ಭಾರತದ ಇತಿಹಾಸ ರಚನೆಯಲ್ಲಿ ಚಾರಿತ್ರಿಕ ದಾಖಲೆಗಳಾಗಿ ಸ್ಥಳನಾಮಗಳ ಅಧ್ಯಯನ
Main Article Content
Abstract
'ಇತಿ' ಎಂದರೆ ಇದು ಹೀಗೆ ಎಂದರ್ಥ. ಇದು ಹೀಗೆ ನಡೆದದ್ದು ಎಂದು ತಿಳಿಸಿಕೊಡುವುದು ಇತಿಹಾಸ. ಪ್ರತಿಯೊಂದಕ್ಕೂ ತನ್ನದೇ ಆದ ಇತಿಹಾಸ ಇರುತ್ತದೆ. ಇತಿಹಾಸ ಮರೆತವರು ಇತಿಹಾಸ (ದಾಖಲೆ) ಸೃಷ್ಟಿಸಲಾರರು ಎಂಬ ಮಾತು ಇತಿಹಾಸಕ್ಕಿರುವ ಅರ್ಥ, ವ್ಯಾಪ್ತಿಯನ್ನು ಸೂಚಿಸುತ್ತದೆ. ಹಾಗೆಯೇ ಸ್ಥಳನಾಮಗಳಿಗೂ ಅದರದೇ ಆದ ಅನನ್ಯವಾದ ಇತಿಹಾಸ ಕುತೂಹಲಕರವಾಗಿದೆ. ಇತಿಹಾಸವನ್ನು ಮುಖ್ಯವಾಗಿ ಆಧರಿಸಿಯೇ ಸ್ಥಳನಾಮಗಳ ಅಧ್ಯಯನ ಇತ್ತೀಚೆಗೆ ಹೆಚ್ಚಾಗಿ ಸಾಗುತ್ತಿದೆ. “Toponomy' (ಸ್ಥಳನಾಮಗಳ ಅಧ್ಯಯನ) ಹಿನ್ನೆಲೆಯಲ್ಲಿ ಇದನ್ನು ನಾವು ಕಾಣಬಹುದಾಗಿದೆ. ಇಂಗ್ಲೀಷ್‌ನಲ್ಲಿ ಸ್ಥಳನಾಮಶಾಸ್ತ್ರವನ್ನು ‘Toponomy' ಎಂದು ಕರೆಯುತ್ತಾರೆ. ಇದು ಮೂಲತಃ ಗ್ರೀಕ್‌ನ 'Topos' ಮತ್ತು 'Namos' ಎಂಬ ಎರಡು ಸಂಯುಕ್ತ ಪದಗಳಿಂದ ಬಂದುದಾಗಿದೆ. ಇಂದು ಶಾಸನತಜ್ಞರ, ಭಾಷಾಶಾಸ್ತ್ರಜ್ಞರ ಮತ್ತು ಮಾನವಶಾಸ್ತ್ರಜ್ಞರ ಗಮನ ಸೆಳೆದಿರುವ ಅನೇಕ ವಿಚಾರಗಳಲ್ಲಿ ಸ್ಥಳನಾಮಗಳ ಅಧ್ಯಯನವೂ ಒಂದು. ಈ ಅಧ್ಯಯನ ವ್ಯಾಪ್ತಿಯೊಳಗೆ ನಗರ, ಊರು, ಬೆಟ್ಟ-ಗುಡ್ಡ, ಹಳ್ಳ-ನದಿ, ಕಾಲುವೆ-ಸರೋವರ, ಬೀದಿ-ಓಣಿ, ಅಗ್ರಹಾರ-ದೇವಾಲಯ, ನಾಡು ಹೀಗೆ ಅನೇಕ ಸ್ಥಳಗಳ ವಿಚಾರಗಳು ಸೇರಿವೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಸಂಗಮೇಶ ಸವದತ್ತಿಮಠ (1990). ದ್ರಾವಿಡ ಭಾಷಾ ವಿಜ್ಞಾನ, ರೂಪರಶ್ಮಿ ಪ್ರಕಾಶನ. ಗುಲ್ಬರ್ಗಾ.
ಕೆಸ್ತೂರು ರಘುಪತಿಭಟ್ಟ, (1979). ತುಳುನಾಡಿನ ಸ್ಥಳನಾಮಗಳು. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.
ವಿಶ್ವನಾಥ. (1996). ಸಕಲೇಶಪುರ ಪರಿಸರದ ಸ್ಥಳನಾಮಗಳು. ದೇವಿ ಪ್ರಕಾಶನ. ಮೈಸೂರು.
ಜೋಶಿ ಶಂ. ಬಾ. (1999). ಎಡೆಗಳು ಹೇಳುವ ಕಂನಾಡಕತೆ. ಕನ್ನಡ ಪುಸ್ತಕ ಪ್ರಾಧಿಕಾರ. ಬೆಂಗಳೂರು.
ಕೆಮ್ಮೂರು ರಘುಪತಿಭಟ್ಟ, (1989), ಹೆಸರಿನಲ್ಲೇನಿದೆ. ನ್ಯೂ ಸ್ಟಾರ್ ಪಬ್ಲಿಕೇಷನ್ಸ್. ಬೆಂಗಳೂರು.
ಜವರೇಗೌಡ ದೇ. (1990). ಸ್ಥಳನಾಮಗಳ ವ್ಯಾಸಂಗ. ಸಹ್ಯಾದ್ರಿ ಪ್ರಕಾಶನ. ಬೆಂಗಳೂರು.
ಪೂಜಾರ ವಿ.ಜಿ. ಗುಲ್ಬರ್ಗಾ ತಾಲ್ಲೂಕಿನ ಸ್ಥಳನಾಮಗಳು: ಭಾಷಿಕ, ಸಾಂಸ್ಕೃತಿಕ ಅಧ್ಯಯನ. ಕರ್ನಾಟಕ ಲೋಚನ. ಸಂಪುಟ 18-19. ಡಿಸೆಂಬರ್ 2005 & ಜೂನ್ 2006. ಸಂಚಿಕೆ 1 ಮತ್ತು 2. ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನ. ಬೆಂಗಳೂರು.