ಮೈಸೂರು ಸಂಸ್ಥಾನದಲ್ಲಿನ ರಾಜಾಶ್ರಯದ ಕ್ರೀಡೆಗಳು: ಒಂದು ನೋಟ

Main Article Content

ವಸಂತ ಪೂರ್ಣಿಮ

Abstract

ಹೆಸರೇ ಹೇಳುವಂತೆ 'ಮೈ ಮನ ಸೂರೆಗೊಳ್ಳುವ' ಮೈಸೂರು ಜಗದ್ವಿಖ್ಯಾತವಾಗಿರುವುದು ತನ್ನ ವಿಶಿಷ್ಟ ಸಾಂಸ್ಕೃತಿಕ ಕೊಡುಗೆ ಹಾಗೂ ಸಾಮಾಜಿಕ ಸುಧಾರಣೆಗಳಿಂದ. ಬ್ರಿಟಿಷ್ ಪ್ರಭುತ್ವದಡಿಯಲ್ಲೋ ಅಥವಾ ತನ್ನ ಆಧುನಿಕ ಸುಧಾರಣಿಗಳಿಂದಲೋ ಮೈಸೂರಿನ ಸರ್ವತೋಮುಖ ಅಭಿವೃದ್ಧಿಗೆ ನೆರವಾದ ಮೈಸೂರಿನ ಆಳರಸರು ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ರಾಜ ಪ್ರಭುತ್ವ ಕಾಲದಲ್ಲಿ ಯುದ್ಧ ವಿದ್ಯೆ ಅಥವಾ ಸೈನಿಕ ಕಲೆಗಳೆನಿಸಿಕೊಂಡಿದ್ದ ಕುದುರೆ ಸವಾರಿ, ಕತ್ತಿವರಸೆ, ಕುಸ್ತಿ, ಬಿಲ್ಲುಗಾರಿಕೆ, ಭರ್ಜಿ ಎಸೆತ, ಪೋಲೋ, ಕವಾಯಿತು, ವ್ಯಾಯಾಮ ಮೊದಲಾದವು ಇಂದು ಕ್ರೀಡಾಕ್ಷೇತ್ರಕ್ಕೆ ಸೇರ್ಪಡೆಗೊಂಡು ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಈ ನಿಟ್ಟಿನಲ್ಲಿ ಮೈಸೂರು ಸಂಸ್ಥಾನ ತೆಗೆದುಕೊಂಡ ನಿಲುವುಗಳು ನಿಜಕ್ಕೂ ಅಧ್ಯಯನಕ್ಕೆ ಅರ್ಹವಾದವು. ದಸರಾ ಹಬ್ಬದ ಸಂದರ್ಭದಲ್ಲಿ ವಿಶೇಷ ಕ್ರೀಡಾಕೂಟಗಳನ್ನು ಏರ್ಪಡಿಸಿ ದೇಶ ವಿದೇಶಗಳಿಂದ ಕ್ರೀಡಾಪಟುಗಳನ್ನು ಆಮಂತ್ರಿಸುವ ಮೂಲಕ ಸಮಕಾಲೀನ ಸಂಸ್ಥಾನಗಳ ನಡುವೆ ವಿಭಿನ್ನವಾಗಿ ನಿಲ್ಲುವ ಮೈಸೂರು, ಆಂಗ್ಲೋ ಮೈಸೂರು ಯುದ್ಧಗಳ ನಂತರ ಬ್ರಿಟಿಷರ ಪ್ರಭಾವಕ್ಕೆ ಒಳಗಾಗಿ ಆಧುನೀಕರಣಕ್ಕೆ ಬಹಳ ಬೇಗ ಒಗ್ಗಿಕೊಂಡು ಕ್ರೈಸ್ತ ಮಿಷನರಿಗಳ ಹಾದಿಯಲ್ಲಿಯೇ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಮುಂದಾಗಿ ಇದರಲ್ಲಿ ದೈಹಿಕ ಶಿಕ್ಷಣದ ಅಗತ್ಯತೆಯನ್ನು ಮನಗಂಡು ಅದನ್ನು ಶಾಲಾ ಕೋರ್ಸ್ನ ಭಾಗವೆಂದು ಪರಿಗಣಿಸಿ ಇದಕ್ಕೆ ಪ್ರತ್ಯೇಕ ಶಿಕ್ಷಕ ಹಾಗೂ ತರಬೇತಿಯನ್ನು ಕಡ್ಡಾಯಗೊಳಿಸಿತಲ್ಲದೇ ಅಂತರ ಶಾಲಾ ಕ್ರೀಡಾಕೂಟದ ಆಯೋಜನೆಗೆ ಅವಕಾಶ ಕಲ್ಪಿಸಿಕೊಟ್ಟತು. ಇಂತಹ ಅಭಿವೃದ್ಧಿ ಪರ ಸಂಸ್ಥಾನದಲ್ಲಿ ಪುರಾತನ ಕ್ರೀಡೆಗಳು ಬೆಳೆದು ಬಂದ ಬಗೆಯ ಕಿರು ನೋಟ ನೀಡುವಂತಹ ಪ್ರಯತ್ನವನ್ನು ಮಾಡುವ ಉದ್ದೇಶವನ್ನು ಈ ಲೇಖನ ಒಳಗೊಂಡಿದೆ.

Article Details

Section

Research Articles

Author Biography

ವಸಂತ ಪೂರ್ಣಿಮ

ಸಹಾಯಕ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಸ.ಪ್ರ.ದ.ಕಾಲೇಜು ಶಿರಹಟ್ಟಿ.

How to Cite

ವಸಂತ ಪೂರ್ಣಿಮ. (2024). ಮೈಸೂರು ಸಂಸ್ಥಾನದಲ್ಲಿನ ರಾಜಾಶ್ರಯದ ಕ್ರೀಡೆಗಳು: ಒಂದು ನೋಟ. ಅಕ್ಷರಸೂರ್ಯ (AKSHARASURYA), 3(04), 181 to 187. https://aksharasurya.com/index.php/latest/article/view/738

References

ಭಾರತಿ ಎಚ್. ಎಮ್. (2021). ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಆಳ್ವಿಕೆ, ಆಡಳಿತ ಮತ್ತು ಸುಧಾರಣೆಗಳು: ಒಂದು ಅಧ್ಯಯನ 1902-1941. ಪಿಎಚ್.ಡಿ ಮಹಾಪ್ರಬಂಧ. ಸಬ್ಬಿಟೆಡ್ ಟು ಯುನಿವರ್ಸಿಟಿ ಆಫ್ ಮೈಸೂರು.

ಅನಿತ ಎಮ್. ಎಸ್. (2016). ಆಧುನಿಕ ಮೈಸೂರಿನ ಇತಿಹಾಸದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪರಿವರ್ತನಾಶೀಲ ಸಂಪ್ರದಾಯಬದ್ದ ಸಮಾಜದ ಮೇಲೆ ಪಾಶ್ಚಿಮಾತ್ಯ ಪ್ರಭಾವ: ಒಂದು ಸಮಗ್ರ ಅಧ್ಯಯನ 1894-1940. ಪಿಎಚ್.ಡಿ. ಮಹಾಪ್ರಬಂಧ. ಸಬ್ಬಿಟೆಡ್ ಟು ಯುನಿವರ್ಸಿಟಿ ಆಫ್ ಮೈಸೂರು.

ಮಂಜುನಾಥ್ ಎಸ್. ಜೆ. (2016). ಮೈಸೂರು ಅರಮನೆ ಆಡಳಿತದಲ್ಲಿ ಪೋಲೀಸ್ ವ್ಯವಸ್ಥೆ: ಒಂದು ಸಾಂಸ್ಕೃತಿಕ ಅಧ್ಯಯನ 1868-1940. ಪಿಎಚ್.ಡಿ. ಮಹಾಪ್ರಬಂಧ. ಸಬ್ಬಿಟೆಡ್ ಟು ಯುನಿವರ್ಸಿಟಿ ಆಫ್ ಮೈಸೂರು.

ಚಿಕ್ಕಮಾದು ಎನ್. ಎನ್. (2019). ಅಭಿವೃದ್ಧಿಯ ಹರಿಕಾರ ನಾಲ್ವಡಿ ಕೃಷ್ಣರಾಜ ಒಡೆಯರು. ಪ್ರೇಮ ಪ್ರಕಾಶನ, ಮೈಸೂರು.

Nandagopal Choodamani. (2012). Ganjifa: The Indian playing cards, Aventure. The Jain University Quarterly Journal.

Sampath Vikram. (2008). Splendours of royal Mysore the untold story of the Wodeyars. New Delhi.

Nagendra Prasad S. (08 Aug 2019). Hunting a royal pastime. Deccan Herald. https://www.deccanherald.com/india/karnataka/hunting-a-royal-pastime-751724.html