ಭಾರತ ಸಂವಿಧಾನ ಮತ್ತು ಬಸವಾದಿ ಶರಣರ ಚಿಂತನೆಗಳು

Authors

  • ಭೀ. ಜಿ. ನಂದನ ಉಪನ್ಯಾಸಕರು, ಕೆ.ಎನ್.ವಿ.ವಿ.ಎಸ್. ಮಹಾವಿದ್ಯಾಲಯ, ಕಿತ್ತೂರು.

Keywords:

ಸಂವಿಧಾನ, ಕಲ್ಯಾಣ, ಗಣಾಧೀಶರು, ಸಾಮಾಜಿಕ ನ್ಯಾಯ, ದಾರ್ಶನಿಕರು, ಸಾಮ್ಯಾ-ಸಾಮ್ಯತೆ, ಹುರುಳು

Abstract

ಭಾರತದ ಸಂವಿಧಾನ ಮತ್ತು ಬಸವಾದಿಶರಣರ ಚಿಂತನೆಗಳು ಎಂಬ ಎರಡು ಮಹಾನ್ ಐತಿಹಾಸಿಕ ದಾಖಲೆಗಳು. ಭಾರತದ ಸಂವಿಧಾನವನ್ನು ಮತ್ತು ಶರಣರ ವಚನ ಸಾಹಿತ್ಯವನ್ನು ಆಳವಾಗಿ ಆಧ್ಯಯನಗೈದವರಿಗೆ ವಚನ ಸಾಹಿತ್ಯದ ಪ್ರತಿಧ್ವನಿಯೇ ಭಾರತ ಸಂವಿಧಾನವೆಂಬ ಒಂದು ಸತ್ಯವು ಗೋಚರಿಸುತ್ತದೆ. ವಚನ ಸಾಹಿತ್ಯದ ವ್ಯಾಪ್ತಿಯು ಆಕಾಶದಷ್ಟು ವಿಶಾಲವಾದದ್ದು ಮತ್ತು ಸಾಗರದಷ್ಟು ಆಳವಾದದ್ದು ಹಾಗು ಅದು ವಿಶ್ವಮಾನವ ಕುಲಕೊಟಿಗೆ ಕಾಲಾತೀತವಾಗಿ ಸಂಬಂಧಿಸಿದ್ದಾಗಿದೆ. ಆದರೆ ಭಾರತದ ಸಂವಿಧಾನವು ವಿಶ್ವದ ಎಲ್ಲ ಸಂವಿಧಾನಗಳ ಒಳ್ಳೆ ಅಂಶಗಳನ್ನು ಒಳಗೊಂಡಿದ್ದರೂ ಅದರ ವ್ಯಾಪ್ತಿಯು ಮಾತ್ರ ಭಾರತಕ್ಕಷ್ಟೇ ಸಿಮಿತವಾಗಿದೆ. ಭಾರತದ ಸಂವಿಧಾನವು ಸಂಸತ್ತಿಕ ಪ್ರಜಾಪ್ತಭುತ್ವ ಮತ್ತು ಸಮಾಜಿಕ ಕಲ್ಯಾಣ ರಾಜ್ಯದ ಹಾಗು ಸಾಮಾಜಿಕ ನ್ಯಾಯದ ಕುರಿತಷ್ಟೇ ಚಿಂತಿಸಿದರೆ ವಚನ ಸಾಹಿತ್ಯವು ಆಧ್ಯಾತ್ಮಿಕ ಪ್ರಜಾಪ್ರಭುತ್ವ ಮತ್ತು ಆಧ್ಯಾತ್ಮಿಕ ಕಲ್ಯಾಣ ರಾಜ್ಯದ ಕುರಿತು ಚಿಂತಿಸಿದೆ. ಒಂದುಲಕ್ಷದ ತೋಂಬತ್ತಾರು ಸಾವಿರ ಜಂಗಮರು, ಎಲ್ಲ ಜಾತಿಯ ಸ್ತ್ರೀಪುರುಷರನ್ನೊಳಗೊಂಡ ಏಳುನೂರದ ಎಪ್ಪತ್ತು ಗಣಾಧಿಶರು ಮತ್ತು ಮೂನ್ನೂರದ ಆರವತ್ನಾಲ್ಕು ವಚನಕಾರರು, ಹನ್ನೇರಡು ಸಾವಿರ ಇಷ್ಟಲಿಂಗ ಧಾರಣೆಗೊಂಡ ದೇವದಾಸಿಯರು, ಅಲ್ಲಮಹಾಪ್ರಭುಗಳ ಅಧ್ಯಕ್ಷತೆಯಲ್ಲಿ ಚೆನ್ನಬಸವಣ್ಣನವರ ಕಾರ್ಯಾಧ್ಯೆಕ್ಷತೆಯಲ್ಲಿ ಅನುಭವಮಂಟಪವೆಂಬ ಧರ್ಮಸಂಸತ್ತನ್ನು ಅನುಷ್ಠಾನಗೊಳಿಸಲಾಗಿತ್ತು. ಹೆಣ್ಣು ಗಂಡು, ಮೇಲು ಕೀಳು ಎಂಬ ಯಾವ ಭೇದ ಭಾವವಿಲ್ಲದೆ ಚರ್ಚೆಗಳು ನಡೆದು ಸರ್ವರ ಸಮ್ಮತಿ ಪಡೆದು ವಚನ ರೂಪದಲ್ಲಿ ಅನುಮೋದಿಸಲಾಗುತ್ತಿತ್ತು. ಕಲ್ಯಾಣ ಕ್ರಾಂತಿಯಲ್ಲಿ ಅಳಿದುಳಿದ ವಚನಗಳು ಸುಮಾರು 24 ಸಾವಿರದಷ್ಟು ಸದ್ಯದಲ್ಲಿ ಸಂಶೋಧನೆಗೊಂಡಿವೆ. ಅಂದಿನ ವಿಶ್ವಕ್ಕೆ ಪ್ರಜಾಪ್ರಭುತ್ವದ ಹೆಸರನ್ನು ಕೇಳರಿಯದ 12ನೆಯ ಶತಮಾನದ ಬಸವಾದಿಶರಣರ ಆಧುನಿಕ ಪ್ರಜಾಪ್ರಭುತ್ವವನ್ನು ನಾಚಿ ತೆಲೆತೆಗ್ಗಿಸುವಂತ್ತಿತು. ಭಾರತದ ಸಂವಿಧಾನವು 296 ಜನಪ್ರತಿನಿಧಿಗಳನ್ನೊಳಗೊಂಡ ಸಂವಿಧಾನಾತ್ಮಕ ಸಮಿತಿಯ ಸದಸ್ಯರುಗಳು 22 ಮುಖ್ಯ ಸಂವಿಧಾನಾತ್ಮಕ ಸಮಿತಿಯಲ್ಲಿ ಹಾಗೂ 5 ಉಪ ಸಮಿತಿಯಲ್ಲಿ ಹಂಚಿಹೋಗಿದ್ದರು. ಅದು 2 ವರ್ಷ 11 ತಿಂಗಳು 18 ದಿನಗಳಷ್ಟು ಸಮಯವನ್ನು ತೆಗೆದುಕೊಂಡು 395 ಸಂವಿಧಾನಾತ್ಮಕ ವಿಧಿಗಳನ್ನು, 8 ಶೆಡ್ಯೂಲ್ಲುಗಳನ್ನು. 22 ಭಾಗಗಳನ್ನು ಒಳಗೊಂಡಿತ್ತು. ಪ್ರಸ್ತುತದಲ್ಲಿ 460ಕ್ಕಿಂತಲು ಹೆಚ್ಚು ಸಂವಿಧಾನಾತ್ಮಕ ವಿಧಿಗಳನ್ನು, 25 ಭಾಗಗಳನ್ನು, 12 ಶೆಡ್ಯೂಲ್ಲುಗಳನ್ನು ಒಳಗೊಂಡಿದೆ. ಇವೆರಡು ವಿಷಯಗಳ ಹೋಲಿಕೆಯ ಅಧ್ಯಯನವು ತುಂಬಾ ಪ್ರಸ್ತುತವಾಗಿದೆ ಮತ್ತು ಕುತೂಹಲಕಾರಿಯಾಗಿದೆ.

References

ರಾಜಶೇಕರ ಎಚ್. ಎಂ. (2006). ಭಾರತ ಸರ್ಕಾರ ಮತ್ತು ರಾಜಕೀಯ. ಕಿರಣ ಪ್ರಕಾಶನ್. ಮೈಸೂರು.

ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿ. (2003). ಷಟಸ್ಥಲ: ಒಂದು ಅಧ್ಯಯನ. ಡಾ.ಆರ್.ಸಿ. ಹಿರೇಮಠ ಕನ್ನಡ ಅಧ್ಯಯನ ಕೇಂದ್ರ. ಕರ್ನಾಟಕ ವಿಶ್ವವಿದ್ಯಾಲಯ. ಧಾರವಾಡ.

ಹಿರೇಮಠ ಬಿ. ಆರ್. (ಪ್ರ.ಸಂ). (2003). ಬಸವಣ್ಣನವರ ವಚನಗಳ ಸಮಾಲೋಚನೆ. ಚೆನ್ನವೀರ ಸ್ವಾಮಿಜಿ ಪ್ರತಿಷ್ಠಾನ, ಸಾರಂಗಮಠ. ಸಿಂದಗಿ.

Lohit D. Naikar. (2007). Basava And human Rights. Basava samithi. Bengaluru.

ಅಂಗಡಿ ಲಿಂಗಪ್ಪ ಲಿಂಗಬಸಪ್ಪ. (2002). ಬಸವಾದಿ ಶರಣರ ವಚನದೀಪ್ತಿ. ಚಿತ್ತರಗಿ ಇಲ್ಲಕಲ್ಲ.

ಶ್ರೀ ಶಿವರುದ್ರ ಮಹಾಸ್ವಾಮಿಗಳು (ಸಂ). (2005). ಬಸವಪಥ: ಸಂಪುಟ-2. ಬಸವಸಮಿತಿ. ಬೆಂಗಳೂರು.

ಬಾಗಲಕೋಟಿ ವ್ಹಿ. ವ್ಹಿ. (2008). ಬಸವಣ್ಣನವರ ಹಾಗೂ ಅಕ್ಕಮಹಾದೇವಿಯವರ ವಚನಗಳಲ್ಲಿ ವೈಜ್ಞಾನಿಕ ಅಂಶಗಳು. ವಿಶ್ವಚೇತನ ಪ್ರಕಾಶನ. ಗೋಕಾಕ.

ಅನ್ನದಾನೇಶ್ವರ ಮಹಾಸ್ವಾಮಿಗಳು. (2006). ಮಾನವ ಹಕ್ಕುಗಳು ಹಾಗೂ ವೀರಶೈವ ಸಂಸ್ಕೃತಿ. ಶ್ರೀ ಬಸವೇಶ್ವರ ಪೀಠ, ಕರ್ನಾಟಕ ವಿಶ್ವವಿದ್ಯಾಲಯ. ಧಾರವಾಡ.

Downloads

Published

07.05.2024

How to Cite

ಭೀ. ಜಿ. ನಂದನ. (2024). ಭಾರತ ಸಂವಿಧಾನ ಮತ್ತು ಬಸವಾದಿ ಶರಣರ ಚಿಂತನೆಗಳು. AKSHARASURYA, 3(06), 117 to 128. Retrieved from https://aksharasurya.com/index.php/latest/article/view/396

Issue

Section

ಪ್ರಬಂಧ. | ESSAY.