ಮಿಡಿಗೇಶಿಯ ಇತಿಹಾಸ ರಚನೆಯಲ್ಲಿ ಮಹಿಳೆಯರ ಪಾತ್ರ
Main Article Content
Abstract
ಮಿಡಿಗೇಶಿಯ ಇತಿಹಾಸವನ್ನು ಸಮಗ್ರವಾಗಿ ನೋಡಿದಾಗ ಮಿಡಿಗೇಶಿಯು ಹಲವು ಪಾಳೆಪಟ್ಟುಗಳ ಆಡಳಿತಕ್ಕೆ ಒಳಪಟ್ಟಿರುವುದನ್ನು ಕಾಣಬಹುದಾಗಿದೆ. ಇಂತಹ ಮಿಡಿಗೇಶಿಯ ಇತಿಹಾಸವನ್ನು ಸಂಶೋಧನಾ ವಿಷಯವನ್ನಾಗಿ ನೋಡಿದಾಗ ಇದಕ್ಕೆ ಮಿಡಿಗೇಶಿ ಎಂದು ಹೆಸರು ಬರಲು ಪ್ರಮುಖ ಕಾರಣ ಒರ್ವ ಮಹಿಳೆ ಎಂದು ಅನೇಕ ದಾಖಲೆಗಳಲ್ಲಿ ಪ್ರಕಟವಾಗಿರುವುದನ್ನು ಕಾಣಬಹುದಾಗಿದೆ. ಈ ದಾಖಲೆಗಳ ಅನುಸಾರ ಮಿಡಿಗೇಶಿ ಎಂಬ ಹೆಸರಿನ ಐತಿಹ್ಯ, ಆಕೆಯ ಜೊತೆಗಿನ ಸಂಭಾಷಣೆಯು ಯುದ್ಧಕ್ಕೆ ಕಾರಣವಾಗಿ ಸಂಸ್ಥಾಪಕನ ಸಾವದ ಬಗೆಗಿನ ವಿವರಣೆಯನ್ನು ಗಮನಿಸಬಹುದಾಗಿದೆ. ಮಿಡಿಗೇಶಿ ಬೆಟ್ಟದ ಮೇಲಿರುವ ಬೃಹತ್ ಬಂಡೆಯ ಮೇಲೆ ಕೆತ್ತಲಾಗಿರುವ ಹೆಣ್ಣಿನ ಮೂರ್ತಿಯು ಸತಿಸಹಗಮನ ಮಾಡಿದ ಬಗೆಗಿನ ಉಲ್ಲೇಖಗಳನ್ನು ಐತಿಹ್ಯಗಳನ್ನು ಗಮನಿಸಬಹುದಾಗಿದೆ. ಪಾಳೇಗಾರರ ಆಡಳಿತದಲ್ಲಿ ಮಹಿಳೆಯ ಪಾತ್ರ, ಅವರಿಗಿದ್ದ ಸ್ಥಾನಮಾನಗಳು, ಅಧಿಕಾರಗಳು ಅವರ ಕಾಲದಲ್ಲಿ ನಡೆದ ಘಟನೆಗಳ ಪುನರ್ ಅವಲೋಕನ ಮತ್ತು ವಿಮರ್ಶೆಗೆ ಒಳಪಡಿಸಬೇಕಾಗಿದೆ. ಶಾಸನಗಳಲ್ಲಿ ಮಹಿಳೆಯರು, ಮಾಸ್ತಿಕಲ್ಲುಗಳು ಅಂದಿನ ಕಾಲದ ಮಹಿಳೆಯರ ಜನಜೀವನದ ಬಗ್ಗೆ ಅರಿತಕೊಳ್ಳಲು ಮಿಡಿಗೇಶಿಯ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಅಧ್ಯಯನ ಮಾಡಲು ಸಹಕಾರಿಯಾಗಿದೆ. ದೇವಸ್ಥಾನದ ಆವರಣದಲ್ಲಿ ಮಹಿಳೆ ಬೆಂಕಿಗಾಹುತಿಯಾದ ಬಗ್ಗೆ ಶಾಸನವಿದ್ದು ಅದರ ಬಗೆಗಿನ ವಿವರಣೆ ಕಾಣಬಹುದಾಗಿದೆ. ಸುಮಾರು 8 ಶತಮಾನಗಳ ಅವಧಿಯಲ್ಲಿ ಪಾಳೆಗಾರರು ಮೈಸೂರು ಸಂಸ್ಥಾನದೊಂದಿಗಿನ ಸಂಬಂಧ ವಿವರಿಸುವದು, ವಿವಿಧ ವಿದೇಶಿ ಪ್ರವಾಸಿಗರ ಕೈಫಿಯನ್ಗಳ ದಾಖಲೆಗಳನ್ನು ಪರಿಶೀಲಿಸಿ ಅಧ್ಯಯನ ಮಾಡುವುದು ಲೇಖನದ ಉದ್ದೇಶವಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ವಸು ಎಂ. ವಿ. (ಸಂ), (2001), ದಕ್ಷಿಣ ಭಾರತದ ಅರಸುಮನೆತನಗಳು. ಪ್ರಸಾರಂಗ, ಕನ್ನಡ ವಿಶ್ವ ವಿದ್ಯಾಲಯ, ಹಂಪಿ.
ಕಾವಲಮ್ಮ . (2005), ಮಧುಗಿರಿ ಮಹಾನಾಡಪ್ರಭುಗಳು. ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಬೆಂಗಳೂರು.
ಯೋಗಿಶ್ವರಪ್ಪ ಡಿ. ಎನ್. (2012). ಕಲ್ಪಶೋಧ: ತುಮಕೂರು ಜಿಲ್ಲೆಯ ಸಂಶೋಧನಾ ಲೇಖನಗಳು. ಪ್ರಗತಿ ಗ್ರಾಫಿಕ್ಸ್. ಬೆಂಗಳೂರು.
ಯೋಗಿಶ್ವರಪ್ಪ ಡಿ. ಎನ್. (2021). ನೊಳಂಬ ವಂಶದ ಅರಸು ಮನೆತನಗಳು. ಶ್ರೀಗುರು ಸಿದ್ದರಾಮೇಶ್ವರ ಸಾಹಿತ್ಯ ಸಂಪದ. ತುಮಕೂರು.
ಪರಮಶಿವಮೂರ್ತಿ ಡಿ. ವಿ. (1996). ಸಂಶೋಧನೆಯ ಸಿರಿ: ಕೆಲವು ಪಾಳೆಯಗಾರರ ಅಧ್ಯಯನ. ಗುಣನಿಧಿ ಪ್ರಕಾಶನ, ಬೆಂಗಳೂರು.
ಎಫಿಗ್ರಫಿಯಾ ಕರ್ನಾಟಕ: ಸಂಪುಟ-25. (2021). ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ. ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು. (ಮುಂತಾದವುಗಳು).