ಅಸ್ತಿತ್ವ ಮತ್ತು ಅಂತರ: ಪರಕೀಯತೆಯ ತಾತ್ವಿಕ ಯಾನ

Main Article Content

ಮಲ್ಲೇಶಪ್ಪ ಸಿದ್ರಾಂಪೂರ

Abstract

‘ಪರಕೀಯತೆ’ (Alienation) ಎನ್ನುವುದು ವ್ಯಕ್ತಿಯು ತನ್ನದೇ ಅಸ್ತಿತ್ವ, ಶ್ರಮ, ಮತ್ತು ಸಮಾಜದಿಂದ ವಿಘಟಿತನಾಗಿ, ತನ್ನ ಬದುಕಿನಲ್ಲೇ ತಾನು ಅತಿಥಿಯಾಗುವ ತೀವ್ರವಾದ ಆಂತರಿಕ ಬಿಕ್ಕಟ್ಟಾಗಿದೆ. ಕಾರ್ಲ್ ಮಾರ್ಕ್ಸ್‌ನ ಆರ್ಥಿಕ ಶೋಷಣೆಯ ಚಿಂತನೆ, ಸಾರ್ತ್ರೆ ಮತ್ತು ಕಾಮೂರ ಅಸ್ತಿತ್ವವಾದಿ ತಳಮಳ, ಡರ್ಕಿಮ್ ಹಾಗೂ ವೆಬರ್‌ ವಿಶ್ಲೇಷಿಸುವ ಮೌಲ್ಯಗಳ ಕುಸಿತ ಮತ್ತು ಸಾಂಸ್ಥಿಕ ಬಂಧನಗಳು ಪರಕೀಯತೆಯ ವಿವಿಧ ಆಯಾಮಗಳನ್ನು ಬಿಚ್ಚಿಡುತ್ತವೆ. ಕಾಫ್ಕಾ, ಎಲಿಯಟ್ ಮತ್ತು ಬೆಕೆಟ್ ಮುಂತಾದವರ ಸಾಹಿತ್ಯದಲ್ಲಿ ಇದು ಜೀವಂತ ಅನುಭವವಾಗಿ ಮಾರ್ಪಟ್ಟಿದೆ. ಕೇವಲ ತಾತ್ವಿಕ ಪರಿಕಲ್ಪನೆಯಾಗಿರದೆ, ಆಧುನಿಕ ಹಾಗೂ ಡಿಜಿಟಲ್ ಯುಗದ ಮಾನವನ ಮೂಲಭೂತ ಸಮಸ್ಯೆಯಾಗಿರುವ ಈ ಪರಕೀಯತೆಯನ್ನು ಫ್ರಾಯ್ಡ್ ಮತ್ತು ಫ್ರಾಮ್ ಅವರ ಮನೋವೈಜ್ಞಾನಿಕ ನೆಲೆಯಲ್ಲಿಯೂ ವಿಶ್ಲೇಷಿಸಲಾಗಿದೆ. ಒಟ್ಟಾರೆಯಾಗಿ, ನಮ್ಮ ಅಸ್ತಿತ್ವದ ಅರ್ಥಹೀನತೆ ಮತ್ತು ಆಂತರಿಕ ಶೂನ್ಯತೆಯನ್ನು ಅರಿತುಕೊಂಡು, ‘ಪ್ರಾಮಾಣಿಕ ಅಸ್ತಿತ್ವ’ದತ್ತ (Authentic existence) ಹೆಜ್ಜೆ ಹಾಕುವ ಮಾರ್ಗವನ್ನು ಇಲ್ಲಿ ಶೋಧಿಸಲಾಗಿದೆ.

Article Details

Section

Research Articles

Author Biography

ಮಲ್ಲೇಶಪ್ಪ ಸಿದ್ರಾಂಪೂರ

ಸಹಾಯಕ ಪ್ರಾಧ್ಯಾಪಕ, ದ್ರಾವಿಡ ವಿಶ್ವವಿದ್ಯಾಲಯ, ಶ್ರೀನಿವಾಸವನಂ, ಕುಪ್ಪಂ, ಚಿತ್ತೂರು ಜಿಲ್ಲೆ, ಆಂಧ್ರಪ್ರದೇಶ.

How to Cite

ಮಲ್ಲೇಶಪ್ಪ ಸಿದ್ರಾಂಪೂರ. (2026). ಅಸ್ತಿತ್ವ ಮತ್ತು ಅಂತರ: ಪರಕೀಯತೆಯ ತಾತ್ವಿಕ ಯಾನ. ಅಕ್ಷರಸೂರ್ಯ (AKSHARASURYA), 16(02), 53 to 67. https://aksharasurya.com/index.php/latest/article/view/2137

References

ಎಲಿಯಟ್, ಟಿ. ಎಸ್., (2002), ದಿ ವೇಸ್ಟ್ ಲ್ಯಾಂಡ್ ಅಂಡ್ ಅದರ್ ಪೋಯಮ್ಸ್, ಲಂಡನ್: ಫೇಬರ್ ಅಂಡ್ ಫೇಬರ್.

ಕಾಫ್ಕಾ, ಫ್ರಾಂಝ್., (2020), ದಿ ಮೆಟಮಾರ್ಫೋಸಿಸ್ ಅಂಡ್ ಅದರ್ ಸ್ಟೋರೀಸ್ (ಅನು: ಸ್ಟಾನ್ಲಿ ಕಾರ್ನ್‌ಗೋಲ್ಡ್), ಲಂಡನ್: ಪೆಂಗ್ವಿನ್ ಕ್ಲಾಸಿಕ್ಸ್.

ಕಾಮ್ಯೂ, ಅಲ್ಬರ್ಟ್., (1989), ದಿ ಸ್ಟ್ರೇಂಜರ್ (ಅನುವಾದ: ಮ್ಯಾಥ್ಯು ವಾರ್ಡ್), ನ್ಯೂಯಾರ್ಕ್: ವಿಂಟೇಜ್ ಇಂಟರ್‌ನ್ಯಾಷನಲ್.

ಕಾಮ್ಯೂ, ಅಲ್ಬರ್ಟ್., (1991), ದಿ ಮಿಥ್ ಆಫ್ ಸಿಸಿಫಸ್ (ಅನು: ಜಸ್ಟಿನ್ ಓ’ಬ್ರಿಯಾನ್), ನ್ಯೂಯಾರ್ಕ್: ವಿಂಟೇಜ್ ಬುಕ್ಸ್.

ಡರ್ಕಿಮ್, ಎಮಿಲ್., (1951), ಸೂಸೈಡ್: ಎ ಸ್ಟಡಿ ಇನ್ ಸೋಷಿಯಾಲಜಿ (ಅನು: ಜಾನ್ ಎ. ಸ್ಪಾಲ್ಡಿಂಗ್ ಮತ್ತು ಜಾರ್ಜ್ ಸಿಂಪ್ಸನ್), ನ್ಯೂಯಾರ್ಕ್: ಫ್ರೀ ಪ್ರೆಸ್.

ಡರ್ಕಿಮ್, ಎಮಿಲ್., (1984), ದಿ ಡಿವಿಷನ್ ಆಫ್ ಲೇಬರ್ ಇನ್ ಸೊಸೈಟಿ (ಅನು: ಡಬ್ಲ್ಯೂ. ಡಿ. ಹಾಲ್ಸ್), ನ್ಯೂಯಾರ್ಕ್: ಫ್ರೀ ಪ್ರೆಸ್.

ಫ್ರಾಮ್, ಎರಿಕ್., (2001), ದಿ ಸೇನ್ ಸೊಸೈಟಿ, ಲಂಡನ್: ರೂಟ್ಲೆಜ್.

ಫ್ರಾಮ್, ಎರಿಕ್., (2006), ದಿ ಆರ್ಟ್ ಆಫ್ ಲವಿಂಗ್, ನ್ಯೂಯಾರ್ಕ್: ಹಾರ್ಪರ್ ಪೆರೆನ್ನಿಯಲ್ ಮಾಡರ್ನ್ ಕ್ಲಾಸಿಕ್ಸ್.

ಫ್ರಾಮ್, ಎರಿಕ್., (1941), ಎಸ್ಕೇಪ್ ಫ್ರಮ್ ಫ್ರೀಡಮ್, ನ್ಯೂಯಾರ್ಕ್: ಫರಾರ್ & ರೈನ್ಹಾರ್ಟ್.

ಫ್ರಾಯ್ಡ್, ಸಿಗ್ಮಂಡ್., (1960), ದಿ ಈಗೋ ಅಂಡ್ ದ ಐಡ್ (ಅನು: ಜೋನ್ ರಿವಿಯರ್), ನ್ಯೂಯಾರ್ಕ್: ಡಬ್ಲ್ಯೂ. ಡಬ್ಲ್ಯೂ. ನಾರ್ಟನ್ & ಕಂಪನಿ.

ಫ್ರಾಯ್ಡ್, ಸಿಗ್ಮಂಡ್., (1961), ಸಿವಿಲೈಸೇಶನ್ ಅಂಡ್ ಇಟ್ಸ್ ಡಿಸ್ಕಂಟೆಂಟ್ಸ್ (ಅನು: ಜೇಮ್ಸ್ ಸ್ಟ್ರೇಚಿ), ನ್ಯೂಯಾರ್ಕ್: ಡಬ್ಲ್ಯೂ. ಡಬ್ಲ್ಯೂ. ನಾರ್ಟನ್ & ಕಂಪನಿ.

ಬೆಕೆಟ್, ಸ್ಯಾಮ್ಯುಯೆಲ್., (1954), ವೇಯಿಟಿಂಗ್ ಫಾರ್ ಗೋಡೋ: ಎ ಟ್ರಾಜಿಕೊಮಿಡಿ ಇನ್ ಟು ಆಕ್ಟ್ಸ್, ನ್ಯೂಯಾರ್ಕ್: ಗ್ರೋವ್ ಪ್ರೆಸ್.

ಮಾರ್ಕ್ಸ್, ಕಾರ್ಲ್., (1959), ಎಕನಾಮಿಕ್ ಅಂಡ್ ಫಿಲಾಸಫಿಕ್ ಮ್ಯಾನುಸ್ಕ್ರಿಪ್ಟ್ ಆಫ್ 1844 (ಅನು: ಮಾರ್ಟಿನ್ ಮಿಲ್ಲಿಗನ್), ಮಾಸ್ಕೋ: ಪ್ರೋಗ್ರೆಸ್ ಪಬ್ಲಿಷರ್ಸ್.

ವೆಬರ್, ಮ್ಯಾಕ್ಸ್., (2001), ದಿ ಪ್ರೊಟೆಸ್ಟಂಟ್ ಎಥಿಕ್ ಅಂಡ್ ದ ಸ್ಪಿರಿಟ್ ಆಫ್ ಕ್ಯಾಪಿಟಲಿಸಮ್ (ಅನು: ಟಾಲ್ಕಾಟ್ ಪಾರ್ಸನ್ಸ್), ಲಂಡನ್: ರೂಟ್ಲೆಜ್.

ಸಾರ್ತ್ರೆ, ಜೀನ್-ಪಾಲ್., (1992), ಬೀಯಿಂಗ್ ಅಂಡ್ ನಥಿಂಗ್‌ನೆಸ್: ಆನ್ ಎಸ್ಸೇ ಆನ್ ಫಿನಾಮಿನಾಲಜಿಕಲ್ ಓಂಟಾಲಜಿ (ಅನು: ಹೇಜಲ್ ಇ. ಬಾರ್ನ್ಸ್), ನ್ಯೂಯಾರ್ಕ್: ವಾಷಿಂಗ್ಟನ್ ಸ್ಕ್ವೇರ್ ಪ್ರೆಸ್.

ಸಾರ್ತ್ರೆ, ಜೀನ್-ಪಾಲ್., (2007), ಎಕ್ಸಿಸ್ಟೆನ್ಸಿಯಲಿಸಮ್ ಇಸ್ ಎ ಹ್ಯೂಮನಿಸಮ್ (ಅನು: ಕ್ಯಾರೋಲ್ ಮ್ಯಾಕೋಂಬರ್), ನ್ಯೂ ಹೆವನ್: ಯೇಲ್ ಯುನಿವರ್ಸಿಟಿ ಪ್ರೆಸ್.