ಅಂಬೇಡ್ಕರ್: ಅಸ್ಪೃಶ್ಯರ ಆರ್ಥಿಕ ಸ್ವಾವಲಂಬನೆಗಾಗಿ ನಡೆಸಿದ ಚಿಂತನೆಗಳು

Main Article Content

ನವೀನ್ ಕುಮಾರ ಎ. ಜಿ.

Abstract

ಇಂದು ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದ ವರ್ಗಗಳ ಏಳಿಗೆಯು ಒಂದು ರಾಷ್ಟ್ರೀಯ ಸಮಸ್ಯೆಯಾಗಿ ಉಳಿಯುತ್ತ ಬಂದಿದೆ. ಕಳೆದ ನಲವತ್ತು ವರ್ಷಗಳಿಂದ ಅಂದರೆ 1991 ರಿಂದ ಮಾಹಿತಿ ತಂತ್ರಜ್ಞಾನದಿಂದ ಪ್ರಾರಂಭವಾಗಿ 2018ರ ಮೇಕಿಂಗ್ ಇಂಡಿಯಾ ವರೆಗೆ ಅನೇಕ ಯೋಜನೆಗಳು ಹತ್ತಾರು ಭಾಗ್ಯಗಳು ಅಪಾರ ಪ್ರಮಾಣದ ಆರ್ಥಿಕ ನೆರವು ನೀಡಲಾಗಿದೆ. ಆದರೂ ಸಮಾಜದಲ್ಲಿ ಆರ್ಥಿಕ ದುರ್ಬಲ ವರ್ಗ ಸಮಾಜಿಕವಾಗಿ ಮುಖ್ಯವಾಹಿನಿಯಲ್ಲಿ ಬಂದು ಮಹತ್ತರವಾದ ಸಾಧನೆ ಮಾಡುವಲ್ಲಿ ವಿಫಲವಾಗಿದೆ. ಬಡತನ ನಿರ್ಮೂಲನೆ ಅಸಾಧ್ಯವೇನೋ ಅನಿಸುವಷ್ಟರ ಮಟ್ಟಕ್ಕೆ ಬಂದು ನಿಂತಿದೆ. ದೌರ್ಜನ್ಯ, ದಬ್ಬಾಳಿಕೆ, ಕೊಲೆ, ಸುಲಿಗೆ, ಮೋಸ, ಸಂಪತ್ತಿನ ಕ್ರೋಢಿಕರಣಕ್ಕಾಗಿ ನಡೆಯುತ್ತ ಕಾನೂನೆ ಭಯಪಡುವ ಮಟ್ಟಕ್ಕೆ ನಡೆಯುತ್ತಿವೆ. ಇದರ ಪರಿಣಾಮ ಜನ ಅನ್ಯ ಧರ್ಮಕ್ಕೆ ಮತಾಂತರ ಹೊಂದುತ್ತ ಅಲ್ಲಿಯೂ ನೆಮ್ಮದಿ ಕಾಣದೆ, ಅತ್ತ ಇರಲೂ ಆಗದೆ ಇತ್ತ ಬದುಕಲೂ ಆಗದೆ ನರಳುತ್ತಿದ್ದಾರೆ. ಮತಾಂತರದಲ್ಲೂ ಹಣ ಸಂಪಾದನೆ ಮಾಡುತ್ತಿರುವ ಹುನ್ನಾರಗಳು ಕಂಡುಬರುತ್ತಿವೆ. ಇಷ್ಟಾದರೂ ಅಸ್ಪೃಶ್ಯತೆ, ಜಾತಿಯತೆಯ ಪಿಡುಗು ಸಮಸ್ಯೆಯಾಗಿಯೇ ಉಳಿದಿದೆ. ವಿದ್ಯಾವಂತ ಪ್ರಜ್ಞಾಹೀನನಾಗಿ ಮಾನವೀಯತೆ ಮರೆತಿದ್ದಾನೆ. ತತ್ತ್ವ ಸಿದ್ದಾಂತಗಳು ಭ್ರಷ್ಟತೆಯಲ್ಲಿ ಕಳೆದು ಹೋಗಿದೆ. ಈ ಕಾಲಘಟ್ಟಕ್ಕೆ ರಾಷ್ಟ್ರಭಕ್ತಿಯುಳ್ಳ ಪ್ರತಿಯೊಬ್ಬ ಚಿಂತಕನೂ ಮತ್ತೆ ಮತ್ತೆ ಅಂಬೇಡ್ಕರ್‌ರ ಸಮಸಮಾನತೆಯ ವಿಚಾರಗಳನ್ನು ಚರ್ಚಿಸುವ ಅವಶ್ಯಕತೆ ಇಂದಿಗೆ ಅಗತ್ಯವೂ, ಅವಶ್ಯವೂ ಆಗಿದೆ. ಇಂತಹ ಕಾರ್ಯವನ್ನು ಸ್ವಾತಂತ್ರ್ಯ ಪೂರ್ವದಲ್ಲೆ ಅಂಬೇಡ್ಕರ್‌ರು ಈ ನೆಲದ ಅಸ್ಪೃಶ್ಯರಿಗಾಗಿ ಅಧ್ಯಾಯನ ಮಾಡಿ ಗ್ರಂಥರೂಪದಲ್ಲಿರಿಸಿ ಹೋಗಿದ್ದಾರೆ ಅದನ್ನು ಅಧ್ಯಾಯನ ಮಾಡಿ ಅನುಷ್ಠಾನಗೊಳಿಸುವ ಇಚ್ಚಾಶಕ್ತಿಯಾಗಲಿ ನಮ್ಮ ಜನರಲ್ಲಿ ಕಾಣುತ್ತಿಲ್ಲ. ಆಳುವವರಿಗೆ ಮನಸ್ಸಾಗುತ್ತಿಲ್ಲ. ಅಗತ್ಯವಿರುವವರು ಬೇಡಿಕೆಯನ್ನು ಮುಂದಿಡುತ್ತಿಲ್ಲ. ಈ ವಿಶಾದಕರ ವಿಚಾರವನ್ನು ಈ ಲೇಖನವು ಸಾಕ್ಷಿಕರಿಸಿದೆ.

Article Details

Section

Research Articles

Author Biography

ನವೀನ್ ಕುಮಾರ ಎ. ಜಿ.

ಸಹ ಶಿಕ್ಷಕರು, ವಿಶ್ವದರ್ಶನ ಪ್ರೌಢಶಾಲೆ, ಇಡಗುಂದಿ, ಉತ್ತರ ಕನ್ನಡ.

How to Cite

ನವೀನ್ ಕುಮಾರ ಎ. ಜಿ. (2025). ಅಂಬೇಡ್ಕರ್: ಅಸ್ಪೃಶ್ಯರ ಆರ್ಥಿಕ ಸ್ವಾವಲಂಬನೆಗಾಗಿ ನಡೆಸಿದ ಚಿಂತನೆಗಳು. ಅಕ್ಷರಸೂರ್ಯ (AKSHARASURYA), 6(05), 121 to 132. https://aksharasurya.com/index.php/latest/article/view/1241

References

ದತ್ತೋಪಂತ ಠೇಂಗಡಿ (ಮೂಲ), ಚಂದ್ರಶೇಖರ ಭಂಡಾರಿ (ಅನು), (2011), ಸಾಮಾಜಿಕ ಕ್ರಾಂತಿಸೂರ್ಯ ಡಾ. ಬಾಬಾ ಸಾಹೇಬ ಅಂಬೇಡ್ಕರ್, ರಾಷ್ಟೋತ್ಥಾನ ಸಾಹಿತ್ಯ, ಬೆಂಗಳೂರು.

ಅಂಬೇಡ್ಕರ್ ಬಿ. ಆರ್., (2017), ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು ಮತ್ತು ಭಾಷಣಗಳು, ಸಂಪುಟ-1, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾಭಾರತಿ ಪ್ರಾಧಿಕಾರ, ಬೆಂಗಳೂರು.

ಅಂಬೇಡ್ಕರ್ ಬಿ. ಆರ್., (2017), ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು ಮತ್ತು ಭಾಷಣಗಳು, ಸಂಪುಟ-2, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾಭಾರತಿ ಪ್ರಾಧಿಕಾರ, ಬೆಂಗಳೂರು.

ಅಂಬೇಡ್ಕರ್ ಬಿ. ಆರ್., (2017), ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು ಮತ್ತು ಭಾಷಣಗಳು, ಸಂಪುಟ-3, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾಭಾರತಿ ಪ್ರಾಧಿಕಾರ, ಬೆಂಗಳೂರು.

ಅಂಬೇಡ್ಕರ್ ಬಿ. ಆರ್., (2017), ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು ಮತ್ತು ಭಾಷಣಗಳು, ಸಂಪುಟ-4, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾಭಾರತಿ ಪ್ರಾಧಿಕಾರ, ಬೆಂಗಳೂರು.

ದೇವನೂರು ಮಹಾದೇವ, (2013), ಎದೆಗೆ ಬಿದ್ದ ಅಕ್ಷರ, ಅಭಿನವ, ಬೆಂಗಳೂರು.