ಡಾ. ಅಂಬೇಡ್ಕರ್‌ರವರ ಸಾಮಾಜಿಕ ಆಲೋಚನೆಗಳು ಅಸ್ಪೃಶ್ಯರ ವಿಮೋಚನೆ.
Main Article Content
Abstract
ಸ್ವತಂತ್ರ್ಯಪೂರ್ವ ಭಾರತದ ಜಾತಿ ವ್ಯವಸ್ಥೆಯ ಕರಾಳತೆ ಕಹಿ ಅನುಭವಗಳೊಂದಿಗೆ ಡಾ॥ ಬಿ. ಆರ್. ಅಂಬೇಡ್ಕರ್‌ರವರು ಅಸ್ಪೃಶ್ಯರಿಗೆ ಮೀಸಲಾತಿ ದೊರಕುವಂತೆ ಮಾಡಿದ ಹೋರಾಟದಲ್ಲಿ ಯಶಸ್ಸನ್ನು ಕಾಣುತ್ತಾರೆ. ತಮ್ಮ ಪ್ರತಿಭೆ ಹಾಗೂ ಪರಿಶ್ರಮದಿಂದ ಬದುಕಿನಲ್ಲಿ ಯಶಸ್ಸನ್ನು ಕಂಡರು. ಜಾತಿಯ ಕಾರಣದಿಂದ ಅನೇಕ ಸಂಕಷ್ಟಗಳಿಗೆ ಅವಮಾನಕ್ಕೆ ಗುರಿಯಾಗುತ್ತಾರೆ. ಬದುಕಿನುದ್ದಕ್ಕೂ ಕೆಳವರ್ಗದ ಜನರಿಗಾಗಿ ಹೋರಾಡಿ ಮೀಸಲಾತಿಯ ಮೂಲಕ ಹಿಂದುಳಿದವರನ್ನು ಮುಖ್ಯವಾಹಿನಿಗೆ ತಂದು ಈ ಸೌಲಭ್ಯ ಪಡೆದವರು ತಮ್ಮ ವರ್ಗದವರ ಏಳಿಗೆಗಾಗಿ ಪ್ರಯತ್ನಪಡಬೇಕು ಎಂಬ ಆಶಯವನ್ನು ಹೊಂದಿದ ಅಂಬೇಡ್ಕರವರಿಗೆ ತೀವ್ರ ನಿರಾಸೆಯಾಗುತ್ತದೆ. ಕೆಳ ಸಮುದಾಯಗಳಲ್ಲಿಯೇ ಪರಸ್ಪರ ಆಂತರಿಕ ಭಿನ್ನಾಭಿಪ್ರಾಯಗಳು, ಅಸಮಾನತೆಗಳು, ತಾರತಮ್ಯಗಳ ಕಾರಣಗಳಿಂದ ಪ್ರಬಲ ಜಾತಿಯವರ ದೌರ್ಜನ್ಯದ ವಿರುದ್ಧ ಸಂಘಟಿತರಾಗುವುದು ಸಾಧ್ಯವೇ ಆಗಲಿಲ್ಲವೆಂಬುದು ನಿಜಕ್ಕೂ ದುರಂತವೇ ಸರಿ. ತಮ್ಮ ಜೀವನವನ್ನೇ ಶೋಷಿತ ಜನಾಂಗಗಳ ವಿಮೋಚನೆಗೆ ಧಾರೆ ಎರೆದ ಸಮಾಜಕ್ಕೆ ಮರಳಿ ಸಮಾಜದ ಋಣ ತೀರಿಸಿ ಎಂಬುದು ಅವರ ಕೊನೆಯ ದಿನಗಳ ಹೇಳಿಕೆಯಾಗಿತ್ತು.
Article Details
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಮುನಿಯಪ್ಪ ಎನ್.ಸಿ., (2020), ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಸಾಮಾಜಿಕ ಋಣ ಸಂದಾಯ, ಜನಪ್ರಗತಿ ಪ್ರೆಸ್, ಬೆಂಗಳೂರು.
ಮಂಗೂರ ವಿಜಯ (ಸಂಗ್ರಹ), (2002), ಸಂಘರ್ಷ: ಅಂಬೇಡ್ಕರ್ ಜೀವನ-ಸಾಧನೆ, ಸಂಬುದ್ಧ ಪ್ರಕಾಶನ, ಬೆಂಗಳೂರು.