ಸ್ವಾತಂತ್ರ್ಯ ಪೂರ್ವದಲ್ಲಿ ಮಂಡ್ಯ ಜಿಲ್ಲೆಯಲ್ಲಾದ ಸಮಾಜೋ-ರಾಜಕೀಯದ ಸ್ಥಿತ್ಯಂತರ
Main Article Content
Abstract
'ಸಕ್ಕರೆಯ ಸೀಮೆ' ಎಂದು ಪ್ರಖ್ಯಾತಿ ಪಡೆದುಕೊಂಡಿರುವ ಮಂಡ್ಯ ಜಿಲ್ಲೆ ಇಂದು ರಾಜಕೀಯ, ಸಾಮಾಜಿಕ ಹಾಗೂ ಕೃಷಿ ಕ್ಷೇತ್ರದಲ್ಲಿ ತನ್ನದೆಯಾದ ಮಹತ್ವವನ್ನು ಪಡೆದುಕೊಂಡಿದೆ. ಇದಕ್ಕೆಲ್ಲಾ ಕಾರಣ ಮಂಡ್ಯ ಜಿಲ್ಲೆಯ ಜೀವನಾಡಿ ಕನ್ನಂಬಾಡಿ ಕಟ್ಟೆಯಾಗಿದೆ. ಮೈಸೂರಿನ ಅರಸ ನಾಲ್ವಡಿಯವರನ್ನು ರಾಷ್ಟ್ರಪಿತ ಮಹಾತ್ಮಗಾಂಧಿಯವರು ರಾಜರ್ಷಿಯೆಂದು ಕರೆದರು. ಇದಕ್ಕೆ ನಾಲ್ವಡಿಯವರ ಪ್ರಜಾಹಿತಾತ್ಮಕ ಧೋರಣೆಗಳು. ಸರ್ವಾಧಿಕಾರಿಯೊಬ್ಬ ಪ್ರಜಾಸತ್ತಾತ್ಮಕ ಮನೋಭಾವ ತಳೆಯುವುದು ಜಗತ್ತಿನ ರಾಜಕೀಯ ಇತಿಹಾಸದಲ್ಲಿಯೇ ಅಪರೂಪದ ಸಂಗತಿಯಾಗಿದೆ. ಭಾರತದಲ್ಲಿ ಮಾತ್ರವಲ್ಲದೇ ಏಷ್ಯಾ ಖಂಡದಲ್ಲಿಯೇ ಮೊದಲ ಜಲವಿದ್ಯುತ್ ಯೋಜನೆಯನ್ನು ಪ್ರಾರಂಭಿಸಿದ ಕೀರ್ತಿ ನಾಲ್ವಡಿಯವರಿಗೆ ಸಲ್ಲುತ್ತದೆ. ಹಾಗೆಯೇ ಮಂಡ್ಯ ಜಿಲ್ಲೆಯಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟನ್ನು ನಿರ್ಮಿಸಿದರು. ಹೀಗೆ ಒಬ್ಬ ಜವಾಬ್ದಾರಿಯುತ ಮತ್ತು ಸಾಮಾಜಿಕ ಪ್ರಜ್ಞೆಯುಳ್ಳ ಮಹಾರಾಜ ತನ್ನ ನಾಡಿನ ಪ್ರಗತಿಪರ ಕಾರ್ಯಗಳಿಗೆ ಮತ್ತು ಜನತೆಯ ಶ್ರೇಯೋಭಿವೃದ್ಧಿಗೆ ಒತ್ತು ನೀಡಿದ್ದರು. ಈ ಮೂಲಕ ಅವರ ಸಮಾಜೋ-ರಾಜಕೀಯ ನಾಯಕತ್ವವನ್ನು ಗುರುತಿಸಬಹುದಾಗಿದೆ. ಒಟ್ಟಾರೆ ಈ ಜಲಾಶಯದಿಂದ ರೈತರ ಆರ್ಥಿಕ ಸ್ಥಿತಿ ಉತ್ತಮವಾಯಿತು. ಗಾಣಗಳು, ಸಕ್ಕರೆ ಕಾರ್ಖಾನೆಗಳು ತಲೆಯೆತ್ತಿದವು. ಬೆಲ್ಲ, ಸಕ್ಕರೆಯ ಉದ್ಯಮ ಬಿರುಸಾಗಿ ಸಾಗಿತು. ಇಂದು ಮಂಡ್ಯ ಸಕ್ಕರೆನಗರ ಎಂಬ ಖ್ಯಾತಿಗೆ ಪಾತ್ರವಾಗಿದೆ. ಹೀಗೆ ಕೃಷಿಯ ಮೂಲಕ ಮಂಡ್ಯ ಜಿಲ್ಲೆಯ ಸ್ಥಿತ್ಯಂತರಕ್ಕೆ/ಪರಿವರ್ತನೆಗೆ ಕಾರಣವಾದವರು ನಾಲ್ವಡಿಯವರಾಗಿದ್ದಾರೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಲಿಂಗರಾಜು ತಂಡಸನಹಳ್ಳಿ (2020). ಮೇಲುಕೋಟೆ. ಕೀರಟ್ಟಿ ಪ್ರಕಾಶನ, ಮಂಡ್ಯ. ಪು.ಸಂ. 89.
ಅನಿತ ಎಂ. ಎಸ್. (2016). ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್. ಮೈಸೂರು ವಿಶ್ವವಿದ್ಯಾಲಯ ಶತಮಾನೋತ್ಸವದ ಸಂಭ್ರಮಾಚರಣೆ ಸಮಿತಿ, ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು. ಪು.ಸಂ. 152.
ರವಿಕುಮಾರ್ ಚಾಮಲಾಪುರ. (2016). ಮಂಡ್ಯ ಸೊಗಡು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್. ಮಂಡ್ಯ. ಪು.ಸಂ. 211.
Report of the Special Committee constituted on Krishnaraja Sagara Reservior. Bangalore. (1950). P. 12.
ಪ್ರಧಾನ್ ಗುರುದತ್ತ (ಸಂ), (2016). ಮಹಾಯಂತ್ರರ್ಷಿ ಸರ್.ಎಂ.ವಿಶ್ವೇಶ್ವರಯ್ಯ. ಮೈಸೂರು ವಿಶ್ವವಿದ್ಯಾಲಯ ಶತಮಾನೋತ್ಸವದ ಸಂಭ್ರಮಾಚರಣೆ ಸಮಿತಿ, ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು. ಪು.ಸಂ. 30.
ನಿಂಗಣ್ಣ ಬಂಧುಕರ್ (ಸಂ). (2015). ಮಂಡ್ಯ ಜಿಲ್ಲೆಯ ಮುಕುಟು ಮಣಿಗಳು. ಶ್ರೀ ರಾಮ ಪ್ರಕಾಶನ. ಮಂಡ್ಯ. ಪು.ಸಂ. 05, 06.