Published: 2024-04-02

Table of Contents

Table of Contents

I to X

ಮೈಸೂರು ಅರಸರ ಕಾಲದ ಕನ್ನಡ ಸಾಹಿತ್ಯ

ಬಸವರಾಜು ಕೆ.

01 to 08

1881ರಲ್ಲಿ ಬ್ರಿಟಿಷ್ ಕಮಿಷನರುಗಳ ಆಳ್ವಿಕೆ ಕೊನೆಗೊಂಡು ಮೈಸೂರು ಒಡೆಯರಿಗೆ ಅಧಿಕಾರ ಮರುಕಳಿಸಿತು. ಅನಂತರ ಅವರು ಸಾಹಿತ್ಯಕ್ಕೆ ತಮ್ಮದೇ ಕೊಡುಗೆಯನ್ನು ನೀಡಿದ್ದಾರೆ. ಹಾಗೆಯೇ ದಿವಾನರ ಬೆಂಬಲವೂ ಕೂಡ ಸಾಹಿತ್ಯ ಬೆಳವಣಿಗೆಯಲ್ಲಿ ಮುಖ್ಯಪಾತ್ರವಹಿಸಿದೆ. ಮಹಾರಾಜರುಗಳಾದ ಚಾಮರಾಜ ಒಡೆಯ‌ರ್, ನಾಲ್ವಡಿ ಕೃಷ್ಣರಾಜಒಡೆಯರ್, ರಣಧೀರ ಕಂಠೀರವ ನರಸರಾಜಒಡೆಯ‌ರ್, ಚಿಕ್ಕದೇವರಾಜ, ಚಾಮರಾಜಒಡೆಯರ್, ದಿವಾನರುಗಳಾದ ರಂಗಾಚಾರ್ಲು, ಶೇಷಾದ್ರಿ ಅಯ್ಯರ್, ವಿಶ್ವೇಶ್ವರಯ್ಯ ಮತ್ತು ಮಿರ್ಜಾ ಇಸ್ಮಾಯಿಲ್ ಮುಂತಾದವರ ಕೊಡುಗೆಗಳು ಅಸ್ಮರಣೀಯವಾದದು. ಸುಮಾರು 400 ವರ್ಷಗಳ ಕಾಲ ಆಳಿದ ಮೈಸೂರು ಅರಸರು ಸ್ವಯಂ ಕವಿಗಳೂ ಹೌದು. ಕಾವ್ಯ ಕನ್ನಡದ ಅನೇಕ ವಿದ್ವಾಂಸರು, ಕವಿ-ನಾಟಕಕಾರರಿಗೆ ಹಾಗೂ ಭಾಷಾಂತರಕಾರರಿಗೆ ಆಶ್ರಯ ನೀಡಿ ಪ್ರೋತ್ಸಾಹಿಸಿ ಬೆಳೆಸಿದ್ದಾರೆ. ಮೈಸೂರು ಅರಸರ ಆರಂಭದ ಕಾಲಘಟ್ಟದಿಂದ ಭಾರತ ಸ್ವಾತಂತ್ರ್ಯಗೊಳ್ಳುವವರೆಗೂ ರಚಿತವಾದ ಕೃತಿಗಳೇ ಮೈಸೂರು ಅರಸರ ಐತಿಹ್ಯಕ್ಕೂ ಸಾಕ್ಷಿಯನ್ನು ಒದಗಿಸಿವೆ. ಕನ್ನಡ ಸಾಹಿತ್ಯಕ್ಕೆ, ಪ್ರೋತ್ಸಾಹಿಸಿ ಸ್ಫೂರ್ತಿಯಾದ ಮೈಸೂರು ಅರಸರು ವಿಜಯನಗರದ ಪರಮಾಧಿಕಾರವನ್ನು ಅಲ್ಲಗಳೆದು ಸ್ವತಂತ್ರವಾದಾಗಿನಿಂದ ಮೈಸೂರು ಒಡೆಯರ ಸ್ವತಂತ್ರ ಆಡಳಿತದ ಕಾಲ ಆರಂಭವಾಯಿತು. ಒಂದನೆಯ ರಾಜ ಒಡೆಯರ ಕಾಲದಿಂದ ಆರಂಭಗೊಂಡು ಜಯಚಾಮರಾಜ ಒಡೆಯರ ಕಾಲದವರೆಗೂ ಕನ್ನಡ ಸಾಹಿತ್ಯವು ಸರ್ವತೋಮುಖ ಅಭಿವೃದ್ಧಿ ಪಡೆಯಿತು.

 
Read More »

ಸ್ವಾತಂತ್ರ್ಯ ಪೂರ್ವದಲ್ಲಿ ಮಂಡ್ಯ ಜಿಲ್ಲೆಯಲ್ಲಾದ ಸಮಾಜೋ-ರಾಜಕೀಯದ ಸ್ಥಿತ್ಯಂತರ

ಶಶಾಂಕ ಕೆ. ಎಸ್‌.

09 to 23

'ಸಕ್ಕರೆಯ ಸೀಮೆ' ಎಂದು ಪ್ರಖ್ಯಾತಿ ಪಡೆದುಕೊಂಡಿರುವ ಮಂಡ್ಯ ಜಿಲ್ಲೆ ಇಂದು ರಾಜಕೀಯ, ಸಾಮಾಜಿಕ ಹಾಗೂ ಕೃಷಿ ಕ್ಷೇತ್ರದಲ್ಲಿ ತನ್ನದೆಯಾದ ಮಹತ್ವವನ್ನು ಪಡೆದುಕೊಂಡಿದೆ. ಇದಕ್ಕೆಲ್ಲಾ ಕಾರಣ ಮಂಡ್ಯ ಜಿಲ್ಲೆಯ ಜೀವನಾಡಿ ಕನ್ನಂಬಾಡಿ ಕಟ್ಟೆಯಾಗಿದೆ. ಮೈಸೂರಿನ ಅರಸ ನಾಲ್ವಡಿಯವರನ್ನು ರಾಷ್ಟ್ರಪಿತ ಮಹಾತ್ಮಗಾಂಧಿಯವರು ರಾಜರ್ಷಿಯೆಂದು ಕರೆದರು. ಇದಕ್ಕೆ ನಾಲ್ವಡಿಯವರ ಪ್ರಜಾಹಿತಾತ್ಮಕ ಧೋರಣೆಗಳು. ಸರ್ವಾಧಿಕಾರಿಯೊಬ್ಬ ಪ್ರಜಾಸತ್ತಾತ್ಮಕ ಮನೋಭಾವ ತಳೆಯುವುದು ಜಗತ್ತಿನ ರಾಜಕೀಯ ಇತಿಹಾಸದಲ್ಲಿಯೇ ಅಪರೂಪದ ಸಂಗತಿಯಾಗಿದೆ. ಭಾರತದಲ್ಲಿ ಮಾತ್ರವಲ್ಲದೇ ಏಷ್ಯಾ ಖಂಡದಲ್ಲಿಯೇ ಮೊದಲ ಜಲವಿದ್ಯುತ್ ಯೋಜನೆಯನ್ನು ಪ್ರಾರಂಭಿಸಿದ ಕೀರ್ತಿ ನಾಲ್ವಡಿಯವರಿಗೆ ಸಲ್ಲುತ್ತದೆ. ಹಾಗೆಯೇ ಮಂಡ್ಯ ಜಿಲ್ಲೆಯಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟನ್ನು ನಿರ್ಮಿಸಿದರು. ಹೀಗೆ ಒಬ್ಬ ಜವಾಬ್ದಾರಿಯುತ ಮತ್ತು ಸಾಮಾಜಿಕ ಪ್ರಜ್ಞೆಯುಳ್ಳ ಮಹಾರಾಜ ತನ್ನ ನಾಡಿನ ಪ್ರಗತಿಪರ ಕಾರ್ಯಗಳಿಗೆ ಮತ್ತು ಜನತೆಯ ಶ್ರೇಯೋಭಿವೃದ್ಧಿಗೆ ಒತ್ತು ನೀಡಿದ್ದರು. ಈ ಮೂಲಕ ಅವರ ಸಮಾಜೋ-ರಾಜಕೀಯ ನಾಯಕತ್ವವನ್ನು ಗುರುತಿಸಬಹುದಾಗಿದೆ. ಒಟ್ಟಾರೆ ಈ ಜಲಾಶಯದಿಂದ ರೈತರ ಆರ್ಥಿಕ ಸ್ಥಿತಿ ಉತ್ತಮವಾಯಿತು. ಗಾಣಗಳು, ಸಕ್ಕರೆ ಕಾರ್ಖಾನೆಗಳು ತಲೆಯೆತ್ತಿದವು. ಬೆಲ್ಲ, ಸಕ್ಕರೆಯ ಉದ್ಯಮ ಬಿರುಸಾಗಿ ಸಾಗಿತು. ಇಂದು ಮಂಡ್ಯ ಸಕ್ಕರೆನಗರ ಎಂಬ ಖ್ಯಾತಿಗೆ ಪಾತ್ರವಾಗಿದೆ. ಹೀಗೆ ಕೃಷಿಯ ಮೂಲಕ ಮಂಡ್ಯ ಜಿಲ್ಲೆಯ ಸ್ಥಿತ್ಯಂತರಕ್ಕೆ/ಪರಿವರ್ತನೆಗೆ ಕಾರಣವಾದವರು ನಾಲ್ವಡಿಯವರಾಗಿದ್ದಾರೆ.

Read More »

ಮೈಸೂರು ಸಂಸ್ಥಾನದಲ್ಲಿ ಇನ್‌ಫ್ಲುಯೆಂಜಾ ಸಾಂಕ್ರಾಮಿಕ ರೋಗ ಮತ್ತು ಸರ್ಕಾರ ಕೈಗೊಂಡ ಕ್ರಮಗಳು: ಒಂದು ಅವಲೋಕನ

ಲಕ್ಷ್ಮೀರಂಗಯ್ಯ ಕೆ.

24 to 37

ಮೊದಲ ಮಹಾಯುದ್ಧದ ಅಂತ್ಯದಲ್ಲಿ ವಿಶ್ವದಾದ್ಯಂತ ಹರಡಿದ್ದ ಇನ್‌ಫ್ಲುಯೆಂಜಾ ಸಾಂಕ್ರಾಮಿಕರೋಗವು ಸೈನಿಕರು ಮತ್ತು ವರ್ತಕರ ಮೂಲಕ ಕಲ್ಕತ್ತ ಮತ್ತು ಬಾಂಬೆಗೆ ಬಂದು ನಂತರ ದೇಶದಾದ್ಯಂತ ಹಬ್ಬಿ ಮೈಸೂರು ಸಂಸ್ಥಾನದ ಬೆಂಗಳೂರು ಮತ್ತು ಮೈಸೂರುಗಳಲ್ಲಿ ಹರಡಿ ಹೇಗೆ ಇಡೀ ಸಂಸ್ಥಾನದಾದ್ಯಂತ ಜನತೆಯನ್ನು ಬಾಧಿಸಿತು, ಜನರು ಅನುಭವಿಸಿದ ಸಾವು-ನೋವುಗಳು, ಸರ್ಕಾರ ರೋಗ ನಿವಾರಣೆಗೆ ಕೈಗೊಂಡ ಚಿಕಿತ್ಸೆ ಮತ್ತು ಪರಿಹಾರಕಾರ್ಯಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಮಹಾರಾಜರ ಆಡಳಿತ ವ್ಯವಸ್ಥೆ ನಗರಗಳಿಂದ ಹಳ್ಳಿಗಳವರೆವಿಗೆ ಸಾಂಕ್ರಾಮಿಕರೋಗ ನಿವಾರಣೆಗೆ ಶ್ರಮಿಸಿದ ರೀತಿ, ಸ್ಥಳೀಯ ಆಡಳಿತ ಘಟಕಗಳು, ಸಂಘಸಂಸ್ಥೆಗಳು, ಪ್ರಜಾಪ್ರಮುಖರು, ಸ್ವಯಂ ಸೇವಕರು, ವೈದ್ಯಕೀಯ ಸಿಬ್ಬಂದಿ, ನೈರ್ಮಲ್ಯ ಇಲಾಖೆ, ವಿದ್ಯಾರ್ಥಿ ಸ್ವಯಂ ಸೇವಕರು ನಿರ್ವಹಿಸಿದ ಪಾತ್ರ ಇವೇ ಮೊದಲಾದವುಗಳನ್ನು ಅಧ್ಯಯನಿಸುವ ಉದ್ದೇಶವನ್ನು ಇದು ಹೊಂದಿದೆ.

ಕರ್ನಾಟಕ ಇತಿಹಾಸದಲ್ಲಿ ಮಾತ್ರವಲ್ಲದೆ ಆಧುನಿಕ ಭಾರತದ ಚರಿತ್ರೆಯಲ್ಲಿ ಮೈಸೂರು ಸಂಸ್ಥಾನದ ಇತಿಹಾಸವು ಅತ್ಯಂತ ಮಹತ್ವದ ಅಧ್ಯಾಯ. 1881ರ ನಂತರದ ಆಧುನಿಕ ಮೈಸೂರು ಸಂಸ್ಥಾನದ ಇತಿಹಾಸವು ವಿಶೇಷವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯ ಕಾಲಘಟ್ಟವು ಪ್ರಗತಿಪರ ಹಾಗೂ ಜನಾನುರಾಗಿ ಆಳ್ವಿಕೆಯ ದೇಶೀಯ ಸಂಸ್ಥಾನಗಳಲ್ಲಿಯೇ ಏಕೆ ಭಾರತದಲ್ಲಿಯೇ ಹತ್ತು ಹಲವು ಪ್ರಥಮಗಳಿಗೆ ಸಾಕ್ಷಿಯಾಗಿ “ಮಾದರಿ ಸಂಸ್ಥಾನ”ವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕೃಷಿ, ಕೈಗಾರಿಕೆ, ಸಾಮಾಜಿಕ ಸುಧಾರಣೆ, ಶಿಕ್ಷಣ, ಆರೋಗ್ಯ ಮೊದಲಾದ ಕ್ಷೇತ್ರಗಳ ಸಾಧನೆಗಳು ಇಂದಿಗೂ ಸ್ಮರಣೀಯವಾದವುಗಳಾಗಿವೆ. ಮಹಾತ್ಮ ಗಾಂಧೀಜಿಯವರು ಮೈಸೂರು ರಾಜ್ಯವನ್ನು ಆದರ್ಶ “ರಾಮರಾಜ್ಯ”ವೆಂದು ಕರೆದು ಮಹಾರಾಜರನ್ನು ರಾಜರ್ಷಿ ಎಂಬುದಾಗಿ ಗೌರವಿಸಿದ್ದು ಅವರ ಆಡಳಿತದ ಹಿರಿಮೆಗೆ ಸಾಕ್ಷಿಯಾಗಿದೆ. ಹೀಗೆ ಮಾದರಿ ರಾಜ್ಯವಾಗಿದ್ದ ಸಂಸ್ಥಾನವು ಹಲವುಬಾರಿ ಕ್ಷಾಮ, ಪ್ಲೇಗ್, ಕಾಲರಾ, ಸಿಡುಬು, ಮಲೇರಿಯಾದಂತಹ ಗಂಭೀರಕಾಯಿಲೆಗಳಿಗೆ ಗುರಿಯಾಗಿದ್ದು, ಮೊದಲ ಮಹಾಯುದ್ಧದ ಅಂತ್ಯದಲ್ಲಿ ಇಡೀ ಜಗತ್ತನ್ನು ಬಾಧಿಸಿದ ಇನ್‌ಫ್ಲುಯೆಂಜಾ ಎಂಬ ಸಾಂಕ್ರಾಮಿಕರೋಗಕ್ಕೆ ಗುರಿಯಾಗಿ ಜನತೆಯು ಸಾವುನೋವು ಸಂಕಷ್ಟಗಳಿಗೆ ಸಿಲುಕಿ ನರಳುವಂತಾಗಿತ್ತು.

Read More »

ಹಿಂದುಳಿದ ವರ್ಗಗಳ ಚಳವಳಿ: ಚಾರಿತ್ರಿಕ ಹಿನ್ನೆಲೆ, ಸ್ವರೂಪ ಹಾಗೂ ಮಹತ್ವ

ಗಣೇಶ (ಚಿಕ್ಕಮಗಳೂರು ಗಣೇಶ)

38 to 49

ಕನ್ನಡ ನೆಲದಲ್ಲಿ ಬಸವಣ್ಣನ ಸಾಂಸ್ಕೃತಿಕ ನಾಯಕತ್ವದಲ್ಲಿ ವಚನ ಸಾಹಿತ್ಯಾಭಿವ್ಯಕ್ತಿಯ ಮೂಲಕ ಜರುಗಿದ ಸಮಾನತೆಯ ಚಿಂತನೆಯ ಹೋರಾಟ ಚರಿತ್ರೆಯಲ್ಲಿ ಮಹತ್ವದ್ದಾಗಿದೆ. ಅದು ಸಂಭವಿಸಿದ ಕಾಲ 12ನೆಯ ಶತಮಾನ. ಅದರ ತರುವಾಯ 19ನೆಯ ಶತಮಾನದಲ್ಲಿ 'ಬ್ರಾಹ್ಮಣ್ಯ ಆಡಳಿತಶಾಹಿ ಯಜಮಾನಿಕೆ' ವಿರುದ್ಧ ಹಿಂದುಳಿದ ವರ್ಗಗಳನ್ನು ಜಾಗೃತಿಗೊಳಿಸಲು ಕೆಳಕಾಣಿಸಿದ ಹೋರಾಟಗಳು ಮಹತ್ವದ ಪಾತ್ರ ವಹಿಸಿದವು. ಮಹಾರಾಷ್ಟ್ರದ ಜೋತಿರಾವ್ ಮತ್ತು ಸಾವಿತ್ರಿಬಾಯಿ ಫುಲೆ ದಂಪತಿಗಳು 'ಸತ್ಯಶೋಧಕ ಸಮಾಜ'ದ ಮುಖಾಂತರ, ಬ್ರಾಹ್ಮಣ್ಯ ಪ್ರಾಬಲ್ಯದ ವಿರೋಧ-ಶೂದ್ರ ದಲಿತರಿಗೆ ಸಮಾನತೆಯ ಹಕ್ಕು-ಮಹಿಳೆಯರ ಶಿಕ್ಷಣದ ಸಲುವಾಗಿ ಹಗಲಿರುಳು ಹೋರಾಡಿದರು. ಶಾಹು ಮಹಾರಾಜರು ತಮ್ಮ ಸಂಸ್ಥಾನದ ಆಡಳಿತ ವ್ಯವಸ್ಥೆಯಲ್ಲಿ ಬ್ರಾಹ್ಮಣೇತರರಿಗೆ ಅವಕಾಶ ನೀಡುವ ಉದ್ದೇಶದಿಂದ ಉದ್ಯೋಗಗಳಲ್ಲಿ ಮೀಸಲಾತಿ ನೀಡುವ ಪ್ರಕ್ರಿಯೆಯನ್ನು ಆರಂಭಿಸಿದರು. ಆ ಮೂಲಕ, ಫುಲೆ ಅವರು ಆರಂಭಿಸಿದ್ದ ಹಿಂದುಳಿದ ವರ್ಗಗಳ ಅಭ್ಯುದಯದ ಹೋರಾಟಕ್ಕೆ ಶಾಹು ಮಹಾರಾಜರು ಶಾಸನಾತ್ಮಕ ಆದೇಶ ನೀಡಿದರು ಎನ್ನಬಹುದು. ಇನ್ನು ನಾರಾಯಣ ಗುರುಗಳು ಕೇರಳದಲ್ಲಿ 'ಧರ್ಮ ಪರಿಪಾಲನ ಯೋಗಂ' ಸಂಸ್ಥೆಯನ್ನು ಆರಂಭಿಸಿ, ಉನ್ನತ ಜಾತಿಯವರ ಯಜಮಾನಿಕೆಯನ್ನು ವಿರೋಧಿಸುವ, ಹಿಂದುಳಿದ ವರ್ಗದವರಿಗೆ ಪ್ರತ್ಯೇಕವಾಗಿ ದೇಗುಲಗಳನ್ನು ನಿರ್ಮಿಸುವ, ಶಿಕ್ಷಣದಿಂದ ಮಾತ್ರ ಸುಧಾರಣೆ ಸಾಧ್ಯವೆಂಬ ಅರಿವು ಮೂಡಿಸುವ ಹಲವು ಸಮಾಜ ಪರಿವರ್ತನ ಕಾರ್ಯಗಳನ್ನು ಪ್ರಾರಂಭಿಸಿದರು. ತಮಿಳುನಾಡಿನ ಪೆರಿಯಾರ್ ರಾಮಸ್ವಾಮಿ ಅವರಂತೂ, ಇಂಥವುಗಳನ್ನು ತುಂಬಾ ಕ್ರಾಂತಿಕಾರಕವಾಗಿ ಮುಖಾಮುಖಿಯಾದರು. ಮೊದಲಿಗೆ ಅವರು ಬ್ರಾಹ್ಮಣಶಾಹಿಯ ವಿರುದ್ಧ ಪ್ರಬಲ ಸೈದ್ಧಾಂತಿಕ ಹೋರಾಟವನ್ನು ಕಟ್ಟಿದರು. ಅದರ ಭಾಗವಾಗಿ ಪುರೋಹಿತಶಾಹಿ ಕುರುಹುಗಳಾದ ದೇವರು ಮತ್ತು ದೇವಾಲಯಗಳನ್ನು ತಿರಸ್ಕರಿಸಲು ಕರೆಕೊಟ್ಟರು. ಮನುಷ್ಯ ಆತ್ಮಘನತೆಗಾಗಿ ವೈಚಾರಿಕವಾಗಿ ಸದೃಢವಾಗುವ ಬಗ್ಗೆ ಅರಿವು ಮೂಡಿಸಿದರು. ಅದಕ್ಕಾಗಿ 'ಸ್ವಯಂ ಮರ್ಯಾದ್ರೆ' ಚಳವಳಿಯನ್ನು ಕಟ್ಟಿದರು. ಇದೇ ವೇಳೆಗೆ ಮದ್ರಾಸಿನಲ್ಲಿ 'ಜಸ್ಟಿಸ್ ಪಾರ್ಟಿ' ಎಂಬ ಹೆಸರಿನಲ್ಲಿ ರಾಜಕೀಯ ಪಕ್ಷದ ಉದಯವಾಯಿತು. ಅದು ತನ್ನ ಪ್ರಣಾಳಿಕೆಯನ್ನು 'ನಾನ್-ಬ್ರಾಹ್ಮನ್ ಮ್ಯಾನಿಫೆಸ್ಟೋ' ಎಂದು ಘೋಷಿಸಿಕೊಂಡಿತು. ದಕ್ಷಿಣ ಭಾರತದಲ್ಲಿ ಬ್ರಾಹ್ಮಣೇತರ ಸಮುದಾಯಗಳ ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ಮಟ್ಟವನ್ನು ಸುಧಾರಿಸುವ ಉದ್ದೇಶವನ್ನು ತನ್ನ ಪಕ್ಷದ ಧೈಯವನ್ನಾಗಿ ಮಾಡಿಕೊಂಡಿತು. ಹೀಗೆ ಇಪ್ಪತ್ತನೆಯ ಶತಮಾನದ ಶುರುವಿನಲ್ಲಿ ಭಾರತದ ತುಂಬ ಆರಂಭವಾದ ಬ್ರಾಹ್ಮಣೇತರ ವರ್ಗಗಳ ಹಕ್ಕೊತ್ತಾಯದ ಕಾರ್ಯಚಟುವಟಿಕೆಗಳು ಕನ್ನಡ ನೆಲದಲ್ಲಿ ಹಿಂದುಳಿದ ವರ್ಗಗಳ ಚಳವಳಿಯ ಹುಟ್ಟಿಗೆ ಪ್ರೇರಣೆಯನ್ನು ಒದಗಿಸಿದವು.

Read More »

ಟಿಪ್ಪು: ಐತಿಹಾಸಿಕ ವ್ಯಕ್ತಿ ಕುರಿತು ಒಂದು ಅವಲೋಕನ

ಡಿ. ಪುರುಷೋತ್ತಮ

50 to 58

ಭಾರತವು ರಾಜ ಮಹಾ ರಾಜರಿಂದ ಅನುಭವಿಸಿದ ಪ್ರಭುತ್ವದ ಕಲ್ಪನೆ, ಬ್ರಿಟೀಷರಿಂದ ಕಲಿತ ಪ್ರಭುತ್ವದ ಪಾಠ, ಸ್ವಾತಂತ್ರ್ಯ ನಂತರ ನಾವು ಅನುಭವಿಸುತ್ತಿರುವ ಪ್ರಜಾಪ್ರಭುತ್ವದ ಕಲ್ಪನೆಗಳಲ್ಲಿ ಬಹಳ ವೈರುಧ್ಯ ಮತ್ತು ವ್ಯತ್ಯಾಸಗಳು ಇವೆ. ಪ್ರಜಾಪ್ರಭುತ್ವದ ದೃಷ್ಟಿಯಿಂದ ಇತಿಹಾಸವನ್ನು ನೋಡಿದರೆ ಬ್ರಿಟೀಷರು, ಇಲ್ಲಿಯ ರಾಜ ಮಹಾರಾಜರುಗಳೆಲ್ಲರೂ ಪ್ರಜಾಪ್ರಭುತ್ವದ ವಿರೋಧಿಗಳೆಂದೇ ಬರೆಯಬೇಕಾಗುತ್ತದೆ. ಏಕೆಂದರೆ ಅವರುಗಳು ಯಾರು ಇಂದಿನ ಸಂವಿಧಾನ ದತ್ತವಾದ ಪ್ರಭುತ್ವನ್ನು ನಡೆಸಿಲ್ಲ. ಪ್ರಜಾಪ್ರಭುತ್ವ ಕಲ್ಪನೆಯಿಂದ ಇತಿಹಾಸ ನೋಡುವುದು ಕೂಡ ತಪ್ಪು. ಏಕೆಂದರೆ ಆ ಕಾಲದ ಚರಿತೆಯಲ್ಲಿ ಇಲ್ಲದನ್ನು ಕಾಣ ಬಯಸಿದರೆ ಅದು ಸಿಗುವುದಿಲ್ಲ. ಇದರಿಂದ ನಮ್ಮ ಪ್ರಭುತ್ವ ಒಪ್ಪುವ ಚರಿತ್ರೆ ನಮಗೆ ಲಬ್ಧವಾಗುವುದಿಲ್ಲ. ಕಾಲ ಪ್ರಜ್ಞೆ ಇರದೆ, ಚಾರಿತ್ರರಿಕ ದೃಷ್ಟಿ ಇರದೆ ಬರೆದ ಟಿಪ್ಪು ಕುರಿತಾದ ಅನೇಕ ಕೃತಿಗಳು ರೋಚಕತೆಯ ಧಾರ್ಮಿಕ ಒಡಕನ್ನು ಉಂಟುಮಾಡುವ ಪ್ರಚೋದನಾತ್ಮಕವಾದ ಕೃತಿಯಾಗಿದೆ. ಹಿಂದೂ ದೇವಾಲಯವನ್ನು ಲೂಟಿ ಮಾಡಿದ ಮರಾಠ ಬ್ರಾಹ್ಮಣ ಪೇಳ್ವೆಗಳ ಬಗ್ಗೆ ಮತೀಯ ಬರಹಗಾರರು ಜಾಣ ಮೌನವಹಿಸುವುದು ಏಕೆ?. ಕಾನೂನಿನ ಅಥವಾ ವೈದ್ಯಶಾಸ್ತ್ರದ ಅರಿವೇ ಇರದ ನಾನು ಕಾನೂನಿನ ಅಥವಾ ವೈದ್ಯಶಾಸ್ತ್ರ ಕುರಿತು ಬರೆದರೆ ಏನು ಅಪಾಯವಾಗುವುದು? ಅದೇ ಅಪಾಯ ಚರಿತ್ರೆಯಲ್ಲೂ ಆಗುವುದು. ಆ ಎಲ್ಲ ಧರ್ಮದ ರಾಜರುಗಳಂತೆ ಟಿಪ್ಪು ಕೂಡ ಒಬ್ಬ ರಾಜ. ಟಿಪ್ಪು ಕುರಿತಾದ ಬರಹಗಳ ಓದಿಗಿಂತ ಭಿನ್ನವಾದ ನೈಜ್ಯ ಚರಿತ್ರೆಯ ಹೊಸ ಓದನ್ನು, ಸಂಶೋಧನೆಯನ್ನು ಬಯಸುವ ಆಕರ್ಷಕ ವ್ಯಕ್ತಿ. ವಸ್ತು ವಿಷಯವಾಗಿದೆ.

Read More »

ಚಾರಿತ್ರಿಕ ಹಿನ್ನೆಲೆಯಲ್ಲಿ ಪ್ರಭುತ್ವ: ಕರ್ನಾಟಕ ಮತ್ತು ಕನ್ನಡ ಭಾಷೆ

ಭವ್ಯ ಆ‌ರ್.

59 to 68

ಭಾಷೆ ಮತ್ತು ಸಂಸ್ಕೃತಿ ಅಂತಃಸಂಬಂಧಿತವಾಗಿ ಏರ್ಪಟ್ಟ ರೂಪಕತೆಯಾಗಿದೆ, ಮತ್ತು ಒಂದು ಪ್ರಾದೇಶಿಕ ಸಂಸ್ಕೃತಿ ರೂಪಿತವಾಗಲು ಅಲ್ಲಿಯ ಭಾಷೆಯೇ ಬಹುಮುಖ್ಯವಾದ ಅಂಶವಾಗಿರತ್ತದೆ. ಜಗತ್ತಿನ ಚರಿತ್ರೆಯನ್ನು ಗಮನಿಸಿದರೆ ನಮಗೆ ವೇದ್ಯವಾಗುವ ಸತ್ಯ ಒಂದಿದೆ, ಯಾವ ಭಾಷೆಯು ಶ್ರೇಷ್ಠವಲ್ಲ, ಅದೇ ರೀತಿ ಯಾವ ಭಾಷೆಯೂ ಕನಿಷ್ಠವೂ ಅಲ್ಲ. ಜಗತ್ತಿನ ಭಾಷೆಗಳಲ್ಲಿ ಮೇಲು ಕೀಳು ಎಂಬ ಭಾವ ರೂಪಿತವಾಗಬೇಕಾದರೆ ಅದು ಕೇವಲ ಸಾಮಾಜಿಕ ಸಂಬಂಧಗಳಿಂದ, ರಾಜಕೀಯ ಪ್ರಭುತ್ವದಿಂದ ಮತ್ತು ಧಾರ್ಮಿಕ ಶ್ರೇಷ್ಠತೆಯ ಅಮಲಿನಿಂದ ಮಾತ್ರ ಆ ಪರಿಸ್ಥಿತಿ ನಿರ್ಮಾಣವಾಗಲು ಸಾಧ್ಯ. ಭಾಷೆಗಳನ್ನು ಆಡುವ ಸಮುದಾಯಗಳು ಚರಿತ್ರೆಯಲ್ಲಿ ಅನುಭವಿಸಿದ ಏರುಪೇರುಗಳು ಆಯಾ ಭಾಷೆಗಳ ಮೇಲೂ ಪರಿಣಾಮ ಬೀರಿರುತ್ತವೆ. ಪ್ರಬಲ ಪ್ರಭುತ್ವ ಅಧಿಕಾರವುಳ್ಳ ಸಮುದಾಯದ ಭಾಷೆಗೆ ಮೊದಲ ಮನ್ನಣೆ, ರಾಜ ಗೌರವ, ಪ್ರಾಶಸ್ತ್ರ, ಅಧಿಕಾರದ ಆಡಳಿತದ ಧ್ವನಿಯಾಗುತ್ತದೆ. ಹತ್ತು ಹಲವು ಬಗೆಗಳಲ್ಲಿ ಆ ಸಂಸ್ಕೃತಿ ಮತ್ತು ಭಾಷೆ ಹೆಚ್ಚಾಗಿ ಬಳಕೆಗೆ ರೂಢಿಗೆ ಬರುತ್ತದೆ. ಅಧಿಕಾರದೊಂದಿಗೆ ಪ್ರಭುತ್ವದ ಪತನ ಅಥವಾ ಅಧಿಕಾರ ಹಸ್ತಾಂತರವಾದಗ ಅದು ಬೇರೊಂದು ಭಾಷೆಗೆ ವರ್ಗಾವಣೆಗೊಳ್ಳುವುದು. ಸಂಸ್ಕೃತ, ಗ್ರೀಕ್, ಲ್ಯಾಟಿನ್, ಪರ್ಸೋ, ಅರಾಬಿಕ್ ಮತ್ತು ಇಂಗ್ಲೀಷ್ ಭಾಷೆಗಳು ಜಗತ್ತಿನ ಚರಿತ್ರೆಯಲ್ಲಿ ಪಡೆದ ಮನ್ನಣೆಯನ್ನು ಗಮನಿಸಿದರೆ, ಪ್ರಭುತ್ವದ ಬಲ ಮತ್ತು ಭಾಷೆಯ ಶ್ರೇಷ್ಠತೆಯ ಮನ್ನಣೆ ಹೇಗೆ ಲಭಿಸಿವೆ ಎಂಬ ಸಂದರ್ಭಗಳೂ ನಮಗೆ ಗೋಚರವಾಗುತ್ತವೆ. ಆಯಾ ಭಾಷೆಗಳ ಚಾರಿತ್ರಿಕ ಬೆಳವಣಿಗೆಯಲ್ಲಿ ಹೇಗೆ ಮನ್ನಣೆ ಪಡೆದು ಮುನ್ನೆಲೆಗೆ ಬಂದಿರುವುದಕ್ಕೆ ಅದರ ಅಂತರ್ಗತ ಲಕ್ಷಣಗಳಷ್ಟೇ ಕಾರಣವಲ್ಲ, ಪ್ರಭುತ್ವದ ಚಾರಿತ್ರಿಕ ಯಜಮಾನಿಕೆಯೇ ಮೊದಲ ಪ್ರಬಲ ಬಲವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಭಾಷೆಯ ಜೊತೆಗಿನ ಸಂಸ್ಕೃತಿ ಮತ್ತು ಚರಿತ್ರೆಯ ಜೊತೆಗಿನ ಪ್ರಭುತ್ವನ್ನು ಪ್ರಮುಖ ಅಂಶವಾಗಿ ಎಲ್ಲಾ ಸಂಶೋಧನೆಗಳು ಪರಿಗಣಿಸಲಾಗಿದೆ.

Read More »

ತುಮಕೂರು ಜಿಲ್ಲೆಯ ಕಾಂಗ್ರೆಸ್ಸೇತರ ರಾಜಕಾರಣದಲ್ಲಿ ಸಮಾಜವಾದಿ ಚಿಂತನೆಗಳ ಪ್ರಭಾವ

ಪಿ. ಎಲ್. ಮೈಲಾರಯ್ಯ

69 to 73

ಭಾರತದ ಇತಿಹಾಸದ ಪುಟಗಳನ್ನು ಒಮ್ಮೆ ಪರಿಶೀಲಿಸಿದಾಗ ನಮಗೆ ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪಾತ್ರವು ಬಹಳ ಮುಖ್ಯವಾದುದಾಗಿದೆ. ಕಾಂಗ್ರೆಸ್ ಎಂಬ ರಾಜಕೀಯ ಸಂಸ್ಥೆಯು ಭಾರತದ ಸ್ವತಂತ್ರ ಹೋರಾಟದಲ್ಲಿ ಒಂದು ಬಹುಮುಖ್ಯ ಅಂಗವಾಗಿ ಪಾತ್ರ ನಿರ್ವಹಿಸಿತ್ತು. ಕಾಂಗ್ರೆಸ್ ಸ್ವತಂತ್ರ ನಂತರ ಒಂದು ರಾಜಕೀಯ ಪಕ್ಷವಾಗಿ ಮುಂದುವರೆದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರವನ್ನು ಪಡೆದುಕೊಂಡಿತ್ತು. ಆರಂಭದ ಸುಮಾರು 40 ವರ್ಷಗಳ ಕಾಲ ಭಾರತದ ರಾಜಕೀಯ ಇತಿಹಾಸವನ್ನು ಕಾಂಗ್ರೆಸ್ ಆವರಿಸಿತ್ತು, ಹಾಗೂ ಕರ್ನಾಟಕದ ರಾಜಕೀಯದಲ್ಲೂ ಸಹ ಕಾಂಗ್ರೆಸ್ ತನ್ನದೇ ಪ್ರಭಾವವನ್ನು ಬೀರಿತ್ತು. ಕಾಲಕ್ರಮೇಣ ಕಾಂಗ್ರೆಸ್ಸೇತರ ರಾಷ್ಟ್ರೀಯ ಪಕ್ಷಗಳು, ಪ್ರಾದೇಶಿಕ ಪಕ್ಷಗಳು ಕೆಲವು ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದವು. ಅಂತಹ ರಾಷ್ಟ್ರೀಯ ಪಕ್ಷಗಳಲ್ಲಿ ಜನತಾ ಪಕ್ಷ, ಕಮ್ಯುನಿಸ್ಟ್ ಪಕ್ಷ, ಸಮಾಜವಾದಿ ಪಕ್ಷಗಳು ಪ್ರಮುಖವಾಗಿದ್ದವು ಮತ್ತು ಕಾಂಗ್ರೆಸ್ ಪಕ್ಷದ ಸೌರ್ವಭೌಮತ್ವವನ್ನು ಪ್ರಶ್ನಿಸಿ ಪ್ರಬಲವಾದ ವಿರೋಧಿ ಬಣವು ಅಸ್ತಿತ್ವಕ್ಕೆ ಬಂದಿತ್ತು. ಇದರಲ್ಲಿ ಸಮಾಜವಾದಿ ಚಿಂತನೆಗಳು ಮತ್ತು ಚಿಂತಕರು ಅಗಾಧವಾದ ಪ್ರಭಾವವನ್ನು ಬೀರಿದರು; ಇಂತಹ ಹಿನ್ನೆಲೆ ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ಸೇತರ ರಾಜಕಾರಣದ ಹುಟ್ಟು, ಬೆಳವಣಿಗೆಯಲ್ಲಿ ಸಮಾಜವಾದಿ ಚಿಂತನೆಗಳ ಪಾತ್ರವನ್ನು ನಿರೂಪಿಸುವುದು ಉದ್ದೇಶವಾಗಿದೆ.

 
Read More »

ಮೈಸೂರು ಅರಸರ ಕಾಲದ ಸಮ-ತತ್ತ್ವದ ಶಿಕ್ಷಣದ ವ್ಯವಸ್ಥೆ

ಲೋಕೇಶ ಆ‌ರ್.

74 to 82

ನಮ್ಮ ನಾಡಿನ ಪ್ರಾಚಿನ ಪರಂಪರೆ ಹಾಗೂ ಸನಾತನವೆನಿಸಿದ ಭಾರತೀಯ ಜ್ಞಾನ ಸಂಪತ್ತು ಮತ್ತು ಚಿಂತನಶೀಲತೆ ರಾಷ್ಟ್ರೀಯ ಶಿಕ್ಷಣ ನೀತಿಯ ದಾರಿದೀಪವಾಗಿದೆ. ಜ್ಞಾನ, ವಿವೇಕ ಹಾಗೂ ಸತ್ಯ ಭಾರತೀಯ ದಾರ್ಶನಿಕ ಚಿಂತನೆಯ ಅತ್ಯುನ್ನತ ಸಾಧನೆಯ ಗುರಿಗಳಾಗಿದ್ದವು, ಹಾಗೂ ಆತ್ಮಸಾಕ್ಷಾತ್ಕಾರ ಮತ್ತು ಆತ್ಮವಿಮೋಚನೆ ಶಿಕ್ಷಣದ ಗುರಿಯಾಗಿತ್ತು. ಅತ್ಯುತ್ತಮ ಮಟ್ಟದ ಬಹುಶಿಸ್ತೀಯ ಅಧ್ಯಯನಗಳು ಜ್ಞಾನದ ಗಡಿಗಳನ್ನು ವಿಸ್ತರಿಸಿ ಎಲ್ಲೆಡೆಯಿಂದಲೂ ಜ್ಞಾನ ಸ್ವೀಕಾರ ಕಾರ್ಯ ನಡೆಯುತ್ತಲೇ ಇತ್ತು. ಇದು ಕನ್ನಡ ನಾಡಿಗೂ ಮಾದರಿಯಾಗಿ ಕನ್ನಡ ನಾಡು ಕೂಡ ಯಾವುದಕ್ಕೂ ಹಿಂದೆ ಬೀಳದೆ ತನ್ನದೇ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿಕೊಳ್ಳುತ್ತಲೇ ಮಾದರಿ ರಾಜ್ಯವಾಗಿ ಚರಿತ್ರೆಯಲ್ಲಿ ಗುರುತಾಗತೊಡಗಿತು. ಭಾರತೀಯ ಭವ್ಯ ಪರಂಪರೆಯಲ್ಲಿ ಕನ್ನಡ ನಾಡಿನ ಹಿರಿಮೆ ದೇಸೀ ತನದಿಂದಲೇ ಹೆಸರಾದುದು. ಕನ್ನಡ ನಾಡಿನ ಜನತೆಯ ಜ್ಞಾನ ಮತ್ತು ವಿವೇಕದ ಹರವು ಮತ್ತು ಶಿಕ್ಷಣ ಕ್ರಮ ವೈಶಿಷ್ಟ್ಯಪೂರ್ಣವಾಗಿ ದಾಖಲಾಗಿದೆ. ಅನೌಪಚಾರಿಕ ಶಿಕ್ಷಣ ಕ್ರಮದಿಂದ ಔಪಚಾರಿಕ ಶಿಕ್ಷಣದವರೆಗೆ ಅದರ ನಡೆ ಬಹುತೆರನಾಗಿದ್ದರೂ ಅಂತಿಮವಾಗಿ ವ್ಯಕ್ತಿ ಉತ್ತಮ ಸಾಮಾಜಿಕ ಜೀವನ ನಡೆಸಲು ಶಿಕ್ಷಣವೇ ಮೂಲಾಧಾರ ಎಂಬ ಚಿಂತನೆ ಕರುನಾಡನ್ನಾಳಿದ ಪ್ರತಿಯೊಬ್ಬ ಆಳರಸರ ಧಮನಿಯಲ್ಲಿ ಮಿಡಿದಿದೆ. ಕನ್ನಡ ನಾಡಿನ ದೊರೆಗಳು ಒಂದಿಲ್ಲೊಂದು ರೀತಿಯಲ್ಲಿ ತನ್ನ ಪ್ರಜೆಗಳಿಗೆ ಜ್ಞಾನದ ಹಸಿವನ್ನು ನೀಗಿಸುತ್ತಲೇ ಬಂದಿದ್ದಾರೆ. ಮೈಸೂರು ದೊರೆಗಳು ಶಿಕ್ಷಣ ವ್ಯವಸ್ಥೆ ರೂಪಿಸಲು ತಮ್ಮ ತನುಮನವನ್ನು ಅರ್ಪಿಸಿದ ರೀತಿ ಅಸಮಾನ್ಯವಾಗಿಯೇ ಇದೆ ಎಂಬುದನ್ನು ಗುರುತಿಸುತ್ತಾ ಪ್ರಾಥಮಿಕ ಶಾಲೆಯ ಪ್ರಾರಂಭದೊಂದಿಗೆ ಅತ್ಯುನ್ನತವಾದ ವಿಶ್ವವಿದ್ಯಾನಿಲಯದ ವರೆಗೆ ಅವರು ಸ್ಥಾಪಿಸಿದ ಹಾಗೂ ಪೋಷಣೆ ಮಾಡಿದ ಸಾಂಸ್ಥಿಕ ಸ್ವರೂಪದ ಶಿಕ್ಷಣ ವ್ಯವಸ್ಥೆಯನ್ನು ಗುರುತಿಸುವ ಉದ್ದಿಷ್ಟ ಇಲ್ಲಿದೆ.

 
Read More »

ಮಿಡಿಗೇಶಿಯ ಇತಿಹಾಸ ರಚನೆಯಲ್ಲಿ ಮಹಿಳೆಯರ ಪಾತ್ರ

ಪ್ರವೀಣ್ ಕುಮಾರ ಎಂ. ಬಿ.

83 to 93

ಮಿಡಿಗೇಶಿಯ ಇತಿಹಾಸವನ್ನು ಸಮಗ್ರವಾಗಿ ನೋಡಿದಾಗ ಮಿಡಿಗೇಶಿಯು ಹಲವು ಪಾಳೆಪಟ್ಟುಗಳ ಆಡಳಿತಕ್ಕೆ ಒಳಪಟ್ಟಿರುವುದನ್ನು ಕಾಣಬಹುದಾಗಿದೆ. ಇಂತಹ ಮಿಡಿಗೇಶಿಯ ಇತಿಹಾಸವನ್ನು ಸಂಶೋಧನಾ ವಿಷಯವನ್ನಾಗಿ ನೋಡಿದಾಗ ಇದಕ್ಕೆ ಮಿಡಿಗೇಶಿ ಎಂದು ಹೆಸರು ಬರಲು ಪ್ರಮುಖ ಕಾರಣ ಒರ್ವ ಮಹಿಳೆ ಎಂದು ಅನೇಕ ದಾಖಲೆಗಳಲ್ಲಿ ಪ್ರಕಟವಾಗಿರುವುದನ್ನು ಕಾಣಬಹುದಾಗಿದೆ. ಈ ದಾಖಲೆಗಳ ಅನುಸಾರ ಮಿಡಿಗೇಶಿ ಎಂಬ ಹೆಸರಿನ ಐತಿಹ್ಯ, ಆಕೆಯ ಜೊತೆಗಿನ ಸಂಭಾಷಣೆಯು ಯುದ್ಧಕ್ಕೆ ಕಾರಣವಾಗಿ ಸಂಸ್ಥಾಪಕನ ಸಾವದ ಬಗೆಗಿನ ವಿವರಣೆಯನ್ನು ಗಮನಿಸಬಹುದಾಗಿದೆ. ಮಿಡಿಗೇಶಿ ಬೆಟ್ಟದ ಮೇಲಿರುವ ಬೃಹತ್ ಬಂಡೆಯ ಮೇಲೆ ಕೆತ್ತಲಾಗಿರುವ ಹೆಣ್ಣಿನ ಮೂರ್ತಿಯು ಸತಿಸಹಗಮನ ಮಾಡಿದ ಬಗೆಗಿನ ಉಲ್ಲೇಖಗಳನ್ನು ಐತಿಹ್ಯಗಳನ್ನು ಗಮನಿಸಬಹುದಾಗಿದೆ. ಪಾಳೇಗಾರರ ಆಡಳಿತದಲ್ಲಿ ಮಹಿಳೆಯ ಪಾತ್ರ, ಅವರಿಗಿದ್ದ ಸ್ಥಾನಮಾನಗಳು, ಅಧಿಕಾರಗಳು ಅವರ ಕಾಲದಲ್ಲಿ ನಡೆದ ಘಟನೆಗಳ ಪುನರ್ ಅವಲೋಕನ ಮತ್ತು ವಿಮರ್ಶೆಗೆ ಒಳಪಡಿಸಬೇಕಾಗಿದೆ. ಶಾಸನಗಳಲ್ಲಿ ಮಹಿಳೆಯರು, ಮಾಸ್ತಿಕಲ್ಲುಗಳು ಅಂದಿನ ಕಾಲದ ಮಹಿಳೆಯರ ಜನಜೀವನದ ಬಗ್ಗೆ ಅರಿತಕೊಳ್ಳಲು ಮಿಡಿಗೇಶಿಯ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಅಧ್ಯಯನ ಮಾಡಲು ಸಹಕಾರಿಯಾಗಿದೆ. ದೇವಸ್ಥಾನದ ಆವರಣದಲ್ಲಿ ಮಹಿಳೆ ಬೆಂಕಿಗಾಹುತಿಯಾದ ಬಗ್ಗೆ ಶಾಸನವಿದ್ದು ಅದರ ಬಗೆಗಿನ ವಿವರಣೆ ಕಾಣಬಹುದಾಗಿದೆ. ಸುಮಾರು 8 ಶತಮಾನಗಳ ಅವಧಿಯಲ್ಲಿ ಪಾಳೆಗಾರರು ಮೈಸೂರು ಸಂಸ್ಥಾನದೊಂದಿಗಿನ ಸಂಬಂಧ ವಿವರಿಸುವದು, ವಿವಿಧ ವಿದೇಶಿ ಪ್ರವಾಸಿಗರ ಕೈಫಿಯನ್ಗಳ ದಾಖಲೆಗಳನ್ನು ಪರಿಶೀಲಿಸಿ ಅಧ್ಯಯನ ಮಾಡುವುದು ಲೇಖನದ ಉದ್ದೇಶವಾಗಿದೆ.

Read More »

ಹೆಬ್ಬಾಳ್ ಕೃಷಿ ಪ್ರಯೋಗಾತ್ಮಕ ಫಾರಂ: ಚಾರಿತ್ರಿಕ ಹಿನ್ನೆಲೆ

ಮಂಜುಕುಮಾರ

94 to 98

ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ವ್ಯವಸಾಯದ ಅಭಿವೃದ್ಧಿಯು ಮೈಸೂರು ಸಂಸ್ಥಾನದ ಏಳಿಗೆಗೆ ಪೂರಕವೆಂದು ಅರಿತಿದ್ದರು, ಆದ್ದರಿಂದ ಆಧುನಿಕ ಯುಗದ ಅಗತ್ಯತೆಗೆ ತಕ್ಕಂತೆ ಕೃಷಿಯನ್ನು ಒಂದು ಲಾಭದಾಯಕ ಉದ್ಯಮವಾಗಿ ಪರಿವರ್ತಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ವೈಜ್ಞಾನಿಕ ಪ್ರಜ್ಞೆಯಿಂದ ಪ್ರಾಯೋಗಿಕ ಕಾರ್ಯ ತಂತ್ರಗಳನ್ನು ರೂಪಿಸಲು ಪ್ರಯತ್ನಿಸಿದರು. ಅಂತೆಯೇ ಪ್ರಾತ್ಯಕ್ಷಿಕ ಪ್ರಯೋಗಗಳ ಮೂಲಕ ರೈತಾಪಿ ವರ್ಗವು ಆಧುನಿಕಾಂಶಗಳನ್ನು ಅನುಕರಣೆ ಮಾಡುವಂತೆ ಉತ್ತೇಜನವನ್ನು ನೀಡಿದರು. ಇಪ್ಪತ್ತನೇ ಶತಮಾನದಲ್ಲಿ ರಾಜಪ್ರಭುತ್ವದಿಂದ ದೊರೆತ ನೀರಾವರಿ ಸೌಲಭ್ಯ, ಆಧುನಿಕ ಕೃಷಿಯ ಸಲಕರಣೆಗಳ ಪೂರೈಕೆ, ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಸರಬರಾಜು, ಬೆಳೆ ಸಾಲ ಸೌಲಭ್ಯ ಮುಂತಾದ ಅಂಶಗಳು ಕೃಷಿಯನ್ನು ಆಧುನೀಕರಣಗೊಳಿಸಿದ್ದವು. ಸರ್ಕಾರವು ಕೃಷಿಯ ಅಭಿವೃದ್ಧಿಗಾಗಿ ಪ್ರಯೋಗಾತ್ಮಕ ಫಾರಂಗಳ ಸ್ಥಾಪನೆ, ಪ್ರಾತ್ಯಕ್ಷಿಕ ಪ್ರಯೋಗಗಳ ಮೂಲಕ ಕೃಷಿಕರಿಗೆ ತರಬೇತಿ, ಕೃಷಿ ಉತ್ಪನ್ನಗಳ ವಸ್ತುಪ್ರದರ್ಶನದ ಆಯೋಜನೆ, ಕಬ್ಬಿನ ವ್ಯವಸಾಯಕ್ಕೆ ಪ್ರೋತ್ಸಾಹ, ಕೃಷಿ ಸಂಬಂಧಿತ ಮಾಹಿತಿಯ ವಿನಿಮಯ ಕಾರ್ಯಕ್ರಮ ಮುಂತಾದ ಕಾರ್ಯಯೋಜನೆಗಳನ್ನು ರೂಪಿಸಿತ್ತು. ಇದು ಮೈಸೂರು ರಾಜ್ಯದ ಆರ್ಥಿಕ ಸದೃಢತೆಗೆ ಅವಕಾಶವನ್ನು ಒದಗಿಸಿತ್ತು; ಪಾಶ್ಚಿಮಾತ್ಯ ಸಂಸ್ಕೃತಿ ಮತ್ತು ಆಧುನಿಕತೆಯ ವೈಚಾರಿಕ ವಿಚಾರಧಾರೆಗಳು ಮೈಸೂರು ರಾಜ್ಯದ ಆರ್ಥಿಕತೆಯ ಸ್ಥಾನಪಲ್ಲಟಕ್ಕೆ ಸುಭದ್ರವಾದ ತಳಹದಿಯನ್ನು ನಿರ್ಮಿಸಿ ಪೋಷಣೆ ಮಾಡಿದ್ದವು.

 
Read More »

ಕನ್ನಡ ಸಾಹಿತ್ಯಕ್ಕೆ ಮೈಸೂರು ಅರಸರ ಕೊಡುಗೆ

ಪ್ರಸನ್ನ ಕೆ. ಪಿ.

99 to 105

ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಇರುವ ಕನ್ನಡ ಸಾಹಿತ್ಯವನ್ನು ಆರಂಭದ ಕಾಲದಿಂದಲೂ ಅನೇಕ ರಾಜರು, ರಾಜಮನೆತನಗಳು ಪೋಷಿಸಿ ಪ್ರೋತ್ಸಾಹಿಸಿ ಬೆಳೆಸಿಕೊಂಡು ಬಂದಿವೆ. ಅದರಲ್ಲಿ ಸುಮಾರು ನಾನೂರು ವರ್ಷಗಳಷ್ಟು ಕಾಲ ಆಳ್ವಿಕೆ ಮಾಡಿದ ಮೈಸೂರು ಅರಸರು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿರುವುದು ಕಂಡುಬರುತ್ತದೆ. ಇವರ ಕಾಲಘಟ್ಟದಲ್ಲಿ ಅನೇಕ ಕವಿಗಳಿಗೆ, ವಿದ್ವಾಂಸರಿಗೆ, ಭಾಷಾಂತರಕಾರರಿಗೆ ಆಶ್ರಯ ನೀಡಿದ್ದಲ್ಲದೇ, ಅರಸರೇ ಸ್ವತಃ ಕವಿಗಳಾಗಿದ್ದು ಇವರ ಕಾವ್ಯಗಳೇ ಮೈಸೂರು ಅರಸರ ಐತಿಹ್ಯಕ್ಕೆ ಸಾಕ್ಷಿಯಾಗಿವೆ.

Read More »

ತಿರುಕ ಅವರ ಜೀವನ ಮತ್ತು ಸಾಹಿತ್ಯ: ಒಂದು ಪಕ್ಷಿನೋಟ

ಎಂ. ಮಹಾದೇವಪ್ರಭು

106 to 114

ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳು ಮೂಲತಃ ವ್ಯಾಯಾಮ ಶಿಕ್ಷಕರು, ಅವರು ತಿರುಕ ಎಂಬ ಕಾವ್ಯನಾಮದಿಂದ ಕನ್ನಡ ಸಾಹಿತ್ಯ ವಲಯದಲ್ಲಿ ಪ್ರಸಿದ್ಧರಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮಲ್ಲಾಡಿಹಳ್ಳಿಯಲ್ಲಿ ಶಿಕ್ಷಣ, ವೈದ್ಯಕೀಯ, ವ್ಯಾಯಾಮ, ಗ್ರಂಥಾಲಯ, ವಾಚನಾಲಯ, ವಿದ್ಯಾರ್ಥಿ ನಿಲಯಗಳಿಂದ ಕೂಡಿದ ಅನಾಥ ಸೇವಾಶ್ರಮ ವಿಶ್ವಸ್ಥ ಸಮಿತಿ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಸುತ್ತಮುತ್ತಲ ಹಳ್ಳಿಗಳ ವಿದ್ಯಾರ್ಥಿಗಳಿಗೆ ವಿದ್ಯಾದೀಪಕರಾಗಿದ್ದಾರೆ. ಆಯುರ್ವೇದ, ಯೋಗ ಮತ್ತು ಸಾಹಿತ್ಯವಲಯದ ವಿದ್ವಾಂಸರನ್ನು ಮಲ್ಲಾಡಿ ಹಳ್ಳಿಗೆ ಕರೆಸಿ ವಿದ್ಯಾರ್ಥಿಳಿಗೆ ಉಪನ್ಯಾಸಗಳನ್ನು ಕೊಡಿಸುವುದಲ್ಲದೆ, ಜನರಿಗೆ ಹರಿಕಥೆ, ಕೀರ್ತನೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರಸಿದ್ಧರಾಗಿರುವರು.

Read More »

ರಾಜಾರಾವ್ ಅವರ ಕಾಂತಾಪುರ: ಒಂದು ಅಧ್ಯಯನ

ದಿನೇಶ್ ಕೆ. ಎಸ್.

115 to 125

ರಾಜಾರಾವ್ ಅವರ ಕಾಂತಪುರ ಕಾದಂಬರಿಯು ವಸಾಹತು ಕಾಲದ ಗ್ರಾಮಭಾರತವನ್ನು ಚಿತ್ರಿಸುವ ಒಂದು ವಿಶಿಷ್ಟ ಕೃತಿಯಾಗಿದ್ದು, ಶತ ಶತಮಾನಗಳಿಂದ ಮಲಗಿದ್ದ ಭಾರತದ ಹಳ್ಳಿಗಳು ಸ್ವಾತಾಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರ ಅಹಿಂಸಾತ್ಮಕ, ಅಸಹಕಾರ ಚಳವಳಿಯಿಂದಾಗಿ ಇದ್ದಕ್ಕಿದ್ದಂತೆ ಹೇಗೆ ಜೀವ ತಳೆದು ಸ್ವಾತಂತ್ರ್ಯಹೋರಾಟದಲ್ಲಿ ಪಾಲ್ಗೊಂಡವು ಎಂಬುದನ್ನು ವಿವರಿಸುತ್ತದೆ. 1919 ರಿಂದ 1930 ರವರೆಗಿನ ದಿನಗಳಲ್ಲಿ ಭಾರತದಾದ್ಯಂತ, ಲಕ್ಷಗಟ್ಟಲೆ ಭಾರತೀಯ ಹಳ್ಳಿಗಳಲ್ಲಿ ಗಾಂಧಿಯವರು ತಮ್ಮ ಒಂದೇ ಜೀವಿತಾವಧಿಯಲ್ಲಿ ಇಡೀ ರಾಷ್ಟ್ರದ ಜನತೆಯನ್ನು ಶಿಸ್ತಿನ ಮತ್ತು ಅಹಿಂಸಾತ್ಮಕ ಸ್ವಾತಂತ್ರ್ಯ ಹೋರಾಟಗಾರರ ಸೈನ್ಯವನ್ನಾಗಿ ಪರಿವರ್ತಿಸಿದ ಬಗೆಯನ್ನು ಕಾದಂಬರಿ ವಾಸ್ತವಿಕ ಹಿನ್ನೆಲೆಯಲ್ಲಿ ಚಿತ್ರಿಸುತ್ತದೆ.

Read More »

ಚಂದ್ರಶೇಖರ ಕಂಬಾರರ ನಾಟಕಗಳಲ್ಲಿ ದೇಸಿ ಸಂಸ್ಕೃತಿ

ಜ್ಯೋತಿ ಕೆ. ಎಸ್.

126 to 138

ಕನ್ನಡದ ಪ್ರಸಿದ್ದ ನಾಟಕಕಾರರಲ್ಲಿ ಚಂದ್ರಶೇಖರ ಕಂಬಾರರು ಪ್ರಮುಖರಾಗಿದ್ದಾರೆ. ಘೋಡಗೇರಿಯಲ್ಲಿ ಜನಿಸಿದ ಕಂಬಾರರು ಹಳ್ಳಿ ಬದುಕಿನ ವಿವಿಧ ಮಜಲುಗಳನ್ನು ನೋಡುತ್ತಾ ಅನುಭವಿಸುತ್ತಲೇ ಬಾಲ್ಯವನ್ನು ಕಳೆದವರು. ತಾಯಿ ಚೆನ್ನಮ್ಮ ಹಾಡುಗಾರ್ತಿಯೂ, ಕತೆಗಾರ್ತಿಯೂ ಆಗಿದ್ದರು. ಮಾವ ರಾಮಪ್ಪ ವಿಭಿನ್ನ ವ್ಯಕ್ತಿತ್ವದ ಕ್ರಿಯಾಶೀಲ ವ್ಯಕ್ತಿ. ಸುಲದಾಳದಲ್ಲಿದ್ದ ದೊಡ್ಡಮ್ಮನೂ ಅದ್ಭುತ ಕತೆಗಾರ್ತಿ. ವರ್ಷದಲ್ಲಿ ಕನಿಷ್ಠ ಮೂರು ತಿಂಗಳುಗಳ ಕಾಲ ದೊಡ್ಡಮ್ಮನೊಂದಿಗೆ ಕಳೆಯುವುದು ಕಂಬಾರರಿಗೆ ರೂಢಿಯಾಗಿತ್ತು. ಇವರೆಲ್ಲರ ಬಾಯಿಯಿಂದ ಹಾಡು ಕೇಳುವುದು, ಕತೆಕೇಳುವುದು ಕಂಬಾರರಿಗೆ ಬಹು ಮೆಚ್ಚಿನ ವಿಷಯವಾಗಿತ್ತು.

Read More »

ಮಂಟೇಸ್ವಾಮಿ ಮತ್ತು ಅನನ್ಯ ಭಕ್ತಿ ಭಾವದ ದೊಡ್ಡಮ್ಮ ತಾಯಿ

ಚೆಲುವರಾಜು

139 to 147

ಶಿಕ್ಷಣವಿಲ್ಲದ ನಮ್ಮ ಗ್ರಾಮೀಣ ಜನಸಾಮಾನ್ಯರ ಮಾತೇ ಜನಪದ ಎನ್ನಬಹುದಾದರೂ ಈ ಪದ ಇನ್ನೂ ವಿಶಾಲವಾದ ಅರ್ಥವನ್ನು ಹೊಂದಿದೆ. ಮನುಕುಲದ ಮೊದಲ ಇತಿಹಾಸವೇ ಜನಪದ. ಗ್ರಾಮೀಣ ಜನತೆಯ ಮಾತುಕತೆ, ನಡವಳಿಕೆಗಳು, ಆಚಾರ ವಿಚಾರ, ಪದ್ಧತಿಗಳು, ನಂಬಿಕೆ, ಸಂಪ್ರದಾಯ, ಧಾರ್ಮಿಕತೆ, ತಾತ್ವಿಕ ಸಂಗತಿಗಳು ಮೊದಲಾದವುಗಳನ್ನು ಜನಪದ ಒಳಗೊಂಡು ಜಾನಪದವಾದರೆ, ಈ ಎಲ್ಲ ಸಮಸ್ತವನ್ನು ಒಳಗೊಂಡದ್ದು ಜಾನಪದ. ಜನಪದ ಮಹಾಕಾವ್ಯವು ಮೌಖಿಕ ಪರಂಪರೆಯಾಗಿದ್ದು ಸಾಂಸ್ಕೃತಿಕ ಪುರಾಣವೂ ಆಗಿದೆ.

Read More »

ಹಿಜ್ರಾ ಸಮುದಾಯದ ರೇವತಿ ಆತ್ಮಕಥೆಯ ನೆರಳುಗಳ ಜಾಡು

ಚಂದ್ರಕಲಾ ಹೆಚ್.ಆರ್.

148 to 156

ಕನ್ನಡದಲ್ಲಿ ಈಗೀಗ ಅನುವಾದಿತ ಆತ್ಮಕಥನಗಳ ಸಂಖ್ಯೆ ಹೆಚ್ಚುತ್ತಿವೆ. ಕನ್ನಡದ ಆತ್ಮಕಥನಗಳ ಮಾದರಿಗೆ ಇದೊಂದು ವಿಶಿಷ್ಟ ಸೇರ್ಪಡೆ ಏಕೆಂದರೆ ಬಹುಪಾಲು ಆತ್ಮಕಥನಗಳಿಗೆ ಆತ್ಮವಿರದೆ, ಆತ್ಮವಂಚನೆಯಿಂದ ಕೂಡಿರುತ್ತವೆ. ರೇವತಿಯ ಆತ್ಮಕಥೆ 'ಬದುಕು ಬಯಲು' ಕೃತಿಯಲ್ಲಿ ಬಾಲ್ಯದ ಅನುಭವಗಳ ಗಟ್ಟಿತನ ಮತ್ತು ಪ್ರಾಮಾಣಿಕತೆ ಬೆಳೆಯುತ್ತಾ ಪಕ್ವವಾಗುತ್ತಾ ಸಾಗಿ ಈ ಲೋಕವನ್ನು ನ್ಯಾಯದ ಕಟಕಟೆಯಲ್ಲಿ ನಿಲ್ಲಿಸಿ ರೇವತಿಯ ಆತ್ಮಘನತೆಯನ್ನು ಹೆಚ್ಚಿಸುತ್ತದೆ. ಪರಮಾತ್ಮನನ್ನು ದರ್ಶಿಸುತ್ತದೆ. ದೇಹದ ಅಂಗಾಂಗಗಳ ಮೂಲಕ ಗಂಡು, ಹೆಣ್ಣು ಎಂದು ಗುರುತಿಸಲಾಗುತ್ತದೆ. ಬದುಕು ಗಂಡು-ಹೆಣ್ಣೆಂಬ ದ್ವಿಲಿಂಗದ ಸುತ್ತವೇ ಹೆಣೆದುಕೊಂಡಿದೆ. ಆದರೆ ಗಂಡಿನೊಳಗಿರುವ ಹೆಣ್ಣಿನ ಭಾವನೆ, ನಡವಳಿಕೆಯನ್ನು ಗುರುತಿಸುವುದು ಹೇಗೆಂಬ ಪ್ರಶ್ನೆಗೆ ಈ ಕೃತಿ ಉತ್ತರದಾಯಿಯಾಗಿದೆ. ರೂಪಿನಿಂದ ಗಂಡಾಗಿ ಹೆಣ್ಣಿನ ಭಾವನೆಗಳನ್ನು ಹೊಂದಿರುವ ಮೂರನೆಯ ವರ್ಗವೊಂದು ಸಮಾಜದಿಂದ ನಂಬರ್ 9, ಖೋಜಾ, ಚಕ್ಕಾ, ಹೆಣ್ಣಿಗ, ಹೆಣ್ಣುಡುಗ, ಹಿಜ್ರಾ ಎಂದೇ ಕರೆಯಲ್ಪಡುವ, ಪರಿಪೂರ್ಣ ಗಂಡಾಗದ, ಪರಿಪೂರ್ಣ ಹೆಣ್ಣಾಗದ ತೃತೀಯ ಲಿಂಗಿ ಸಮುದಾಯದ ದೈಹಿಕ, ಮಾನಸಿಕ ತುಮುಲಗಳು, ಸಂವೇದನೆಗಳು, ಲಿಂಗಪರಿವರ್ತನೆಯ ತೊಳಲಾಟಗಳು, ಕುಟುಂಬ, ಸಮಾಜದ ಕಟ್ಟುಪಾಡುಗಳು, ಆ ಸಮುದಾಯದ ಕಟ್ಟಳೆಗಳು, ಆ ಸಮುದಾಯದ ಜೀವನಕ್ರಮ, ಅಭ್ಯಾಸಗಳು, ಉಳಿವಿಗಾಗಿ ನಡೆಸುವ ಹೋರಾಟಗಳು, ಕಾನೂನಿನ ಅಸಮಾನತೆ, ಆಸ್ತಿ ಅಸಮಾನತೆ, ಉದ್ಯೋಗ, ಶಿಕ್ಷಣ, ವಸತಿ ಸಮಸ್ಯೆಗಳು, ಲೈಂಗಿಕತೆಯ ಪ್ರಶ್ನೆ ಮತ್ತು ದುರ್ಬಳಕೆ, ಆ ಸಮುದಾಯದ ಪರಿಭಾಷೆಗಳು, ಗಂಡಿನ ದೇಹದೊಳಗೆ ನಲುಗುವ ಹೆಣ್ಣು ಮತ್ತು ಹೆಣ್ಣನದ ಅನಾವರಣ ಸೃಷ್ಟಿಸುವ ಸಂದಿಗ್ಧತೆಗಳನ್ನು ಈ ಆತ್ಮಕಥನ ಬಿಚ್ಚಿಡುತ್ತದೆ. ದ್ವಿಲಿಂಗವಲಯ ಈ ಸಮುದಾಯವನ್ನು ಮತ್ತು ಅವರ ನೋವನ್ನು ಅಮುಖ್ಯವೆಂದು ಪರಿಗಣಿಸಿ ಕೀಳರಿಮೆಯಿಂದ ನೋಡುತ್ತಿರುವಾಗ ಹಿಜ್ರಾ ಸಮುದಾಯದ ಸಂಕಟಗಳನ್ನು ತನ್ನೊಡಲಲ್ಲಿ ತುಂಬಿಕೊಂಡ ಪ್ರತಿನಿಧಿಯಾಗಿ ರೇವತಿಯ ಆತ್ಮಕತೆಯಿದೆ. ಈ ಅತ್ಮಕಥೆಯ ಕುರಿತ ಲೇಖನ ಆ ಸಮುದಾಯದವರ ಮೇಲೆ ನಾಗರೀಕ ವಲಯಕ್ಕಿದ್ದ ಕೆಟ್ಟ ಕುತೂಹಲವನ್ನು ತಣಿಸುತ್ತದೆ ಮತ್ತು ಸಖೇದಾಶ್ಚರ್ಯವನ್ನು ಉಂಟುಮಾಡುವುದರೊಂದಿಗೆ ಪೂರ್ಣತ್ವದ ಪ್ರಶ್ನೆ ಮತ್ತು ಕೊರತೆಯನ್ನು ತುಂಬಿಸುವ ಪ್ರಯತ್ನವನ್ನು ಈ ಕೃತಿ ಮಾಡುವುದರಿಂದ ಇಂತಹ ಕೃತಿಯನ್ನು ಓದುವುದರ ಮೂಲಕ ತೃತೀಯ ಲಿಂಗಿಗಳ ಬದುಕಿನ ನಾನಾ ಮುಖಗಳನ್ನು ವಿಶ್ಲೇಷಿಸಬಹುದಾಗಿದೆ. ಕಾರಣ ಈ ಲೋಕದಲ್ಲಿ ಅಂಗವಿಕಲರಿಗೆ, ಬುದ್ದಿಮಾಂದ್ಯರಿಗೆ ಬದುಕುವ ಅವಕಾಶಗಳಿರುವಷ್ಟು ಈ ಸಮುದಾಯಕ್ಕಿಲ್ಲವೇನೊ ಎಂಬ ಕೊರಗಿನೊಂದಿಗೆ ತೀವ್ರಶೋಷಿತವಲಯ ಎಂಬ ತರ್ಕಕ್ಕೆ ಬರಬಹುದಾಗಿದೆ. ಆತ್ಮಕಥೆ ಬಿಚ್ಚಿಡುವ ಶೋಷಣೆ ಚಿಂತನಾರ್ಹವಾಗಿದೆ.

Read More »

ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಮಹಿಳಾ ಸಾಮಾಜಿಕ ನ್ಯಾಯತತ್ವ: ಒಂದು ಅವಲೋಕನ

ಹೇಮಲತ ಹೆಚ್.ಆರ್.

157 to 169

ಹಿಂದೂ ಧರ್ಮದಲ್ಲಿ ಶೂದ್ರ ಮತ್ತು ದಲಿತರ ಶೋಷಣೆ ಆದಷ್ಟೇ ಮಹಿಳೆಯರ ಶೋಷಣೆಯೂ ಆಗಿದೆ. ಹಿಂದೂ ಸಮಾಜದಲ್ಲಿ ಮಹಿಳೆಯು ಅತಿ ಕೀಳು ಮಟ್ಟದ ಸ್ಥಾನವನ್ನುಹೊಂದಿದ್ದಾಳೆ. ಜೀವನದ ಯಾವುದೇ ಕ್ಷೇತ್ರದಲ್ಲೂ ಮಹಿಳೆ ಪ್ರಗತಿ ಹೊಂದಬಾರದೆಂಬ ನಿಬರ್ಂಧನೆಗಳನ್ನು ಹೇರಲಾಗಿತ್ತು. ಮಹಿಳೆಯು ಕೇವಲ ಪುರುಷನ ಆಸೆ ಆಕಾಂಕ್ಷೆಗಳನ್ನು ತೀರಿಸುವ ಒಂದು ಸುಂದರವಾದ ವಸ್ತು ಮತ್ತು ಮಕ್ಕಳನ್ನು ಹೆರುವ ಯಂತ್ರವೆಂದು ಪರಿಗಣಿಸಲಾಗಿತ್ತು. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಕೇವಲ ಗುಲಾಮಳಂತೆ ಮನೆಗೆಲಸ ಮಾಡಿ ಕುಟುಂಬದಲ್ಲಿ ಶಾಂತಿ ನೆಲೆಸುವಂತೆ ಮಾಡುವುದು ಅವಳ ಆದ್ಯ ಕರ್ತವ್ಯವೆಂದು ಭಾವಿಸಲಾಗಿತ್ತು. ಯಾವುದೇ ಕಾರಣಕ್ಕೂ ಮಹಿಳೆ ಹೊರಗಿನ ಸಮಾಜದಲ್ಲಿ ಇತರರಂತೆ ಧೈರ್ಯ ಮತ್ತು ಗೌರವದಿಂದ ಭಾಗವಹಿಸುವಂತಿರಲಿಲ್ಲ. ಹಾಗೇನಾದರೂ ಮಾಡಿದಿದ್ದರೆ ಅವಳು ಇಡೀ ಪುರುಷ ವರ್ಗ ಮತ್ತು ಸಮಾಜದ ಕೋಪಗೊಳಗಾಗುತ್ತಿದ್ದಳು. ಮನು ಧರ್ಮಶಾಸ್ತ್ರದಲ್ಲಿ ಮಹಿಳೆಯರು ಸ್ಥಾನಮಾನವನ್ನು ಅತಿ ಕೆಟ್ಟದಾಗಿ ಚಿತ್ರಿಸಿದ್ದಾರೆ. ಶತಮಾನಗಳಿಂದ ಹೆಣ್ಣನ್ನು ಒಂದು ಸಾಕು ಪ್ರಾಣಿಯಂತೆ ವೈದಿಕ ಧರ್ಮ ನೋಡಿದೆ. ಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯರನ್ನು ಅತ್ಯಂತ ಹೀನಾಯವಾಗಿ ಪುರುಷ ಸಮಾಜ ಕಾಣುತ್ತಾ ಬಂದಿದೆ. ಮಹಿಳೆಯನ್ನು ಪುರುಷನ ಸಮಾನ ಸ್ಥಾನದಲ್ಲಿ ಸ್ಥಾಪಿಸುವ ಕೆಲಸವನ್ನು ಅನೇಕ ಸಮಾಜ ಸುಧಾರಕರು ಮಾಡಿದ್ದಾರೆ. ಅವರಲ್ಲಿ ಸ್ತ್ರೀ ಸಮಾನತೆಗಾಗಿ ಕಾನೂನು ರಚಿಸಿ ಸಂವಿಧಾನಾತ್ಮಕ ನೆಲೆಗಟ್ಟಿನಲ್ಲಿ ಸ್ವತಂತ್ರ ಭಾರತದ ಸ್ತ್ರೀ ಸ್ವಾತಂತ್ರ್ಯವನ್ನು ಎತ್ತಿ ಹಿಡಿದು, ಮನುಷ್ಯ ಸಮಾನತೆ ಮೆರೆದ ಕೀರ್ತಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಮನುಷ್ಯನ ಹಕ್ಕುಗಳನ್ನು ಲಿಂಗಭೇದ ರಹಿತ ನೆಲೆಗಳಲ್ಲಿ ಶೋಧಿಸಿ ಆ ವರೆಗಿನ ಸ್ತ್ರೀಯರ ಬಗೆಗಿದ್ದ ಮನುವಾದಿ ಚಿಂತಕರ ಧೋರಣೆಗಳನ್ನು ಕಾನೂನು ರಚನೆಯ ಮೂಲಕ ವಿರೋಧಿಸಿದವರು ಅಂಬೇಡ್ಕರ್ ಅವರು ಎಂಬುದನ್ನು ತಿಳಿಸುವುದು ಈ ಲೇಖನದ ಉದ್ದೇಶವಾಗಿರುತ್ತದೆ.

 
Read More »

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೃಷಿ ಕಾರ್ಮಿಕರ ಸಮಸ್ಯೆಗಳು

ವೆಂಕಟೇಶ್ ಬಿ. ಜಿ.

170 to 174

ಕೃಷಿ ಕಾರ್ಮಿಕರು ಕೃಷಿ ಕ್ಷೇತ್ರದಲ್ಲಿ ಬೆಳೆ ನಾಟಿ, ಜಾನುವಾರುಗಳ ಪಾಲನೆ, ಕೊಯ್ದು ಮತ್ತು ಸಂಸ್ಕರಣೆ ಮುಂತಾದ ಕಾರ್ಯದಲ್ಲಿ ಭಾಗವಹಿಸುತ್ತಾರೆ. ಕೃಷಿ ಚಟುವಟಿಕೆಯಲ್ಲಿ ಮಾನವ ಸಂಪನ್ಮೂಲವು ಅವಶ್ಯಕವಾಗಿ ಅಗತ್ಯವಿರುತ್ತದೆ. ಈ ಹಿನ್ನೆಲೆ ಕೃಷಿ ಕಾರ್ಮಿಕರು ದೀರ್ಘಾವಧಿವರೆಗೆ ವ್ಯವಸಾಯ ಭೂಮಿಯಲ್ಲಿ ದುಡಿಯುತ್ತಿರುತ್ತಾರೆ. ಅವರು ಕಾಲಾವಧಿ ಅಥವಾ ತಾತ್ಕಾಲಿಕ ಅವಧಿಯ ಆಧಾರದ ಮೇಲೆ ಕೆಲಸ ಮಾಡಬಹುದು. ಅಲ್ಲದೆ ಕೃಷಿಕರು ಅಥವಾ ಕೃಷಿ ಸಹಕಾರಿ ಸಂಸ್ಥೆಗಳಲ್ಲಿ ಕಾರ್ಯವನ್ನು ನಿರ್ವಹಿಸಬಹುದು. ಕೃಷಿ ಕಾರ್ಮಿಕರ ಸವಾಲುಗಳು ಮತ್ತು ಅನಿಶ್ಚಿತತೆಯ ಹೊರತಾಗಿಯೂ ಇದು ಜಾಗತಿಕ ಆಹಾರ ಉತ್ಪಾದನೆಯ ನಿರ್ಣಾಯಕ ಅಂಶವಾಗಿದೆ. ಪ್ರಪಂಚದ ಅನೇಕ ಭಾಗಗಳಲ್ಲಿ ಕೃಷಿ ಕಾರ್ಮಿಕರು ಅನೌಪಚಾರಿಕ ಮತ್ತು ಅನಿಯಂತ್ರಿತರಾಗಿದ್ದಾರೆ. ಅವರು ತಮ್ಮ ಹಕ್ಕುಗಳಿಗಾಗಿ ಹೋರಾಟವನ್ನು ನಡೆಸುವುದು ಅವಶ್ಯಕವಾಗಿದೆ. ಇಡೀ ದೇಶದ ಉತ್ಪಾದನಾ ವ್ಯವಸ್ಥೆಗೆ ಕೃಷಿ ಕಾರ್ಮಿಕರ ಕೊಡುಗೆಯು ಅನನ್ಯವಾದುದು. ಇಂತಹ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೃಷಿ ಕಾರ್ಮಿಕರ ಸಮಸ್ಯೆಗಳನ್ನು ಗುರುತಿಸುವುದು ಮತ್ತು ಅದಕ್ಕೆ ಪರಿಹಾರ ಕ್ರಮಗಳನ್ನು ಸೂಚಿಸುವುದು ಈ ಲೇಖನದ ಆಶಯವಾಗಿದೆ.

 
Read More »

ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆ: ಸಾಮಾಜಿಕ ಹಿನ್ನೆಲೆಯಲ್ಲಿ ಒಂದು ನೋಟ

ಸವಿತಾ ಆರ್. ಸ್ವಾಮಿ

175 to 180

ಈ ಭೂಮಿ ಮೇಲೆ ಅತ್ಯಂತ ಬುದ್ಧಿವಂತ ಪ್ರಾಣಿ ಮನುಷ್ಯನಾಗಿರುತ್ತಾನೆ. ಅವನು ಅನೇಕ ಶೋಧಗಳ ಫಲವಾಗಿ ಅವನು ಮಂಗನಿಂದ ಮಾನವ ಎನಿಸಿಕೊಂಡಿರುತ್ತಾನೆ. ಅನೇಕ ಸೌಲತ್ತುಗಳಿಗಾಗಿ ವಿಜ್ಞಾನದ ಆವಿಷ್ಕಾರಗಳು ಮಾಡುತ್ತಾ ಮುಂದುವರೆದು. ಯಾಂತ್ರಿಕವಾದ ಮನುಷ್ಯನನ್ನು ಸೃಷ್ಟಿಸುವಷ್ಟು. ಅನೇಕ ವೈಜ್ಞಾನಿಕ ನೆಲೆಯಲ್ಲಿ ಮನುಷ್ಯನ ಊಹೆಗೂ ಮೀರಿದ ಆವಿಷ್ಕಾರಗಳು ಕಂಡುಕೊಂಡಿದ್ದಾನೆ. ಆದರೆ ಇತ್ತೀಚಿಗೆ ಹೆಚ್ಚಾಗಿ ಪ್ರಚಲಿತದಲ್ಲಿರುವ ವಿಷಯ ಏನೆಂದರೆ. ಮನುಷ್ಯನ ಆಲೋಚನೆ ಅವನ ಮನಸ್ಸು ಅವನ ನರನಾಡಿಗಳಲ್ಲಿ ಆಗುವ ಅಂಶಗಳು ಕೂಡ ಸೆರೆಹಿಡಿದು ಕೃತಕ ಬುದ್ಧಿಮತ್ತೆ (AI) "ಆರ್ಟಿಫಿಶಿಯಲ್ ಇಂಟಲಿಜೆನ್ಸ್” ತಂತ್ರಜ್ಞಾನವು ಕಂಡುಹಿಡಿಯಲಾಗಿದೆ. ಇದು ಮನುಷ್ಯನಿಂದ ಹುಟ್ಟಿ ಮನುಷ್ಯನನ್ನೇ ಮೀರಿಸುವ ರೀತಿಯಲ್ಲಿ ಬೆಳೆಯುತ್ತಿದೆ. ಮುಂಬರುವ ದಿನಗಳಲ್ಲಿ ಇದರ ಸಾಧಕ-ಭಾದಕಗಳಿಂದ ನಮ್ಮ ಸಾಮಾಜಿಕ ನೆಲೆಯಲ್ಲಿ ಒಂದು ಸಂಚಲನ ಮೂಡಿಸುವುದಂತು ಖಚಿತವಾಗಿದೆ. ಈ ಲೇಖನದ ಅಧ್ಯಯನದ ಉದ್ದೇಶ ಸಾಮಾಜಿಕ ನೆಲೆಯಲ್ಲಿ ಮನುಷ್ಯ ಕಟ್ಟ ಕಡೆಯ ಬುದ್ದಿವಂತನು. ಆದರೆ ತಂತ್ರಜ್ಞಾನದಿಂದ ಮನುಷ್ಯ ತನ್ನ ಆಲೋಚನೆ ಸಾಮರ್ಥ್ಯ ಆರೋಗ್ಯದ ದೃಷ್ಟಿಯಲ್ಲಿ ಎದುರಿಸುವ ಸಂಗತಿಗಳು. ಈ ಲೇಖನದಲ್ಲಿ ಚರ್ಚಿಸುವ ಪ್ರಯತ್ನ ಮಾಡಿರುತ್ತೇನೆ.

Read More »

ಮೈಸೂರು ಸಂಸ್ಥಾನದಲ್ಲಿನ ರಾಜಾಶ್ರಯದ ಕ್ರೀಡೆಗಳು: ಒಂದು ನೋಟ

ವಸಂತ ಪೂರ್ಣಿಮ

181 to 187

ಹೆಸರೇ ಹೇಳುವಂತೆ 'ಮೈ ಮನ ಸೂರೆಗೊಳ್ಳುವ' ಮೈಸೂರು ಜಗದ್ವಿಖ್ಯಾತವಾಗಿರುವುದು ತನ್ನ ವಿಶಿಷ್ಟ ಸಾಂಸ್ಕೃತಿಕ ಕೊಡುಗೆ ಹಾಗೂ ಸಾಮಾಜಿಕ ಸುಧಾರಣೆಗಳಿಂದ. ಬ್ರಿಟಿಷ್ ಪ್ರಭುತ್ವದಡಿಯಲ್ಲೋ ಅಥವಾ ತನ್ನ ಆಧುನಿಕ ಸುಧಾರಣಿಗಳಿಂದಲೋ ಮೈಸೂರಿನ ಸರ್ವತೋಮುಖ ಅಭಿವೃದ್ಧಿಗೆ ನೆರವಾದ ಮೈಸೂರಿನ ಆಳರಸರು ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ರಾಜ ಪ್ರಭುತ್ವ ಕಾಲದಲ್ಲಿ ಯುದ್ಧ ವಿದ್ಯೆ ಅಥವಾ ಸೈನಿಕ ಕಲೆಗಳೆನಿಸಿಕೊಂಡಿದ್ದ ಕುದುರೆ ಸವಾರಿ, ಕತ್ತಿವರಸೆ, ಕುಸ್ತಿ, ಬಿಲ್ಲುಗಾರಿಕೆ, ಭರ್ಜಿ ಎಸೆತ, ಪೋಲೋ, ಕವಾಯಿತು, ವ್ಯಾಯಾಮ ಮೊದಲಾದವು ಇಂದು ಕ್ರೀಡಾಕ್ಷೇತ್ರಕ್ಕೆ ಸೇರ್ಪಡೆಗೊಂಡು ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಈ ನಿಟ್ಟಿನಲ್ಲಿ ಮೈಸೂರು ಸಂಸ್ಥಾನ ತೆಗೆದುಕೊಂಡ ನಿಲುವುಗಳು ನಿಜಕ್ಕೂ ಅಧ್ಯಯನಕ್ಕೆ ಅರ್ಹವಾದವು. ದಸರಾ ಹಬ್ಬದ ಸಂದರ್ಭದಲ್ಲಿ ವಿಶೇಷ ಕ್ರೀಡಾಕೂಟಗಳನ್ನು ಏರ್ಪಡಿಸಿ ದೇಶ ವಿದೇಶಗಳಿಂದ ಕ್ರೀಡಾಪಟುಗಳನ್ನು ಆಮಂತ್ರಿಸುವ ಮೂಲಕ ಸಮಕಾಲೀನ ಸಂಸ್ಥಾನಗಳ ನಡುವೆ ವಿಭಿನ್ನವಾಗಿ ನಿಲ್ಲುವ ಮೈಸೂರು, ಆಂಗ್ಲೋ ಮೈಸೂರು ಯುದ್ಧಗಳ ನಂತರ ಬ್ರಿಟಿಷರ ಪ್ರಭಾವಕ್ಕೆ ಒಳಗಾಗಿ ಆಧುನೀಕರಣಕ್ಕೆ ಬಹಳ ಬೇಗ ಒಗ್ಗಿಕೊಂಡು ಕ್ರೈಸ್ತ ಮಿಷನರಿಗಳ ಹಾದಿಯಲ್ಲಿಯೇ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಮುಂದಾಗಿ ಇದರಲ್ಲಿ ದೈಹಿಕ ಶಿಕ್ಷಣದ ಅಗತ್ಯತೆಯನ್ನು ಮನಗಂಡು ಅದನ್ನು ಶಾಲಾ ಕೋರ್ಸ್ನ ಭಾಗವೆಂದು ಪರಿಗಣಿಸಿ ಇದಕ್ಕೆ ಪ್ರತ್ಯೇಕ ಶಿಕ್ಷಕ ಹಾಗೂ ತರಬೇತಿಯನ್ನು ಕಡ್ಡಾಯಗೊಳಿಸಿತಲ್ಲದೇ ಅಂತರ ಶಾಲಾ ಕ್ರೀಡಾಕೂಟದ ಆಯೋಜನೆಗೆ ಅವಕಾಶ ಕಲ್ಪಿಸಿಕೊಟ್ಟತು. ಇಂತಹ ಅಭಿವೃದ್ಧಿ ಪರ ಸಂಸ್ಥಾನದಲ್ಲಿ ಪುರಾತನ ಕ್ರೀಡೆಗಳು ಬೆಳೆದು ಬಂದ ಬಗೆಯ ಕಿರು ನೋಟ ನೀಡುವಂತಹ ಪ್ರಯತ್ನವನ್ನು ಮಾಡುವ ಉದ್ದೇಶವನ್ನು ಈ ಲೇಖನ ಒಳಗೊಂಡಿದೆ.

Read More »

ಕರ್ನಾಟಕದ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಿಳೆಯರು: ಯಶೋಧರಮ್ಮ ದಾಸಪ್ಪ

ಶಶಿಕುಮಾರ್‌ ಬಿ. ಎಸ್., ಎಲ್. ಪಿ. ರಾಜು

188 to 201

1857ರ ಮಹಾಕ್ರಾಂತಿಯ ನಂತರ ಭಾರತ ರಾಷ್ಟ್ರೀಯ ಕಾಂಗ್ರೇಸ್ ಸ್ಥಾಪನೆಯೊಂದಿಗೆ ದೇಶದ ಸ್ವಾತಂತ್ರ್ಯ ಹೋರಾಟ ವಿಧಾನವು ವೇಗಪಡೆದುಕೊಂಡಿತು, ಅದರಲ್ಲೂ ಗಾಂಧೀಜಿಯವರ ಅಹಿಂಸಾತ್ಮಕ ಯುಗದಲ್ಲಿ ಸ್ವಾತಂತ್ರ್ಯ ಹೋರಾಟವಂತು ದೇಶದ ಮೂಲೆ-ಮೂಲೆಗೂ ಪಸರಿಸಿ, ದೇಶದಲ್ಲಿನ ರೈತರು, ಕಾರ್ಮಿಕರು, ವಿಧ್ಯಾರ್ಥಿಗಳು, ಮಧ್ಯಮ ವರ್ಗದವರು, ಮಹಿಳೆಯರು ಮುಂತಾದ ಎಲ್ಲಾ ವರ್ಗದ ಜನರು ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದರು. ಈ ಕಾಲಾವಧಿಯಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಜ್ವಾಲೆಯಾಗಿ ಹೊರಹೊಮ್ಮಿತು. ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಪುರುಷರೊಂದಿಗೆ ಸ್ತ್ರೀಯರು ಸಹಾ ಸರಿಸಮಾನವಾಗಿ ಭಾಗವಹಿಸಿ, ಅಪಾರ ತ್ಯಾಗ ಮತ್ತು ಕಷ್ಟಸಹಿಷ್ಣುತೆಯೊಂದಿಗೆ ಸ್ವಾತಂತ್ರ್ಯ ಸಾಧನೆಯಲ್ಲಿ ಪುರುಷರೊಂದಿಗೆ ಸಮಾನ ಪಾತ್ರವಹಿಸಿ ವಿಜೃಂಬಿಸಿದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯರು ಅನೇಕರಿದ್ದಾರೆ. ಕನ್ನಡ ನಾಡಿನಲ್ಲಿ ಬ್ರಿಟೀಷರ ಹೋರಾಟ ನೆಡೆಸಿದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯರಲ್ಲಿ ಯಶೋಧರಮ್ಮ ದಾಸಪ್ಪರವರು ಗಾಂಧೀಜಿಯವರ ರಚನಾತ್ಮಕ ಸಿದ್ಧಾಂತಗಳಿಂದ ಪ್ರೇರಣೆಗೊಂಡು, ಸಮಾಜ ಸೇವಕಿಯಾಗಿ, ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ, ಶೋಷಿತ ಮಹಿಳಾ ವರ್ಗದ ದ್ವನಿಯಾಗಿ, ಬಡವರ ಉನ್ನತಿಗಾಗಿ, ಮೈಸೂರು ಸಂಸ್ಥಾನದ ಜವಾಬ್ದಾರಿ ಸರ್ಕಾರದ ಸ್ಥಾಪನೆಗಾಗಿ ನೆಡೆದ ಹೋರಾಟದಲ್ಲಿ ತೊಡಗಿ, ರಾಜ್ಯದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ತಮ್ಮ ಹೆಗ್ಗುರುತು ನೀಡಿ, ಉತ್ತಮ ಸಮಾಜ ಸೇವಕಿ ಮತ್ತು ರಾಜಕಾರಿಣಿಯಾಗಿ ತಮ್ಮನ್ನು ಸಂಪೂರ್ಣ ಸಮರ್ಪಣಾಭಾವದಿಂದ ತೊಡಗಿಸಿಕೊಂಡು ಕಾರ್ಯನಿರ್ವಹಿಸಿದ ಮಹಾನ್ ನಾಯಕಿಯಾಗಿದ್ದಾರೆ.

Read More »

ಭಾರತದ ಇತಿಹಾಸ ರಚನೆಯಲ್ಲಿ ಚಾರಿತ್ರಿಕ ದಾಖಲೆಗಳಾಗಿ ಸ್ಥಳನಾಮಗಳ ಅಧ್ಯಯನ

ದರ್ಶನ್ ಕುಮಾರ್ ಕೆ. ಎಸ್.

202 to 215

'ಇತಿ' ಎಂದರೆ ಇದು ಹೀಗೆ ಎಂದರ್ಥ. ಇದು ಹೀಗೆ ನಡೆದದ್ದು ಎಂದು ತಿಳಿಸಿಕೊಡುವುದು ಇತಿಹಾಸ. ಪ್ರತಿಯೊಂದಕ್ಕೂ ತನ್ನದೇ ಆದ ಇತಿಹಾಸ ಇರುತ್ತದೆ. ಇತಿಹಾಸ ಮರೆತವರು ಇತಿಹಾಸ (ದಾಖಲೆ) ಸೃಷ್ಟಿಸಲಾರರು ಎಂಬ ಮಾತು ಇತಿಹಾಸಕ್ಕಿರುವ ಅರ್ಥ, ವ್ಯಾಪ್ತಿಯನ್ನು ಸೂಚಿಸುತ್ತದೆ. ಹಾಗೆಯೇ ಸ್ಥಳನಾಮಗಳಿಗೂ ಅದರದೇ ಆದ ಅನನ್ಯವಾದ ಇತಿಹಾಸ ಕುತೂಹಲಕರವಾಗಿದೆ. ಇತಿಹಾಸವನ್ನು ಮುಖ್ಯವಾಗಿ ಆಧರಿಸಿಯೇ ಸ್ಥಳನಾಮಗಳ ಅಧ್ಯಯನ ಇತ್ತೀಚೆಗೆ ಹೆಚ್ಚಾಗಿ ಸಾಗುತ್ತಿದೆ. “Toponomy' (ಸ್ಥಳನಾಮಗಳ ಅಧ್ಯಯನ) ಹಿನ್ನೆಲೆಯಲ್ಲಿ ಇದನ್ನು ನಾವು ಕಾಣಬಹುದಾಗಿದೆ. ಇಂಗ್ಲೀಷ್‌ನಲ್ಲಿ ಸ್ಥಳನಾಮಶಾಸ್ತ್ರವನ್ನು ‘Toponomy' ಎಂದು ಕರೆಯುತ್ತಾರೆ. ಇದು ಮೂಲತಃ ಗ್ರೀಕ್‌ನ 'Topos' ಮತ್ತು 'Namos' ಎಂಬ ಎರಡು ಸಂಯುಕ್ತ ಪದಗಳಿಂದ ಬಂದುದಾಗಿದೆ. ಇಂದು ಶಾಸನತಜ್ಞರ, ಭಾಷಾಶಾಸ್ತ್ರಜ್ಞರ ಮತ್ತು ಮಾನವಶಾಸ್ತ್ರಜ್ಞರ ಗಮನ ಸೆಳೆದಿರುವ ಅನೇಕ ವಿಚಾರಗಳಲ್ಲಿ ಸ್ಥಳನಾಮಗಳ ಅಧ್ಯಯನವೂ ಒಂದು. ಈ ಅಧ್ಯಯನ ವ್ಯಾಪ್ತಿಯೊಳಗೆ ನಗರ, ಊರು, ಬೆಟ್ಟ-ಗುಡ್ಡ, ಹಳ್ಳ-ನದಿ, ಕಾಲುವೆ-ಸರೋವರ, ಬೀದಿ-ಓಣಿ, ಅಗ್ರಹಾರ-ದೇವಾಲಯ, ನಾಡು ಹೀಗೆ ಅನೇಕ ಸ್ಥಳಗಳ ವಿಚಾರಗಳು ಸೇರಿವೆ.

Read More »

ಮಹಿಳಾ ಸಬಲೀಕರಣ ಮತ್ತು ವೈಷ್ಣವ ಧರ್ಮ

ಪವಿತ್ರ ಸಿ. ಎಸ್.

216 to 230

ನನ್ನ ಸಂಶೋಧನಾ ಲೇಖನದಲ್ಲಿ ನಾನು "ಮಹಿಳಾ ಸಬಲೀಕರಣ ಮತ್ತು ವೈಷ್ಣವ ಧರ್ಮ” ಎಂಬ ವಿಷಯವನ್ನು ಕುರಿತು ಸಂಶೋಧನಾ ಪ್ರಬಂಧವನ್ನು ಮಂಡಿಸಲು ಪ್ರಯತ್ನಿಸಿರುತ್ತೇನೆ. ಈ ದಿಕ್ಕಿನಲ್ಲಿ ವೈಷ್ಣವ ಧರ್ಮ ಮಹಿಳಾ ಸಬಲೀಕರಣಕ್ಕೆ ಯಾವ ರೀತಿಯ ಕೊಡುಗೆ ನೀಡಿದೆ? ಮಹಿಳೆಯರ ಸ್ಥಾನಮಾನದ ಸುಧಾರಣೆಗೆ ವೈಷ್ಣವ ಧರ್ಮದ ಕೊಡುಗೆ ಏನು? ಭಾರತದ ದೇಶದಲ್ಲಿ ಮಹಿಳೆಗೆ ಮಹತ್ವದ ಸ್ಥಾನವಿದೆ ಅಲ್ಲದೆ ಸಾಂಸ್ಕೃತಿಕವಾಗಿ ಮಹಿಳೆಯ ಸ್ಥಾನಮಾನ ಮಹತ್ವಪೂರ್ಣವಾಗಿದೆ. “ಯತ್ರ ನಾರ್ಯಂತು ಪೂಜ್ಯಂತೆ ರಮಂತೆ ತತ್ರ ದೇವತಾ” [ಎಲ್ಲಿ ನಾರಿಯನ್ನು ಪೂಜಿಸಲಾಗುವುದೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ] ಎಂದು ನಮ್ಮ ಪುರಾಣಗಳಲ್ಲಿ ಘೋಷಿಸಿವೆ. ಮಹಿಳೆ ಪುರುಷನಿಗೆ ಆಧಾರ ಸ್ಥಂಭದಂತಿದ್ದಳು. ಪುರುಷನ ಸರ್ವತೋಮುಖ ಅಭಿವೃದ್ಧಿಯಲ್ಲಿ ಜವಾಬ್ದಾರಿಯುತ ಕಾರ್ಯ ನಿರ್ವಹಿಸುತ್ತಾಳೆ. ಹಾಗಾಗಿ ಮಹಿಳೆಯರಿಗೆ ವೈಷ್ಣವ ಧರ್ಮ ಯಾವ ರೀತಿಯ ಸವಲತ್ತುಗಳನ್ನು ನೀಡಿದೆ ಎಂಬ ವಿಷಯವನ್ನು ಕುರಿತು ಇಲ್ಲಿ ವಿಶ್ಲೇಷಿಸಿರುತ್ತೇನೆ.

Read More »

ವೃತ್ತಿ ಹಾಗೂ ಕುಟುಂಬ ನಿರ್ವಹಣೆ: ಆಧುನಿಕ ಭಾರತೀಯ ಮಹಿಳೆಯ ಸವಾಲುಗಳು

ಲಕ್ಷ್ಮಿ ಎಸ್. ಎಸ್.

231 to 242

ಭಾರತ ದೇಶವು ತನ್ನ ಶ್ರೀಮಂತ ಸಂಸ್ಕೃತಿ ಮೌಲ್ಯಗಳು ಹಾಗೂ ಪರಂಪರೆಗೆ ವಿಶ್ವದಲ್ಲಿಯೇ ಪ್ರಸಿದ್ಧವಾಗಿದೆ. ಭಾರತೀಯ ಮಹಿಳೆಯು ಅನಾದಿ ಕಾಲದಿಂದಲೂ ಪತ್ನಿಯಾಗಿ, ಮಗಳಾಗಿ, ತಾಯಿಯಾಗಿ, ಕುಟುಂಬದ ಪೋಷಕಿಯಾಗಿ ಹಲವಾರು ಪಾತ್ರಗಳನ್ನು ಬಹಳ ಗೌರವಯುತವಾಗಿ ನಿರ್ವಹಿಸುತ್ತಾ ಬಂದಿದ್ದಾಳೆ. 21ನೆಯ ಶತಮಾನದಲ್ಲಿ ಜಾಗತಿಕರಣದ ಹಿನ್ನಲೆಯಲ್ಲಿ ಭಾರತೀಯ ಮಹಿಳೆಯು ಕುಟುಂಬವಷ್ಟೆ ಅಲ್ಲದೆ ಮನೆಯ ಹೊರಗಿನ ಕೆಲಸ ಕಾರ್ಯಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾಳೆ. ಕೇವಲ ಕುಟುಂಬ ನಿರ್ವಹಣೆಗೆ ಮಾತ್ರ ಸೀಮಿತವಾಗಿರದೆ ಆಕೆಯ ವೃತಿ ಬದುಕಿನಲ್ಲಿಯೂ ಕೂಡ ಯಶಸ್ಸನ್ನು ಕಾಣುತ್ತಿದ್ದಾಳೆ. ಕುಟುಂಬದ ಆರ್ಥಿಕ ಸ್ಥಿತಿಗಳನ್ನು ಸುಧಾರಿಸಲು ಆಕೆಯ ಕೊಡುಗೆ ಮಹತ್ವ ಪಡೆದಿದೆ. ಆದರೆ ಕುಟುಂಬ ಹಾಗೂ ವೃತ್ತಿ ಬದುಕು ಎರಡನ್ನೂ ಸಮಾನವಾಗಿ ನಿರ್ವಹಿಸುವುದು ಆಧುನಿಕ ಭಾರತೀಯ ಮಹಿಳೆಗೆ ದೊಡ್ಡ ಸವಾಲಾಗಿದೆ. ಕುಟುಂಬ ವೃತ್ತಿ ಹಾಗೂ ಆಕೆಯ ಆರೋಗ್ಯ ಮತ್ತು ಸುಖ ಎಂದು ಬಂದಾಗ ಬಹಳಷ್ಟು ಬಾರಿ ಆಕೆ ಯಾವುದಾದರೊಂದು ತ್ಯಾಗ ಮಾಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಬದಲಾದ ಕಾಲಮಾನ ಮತ್ತು ಪರಿಸ್ಥಿತಿಗಳಲ್ಲಿ ಮಹಿಳೆಯ ಕುಟುಂಬ ಹಾಗೂ ವೃತ್ತಿಯ ಸಮತೋಲನ ನಿರ್ವಹಣೆಗಿರುವ ಸವಾಲುಗಳನ್ನು ಚರ್ಚಿಸುತ್ತದೆ.

Read More »

ಮಹಿಳಾ ಪತ್ರಿಕೋದ್ಯಮಿ ಎಂ. ಆರ್. ಲಕ್ಷಮ್ಮ

ಮಂಜುಳ ಎ. ಸಿ.

243 to 253

ಮಹಿಳೆಯರ ಮುನ್ನಡೆಯಿಂದ ದೇಶದ ಪ್ರಗತಿ ಸಾಧ್ಯ ಎಂದು ಮನಗಂಡು ಮಹಿಳೆಯರ ಸಬಲೀಕರಣಕ್ಕೆ ತಮ್ಮ ಬದುಕನ್ನೆ ಮುಡಿಪಾಗಿಟ್ಟು, ಅವರಿಗೆ ಸ್ಪೂರ್ತಿಯ ಚಿಲುಮೆಯಾಗಿ ಅವರ ಬದುಕಿನ ಅಭ್ಯುದಯಕ್ಕಾಗಿ ನಿಸ್ವಾರ್ಥ ಸೇವಾ ಮನೋಭಾವದಿಂದ ದುಡಿದವರಲ್ಲಿ ಎಂ.ಆರ್. ಲಕ್ಷಮ್ಮನವರು ಒಬ್ಬರು. ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಪುರುಷರಷ್ಟೇ ಸರಿಸಮಾನರಾಗಿ ಅನೇಕ ಮಹಿಳೆಯರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು ಹಾಗೂ ಗಾಂಧೀಜಿರವರ ಪ್ರಭಾವಕ್ಕೆ ಒಳಗಾಗಿ ಸಮಾಜ ಸುಧಾರಣೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅಂತಹ ಮಹಿಳೆಯರಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ, ಸಮಾಜ ಸುಧಾರಕರು, ಪತ್ರಿಕೋದ್ಯಮಿ, ಮಹಿಳಾ ಚಿಂತಕರು ಮತ್ತು ರಾಜಕಾರಣಿಗಳಲ್ಲಿ ಲಕ್ಷಮ್ಮನವರು ಅಗ್ರಗಣ್ಯರಾಗಿದ್ದಾರೆ. ಅವರು ದೀನದಲಿತರ, ನಿರ್ಗತಿಕ ಹೆಣ್ಣು ಮಕ್ಕಳ ಏಳಿಗೆಗಾಗಿ ದುಡಿದು ತಮ್ಮ ಜೀವನದ ಕೊನೆಯವರೆಗೂ ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದರು. ಎಂ.ಆರ್. ಲಕ್ಷಮ್ಮರವರು ಪುರುಷ ಪ್ರಧಾನ ಸಮಾಜದಲ್ಲಿ ಪತ್ರಕೋದ್ಯಮ ಕ್ಷೇತ್ರಕ್ಕೆ ಕಾಲಿಟ್ಟು ಮಹಿಳಾ ಪತ್ರಿಕೋದ್ಯಮದ ಇತಿಹಾಸದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು.

Read More »

MYSORE DUSSEHRA AS A CULTURAL HERITAGE TOURISM DESTINATION: EXPLORING COMPETITIVENESS IN TRAVEL AND TOURIST GRATIFICATION.

Krishna Murthy B. Y.

254 to 269

Cultural tourism has most potential impact on travelers and has a huge competition in tourism arcade. As we all know tourism industry was one of the most effected sector during pandemic period. In India, Mysore Dussera is one of the tourism destination center that stands as a beacon of cultural heritage, drawing tourists from across the globe to witness its ten-day extravaganza. This paper is an attempt to investigate on travel and tourism competitiveness and aims to examine the impact of experienced and inexperienced tourist gratification and perception. Adopting the survey method with structured questionnaires for the tourist's during 2023 (post pandemic era). In the conclusion, the study explores the most influential dimensions in tourism competitiveness and aims to provide a comprehensive understanding of tourist gratification on Mysore Dussera.

Read More »

Growth of banking services in Mysore Province before and after India's Independence: A Descriptive Study

Sreenivasa K. M., Sandeep K.

270 to 282

The article refers to banking services in the Mysore region helps to decipher not only the trajectory of financial development but also its profound implications for the broader socio-economic fabric of the region, shedding light on the correlation between financial inclusivity and overall economic prosperity. The Mysore province had a vibrant indigenous banking system that played a crucial role in meeting the financial needs of the local populace. These indigenous practices were significant, especially in rural areas where formal banking services were limited or inaccessible. Some prevalent indigenous banking practices in Mysore province included.

Read More »

ROLE OF NON-GOVERNMENTAL ORGANIZATIONS IN REHABILITATING AND EMPOWERING DESTITUTE WOMEN IN MYSURU

ANURADHA A.S.

283 to 287

This study postulate the importance of NGO'S in destitute women life in Mysuru and the way they opt to rehabilitate and empower them. Every human being has a right to live a life of dignity and peace. The basic amenities of all human-beings include food, shelter and clothes. Absence of any of these three elements leads to a life of misery and vulnerability. The word Destitution brings the notion of inability to meet basic needs. A destitute woman is defined here as a female without adequate means of support. 'Destitute 'in relation to a woman means any female who has no independent source of livelihood or is not being looked after by any family members or relative. Mysuru is the third largest city in the state of Karnataka. Mysuru can be considered as home for destitutes. Nalvadi krishnaraja Wodeyar established home for destitute widows later on inorder to educate them Maharani's college was formed. He also Encouraged re-marriage of widow and destitute women. This city has many Non-Government Organizations that run at no profit. These NGOs work towards the survival and betterment of Destitute women. These NGOs are supported by many corporate groups and individuals. Even in Mysore, the public contribution to NGOs is getting higher. They incessantly work towards destitute women rehabilitation and empowerment.

Read More »

Evolution of the Composition and Functioning of the Mysore Representative Assembly: Towards Inclusive Governance

Venkatesha Murthy S.V., Murali K. V.

288 to 300

This comprehensive research article delves into the profound evolution of governance structures, electoral reforms, and the operational dynamics of the Mysore Representative Assembly during the transformative phase of Indian history. It meticulously analyzes the progressive reforms initiated by Lord Ripon in British India and their subsequent influence on local governance and the establishment of representative institutions. The article elucidates how the focus on self-governance and liberal democracy under Lord Ripon's governance laid the groundwork for the introduction of local self-governance in British India, subsequently inspiring similar systems in Princely States. It details the evolution of the Mysore Representative Assembly, highlighting its composition, reforms in the electoral system, and the impactful functioning of the Assembly. Furthermore, the research elucidates the aspirations, demands, and unity among the Assembly members, shedding light on their pursuit of privileges, procedural improvements, and the complexities of balancing individual benefits with the nobility of public service. The study culminates in an exploration of the appreciation for the Mysore Representative Assembly's progressive electoral reforms by local and national figures, emphasizing its forward-thinking nature and positive contributions to governance and public representation. Overall, this research article presents a comprehensive narrative of the evolutionary journey of local governance and representative institutions during a transformative phase in Indian history.

Read More »

Economic Structures of Trade and Commerce in Mysore: Analysis and Implications for Development

Madhu G., G. V. Narasimhan

301 to 309

Economic structures of trade and commerce play a pivotal role in developing regions. This study analyses the economic structures of trade and commerce in Mysore, aiming to uncover their implications for development. By examining historical economic patterns and trade dynamics, this study seeks to provide insights into the factors influencing the financial landscape of Mysore. In addition, this study explores the potential developmental implications of these economic structures, shedding light on how they may affect various facets of the region's growth. Through a comprehensive analysis, this research endeavours to contribute to a deeper understanding of the intricate relationship between trade and commerce structures and the overall development of Mysore.

Read More »