ಕರ್ನಾಟಕದ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಿಳೆಯರು: ಯಶೋಧರಮ್ಮ ದಾಸಪ್ಪ

Main Article Content

ಶಶಿಕುಮಾರ್‌ ಬಿ. ಎಸ್.
ಎಲ್. ಪಿ. ರಾಜು

Abstract

1857ರ ಮಹಾಕ್ರಾಂತಿಯ ನಂತರ ಭಾರತ ರಾಷ್ಟ್ರೀಯ ಕಾಂಗ್ರೇಸ್ ಸ್ಥಾಪನೆಯೊಂದಿಗೆ ದೇಶದ ಸ್ವಾತಂತ್ರ್ಯ ಹೋರಾಟ ವಿಧಾನವು ವೇಗಪಡೆದುಕೊಂಡಿತು, ಅದರಲ್ಲೂ ಗಾಂಧೀಜಿಯವರ ಅಹಿಂಸಾತ್ಮಕ ಯುಗದಲ್ಲಿ ಸ್ವಾತಂತ್ರ್ಯ ಹೋರಾಟವಂತು ದೇಶದ ಮೂಲೆ-ಮೂಲೆಗೂ ಪಸರಿಸಿ, ದೇಶದಲ್ಲಿನ ರೈತರು, ಕಾರ್ಮಿಕರು, ವಿಧ್ಯಾರ್ಥಿಗಳು, ಮಧ್ಯಮ ವರ್ಗದವರು, ಮಹಿಳೆಯರು ಮುಂತಾದ ಎಲ್ಲಾ ವರ್ಗದ ಜನರು ಬ್ರಿಟೀಷರ ವಿರುದ್ಧ ಸ್ವಾತಂತ್ರ್ಯ ಹೋರಾಟಕ್ಕೆ ದುಮುಕಿದರು. ಈ ಕಾಲಾವಧಿಯಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಜ್ವಾಲೆಯಾಗಿ ಹೊರಹೊಮ್ಮಿತು. ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಪುರುಷರೊಂದಿಗೆ ಸ್ತ್ರೀಯರು ಸಹಾ ಸರಿಸಮಾನವಾಗಿ ಭಾಗವಹಿಸಿ, ಅಪಾರ ತ್ಯಾಗ ಮತ್ತು ಕಷ್ಟಸಹಿಷ್ಣುತೆಯೊಂದಿಗೆ ಸ್ವಾತಂತ್ರ್ಯ ಸಾಧನೆಯಲ್ಲಿ ಪುರುಷರೊಂದಿಗೆ ಸಮಾನ ಪಾತ್ರವಹಿಸಿ ವಿಜೃಂಬಿಸಿದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯರು ಅನೇಕರಿದ್ದಾರೆ. ಕನ್ನಡ ನಾಡಿನಲ್ಲಿ ಬ್ರಿಟೀಷರ ಹೋರಾಟ ನೆಡೆಸಿದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯರಲ್ಲಿ ಯಶೋಧರಮ್ಮ ದಾಸಪ್ಪರವರು ಗಾಂಧೀಜಿಯವರ ರಚನಾತ್ಮಕ ಸಿದ್ಧಾಂತಗಳಿಂದ ಪ್ರೇರಣೆಗೊಂಡು, ಸಮಾಜ ಸೇವಕಿಯಾಗಿ, ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ, ಶೋಷಿತ ಮಹಿಳಾ ವರ್ಗದ ದ್ವನಿಯಾಗಿ, ಬಡವರ ಉನ್ನತಿಗಾಗಿ, ಮೈಸೂರು ಸಂಸ್ಥಾನದ ಜವಾಬ್ದಾರಿ ಸರ್ಕಾರದ ಸ್ಥಾಪನೆಗಾಗಿ ನೆಡೆದ ಹೋರಾಟದಲ್ಲಿ ತೊಡಗಿ, ರಾಜ್ಯದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ತಮ್ಮ ಹೆಗ್ಗುರುತು ನೀಡಿ, ಉತ್ತಮ ಸಮಾಜ ಸೇವಕಿ ಮತ್ತು ರಾಜಕಾರಿಣಿಯಾಗಿ ತಮ್ಮನ್ನು ಸಂಪೂರ್ಣ ಸಮರ್ಪಣಾಭಾವದಿಂದ ತೊಡಗಿಸಿಕೊಂಡು ಕಾರ್ಯನಿರ್ವಹಿಸಿದ ಮಹಾನ್ ನಾಯಕಿಯಾಗಿದ್ದಾರೆ.

Article Details

Section

Research Articles

Author Biographies

ಶಶಿಕುಮಾರ್‌ ಬಿ. ಎಸ್.

ಸಹಾಯಕ ಪ್ರಾಧ್ಯಾಪಕರು, ಇತಿಹಾಸ ವಿಭಾಗ, ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೃಷ್ಣರಾಜಪೇಟೆ, ಮಂಡ್ಯ.

ಎಲ್. ಪಿ. ರಾಜು

ಪ್ರಾಧ್ಯಾಪಕರು, ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಮತ್ತು ಸಂಶೋಧನಾ ವಿಭಾಗ, ತುಮಕೂರು ವಿಶ್ವ ವಿದ್ಯಾಲಯ, ತುಮಕೂರು.

How to Cite

ಶಶಿಕುಮಾರ್‌ ಬಿ. ಎಸ್., & ಎಲ್. ಪಿ. ರಾಜು. (2024). ಕರ್ನಾಟಕದ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಿಳೆಯರು: ಯಶೋಧರಮ್ಮ ದಾಸಪ್ಪ. ಅಕ್ಷರಸೂರ್ಯ (AKSHARASURYA), 3(04), 188 to 201. https://aksharasurya.com/index.php/latest/article/view/739

References

ಸೂರ್ಯನಾಥ ಕಾಮತ್, (1988). ಸ್ವಾತಂತ್ರ್ಯ ಹೋರಾಟದ ಹಲವು ಮುಖಗಳು. ಬುರ್ಲಿಬಿಂದುಮಾಧವ ಸ್ಮಾರಕ ಪ್ರತಿಷ್ಠಾನ. ಹುಬ್ಬಳ್ಳಿ.

ಪ್ರಾಣೇಶ ರಾವ್ ಬಿ. ಆರ್. (1999). ಭಾರತದ ಸ್ವಾತಂತ್ರ್ಯ ಹೋರಾಟದ ಮೇರು ವ್ಯಕ್ತಿಗಳು. ನವಭಾರತೀ ಪ್ರಕಾಶನ, ಮೈಸೂರು.

ಪ್ರಾಣೇಶ ರಾವ್ ಬಿ. ಆರ್. (1994). ಯಶೋಧರಮ್ಮ ದಾಸಪ್ಪ ಮತ್ತು ಎಚ್ ಸಿ ದಾಸಪ್ಪ ಜೀವನ ಮತ್ತು ಸಾಧನೆ. ನವಭಾರತೀ ಪ್ರಕಾಶನ, ಮೈಸೂರು.

ಇಂದಿರ ಪಿ. ಬಿ. (2003). ಸಾಧನೆಯ ಹಾದಿಯಲ್ಲಿ. ನವಭಾರತೀ ಪ್ರಕಾಶನ. ಮೈಸೂರು.

ಮಹಾದೇವಿ, (2010). ಸ್ವಾತಂತ್ರ್ಯ ಹೋರಾಟಗಾರ್ತಿ ಮತ್ತು ನಮಾಜ ಸುಧಾರಕಿ ಶ್ರೀಮತಿ ಯಶೋಧರಮ್ಮ ದಾಸಪ್ಪ, ಕರ್ನಾಟಕ ಇತಿಹಾಸ ಅಕಾಡೆಮಿ, ಬೆಂಗಳೂರು.

Sarojini shintri K. & Raghavendra Rao. (1983). Women freedom fighters in Karnataka. Dhawad.