ಮಹಿಳಾ ಪತ್ರಿಕೋದ್ಯಮಿ ಎಂ. ಆರ್. ಲಕ್ಷಮ್ಮ
Main Article Content
Abstract
ಮಹಿಳೆಯರ ಮುನ್ನಡೆಯಿಂದ ದೇಶದ ಪ್ರಗತಿ ಸಾಧ್ಯ ಎಂದು ಮನಗಂಡು ಮಹಿಳೆಯರ ಸಬಲೀಕರಣಕ್ಕೆ ತಮ್ಮ ಬದುಕನ್ನೆ ಮುಡಿಪಾಗಿಟ್ಟು, ಅವರಿಗೆ ಸ್ಪೂರ್ತಿಯ ಚಿಲುಮೆಯಾಗಿ ಅವರ ಬದುಕಿನ ಅಭ್ಯುದಯಕ್ಕಾಗಿ ನಿಸ್ವಾರ್ಥ ಸೇವಾ ಮನೋಭಾವದಿಂದ ದುಡಿದವರಲ್ಲಿ ಎಂ.ಆರ್. ಲಕ್ಷಮ್ಮನವರು ಒಬ್ಬರು. ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಪುರುಷರಷ್ಟೇ ಸರಿಸಮಾನರಾಗಿ ಅನೇಕ ಮಹಿಳೆಯರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು ಹಾಗೂ ಗಾಂಧೀಜಿರವರ ಪ್ರಭಾವಕ್ಕೆ ಒಳಗಾಗಿ ಸಮಾಜ ಸುಧಾರಣೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅಂತಹ ಮಹಿಳೆಯರಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ, ಸಮಾಜ ಸುಧಾರಕರು, ಪತ್ರಿಕೋದ್ಯಮಿ, ಮಹಿಳಾ ಚಿಂತಕರು ಮತ್ತು ರಾಜಕಾರಣಿಗಳಲ್ಲಿ ಲಕ್ಷಮ್ಮನವರು ಅಗ್ರಗಣ್ಯರಾಗಿದ್ದಾರೆ. ಅವರು ದೀನದಲಿತರ, ನಿರ್ಗತಿಕ ಹೆಣ್ಣು ಮಕ್ಕಳ ಏಳಿಗೆಗಾಗಿ ದುಡಿದು ತಮ್ಮ ಜೀವನದ ಕೊನೆಯವರೆಗೂ ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದರು. ಎಂ.ಆರ್. ಲಕ್ಷಮ್ಮರವರು ಪುರುಷ ಪ್ರಧಾನ ಸಮಾಜದಲ್ಲಿ ಪತ್ರಕೋದ್ಯಮ ಕ್ಷೇತ್ರಕ್ಕೆ ಕಾಲಿಟ್ಟು ಮಹಿಳಾ ಪತ್ರಿಕೋದ್ಯಮದ ಇತಿಹಾಸದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಮಂಜುಳ ಎ. ಸಿ. (2013). ಸ್ವಾತಂತ್ರ್ಯ ಹೋರಾಟಗಾರ್ತಿ ಎಂ. ಆರ್. ಲಕ್ಷಮ್ಮನವರ ಜೀವನ ಮತ್ತು ಸಾಧನೆ. ಎಂ.ಫಿಲ್ ನಿಬಂಧ (ಅಪ್ರಕಟಿತ), ಕನ್ನಡ ವಿಶ್ವವಿದ್ಯಾನಿಲಯ, ಹಂಪಿ.
ರಜತಾದ್ರಿ ಎಸ್. (1920). ಕರ್ನಾಟಕದಲ್ಲಿ ವಯಸ್ಕರ ಶಿಕ್ಷಣ ಹುಟ್ಟು ಮತ್ತು ಬೆಳವಣಿಗೆ. ರಾಜ್ಯ ಸಂಪನ್ಮೂಲ ಕೇಂದ್ರ, ಮೈಸೂರು.
ಲಕ್ಷಮ್ಮ ಎಂ. ಆರ್. (1943), ಕುಂತಿದೇವಿ. ವಯಸ್ಕರ ಶಿಕ್ಷಣ ಪುಸ್ತಕ ಮಾಲೆ. ಮೈಸೂರು.
ಲಕ್ಷಮ್ಮ ಎಂ. ಆರ್. (1944), ಮಾರುತಿ. ವಯಸ್ಕರ ಶಿಕ್ಷಣ ಪುಸ್ತಕ ಮಾಲೆ. ಮೈಸೂರು.
ವೆಂಕಟೇಶ್ ಟಿ. (2009). ಕನ್ನಡದಲ್ಲಿ ನವಸಾಕ್ಷರ ಸಾಹಿತ್ಯ ಒಂದು ಅಧ್ಯಯನ, ವಿಹಂಗಮ ಪ್ರಕಾಶನ, ಮೈಸೂರು.
ನಾಗಲಕ್ಷ್ಮೀ ನಂ. (2000) ಕನ್ನಡ ಪತ್ರಿಕಾಲೋಕದ ಧೀಮಂತರು: ಭಾಗ-08. ಕರ್ನಾಟಕ ಪತ್ರಿಕಾ ಅಕಾಡೆಮಿ, ಬೆಂಗಳೂರು.
ಅಡ್ಮಿನಿಸ್ಟ್ರೇಷನ್ ರಿಪೋರ್ಟ್ ಆನ್ ಪಬ್ಲಿಕ್ ಇನ್‌ಸ್ಟ್ರಿಕ್ಷನ್. 1889-1890.
ಅಡ್ಮಿನಿಸ್ಟೇಷನ್ ರಿಪೋರ್ಟ್ ಆನ್ ಪಬ್ಲಿಕ್ ಇನ್‌ಸ್ಟ್ರಕ್ಷನ್. 1892-1994.
ಸಾದ್ವಿ ಪತ್ರಿಕೆ. ಮೈಸೂರು. ದಿನಾಂಕ: 24/12/1945.
ಲಕ್ಷಮ್ಮ ಎಂ. ಆರ್. ಸ್ವವಿವರ. ವಿಭಾಗೀಯ ಪತ್ರಗಾರ ಕಛೇರಿ. ಮೈಸೂರು.
ಲಕ್ಷಮ್ಮ ಎಂ. ಆರ್. (1950) ಸೋದರಿ ಪತ್ರಿಕೆ. ಬೆಂಗಳೂರು.