ತುಮಕೂರು ಜಿಲ್ಲೆಯ ಕಾಂಗ್ರೆಸ್ಸೇತರ ರಾಜಕಾರಣದಲ್ಲಿ ಸಮಾಜವಾದಿ ಚಿಂತನೆಗಳ ಪ್ರಭಾವ

Main Article Content

ಪಿ. ಎಲ್. ಮೈಲಾರಯ್ಯ

Abstract

ಭಾರತದ ಇತಿಹಾಸದ ಪುಟಗಳನ್ನು ಒಮ್ಮೆ ಪರಿಶೀಲಿಸಿದಾಗ ನಮಗೆ ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪಾತ್ರವು ಬಹಳ ಮುಖ್ಯವಾದುದಾಗಿದೆ. ಕಾಂಗ್ರೆಸ್ ಎಂಬ ರಾಜಕೀಯ ಸಂಸ್ಥೆಯು ಭಾರತದ ಸ್ವತಂತ್ರ ಹೋರಾಟದಲ್ಲಿ ಒಂದು ಬಹುಮುಖ್ಯ ಅಂಗವಾಗಿ ಪಾತ್ರ ನಿರ್ವಹಿಸಿತ್ತು. ಕಾಂಗ್ರೆಸ್ ಸ್ವತಂತ್ರ ನಂತರ ಒಂದು ರಾಜಕೀಯ ಪಕ್ಷವಾಗಿ ಮುಂದುವರೆದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರವನ್ನು ಪಡೆದುಕೊಂಡಿತ್ತು. ಆರಂಭದ ಸುಮಾರು 40 ವರ್ಷಗಳ ಕಾಲ ಭಾರತದ ರಾಜಕೀಯ ಇತಿಹಾಸವನ್ನು ಕಾಂಗ್ರೆಸ್ ಆವರಿಸಿತ್ತು, ಹಾಗೂ ಕರ್ನಾಟಕದ ರಾಜಕೀಯದಲ್ಲೂ ಸಹ ಕಾಂಗ್ರೆಸ್ ತನ್ನದೇ ಪ್ರಭಾವವನ್ನು ಬೀರಿತ್ತು. ಕಾಲಕ್ರಮೇಣ ಕಾಂಗ್ರೆಸ್ಸೇತರ ರಾಷ್ಟ್ರೀಯ ಪಕ್ಷಗಳು, ಪ್ರಾದೇಶಿಕ ಪಕ್ಷಗಳು ಕೆಲವು ರಾಜ್ಯಗಳಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದವು. ಅಂತಹ ರಾಷ್ಟ್ರೀಯ ಪಕ್ಷಗಳಲ್ಲಿ ಜನತಾ ಪಕ್ಷ, ಕಮ್ಯುನಿಸ್ಟ್ ಪಕ್ಷ, ಸಮಾಜವಾದಿ ಪಕ್ಷಗಳು ಪ್ರಮುಖವಾಗಿದ್ದವು ಮತ್ತು ಕಾಂಗ್ರೆಸ್ ಪಕ್ಷದ ಸೌರ್ವಭೌಮತ್ವವನ್ನು ಪ್ರಶ್ನಿಸಿ ಪ್ರಬಲವಾದ ವಿರೋಧಿ ಬಣವು ಅಸ್ತಿತ್ವಕ್ಕೆ ಬಂದಿತ್ತು. ಇದರಲ್ಲಿ ಸಮಾಜವಾದಿ ಚಿಂತನೆಗಳು ಮತ್ತು ಚಿಂತಕರು ಅಗಾಧವಾದ ಪ್ರಭಾವವನ್ನು ಬೀರಿದರು; ಇಂತಹ ಹಿನ್ನೆಲೆ ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ಸೇತರ ರಾಜಕಾರಣದ ಹುಟ್ಟು, ಬೆಳವಣಿಗೆಯಲ್ಲಿ ಸಮಾಜವಾದಿ ಚಿಂತನೆಗಳ ಪಾತ್ರವನ್ನು ನಿರೂಪಿಸುವುದು ಉದ್ದೇಶವಾಗಿದೆ.


 

Article Details

Section

Research Articles

Author Biography

ಪಿ. ಎಲ್. ಮೈಲಾರಯ್ಯ

ಸಂಶೋಧನಾ ವಿದ್ಯಾರ್ಥಿ, ಇತಿಹಾಸ ಅಧ್ಯಯನ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.

References

ಅಭಿಶಂಕರ್ ಕೆ. (ಸಂ), (1967), ತುಮಕೂರು ಜಿಲ್ಲಾ ಗ್ಯಾಸೆಟಿಯರ್, ಕರ್ನಾಟಕ ಸರ್ಕಾರ. ಬೆಂಗಳೂರು.

ಕಾಳೇಗೌಡ ನಾಗವಾರ ಮತ್ತು ನಟರಾಜ್ ಹುಳಿಯಾರ್. (1996), ಸ್ವಾತಂತ್ರ್ಯ ಅಂತರ್ಜಲ. ಕರ್ನಾಟಕ ಸರ್ಕಾರ, ಬೆಂಗಳೂರು.

ಕೃಷ್ಣಸ್ವಾಮಿ ಅಯ್ಯಂಗಾರ್ ಹೆಚ್. ಎಸ್. (1999). ಮಾನ್ಯರು-ಸಾಮಾನ್ಯರು. ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ. ಮೈಸೂರು.

ಗೋಪಾಲ್ ಕೃಷ್ಣ (ಅನು), (1982). ಸಮಾಜವಾದದ ಪರಿಚಯ. ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾನಿಲ, ಬೆಂಗಳೂರು.

ಪೀರ್‌ಬಾಷಾ ಬಿ. (2012). ಸಮಾಜವಾದಿ ಹೋರಾಟಗಾರರ ಸಂದರ್ಶನ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ವೆಂಕಟಪ್ಪಗೌಡ ಕೋಣಂದೂರು. (1981). ಜೀವಂತ ಜ್ವಾಲೆ (ಶಾಂತವೇರಿ ಗೋಪಾಲಗೌಡ ಸ್ಮಾರಕ ಗ್ರಂಥ), ಯಶಸ್ವಿ ಪ್ರಕಾಶನ, ಬೆಂಗಳೂರು.