ಭಾಷಾ ವೈವಿಧ್ಯತೆ: ಕನ್ನಡ ಭಾಷೆಯಲ್ಲಿ ಹೆಣ್ಣು ಭಾಷೆಯ ಅನನ್ಯತೆ

Main Article Content

ರೇಖಾ
ಡಾ. ನರೇಂದ್ರ ರೈ ದೇರ್ಲ

Abstract

ವಿಕಾಸಗೊಂಡ ಮನುಷ್ಯನಲ್ಲಿ ಭಾಷೆ ಯಾವಾಗ ಉಗಮವಾಯಿತು ಎಂಬುದು ಇನ್ನೂ ಚರ್ಚೆಯಲ್ಲಿದೆ. ಆದರೆ ವಿಕಾಸಗೊಂಡ ಮರುಗಳಿಗೆಯೇ ಆತನಲ್ಲಿ ಭಾಷೆಯ ಅಸ್ತಿತ್ವವನ್ನು ಕಾಣಬಹುದು. ಪ್ರಾಣಿಪ್ರಭೇದದಿಂದ ಮನುಷ್ಯನಾಗುವ ಮೊದಲ ಹಂತವೇ ಆತನ ಮೆದುಳಿನ ರಚನೆಯಲ್ಲಾದ ಬದಲಾವಣೆ, ಪ್ರಾಣಿಗಳಿಗೆ ಮೂಲಭೂತ ಅವಶ್ಯಕತೆಗಳು ಕೇವಲ ಮೂರು. ಆಹಾರ, ನಿದ್ರೆ, ಮೈಥುನ ಆದರೆ ವಿಕಾಸಗೊಳ್ಳುತ್ತಿದ್ದ ಹಾಗೆಯೇ ಮನುಷ್ಯ ಸಂಘಜೀವಿಯಾದ, ಕುಟುಂಬ ಜೀವಿಯಾದ, ಕುಟುಂಬದ ರಕ್ಷಕನಾದ, ಕುಟುಂಬದವರಿಗಾಗಿ ಆಹಾರ ಹೊಂದಿಸಲು ಪ್ರಯತ್ನಿಸಿದ, ಜೊತೆ ಜೊತೆಗೆ Struggle For Existence, And Survival Of Fittest ಎಂಬುದನ್ನು ಬಹುಬೇಗ ಅರಿತುಕೊಂಡ. ಹಾಗಾಗಿ ಆತನ ಜೀವನ ಕುರಿತ ಈ ಎಲ್ಲಾ ಪ್ಲಾನ್‌ಗಳನ್ನು ಕಾರ್ಯರೂಪಕ್ಕಿಳಿಸಲು ಭಾಷೆಯ ಅಗತ್ಯವಿತ್ತು. ಆರಂಭದಲ್ಲಿ ಸಂಕೇತಗಳು, ವಿಶಿಷ್ಟ ಧ್ವನಿಗಳು, ಕಾಕುಗಳು, ಆಂಗಿಕ ಭಾಷೆಗಳು ಕೊಂಚ ಸಹಾಯ ಮಾಡಿದವು. ಆದರೂ ಅಷ್ಟೇ ಸಾಲದೆಂಬಂತೆ ಆತ ಭಾಷೆಯನ್ನು ಸಂಶೋಧಿಸಿದನೆನ್ನಬಹುದು.

Article Details

Section

Research Articles

Author Biographies

ರೇಖಾ

ಸಂಶೋಧನಾ ವಿದ್ಯಾರ್ಥಿ, ಶ್ರೀನಿವಾಸ ವಿಶ್ವವಿದ್ಯಾಲಯ, ಮುಕ್ಕ, ಮಂಗಳೂರು.

ಡಾ. ನರೇಂದ್ರ ರೈ ದೇರ್ಲ

ಮಾರ್ಗದರ್ಶಕರು, ಶ್ರೀನಿವಾಸ ವಿಶ್ವವಿದ್ಯಾಲಯ, ಮುಕ್ಕ, ಮಂಗಳೂರು.

How to Cite

ರೇಖಾ, & ನರೇಂದ್ರ ರೈ ದೇರ್ಲ. (2026). ಭಾಷಾ ವೈವಿಧ್ಯತೆ: ಕನ್ನಡ ಭಾಷೆಯಲ್ಲಿ ಹೆಣ್ಣು ಭಾಷೆಯ ಅನನ್ಯತೆ. ಅಕ್ಷರಸೂರ್ಯ (AKSHARASURYA), 16(02), 68 to 79. https://aksharasurya.com/index.php/latest/article/view/1167

References

ಮುಗುಳಿ ರಂ.ಶ್ರೀ., ಕನ್ನಡ ಸಾಹಿತ್ಯ ಚರಿತ್ರೆ, ಬೆಂಗಳೂರು: ಉಷಾ ಸಾಹಿತ್ಯ ಮಾಲೆ.

ಸಿದ್ದಲಿಂಗಯ್ಯ ಜಿ.ಎಸ್. (ಸಂ.), (1994), ಸಾಲು ದೀಪಗಳು, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.

ಸಂತೋಷ ಹಾನಗಲ್ಲ, (2014), ಭಾಷೆ, ಬೆಂಗಳೂರು.

ಹಂಪಿ ಕನ್ನಡ ವಿಶ್ವವಿದ್ಯಾಲಯ (ಸಂ.), (2003), ವಚನ ಸಾವಿರ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

ರೇಣುಕಾ ರಮಾನಂದ, (2017), ಸಂಬಾರ ಬಟ್ಟಲು ಕೊಡಿಸು, ಬೆಂಗಳೂರು: ಕಾವ್ಯಾನಂದ ಪ್ರಕಾಶನ.

ಮಹಾದೇವಿ ಕೆ.ಪಿ., (2019), ಆರಂಭ, ಬೆಂಗಳೂರು: ಅಭಿನವ ಪ್ರಕಾಶನ.

Most read articles by the same author(s)