ರಾಘವಾಂಕನ ಸಿದ್ಧರಾಮ ಚಾರಿತ್ರೆಯಲ್ಲಿನ ವರ್ಣನೆ ಮತ್ತು ಶೈಲಿ ಕುರಿತಂತೆ ಒಂದು ಅವಲೋಕನ
Main Article Content
Abstract
ರಾಘವಾಂಕನ ಇತರೆ ಕಾವ್ಯಗಳಲ್ಲಿ ಬರುವ ಪ್ರಮಾಣದಷ್ಟು ವರ್ಣನೆಗಳು ಸಿದ್ಧರಾಮನ ಚರಿತ್ರೆಯಲ್ಲಿ ಬಾರದೆ ಇರಬಹುದು. ಆದರೂ ಕವಿಯ ಕಲ್ಪನೆಯ ಚಿತ್ರ ಮಾತುಗಳಲ್ಲಿ ಸ್ಪಷ್ಟವಾಗಿ ಮೂಡಿಬಂದಿದೆ. ಆದರೂ ತನ್ನ ವರ್ಣನೆಗಳಲ್ಲಿ ಹೊಸತನವನ್ನು ಕಾಪಾಡಿಕೊಂಡು ಬಂದಿರುವುದನ್ನು ನೋಡಬಹುದು. ಇನ್ನೂ ಕಾವ್ಯದ ಶೈಲಿ ಸರಳವಾಗಿದ್ದು ಕಥಾವಿವರಗಳಿಗೆ ಅಗತ್ಯವಿಲ್ಲದನ್ನು ತುರುಕುವ ಸಾಹಸಕ್ಕೆ ಹೋಗಲಿಲ್ಲ, ಪಾಂಡಿತ್ಯ ಪ್ರದರ್ಶನಗೊಳಿಸುವ ಸಂಸ್ಕೃತ ಪದರಚನೆ ಕಾಣಿಸದೆ ಕನ್ನಡ ಸುಲಲಿತತೆ ಎದ್ದು ಕಾಣಿಸುತ್ತಿದೆ. ಕಾವ್ಯದಲ್ಲಿ ಅಲಂಕಾರಗಳ ಗೊಡವೆಗೆ ಹೋಗದೆ ಜಾಗೃತವಾಗಿ ಕವಿಯ ನಾಟಕೀಯ ಕೌಶಲ್ಯ ಕಾಣಬಹುದು. ಸಿದ್ಧರಾಮನ ವ್ಯಕ್ತಿತ್ವವನ್ನು ಕವಿ ಆತ್ಮೀಯವಾಗಿಯೇ ವರ್ಣಿಸುತ್ತಾನೆ, ಆತನ ಅತಿ ಮಾನುಷಚರ್ಯೆಗಳು ವ್ಯಕ್ತಿತ್ವಕ್ಕೆ ಮತ್ತಷ್ಟು ಕಾಂತಿಯನ್ನು ತಂದುಕೊಡುತ್ತವೆ. ನಾಟಕೀಯ ಸನ್ನಿವೇಶಗಳ ಮೂಲಕ ಪ್ರಸಂಗಗಳನ್ನು ಕವಿ ಓದುಗರ ಕಣ್ಮುಂದೆ ನಿಲ್ಲುವಂತೆ ಮಾಡುತ್ತಾನೆ. ಲೌಕಿಕ ಜನರಿಗಿಂತ ಸಿದ್ಧರಾಮ ಭಿನ್ನ ಎಂದು ತೋರಿಸುವುದೇ ಮುಖ್ಯ ಆಶಯವೆಂಬುದು ತಿಳಿಯಬಹುದು.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ತಿಪ್ಪೇಸ್ವಾಮಿ ಜಿ. ಆರ್., (2000), ಅಭಿಮುಖ, ಮೈಸೂರು: ಚೇತನಾ ಬುಕ್ ಹೌಸ್.
ಕಲ್ಬುರ್ಗಿ ಎಂ. ಎಂ., (2004), ರಾಘವಾಂಕನ ಸಮಗ್ರ ಕೃತಿಗಳು, ಹಂಪಿ: ಕನ್ನಡ ವಿಶ್ವವಿದ್ಯಾಲಯ.
ಮರಿಯಪ್ಪ ಭಟ್ಟ ಎಂ., (1960), ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ, ಮೈಸೂರು: ಭಾರತೀ ಪ್ರಕಾಶನ.
ವಿದ್ಯಾಶಂಕರ ಎಸ್., (2004), ಸಿದ್ಧರಾಮಚಾರಿತ್ರಯ ಸಂಗ್ರಹ, ಬೆಂಗಳೂರು: ಪ್ರಿಯದರ್ಶಿನಿ ಪ್ರಕಾಶನ.
ನರಸಿಂಹಾಚಾರ್ ಡಿ. ಎಲ್., (1951), ಸಿದ್ಧರಾಮಚರಿತ್ರೆಯ ಸಂಗ್ರಹ, ಮೈಸೂರು: ಕಾವ್ಯಾಲಯ.