Table of Contents
Research Articles
ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿ ‘ಮೊಹರಂ’
01 to 07
ಭಾರತದ ಸಂಸ್ಕೃತಿಯು ವಿಶ್ವದಲ್ಲಿಯೇ ವಿಶಿಷ್ಟವಾದ ಸಂಸ್ಕೃತಿ. ‘ವೈವಿಧ್ಯತೆಯಲ್ಲಿ ಏಕತೆ’ ಎಂಬ ತತ್ವಕ್ಕೆ ಭಾರತದ ಗ್ರಾಮೀಣ ಪ್ರದೇಶಗಳು ಅತ್ಯುತ್ತಮ ನಿದರ್ಶನಗಳಾಗಿವೆ. ಇಲ್ಲಿ ಧರ್ಮಗಳು ಕೇವಲ ಸಾಂಸ್ಥಿಕ ಚೌಕಟ್ಟುಗಳಾಗಿ ಉಳಿಯದೆ, ದೈನಂದಿನ ಬದುಕಿನ ಭಾಗವಾಗಿ ಪರಸ್ಪರ ಬೆರೆತು ಹೋಗಿವೆ. ಈ ಸೌಹಾರ್ದ ಸಂಸ್ಕೃತಿಗೆ ಕರ್ನಾಟಕದಲ್ಲಿ ಪ್ರಮುಖ ಸಾಕ್ಷಿಯಾಗಿ ನಿಲ್ಲುವುದು ‘ಮೊಹರಂ ಆಚರಣೆ’. ಕೋಮು ಸೌಹಾರ್ದತೆ ಎಂದರೆ ಕೇವಲ ವಿಭಿನ್ನ ಧರ್ಮದ ಜನರು ಒಟ್ಟಿಗೆ ಶಾಂತಿಯುತವಾಗಿ ವಾಸಿಸುವುದು ಮಾತ್ರವಲ್ಲ; ಅದು ಪರಸ್ಪರ ವಿಶ್ವಾಸ, ಸಹಿಷ್ಣುತೆ ಮತ್ತು ಸಹಬಾಳ್ವೆಯ ಬದುಕನ್ನು ಕಟ್ಟಿಕೊಳ್ಳುವುದಾಗಿದೆ.
ಧರ್ಮಗಳು ಜನರ ಬದುಕನ್ನು ಮುಕ್ಕಾಗಿಸುವ, ಮನಸುಗಳನ್ನು ಮುರಿಯುವ ಈ ಹೊತ್ತಿನಲ್ಲಿ ಹೃದಯದ ಬಿಂಬವೂ ಆಗಿರುವ ಮೊಹರಂ ಜನರ ಬದುಕನ್ನು ಸದಾ ಎಚ್ಚರಿಸುತ್ತಲೇ ಇರುತ್ತದೆ. ಬದುಕಿನ ವಿಕೃತಿಗಳನ್ನು ಗುರುತಿಸುವ ವಾಸ್ತವಿಕ ದೃಷ್ಟಿ, ಮತ್ತು ಅಸ್ತಿತ್ವದ ಸೂಕ್ಷ್ಮ ಸ್ತರಗಳ ಅನಾವರಣಗೊಳಿಸುವ ತೀಕ್ಷ್ಣ ಒಳನೋಟದ ದಾಖಲೆಯಾಗಿಯೂ ಈ ಹಬ್ಬ ನಮ್ಮ ಮುಂದಿದೆ. ಉಡುವ ಬಟ್ಟೆ, ಉಣ್ಣುವ ಊಟ, ನಡೆದಾಡುವ ಕಾಲ ಎಲ್ಲವೂ ರಾಜಕಾರಣಗೊಳ್ಳುತ್ತಿರುವ ಈ ದೇಶದಲ್ಲಿ ಬಹುತ್ವ ತನ್ನತನ ಕಳೆದುಕೊಳ್ಳದೆ ಕರ್ನಾಟಕ ಬಹುತ್ವದ ನಾಡಾಗಿಯೇ ಉಳಿಯಬೇಕೆಂಬ ಆಶಾವಾದ ನನ್ನದು. ನೂರಾರು ವರ್ಷಗಳಿಂದ ಗ್ರಾಮೀಣ ಭಾರತದಲ್ಲಿ ನಡೆದುಕೊಂಡು ಬಂದಿರುವ ಹಿಂದೂ-ಮುಸ್ಲಿಂ ಸೌಹಾರ್ದತೆಯ ನೆಲೆಗಳನ್ನು ಹುಡುಕುವುದು ಪ್ರಸ್ತುತವಾಗಿದೆ. ಮುಸ್ಲಿಂ ಬಾಂಧವರೇ ಇಲ್ಲದ ಹಳ್ಳಿಗಳಲ್ಲಿ ಹಿಂದೂಗಳೇ ಮೊಹರಂ ಹಬ್ಬವನ್ನು ಮುಂಚೂಣಿಯಲ್ಲಿ ನಿಂತು ಆಚರಿಸುವ ಅಪರೂಪದ ಸಂಪ್ರದಾಯವನ್ನು ವಿಶ್ಲೇಷಿಸುವುದು ಈ ಅಧ್ಯಯನದ ಮುಖ್ಯ ಆಶಯವಾಗಿದೆ.
ಕುವೆಂಪು ಬೇಂದ್ರೆ: ಆಧ್ಯಾತ್ಮ ಚಿಂತನೆಗಳ ಒಳಹೊರಗು
08 to 15
ಕನ್ನಡ ಸಾಹಿತ್ಯದ ದಿಗ್ಗಜರಾದ ಕುವೆಂಪು ಮತ್ತು ದ. ರಾ. ಬೇಂದ್ರೆಯವರ ಸಾಹಿತ್ಯದಲ್ಲಿನ ಆಧ್ಯಾತ್ಮಿಕ ದರ್ಶನವನ್ನು ಈ ವಿಶ್ಲೇಷಣೆ ಪರಿಶೀಲಿಸುತ್ತದೆ. ಕುವೆಂಪುರವರ ‘ಜಲಗಾರ’, ‘ಯಮನ ಸೋಲು’ ಮತ್ತು ‘ಮಹಾರಾತ್ರಿ’ ನಾಟಕಗಳಲ್ಲಿನ ಅಧ್ಯಾತ್ಮವು ಪ್ರಕೃತಿ ಪ್ರೇಮ, ಮಾನವತಾವಾದ ಹಾಗೂ ಪ್ರೇಮದ ಶಕ್ತಿಯ ಮೂಲಕ ವ್ಯಕ್ತವಾಗಿದೆ. ಮತ್ತೊಂದೆಡೆ, ಬೇಂದ್ರೆಯವರ ‘ನಾಕುತಂತಿ’ ಮತ್ತು ‘ಹಕ್ಕಿ ಹಾರುತಿದೆ’ ಕವಿತೆಗಳಲ್ಲಿನ ತಾತ್ವಿಕತೆ ಹಾಗೂ ಕಾಲದ ಚಲನಶೀಲತೆಯು ವೈದಿಕ ಮತ್ತು ಅರವಿಂದರ ದರ್ಶನಗಳ ಹಿನ್ನೆಲೆಯಲ್ಲಿ ವಿವರಿಸಲಾಗಿದೆ. ಇಬ್ಬರು ಕವಿಗಳೂ ತಮ್ಮ ಕೃತಿಗಳ ಮೂಲಕ ಆಧ್ಯಾತ್ಮಿಕತೆಯನ್ನು ಕೇವಲ ಧಾರ್ಮಿಕ ಚೌಕಟ್ಟಿನಲ್ಲಿ ಬಂಧಿಸದೆ, ಅದನ್ನು ಬದುಕಿನ ಸಮಗ್ರ ಚೇತನ ಹಾಗೂ ದಾರ್ಶನಿಕ ನೆಲೆಯಲ್ಲಿ ಪ್ರತಿಪಾದಿಸಿರುವುದನ್ನು ಅವಲೋಕಿಸುವುದು ಈ ಲೇಖನದ ಮುಖ್ಯ ಆಶಯವಾಗಿದೆ.
ಕಟ್ಟೆಕಲ್ಲು ಬೆಟ್ಟದ ಒಂದು ಐತಿಹಾಸಿಕ ಅಧ್ಯಯನ
16 to 23
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿರುವ ಕಟ್ಟೆಕಲ್ಲು ಬೆಟ್ಟವು ಪ್ರಾಗೈತಿಹಾಸಿಕ ಕಾಲದಿಂದ ಮಧ್ಯಕಾಲೀನ ಇತಿಹಾಸದವರೆಗಿನ ಅನೇಕ ಕುರುಹುಗಳನ್ನು ಒಳಗೊಂಡಿರುವ ಬಹುಸ್ತರಿತ ಪುರಾತತ್ವ ತಾಣವಾಗಿದೆ. 2025ರಲ್ಲಿ ನಡೆದ ಶೋಧನೆಯಲ್ಲಿ ಸುಮಾರು 3,000 ವರ್ಷಗಳಷ್ಟು ಹಳೆಯದಾದ ತಾಮ್ರಯುಗದ ಗುಹಾಚಿತ್ರಗಳು ಮತ್ತು ಪ್ರಾಚೀನ ‘ಸಂಗೀತದ ಮೆಟ್ಟಿಲುಗಳು’ ಪತ್ತೆಯಾಗಿವೆ. ಜೊತೆಗೆ, ಬೆಟ್ಟದ ತಪ್ಪಲಿನಲ್ಲಿರುವ 17ನೇ ಶತಮಾನದ ಕನ್ನಡ ಶಾಸನವು ಚಿನ್ನಯ್ಯನಾಯಕನೆಂಬಾತ ರಾಮನಾಥ ದೇವರಿಗೆ ಭೂದಾನ ನೀಡಿದ ಐತಿಹಾಸಿಕ ಘಟನೆಯನ್ನು ದಾಖಲಿಸುತ್ತದೆ. ಈ ತಾಣವು ಜಾನಪದ ವೀರರ ಆರಾಧನೆ ಮತ್ತು ಸಾಂಸ್ಕೃತಿಕ ಸಮನ್ವಯಕ್ಕೆ ಸಾಕ್ಷಿಯಾಗಿದೆ. ಆದಾಗ್ಯೂ, ಗಣಿಗಾರಿಕೆ ಮತ್ತು ಅತಿಕ್ರಮಣದ ಭೀತಿಯಲ್ಲಿರುವ ಈ ಸ್ಮಾರಕವನ್ನು ರಕ್ಷಿಸಲು ಮತ್ತು ಹೆಚ್ಚಿನ ವೈಜ್ಞಾನಿಕ ಉತ್ಖನನ ನಡೆಸಲು ತುರ್ತು ಕ್ರಮಗಳ ಅವಶ್ಯಕತೆಯಿದೆ.
ಬಿ. ಆರ್. ಲಕ್ಷ್ಮಣರಾವ್ ಅವರ ಸಾಹಿತ್ಯದ ಒಂದು ಪಕ್ಷಿನೋಟ
24 to 32
ನವ್ಯೋತ್ತರ ಕನ್ನಡ ಕಾವ್ಯದ ಪ್ರಮುಖ ಕವಿ ಬಿ. ಆರ್. ಲಕ್ಷ್ಮಣರಾವ್. ಇವರು ಬೌದ್ಧಿಕ ಸಂಕೀರ್ಣತೆಯಿಂದ ಕಾವ್ಯವನ್ನು ಮುಕ್ತಗೊಳಿಸಿ ಜನಸಾಮಾನ್ಯರಿಗೆ ಹತ್ತಿರವಾಗಿಸಿದವರು. ಮಧ್ಯಮ ವರ್ಗದ ಬದುಕಿನ ವಾಸ್ತವತೆ, ಆಡುಭಾಷೆಯ ಸೊಗಡು, ಪ್ರೇಮದ ಲವಲವಿಕೆ ಮತ್ತು ತೀಕ್ಷ್ಣವಾದ ಹಾಸ್ಯ-ವಿಡಂಬನೆಗಳು ಇವರ ಸಾಹಿತ್ಯದ ಜೀವಾಳ. ‘ಗೋಪಿ ಮತ್ತು ಗಾಂಡಲೀನ’, ‘ಲಿಲ್ಲಿ ಪುಟ್ಟಿಯ ಹಂಬಲ’ ಮೊದಲಾದ ಕೃತಿಗಳ ಮೂಲಕ ಇವರು ಕನ್ನಡ ಕಾವ್ಯ ಲೋಕದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಕವಿತೆಗಳಷ್ಟೇ ಅಲ್ಲದೆ, ಸುಗಮ ಸಂಗೀತ ಕ್ಷೇತ್ರದಲ್ಲೂ ಸಿ. ಅಶ್ವತ್ಥ್ ಅವರೊಂದಿಗೆ ಕೈಜೋಡಿಸಿ ಕ್ರಾಂತಿಕಾರಿ ಕೊಡುಗೆ ನೀಡಿದ್ದಾರೆ. ಕಾವ್ಯವನ್ನು ಸಂವಾದದ ಮಾಧ್ಯಮವಾಗಿಸಿದ ಲಕ್ಷ್ಮಣರಾವ್ ಅವರ ಸಾಹಿತ್ಯ ಪಯಣವು ಕನ್ನಡ ಸಾಂಸ್ಕೃತಿಕ ಇತಿಹಾಸದ ಒಂದು ಪ್ರಮುಖ ಭಾಗವಾಗಿದೆ.
ಪೌರಾಣಿಕ ಮತ್ತು ಐತಿಹಾಸಿಕ ನಾಟಕಗಳ ಭಾಷಾ ವೈಶಿಷ್ಟ್ಯತೆ
33 to 37
ನಾಟಕದಲ್ಲಿ ಭಾಷೆಯು ಕೇವಲ ಸಂವಹನ ಮಾಧ್ಯಮವಲ್ಲ, ಅದು ರಂಗಕ್ರಿಯೆಯ ಜೀವನಾಡಿಯಾಗಿದೆ. ಪೌರಾಣಿಕ ನಾಟಕಗಳು ಪಾತ್ರಗಳ ಗಾಂಭೀರ್ಯ ಮತ್ತು ಅತಿಮಾನುಷ ವ್ಯಕ್ತಿತ್ವಕ್ಕೆ ತಕ್ಕಂತೆ ಭವ್ಯ ಭಾಷಾಶೈಲಿಯನ್ನು ಬಳಸಿದರೆ, ಐತಿಹಾಸಿಕ ನಾಟಕಗಳು ಇತಿಹಾಸದ ಮರುಸೃಷ್ಟಿಗೆ ಆಯಾ ಕಾಲದ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗತಿಗೆ ಅನುಗುಣವಾದ ಭಾಷೆಯನ್ನು ಬಳಸುತ್ತವೆ. ಬಿ.ಎಂ. ಶ್ರೀ, ಕುವೆಂಪು, ಸಂಸ, ಗಿರೀಶ್ ಕಾರ್ನಾಡ್ ಮತ್ತು ಪಿ. ಲಂಕೇಶರಂತಹ ನಾಟಕಕಾರರು ಸಂಭಾಷಣೆಗಳ ಮೂಲಕ ಪಾತ್ರಗಳ ಗುಣಲಕ್ಷಣಗಳನ್ನು, ಸಾಮಾಜಿಕ ವರ್ಗ ಸಂಘರ್ಷವನ್ನು ಹಾಗೂ ಕಾಲದ ತುಮುಲಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ಈ ಮೂಲಕ ನಾಟಕಗಳಲ್ಲಿ ಭಾಷೆಯು ಒಂದು ‘ಕಾಲಯಂತ್ರ’ದಂತೆ ಕೆಲಸ ಮಾಡುತ್ತಾ, ಪ್ರೇಕ್ಷಕರನ್ನು ಇತಿಹಾಸ ಮತ್ತು ಪುರಾಣದ ಲೋಕಕ್ಕೆ ಕರೆದೊಯ್ಯುತ್ತದೆ.
ಸುಸ್ಥಿರ ಸಂತೋಷದಲ್ಲಿ ಶಿಕ್ಷಣದ ಪಾತ್ರ
38 to 52
ಸುಸ್ಥಿರ ಸಂತೋಷ (Sustainable Happiness) ಎಂಬುದು ವೈಯಕ್ತಿಕ ಯೋಗಕ್ಷೇಮವನ್ನು (Well-Being) ಸುಸ್ಥಿರತೆಯೊಂದಿಗೆ ಸಂಯೋಜಿಸುವ ಪರಿಕಲ್ಪನೆಯಾಗಿದ್ದು, ದೀರ್ಘಕಾಲಿಕ ಸಂತೋಷದ ಜೊತೆಗೆ ಪರಿಸರ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಒತ್ತಿ ಹೇಳುತ್ತದೆ. ಈ ಸಂಶೋಧನಾ ಲೇಖನವು ಶಿಕ್ಷಣವು ಸುಸ್ಥಿರ ಸಂತೋಷಕ್ಕೆ ಹೇಗೆ ಕೊಡುಗೆ ನೀಡುತ್ತದೆ ಎಂಬುದನ್ನು ಪರಿಶೀಲಿಸುತ್ತದೆ. ಶಿಕ್ಷಣ ತತ್ತ್ವಗಳು, ಬೋಧನಾ ವಿಧಾನಗಳು, ಪಠ್ಯಕ್ರಮದ ಏಕೀಕರಣ ಹಾಗೂ ನೀತಿ ಚೌಕಟ್ಟುಗಳ ಮೂಲಕ ಶಿಕ್ಷಣವು ವ್ಯಕ್ತಿಯ ವೈಯಕ್ತಿಕ ಬೆಳವಣಿಗೆ, ಸಾಮಾಜಿಕ ಬಾಂಧವ್ಯ ಮತ್ತು ಪರಿಸರ ಸಂರಕ್ಷಣಾ ಮನೋಭಾವವನ್ನು ಬೆಳೆಸುವ ಮೂಲಕ ಸುಸ್ಥಿರ ಸಂತೋಷವನ್ನು ಉತ್ತೇಜಿಸುವ ಪ್ರಮುಖ ಅಂಶವಾಗಿದೆ ಎಂದು ಈ ಲೇಖನ ವಾದಿಸುತ್ತದೆ.
ಅಸ್ತಿತ್ವ ಮತ್ತು ಅಂತರ: ಪರಕೀಯತೆಯ ತಾತ್ವಿಕ ಯಾನ
53 to 67
‘ಪರಕೀಯತೆ’ (Alienation) ಎನ್ನುವುದು ವ್ಯಕ್ತಿಯು ತನ್ನದೇ ಅಸ್ತಿತ್ವ, ಶ್ರಮ, ಮತ್ತು ಸಮಾಜದಿಂದ ವಿಘಟಿತನಾಗಿ, ತನ್ನ ಬದುಕಿನಲ್ಲೇ ತಾನು ಅತಿಥಿಯಾಗುವ ತೀವ್ರವಾದ ಆಂತರಿಕ ಬಿಕ್ಕಟ್ಟಾಗಿದೆ. ಕಾರ್ಲ್ ಮಾರ್ಕ್ಸ್‌ನ ಆರ್ಥಿಕ ಶೋಷಣೆಯ ಚಿಂತನೆ, ಸಾರ್ತ್ರೆ ಮತ್ತು ಕಾಮೂರ ಅಸ್ತಿತ್ವವಾದಿ ತಳಮಳ, ಡರ್ಕಿಮ್ ಹಾಗೂ ವೆಬರ್ ವಿಶ್ಲೇಷಿಸುವ ಮೌಲ್ಯಗಳ ಕುಸಿತ ಮತ್ತು ಸಾಂಸ್ಥಿಕ ಬಂಧನಗಳು ಪರಕೀಯತೆಯ ವಿವಿಧ ಆಯಾಮಗಳನ್ನು ಬಿಚ್ಚಿಡುತ್ತವೆ. ಕಾಫ್ಕಾ, ಎಲಿಯಟ್ ಮತ್ತು ಬೆಕೆಟ್ ಮುಂತಾದವರ ಸಾಹಿತ್ಯದಲ್ಲಿ ಇದು ಜೀವಂತ ಅನುಭವವಾಗಿ ಮಾರ್ಪಟ್ಟಿದೆ. ಕೇವಲ ತಾತ್ವಿಕ ಪರಿಕಲ್ಪನೆಯಾಗಿರದೆ, ಆಧುನಿಕ ಹಾಗೂ ಡಿಜಿಟಲ್ ಯುಗದ ಮಾನವನ ಮೂಲಭೂತ ಸಮಸ್ಯೆಯಾಗಿರುವ ಈ ಪರಕೀಯತೆಯನ್ನು ಫ್ರಾಯ್ಡ್ ಮತ್ತು ಫ್ರಾಮ್ ಅವರ ಮನೋವೈಜ್ಞಾನಿಕ ನೆಲೆಯಲ್ಲಿಯೂ ವಿಶ್ಲೇಷಿಸಲಾಗಿದೆ. ಒಟ್ಟಾರೆಯಾಗಿ, ನಮ್ಮ ಅಸ್ತಿತ್ವದ ಅರ್ಥಹೀನತೆ ಮತ್ತು ಆಂತರಿಕ ಶೂನ್ಯತೆಯನ್ನು ಅರಿತುಕೊಂಡು, ‘ಪ್ರಾಮಾಣಿಕ ಅಸ್ತಿತ್ವ’ದತ್ತ (Authentic existence) ಹೆಜ್ಜೆ ಹಾಕುವ ಮಾರ್ಗವನ್ನು ಇಲ್ಲಿ ಶೋಧಿಸಲಾಗಿದೆ.
ಭಾಷಾ ವೈವಿಧ್ಯತೆ: ಕನ್ನಡ ಭಾಷೆಯಲ್ಲಿ ಹೆಣ್ಣು ಭಾಷೆಯ ಅನನ್ಯತೆ
68 to 79
ವಿಕಾಸಗೊಂಡ ಮನುಷ್ಯನಲ್ಲಿ ಭಾಷೆ ಯಾವಾಗ ಉಗಮವಾಯಿತು ಎಂಬುದು ಇನ್ನೂ ಚರ್ಚೆಯಲ್ಲಿದೆ. ಆದರೆ ವಿಕಾಸಗೊಂಡ ಮರುಗಳಿಗೆಯೇ ಆತನಲ್ಲಿ ಭಾಷೆಯ ಅಸ್ತಿತ್ವವನ್ನು ಕಾಣಬಹುದು. ಪ್ರಾಣಿಪ್ರಭೇದದಿಂದ ಮನುಷ್ಯನಾಗುವ ಮೊದಲ ಹಂತವೇ ಆತನ ಮೆದುಳಿನ ರಚನೆಯಲ್ಲಾದ ಬದಲಾವಣೆ, ಪ್ರಾಣಿಗಳಿಗೆ ಮೂಲಭೂತ ಅವಶ್ಯಕತೆಗಳು ಕೇವಲ ಮೂರು. ಆಹಾರ, ನಿದ್ರೆ, ಮೈಥುನ ಆದರೆ ವಿಕಾಸಗೊಳ್ಳುತ್ತಿದ್ದ ಹಾಗೆಯೇ ಮನುಷ್ಯ ಸಂಘಜೀವಿಯಾದ, ಕುಟುಂಬ ಜೀವಿಯಾದ, ಕುಟುಂಬದ ರಕ್ಷಕನಾದ, ಕುಟುಂಬದವರಿಗಾಗಿ ಆಹಾರ ಹೊಂದಿಸಲು ಪ್ರಯತ್ನಿಸಿದ, ಜೊತೆ ಜೊತೆಗೆ Struggle For Existence, And Survival Of Fittest ಎಂಬುದನ್ನು ಬಹುಬೇಗ ಅರಿತುಕೊಂಡ. ಹಾಗಾಗಿ ಆತನ ಜೀವನ ಕುರಿತ ಈ ಎಲ್ಲಾ ಪ್ಲಾನ್‌ಗಳನ್ನು ಕಾರ್ಯರೂಪಕ್ಕಿಳಿಸಲು ಭಾಷೆಯ ಅಗತ್ಯವಿತ್ತು. ಆರಂಭದಲ್ಲಿ ಸಂಕೇತಗಳು, ವಿಶಿಷ್ಟ ಧ್ವನಿಗಳು, ಕಾಕುಗಳು, ಆಂಗಿಕ ಭಾಷೆಗಳು ಕೊಂಚ ಸಹಾಯ ಮಾಡಿದವು. ಆದರೂ ಅಷ್ಟೇ ಸಾಲದೆಂಬಂತೆ ಆತ ಭಾಷೆಯನ್ನು ಸಂಶೋಧಿಸಿದನೆನ್ನಬಹುದು.
ಆಧುನಿಕ ಕನ್ನಡ ಕವಿತೆಗಳಲ್ಲಿ ಹೆಣ್ಣು: ಒಂದು ಅವಲೋಕನ
80 to 86
ಈ ಲೇಖನವು ಕನ್ನಡ ಸಾಹಿತ್ಯದ ನವೋದಯ ಕಾಲಘಟ್ಟದಲ್ಲಿ ಕವಿತೆಗಳ ಮೂಲಕ ಹೆಣ್ಣನ್ನು ಚಿತ್ರಿಸಿದ ಬಗೆಯನ್ನು ವಿಮರ್ಶಿಸುತ್ತದೆ. ಆಧುನಿಕ ಕವಿಗಳು ಮಹಿಳೆಯನ್ನು ತಾಯಿ, ಹೆಂಡತಿ, ಸತಿ ಮತ್ತು ಪ್ರೇಯಸಿಯಂತಹ ಕೌಟುಂಬಿಕ ಪಾತ್ರಗಳಲ್ಲಿ ತ್ಯಾಗ, ಸಹನೆ ಮತ್ತು ಪವಿತ್ರತೆಯ ಸಂಕೇತವಾಗಿ ವೈಭವೀಕರಿಸಿದರೆ, ಪುರುಷ ಕೇಂದ್ರಿತ ಸಮಾಜದ ನಿರೀಕ್ಷೆಗಳಿಗೆ ಅನುಗುಣವಾಗಿ ಆಕೆಯ ಅಸ್ತಿತ್ವವನ್ನು ಕಟ್ಟಿಕೊಟ್ಟಿದ್ದಾರೆ. ಲೇಖನವು ಕುವೆಂಪು, ಬೇಂದ್ರೆ, ಮಾಸ್ತಿ, ಸಾಲಿ ರಾಮಚಂದ್ರರಾಯರು ಸೇರಿದಂತೆ ಹಲವು ಕವಿಗಳ ಕವಿತೆಗಳನ್ನು ವಿಶ್ಲೇಷಿಸುತ್ತಾ, ಪುರುಷ ಪ್ರಧಾನ ದೃಷ್ಟಿಕೋನದಿಂದ ಹೊರಬಂದು ಮಹಿಳೆಯ ಸ್ವಂತಿಕೆ ಮತ್ತು ಸಂವೇದನೆಗಳನ್ನು ಅಭಿವ್ಯಕ್ತಿಸುವಲ್ಲಿನ ಮಿತಿಗಳನ್ನು ಎತ್ತಿ ತೋರಿಸುತ್ತದೆ. ಅದೇ ಸಮಯದಲ್ಲಿ ಮಹಿಳಾ ಕವಯತ್ರಿಯರು ತಮ್ಮ ಕವಿತೆಗಳ ಮೂಲಕ ಸ್ತ್ರೀ ಬದುಕಿನ ನೋವು, ಸಂಪ್ರದಾಯದ ಕಟ್ಟುಪಾಡುಗಳು ಮತ್ತು ಸಾಮಾಜಿಕ ಅಸಮಾನತೆಯ ವಿರುದ್ಧ ಧ್ವನಿ ಎತ್ತಿರುವುದನ್ನು ಲೇಖನ ದಾಖಲಿಸಿದೆ.
ಗಾಂಧಿ ಬಂದ: ಸಾಮಾನ್ಯರ ಬದುಕಿನಲ್ಲೊಂದು ಮನ್ವಂತರ
87 to 94
ಡಾ. ಎಚ್. ನಾಗವೇಣಿ ಅವರ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ‘ಗಾಂಧಿ ಬಂದ’ ಕಾದಂಬರಿಯು ಸ್ವಾತಂತ್ರ್ಯ ಚಳವಳಿಯ ಕಾಲಘಟ್ಟದಲ್ಲಿ ತುಳುನಾಡಿನ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಧಾರ್ಮಿಕ ಪಲ್ಲಟಗಳನ್ನು ಅತ್ಯಂತ ನೈಜವಾಗಿ ಚಿತ್ರಿಸಿದೆ. ಮಂಗಳೂರಿಗೆ ಗಾಂಧೀಜಿಯವರು ನೀಡಿದ ಮೂರು ಭೇಟಿಗಳ ಹಿನ್ನೆಲೆಯಲ್ಲಿ ಈ ಕೃತಿ ರೂಪುಗೊಂಡಿದೆ. ಕರಾವಳಿಯ ಜನಜೀವನ, ಕಂಬಳ ಮತ್ತು ಭೂತಕೋಲದಂತಹ ಸಾಂಪ್ರದಾಯಿಕ ಆಚರಣೆಗಳ ನಡುವೆ ಗಾಂಧಿವಾದವು ಸಾಮಾನ್ಯ ಜನರ ಬದುಕಿನಲ್ಲಿ ಹೇಗೆ ಕ್ರಾಂತಿಕಾರಿ ಸಂಚಲನ ಮೂಡಿಸಿತು ಎಂಬುದನ್ನು ಇದು ಸೂಕ್ಷ್ಮವಾಗಿ ವಿವರಿಸುತ್ತದೆ. ಸನಾತನ ಕಂದಾಚಾರಗಳ ನಡುವೆಯೂ ಅಸಹಕಾರ ಚಳವಳಿ, ವಿಧವಾ ವಿವಾಹ, ಹಾಗೂ ಅಸ್ಪೃಶ್ಯತಾ ನಿವಾರಣೆಯಂತಹ ಸುಧಾರಣೆಗಳು ಹೇಗೆ ಬೇರೂರಿದವು ಎನ್ನುವುದನ್ನು ದ್ರೌಪದಿ, ಅದ್ರಾಮ, ಮಾರಪ್ಪ ಮತ್ತು ಐತುವಿನಂತಹ ಪಾತ್ರಗಳ ಮೂಲಕ ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ.
ಕುವೆಂಪು ಕಾವ್ಯದಲ್ಲಿ ಶೈಕ್ಷಣಿಕ ಚಿಂತನೆಗಳು: ವಸಾಹತುಶಾಹಿ ಮುಖಾಮುಖಿ ಮತ್ತು ಭಾಷಾ ರಾಜಕಾರಣದ ವಿಶ್ಲೇಷಣೆ
95 to 99
ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯಕ ಕೊಡುಗೆಗಳು ಕೇವಲ ಕಲಾತ್ಮಕ ಸೌಂದರ್ಯಕ್ಕೆ ಸೀಮಿತವಾಗದೆ, ಸಾಮಾಜಿಕ ಮತ್ತು ಶೈಕ್ಷಣಿಕ ಪುನರ್ರಚನೆಯ ಪ್ರಬಲ ದನಿಗಳಾಗಿವೆ. ಪ್ರಸ್ತುತ ಸಂಶೋಧನಾ ಪ್ರಬಂಧವು ಕುವೆಂಪು ಅವರ ಕಾವ್ಯದಲ್ಲಿ ಅಂತರ್ಗತವಾಗಿರುವ ಶೈಕ್ಷಣಿಕ ಚಿಂತನೆಗಳನ್ನು ವಸಾಹತುಶಾಹಿ ಶಿಕ್ಷಣ ನೀತಿಯ ಸವಾಲುಗಳು, ಭಾಷಾ ಹಿತಾಸಕ್ತಿ ಮತ್ತು ತ್ರಿಭಾಷಾ ಸೂತ್ರದ ರಾಜಕಾರಣದ ಹಿನ್ನೆಲೆಯಲ್ಲಿ ವಿಶ್ಲೇಷಿಸುತ್ತದೆ. ಬ್ರಿಟಿಷ್ ಶಿಕ್ಷಣ ನೀತಿಯು ತಂದ ಜ್ಞಾನೋದಯದ ಧನಾತ್ಮಕ ಆಯಾಮಗಳನ್ನು ಒಪ್ಪಿಕೊಳ್ಳುತ್ತಲೇ, ಅದು ದೇಶೀಯ ಭಾಷೆಗಳ ಮೇಲೆ ಹೇರಿದ ಸಾಂಸ್ಕೃತಿಕ ದಾಸ್ಯವನ್ನು ಕುವೆಂಪು ತಮ್ಮ ಕಾವ್ಯದ ಮೂಲಕ ಹೇಗೆ ಪ್ರತಿರೋಧಿಸಿದರು ಎಂಬುದನ್ನು ಈ ಲೇಖನವು ಶೈಕ್ಷಣಿಕ ಚೌಕಟ್ಟಿನಲ್ಲಿ ಮೌಲೀಕರಿಸುತ್ತದೆ.
A Comparative Study of Impact and Effectiveness of CSR Activities in India
100 to 113
Corporate Social Responsibility (CSR) has become a strategic tool for socio-economic development in India, especially after the Companies Act, 2013, which mandates companies meeting eligibility criteria to allocate 2% of net profits for CSR activities. This study presents a sector-wise comparative analysis of CSR effectiveness-the degree to which initiatives achieve their predefined targets-and impact, which refers to long-term societal and economic changes. The sectors analyzed include education, healthcare, rural development, environmental sustainability, and skill development, each showing distinct patterns of effectiveness and impact. For example, the education sector achieved 125% of its targets, leading to improved literacy by 3-5% and 60% of students gaining employment. Healthcare initiatives achieved 115% target fulfillment, resulting in a reduction of disease prevalence from 15% to 10% and increased health awareness by 30%. In contrast, rural development and environmental projects, despite reasonable effectiveness (84-85%), demonstrated gradual or delayed impact, with incremental income gains of INR 500-800 per month and carbon absorption of 40-50 tons/year respectively. Skill development programs achieved 120% of targets, resulting in 70% employment post-training and income increases of INR 8,000-12,000/month. The study concludes that while high effectiveness generally supports strong impact, sectoral differences, implementation challenges, and time horizons critically influence outcomes. The findings emphasize the need for robust monitoring systems, long-term planning, and transparent reporting to ensure sustainable and measurable CSR performance across India.
The Features of Democracy in the Age of Artificial Intelligence: Its Merits and Challenges - A Study
114 to 121
The rapid advancement of Artificial Intelligence (AI) is transforming political systems, governance structures, and democratic participation across the globe. Democracy, traditionally grounded in citizen participation, representation, accountability, and transparency, now faces profound changes due to AI-driven technologies such as machine learning, big data analytics, automated decision-making, and algorithmic governance. This study explores the evolving features of democracy in the age of artificial intelligence, examining both its merits and challenges. On one hand, AI enhances democratic processes through improved public service delivery, data-driven policymaking, increased administrative efficiency, and broader civic engagement via digital platforms. Governments can use AI to analyse public opinion, optimize resource allocation, and detect corruption, thereby strengthening democratic institutions. On the other hand, AI poses significant risks, including algorithmic bias, surveillance overreach, misinformation campaigns, digital inequality, and erosion of privacy.
The use of AI in political campaigns, targeted advertising, and automated content generation may manipulate voter behaviour and distort public discourse. Furthermore, concentration of AI power within private corporations raises concerns about transparency and accountability. This study adopts a qualitative analytical approach to evaluate how democratic values such as equality, freedom, rule of law, and participation are reshaped in an AI-mediated society. It argues that while AI offers substantial opportunities to strengthen democratic governance, it simultaneously demands robust regulatory frameworks, ethical guidelines, and civic awareness to prevent democratic backsliding. The future of democracy depends not merely on technological advancement but on the capacity of societies to align AI innovation with democratic principles.