ಮೈಸೂರು ಅರಸರ ಕಾಲದ ಕನ್ನಡ ಸಾಹಿತ್ಯ

Main Article Content

ಬಸವರಾಜು ಕೆ.

Abstract

1881ರಲ್ಲಿ ಬ್ರಿಟಿಷ್ ಕಮಿಷನರುಗಳ ಆಳ್ವಿಕೆ ಕೊನೆಗೊಂಡು ಮೈಸೂರು ಒಡೆಯರಿಗೆ ಅಧಿಕಾರ ಮರುಕಳಿಸಿತು. ಅನಂತರ ಅವರು ಸಾಹಿತ್ಯಕ್ಕೆ ತಮ್ಮದೇ ಕೊಡುಗೆಯನ್ನು ನೀಡಿದ್ದಾರೆ. ಹಾಗೆಯೇ ದಿವಾನರ ಬೆಂಬಲವೂ ಕೂಡ ಸಾಹಿತ್ಯ ಬೆಳವಣಿಗೆಯಲ್ಲಿ ಮುಖ್ಯಪಾತ್ರವಹಿಸಿದೆ. ಮಹಾರಾಜರುಗಳಾದ ಚಾಮರಾಜ ಒಡೆಯ‌ರ್, ನಾಲ್ವಡಿ ಕೃಷ್ಣರಾಜಒಡೆಯರ್, ರಣಧೀರ ಕಂಠೀರವ ನರಸರಾಜಒಡೆಯ‌ರ್, ಚಿಕ್ಕದೇವರಾಜ, ಚಾಮರಾಜಒಡೆಯರ್, ದಿವಾನರುಗಳಾದ ರಂಗಾಚಾರ್ಲು, ಶೇಷಾದ್ರಿ ಅಯ್ಯರ್, ವಿಶ್ವೇಶ್ವರಯ್ಯ ಮತ್ತು ಮಿರ್ಜಾ ಇಸ್ಮಾಯಿಲ್ ಮುಂತಾದವರ ಕೊಡುಗೆಗಳು ಅಸ್ಮರಣೀಯವಾದದು. ಸುಮಾರು 400 ವರ್ಷಗಳ ಕಾಲ ಆಳಿದ ಮೈಸೂರು ಅರಸರು ಸ್ವಯಂ ಕವಿಗಳೂ ಹೌದು. ಕಾವ್ಯ ಕನ್ನಡದ ಅನೇಕ ವಿದ್ವಾಂಸರು, ಕವಿ-ನಾಟಕಕಾರರಿಗೆ ಹಾಗೂ ಭಾಷಾಂತರಕಾರರಿಗೆ ಆಶ್ರಯ ನೀಡಿ ಪ್ರೋತ್ಸಾಹಿಸಿ ಬೆಳೆಸಿದ್ದಾರೆ. ಮೈಸೂರು ಅರಸರ ಆರಂಭದ ಕಾಲಘಟ್ಟದಿಂದ ಭಾರತ ಸ್ವಾತಂತ್ರ್ಯಗೊಳ್ಳುವವರೆಗೂ ರಚಿತವಾದ ಕೃತಿಗಳೇ ಮೈಸೂರು ಅರಸರ ಐತಿಹ್ಯಕ್ಕೂ ಸಾಕ್ಷಿಯನ್ನು ಒದಗಿಸಿವೆ. ಕನ್ನಡ ಸಾಹಿತ್ಯಕ್ಕೆ, ಪ್ರೋತ್ಸಾಹಿಸಿ ಸ್ಫೂರ್ತಿಯಾದ ಮೈಸೂರು ಅರಸರು ವಿಜಯನಗರದ ಪರಮಾಧಿಕಾರವನ್ನು ಅಲ್ಲಗಳೆದು ಸ್ವತಂತ್ರವಾದಾಗಿನಿಂದ ಮೈಸೂರು ಒಡೆಯರ ಸ್ವತಂತ್ರ ಆಡಳಿತದ ಕಾಲ ಆರಂಭವಾಯಿತು. ಒಂದನೆಯ ರಾಜ ಒಡೆಯರ ಕಾಲದಿಂದ ಆರಂಭಗೊಂಡು ಜಯಚಾಮರಾಜ ಒಡೆಯರ ಕಾಲದವರೆಗೂ ಕನ್ನಡ ಸಾಹಿತ್ಯವು ಸರ್ವತೋಮುಖ ಅಭಿವೃದ್ಧಿ ಪಡೆಯಿತು.


 

Article Details

Section

Research Articles

Author Biography

ಬಸವರಾಜು ಕೆ.

ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿರಾಜಪೇಟೆ.

References

ಮುಗಳಿ ರಂ. ಶ್ರೀ. (1999). ಕನ್ನಡ ಸಾಹಿತ್ಯ ಚರಿತ್ರೆ, ಗೀತಾ ಬುಕ್ ಹೌಸ್. ಮೈಸೂರು.

ಪಾಲಾಕ್ಷ. (2019). ಸಮಗ್ರ ಕರ್ನಾಟಕ ಇತಿಹಾಸ. ಶಶಿ ಪ್ರಕಾಶನ. ತುಮಕೂರು.

ಸದಾಶಿವ ಕೆ. (2000). ಕರ್ನಾಟಕ ಪ್ರೌಢ ಇತಿಹಾಸ, 2000. ಪ್ರಿಯದರ್ಶಿನಿ ಪ್ರಕಾಶನ. ಮೈಸೂರು.

ಅಶ್ವತಪ್ಪ ಕೆ. ಎನ್. (2023). ಸಮಗ್ರ ಕರ್ನಾಟಕದ ಇತಿಹಾಸ. ಲಕ್ಷ್ಮಿ ಮುದ್ರಣಾಲಯ. ಬೆಂಗಳೂರು.

ಶಿವಪ್ಪ ಜಿ. (2021). ಸಮಗ್ರ ಕರ್ನಾಟಕದ ಇತಿಹಾಸ. ಸಪ್ನ ಬುಕ್‌ ಹೌಸ್‌. ಮೈಸೂರು.

ಪರಮೇಶ್ವರ ಬಿ. ಕರ್ನಾಟಕ ಇತಿಹಾಸ ಪರಿಚಯ. ಮೈಸೂರು ಬುಕ್‌ಹೌಸ್, ಮೈಸೂರು.