ರಜ್ಞೆ, ಶೀಲ, ಕರುಣೆಯ ಧಮ್ಮ ಕ್ರಾಂತಿಯನ್ನು ತನ್ನ ಆಡಳಿತದ ಮಂತ್ರ ಮತ್ತು ಶಾಸನವಾಗಿಸಿ ತನ್ನ ಪ್ರಜೆಗಳನ್ನು ಮತ್ತು ಸಮಾಜವನ್ನು ವೈಚಾರಿಕತೆ, ನೀತಿ ಮತ್ತು ಕರುಣೆಯ ಮಾರ್ಗದಲ್ಲಿ ನಡೆಸಿದ ಆದರ್ಶ ದೊರೆ. ಬುದ್ಧರ ಉಪದೇಶವನ್ನು ಅಫ್ಘಾನಿಸ್ತಾನ ಕನ್ಯಾಕುಮಾರಿಯವರೆಗೆ ಮತ್ತು ಗ್ರೀಸ್, ಈಜಿಪ್ಟ್, ಸಿರಿಯಾಗಳಿಗೂ ಹಬ್ಬಿಸಿದ ಧಮ್ಮ ಪೋಷಕ. ಪ್ರಸ್ತುತ ಲೇಖನ ಅಶೋಕನ ಕಾಲದ ಕ್ರಾಂತಿಕಾರಿ ಬದಲಾವಣೆಯನ್ನು ಆತನು ಅನುಸರಿಸಿದ ಸಾಮಾಜಿಕ, ಆರ್ಥಿಕ, ರಾಜಕೀಯ ನೀತಿಗಳನ್ನು ಅಧ್ಯಯನ ಮಾಡಲು ಬಯಸುತ್ತದೆ.

Article Details

Section

Research Articles

Author Biography

ವಿನುತ ಬಿ.

ಸಹಾಯಕ ಪ್ರಾಧ್ಯಾಪಕರು, ಇಂಗ್ಲಿಷ್ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಸವನಗುಡಿ, ಬೆಂಗಳೂರು.

How to Cite

ವಿನುತ ಬಿ. (2025). ಸಾಮ್ರಾಟ ಅಶೋಕನ ಕಾಲ ಮತ್ತು ಸಾಮಾಜಿಕ ಕ್ರಾಂತಿ. ಅಕ್ಷರಸೂರ್ಯ (AKSHARASURYA), 6(05), 249 to 255. https://aksharasurya.com/index.php/latest/article/view/1255

References

ಅಂಬೇಡ್ಕರ್ ಬಿ.ಆರ್. (ಮೂಲ), ಜಗದೀಶ್ ಕೊಪ್ಪ ಎನ್. (ಅನು), (2018), ಬುದ್ಧ ಮತ್ತು ಆತನ ಧಮ್ಮ, ಪಾಲಿ ಇನ್ ಸ್ಟಿಟ್ಯೂಟ್, ಕಲಬುರಗಿ.

ಅಂಬೇಡ್ಕ‌ರ್ ಬಿ.ಆರ್., (2010), ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು, ಸಂಪುಟ: 10, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು.

ಅಂಬೇಡ್ಕರ್ ಬಿ.ಆರ್., ಚಂದ್ರಕಾಂತ ಪೋಕಳೆ (ಅನು), (2025), ಕ್ರಾಂತಿ ಮತ್ತು ಪ್ರತಿಕ್ರಾಂತಿ, ಲಡಾಯಿ ಪ್ರಕಾಶನ, ಗದಗ.

ಚಂದ್ರಪ್ಪ ಸಿ., (2023), ಅಶೋಕ: ಸತ್ಯ ಅಹಿಂಸೆಯ ಮಹಾಶಯ, ಸಪ್ನ ಬುಕ್ ಹೌಸ್, ಬೆಂಗಳೂರು.

ಮಂಜಪ್ಪ ಶೆಟ್ಟಿ, (1991), ಕರ್ನಾಟಕದಲ್ಲಿ ಅಶೋಕನ ಶಾಸನಗಳು, ಮಸೋಲಿ ಪ್ರಕಾಶನ, ಮೈಸೂರು.

ರಾಜರತ್ನಂ ಜಿ.ಪಿ., (1935), ಅಶೋಕ ಮೌರ್ಯ, ಸತ್ಯಶೋಧನ ಪ್ರಕಟನ ಮಂದಿರ, ಬೆಂಗಳೂರು.

ರುದ್ರಮೂರ್ತಿ ಶಾಸ್ತ್ರಿ ಸು., (1979), ಧರ್ಮ ಚಕ್ರವರ್ತಿ ಅಶೋಕ, ಐಬಿಹೆಚ್ ಪ್ರಕಾಶನ, ಬೆಂಗಳೂರು.