ಆಧುನಿಕ ಕನ್ನಡ ಕವಿತೆಗಳಲ್ಲಿ ಹೆಣ್ಣು: ಒಂದು ಅವಲೋಕನ

Main Article Content

ವಾಣಿ ಬಿ.ಎನ್.

Abstract

ಈ ಲೇಖನವು ಕನ್ನಡ ಸಾಹಿತ್ಯದ ನವೋದಯ ಕಾಲಘಟ್ಟದಲ್ಲಿ ಕವಿತೆಗಳ ಮೂಲಕ ಹೆಣ್ಣನ್ನು ಚಿತ್ರಿಸಿದ ಬಗೆಯನ್ನು ವಿಮರ್ಶಿಸುತ್ತದೆ. ಆಧುನಿಕ ಕವಿಗಳು ಮಹಿಳೆಯನ್ನು ತಾಯಿ, ಹೆಂಡತಿ, ಸತಿ ಮತ್ತು ಪ್ರೇಯಸಿಯಂತಹ ಕೌಟುಂಬಿಕ ಪಾತ್ರಗಳಲ್ಲಿ ತ್ಯಾಗ, ಸಹನೆ ಮತ್ತು ಪವಿತ್ರತೆಯ ಸಂಕೇತವಾಗಿ ವೈಭವೀಕರಿಸಿದರೆ, ಪುರುಷ ಕೇಂದ್ರಿತ ಸಮಾಜದ ನಿರೀಕ್ಷೆಗಳಿಗೆ ಅನುಗುಣವಾಗಿ ಆಕೆಯ ಅಸ್ತಿತ್ವವನ್ನು ಕಟ್ಟಿಕೊಟ್ಟಿದ್ದಾರೆ. ಲೇಖನವು ಕುವೆಂಪು, ಬೇಂದ್ರೆ, ಮಾಸ್ತಿ, ಸಾಲಿ ರಾಮಚಂದ್ರರಾಯರು ಸೇರಿದಂತೆ ಹಲವು ಕವಿಗಳ ಕವಿತೆಗಳನ್ನು ವಿಶ್ಲೇಷಿಸುತ್ತಾ, ಪುರುಷ ಪ್ರಧಾನ ದೃಷ್ಟಿಕೋನದಿಂದ ಹೊರಬಂದು ಮಹಿಳೆಯ ಸ್ವಂತಿಕೆ ಮತ್ತು ಸಂವೇದನೆಗಳನ್ನು ಅಭಿವ್ಯಕ್ತಿಸುವಲ್ಲಿನ ಮಿತಿಗಳನ್ನು ಎತ್ತಿ ತೋರಿಸುತ್ತದೆ. ಅದೇ ಸಮಯದಲ್ಲಿ ಮಹಿಳಾ ಕವಯತ್ರಿಯರು ತಮ್ಮ ಕವಿತೆಗಳ ಮೂಲಕ ಸ್ತ್ರೀ ಬದುಕಿನ ನೋವು, ಸಂಪ್ರದಾಯದ ಕಟ್ಟುಪಾಡುಗಳು ಮತ್ತು ಸಾಮಾಜಿಕ ಅಸಮಾನತೆಯ ವಿರುದ್ಧ ಧ್ವನಿ ಎತ್ತಿರುವುದನ್ನು ಲೇಖನ ದಾಖಲಿಸಿದೆ.

Article Details

Section

Research Articles

Author Biography

ವಾಣಿ ಬಿ.ಎನ್.

ಸಂಶೋಧನಾರ್ಥಿ, ಕನ್ನಡ ಅಧ್ಯಯನ ಕೇಂದ್ರ, ಜ್ಞಾನಭಾರತಿ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

How to Cite

ವಾಣಿ ಬಿ.ಎನ್. (2026). ಆಧುನಿಕ ಕನ್ನಡ ಕವಿತೆಗಳಲ್ಲಿ ಹೆಣ್ಣು: ಒಂದು ಅವಲೋಕನ. ಅಕ್ಷರಸೂರ್ಯ (AKSHARASURYA), 16(02), 80 to 86. https://aksharasurya.com/index.php/latest/article/view/2147

References

ಷರೀಫಾ ಕೆ. (ಸಂ.), (2011), ಹೊಸ ಶತಮಾನದ ಕಾವ್ಯ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.

ವೆಂಕಟೇಶಮೂರ್ತಿ ಎಚ್.ಎಸ್. (ಸಂ.), (2022), ಶತಮಾನದ ಕಾವ್ಯ, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.

ಚಂದ್ರಿಕಾ ಪಿ. (ಸಂ.), (2020), ಮಹಿಳಾ ಸಾಹಿತ್ಯ ಸಂಪುಟ ಕಾವ್ಯ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.

ಸಂಧ್ಯಾರೆಡ್ಡಿ ಕೆ.ಆರ್. (ಸಂ.), (2019), ಕಾವ್ಯ, ಬೆಂಗಳೂರು: ಕುವೆಂಪು ಭಾಷಾಭಾರತಿ ಪ್ರಾಧಿಕಾರ.

ಅಶೋಕ ಟಿ.ಪಿ., (2016), ಕಾವ್ಯಪ್ರೀತಿ, ಸಾಗರ: ಅಕ್ಷರ ಪ್ರಕಾಶನ.

Most read articles by the same author(s)