ಮೈಸೂರು ಅರಸರ ಕಾಲದ ಸಮ-ತತ್ತ್ವದ ಶಿಕ್ಷಣದ ವ್ಯವಸ್ಥೆ

Main Article Content

ಲೋಕೇಶ ಆ‌ರ್.

Abstract

ನಮ್ಮ ನಾಡಿನ ಪ್ರಾಚಿನ ಪರಂಪರೆ ಹಾಗೂ ಸನಾತನವೆನಿಸಿದ ಭಾರತೀಯ ಜ್ಞಾನ ಸಂಪತ್ತು ಮತ್ತು ಚಿಂತನಶೀಲತೆ ರಾಷ್ಟ್ರೀಯ ಶಿಕ್ಷಣ ನೀತಿಯ ದಾರಿದೀಪವಾಗಿದೆ. ಜ್ಞಾನ, ವಿವೇಕ ಹಾಗೂ ಸತ್ಯ ಭಾರತೀಯ ದಾರ್ಶನಿಕ ಚಿಂತನೆಯ ಅತ್ಯುನ್ನತ ಸಾಧನೆಯ ಗುರಿಗಳಾಗಿದ್ದವು, ಹಾಗೂ ಆತ್ಮಸಾಕ್ಷಾತ್ಕಾರ ಮತ್ತು ಆತ್ಮವಿಮೋಚನೆ ಶಿಕ್ಷಣದ ಗುರಿಯಾಗಿತ್ತು. ಅತ್ಯುತ್ತಮ ಮಟ್ಟದ ಬಹುಶಿಸ್ತೀಯ ಅಧ್ಯಯನಗಳು ಜ್ಞಾನದ ಗಡಿಗಳನ್ನು ವಿಸ್ತರಿಸಿ ಎಲ್ಲೆಡೆಯಿಂದಲೂ ಜ್ಞಾನ ಸ್ವೀಕಾರ ಕಾರ್ಯ ನಡೆಯುತ್ತಲೇ ಇತ್ತು. ಇದು ಕನ್ನಡ ನಾಡಿಗೂ ಮಾದರಿಯಾಗಿ ಕನ್ನಡ ನಾಡು ಕೂಡ ಯಾವುದಕ್ಕೂ ಹಿಂದೆ ಬೀಳದೆ ತನ್ನದೇ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಿಕೊಳ್ಳುತ್ತಲೇ ಮಾದರಿ ರಾಜ್ಯವಾಗಿ ಚರಿತ್ರೆಯಲ್ಲಿ ಗುರುತಾಗತೊಡಗಿತು. ಭಾರತೀಯ ಭವ್ಯ ಪರಂಪರೆಯಲ್ಲಿ ಕನ್ನಡ ನಾಡಿನ ಹಿರಿಮೆ ದೇಸೀ ತನದಿಂದಲೇ ಹೆಸರಾದುದು. ಕನ್ನಡ ನಾಡಿನ ಜನತೆಯ ಜ್ಞಾನ ಮತ್ತು ವಿವೇಕದ ಹರವು ಮತ್ತು ಶಿಕ್ಷಣ ಕ್ರಮ ವೈಶಿಷ್ಟ್ಯಪೂರ್ಣವಾಗಿ ದಾಖಲಾಗಿದೆ. ಅನೌಪಚಾರಿಕ ಶಿಕ್ಷಣ ಕ್ರಮದಿಂದ ಔಪಚಾರಿಕ ಶಿಕ್ಷಣದವರೆಗೆ ಅದರ ನಡೆ ಬಹುತೆರನಾಗಿದ್ದರೂ ಅಂತಿಮವಾಗಿ ವ್ಯಕ್ತಿ ಉತ್ತಮ ಸಾಮಾಜಿಕ ಜೀವನ ನಡೆಸಲು ಶಿಕ್ಷಣವೇ ಮೂಲಾಧಾರ ಎಂಬ ಚಿಂತನೆ ಕರುನಾಡನ್ನಾಳಿದ ಪ್ರತಿಯೊಬ್ಬ ಆಳರಸರ ಧಮನಿಯಲ್ಲಿ ಮಿಡಿದಿದೆ. ಕನ್ನಡ ನಾಡಿನ ದೊರೆಗಳು ಒಂದಿಲ್ಲೊಂದು ರೀತಿಯಲ್ಲಿ ತನ್ನ ಪ್ರಜೆಗಳಿಗೆ ಜ್ಞಾನದ ಹಸಿವನ್ನು ನೀಗಿಸುತ್ತಲೇ ಬಂದಿದ್ದಾರೆ. ಮೈಸೂರು ದೊರೆಗಳು ಶಿಕ್ಷಣ ವ್ಯವಸ್ಥೆ ರೂಪಿಸಲು ತಮ್ಮ ತನುಮನವನ್ನು ಅರ್ಪಿಸಿದ ರೀತಿ ಅಸಮಾನ್ಯವಾಗಿಯೇ ಇದೆ ಎಂಬುದನ್ನು ಗುರುತಿಸುತ್ತಾ ಪ್ರಾಥಮಿಕ ಶಾಲೆಯ ಪ್ರಾರಂಭದೊಂದಿಗೆ ಅತ್ಯುನ್ನತವಾದ ವಿಶ್ವವಿದ್ಯಾನಿಲಯದ ವರೆಗೆ ಅವರು ಸ್ಥಾಪಿಸಿದ ಹಾಗೂ ಪೋಷಣೆ ಮಾಡಿದ ಸಾಂಸ್ಥಿಕ ಸ್ವರೂಪದ ಶಿಕ್ಷಣ ವ್ಯವಸ್ಥೆಯನ್ನು ಗುರುತಿಸುವ ಉದ್ದಿಷ್ಟ ಇಲ್ಲಿದೆ.


 

Article Details

Section

Research Articles

Author Biography

ಲೋಕೇಶ ಆ‌ರ್.

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಮಾದರಿ ವಸತಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಹರದನಹಳ್ಳಿ, ಹೊಳೆನರಸಿಪುರ, ಹಾಸನ.

 

References

ಜವರೇಗೌಡ ದೇ. (2016). ಕುಲಪತಿಯ ಭಾಷಣಗಳು. ವಿಶ್ವವಿದ್ಯಾನಿಲಯ ಶತಮಾನೋತ್ಸವ ಪ್ರಕಟಣಾ ಸಮಿತಿ, ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು.

ಫಾಲಾಕ್ಷ. (2000). ಸಮಗ್ರ ಕರ್ನಾಟಕ ಇತಿಹಾಸ ಮತ್ತು ಸಂಸ್ಕೃತಿ. ಶಶಿ ಪ್ರಕಾಶನ. ತಿಪಟೂರು.

ಸೂರ್ಯನಾಥ ಕಾಮತ್. (2022). ಕರ್ನಾಟಕದ ಸಂಕ್ಷಿಪ್ತ ಇತಿಹಾಸ. ಎಂ.ಸಿ.ಸಿ. ಪಬ್ಲಿಕೇಷನ್. ಬೆಂಗಳೂರು.

ಪ್ರಬುದ್ಧ ಕರ್ಣಾಟಕ. (1962), ಸಂಪುಟ-44. ಸಂಚಿಕೆ-03. ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ.

ಶತಮಾನದ ಹೆಜ್ಜೆಗಳು. (2016). ವಿಶ್ವವಿದ್ಯಾನಿಲಯ ಶತಮಾನೋತ್ಸವ ಪ್ರಕಟಣಾ ಸಮಿತಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.

ರಾಷ್ಟ್ರೀಯ ಶಿಕ್ಷ ನೀತಿ-2020. (2020). ಶಿಕ್ಷಣ ಸಚಿವಾಲಯ, ಭಾರತ ಸರ್ಕಾರ. ನವದೆಹಲಿ.

ಕನ್ನಡ ವಿಷಯ ವಿಶ್ವಕೋಶ: ಕರ್ನಾಟಕ (ಪರಿಸ್ಕೃತ) ಸಂ-2. (2007). ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು.