ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿ ‘ಮೊಹರಂ’
Main Article Content
Abstract
ಭಾರತದ ಸಂಸ್ಕೃತಿಯು ವಿಶ್ವದಲ್ಲಿಯೇ ವಿಶಿಷ್ಟವಾದ ಸಂಸ್ಕೃತಿ. ‘ವೈವಿಧ್ಯತೆಯಲ್ಲಿ ಏಕತೆ’ ಎಂಬ ತತ್ವಕ್ಕೆ ಭಾರತದ ಗ್ರಾಮೀಣ ಪ್ರದೇಶಗಳು ಅತ್ಯುತ್ತಮ ನಿದರ್ಶನಗಳಾಗಿವೆ. ಇಲ್ಲಿ ಧರ್ಮಗಳು ಕೇವಲ ಸಾಂಸ್ಥಿಕ ಚೌಕಟ್ಟುಗಳಾಗಿ ಉಳಿಯದೆ, ದೈನಂದಿನ ಬದುಕಿನ ಭಾಗವಾಗಿ ಪರಸ್ಪರ ಬೆರೆತು ಹೋಗಿವೆ. ಈ ಸೌಹಾರ್ದ ಸಂಸ್ಕೃತಿಗೆ ಕರ್ನಾಟಕದಲ್ಲಿ ಪ್ರಮುಖ ಸಾಕ್ಷಿಯಾಗಿ ನಿಲ್ಲುವುದು ‘ಮೊಹರಂ ಆಚರಣೆ’. ಕೋಮು ಸೌಹಾರ್ದತೆ ಎಂದರೆ ಕೇವಲ ವಿಭಿನ್ನ ಧರ್ಮದ ಜನರು ಒಟ್ಟಿಗೆ ಶಾಂತಿಯುತವಾಗಿ ವಾಸಿಸುವುದು ಮಾತ್ರವಲ್ಲ; ಅದು ಪರಸ್ಪರ ವಿಶ್ವಾಸ, ಸಹಿಷ್ಣುತೆ ಮತ್ತು ಸಹಬಾಳ್ವೆಯ ಬದುಕನ್ನು ಕಟ್ಟಿಕೊಳ್ಳುವುದಾಗಿದೆ.
ಧರ್ಮಗಳು ಜನರ ಬದುಕನ್ನು ಮುಕ್ಕಾಗಿಸುವ, ಮನಸುಗಳನ್ನು ಮುರಿಯುವ ಈ ಹೊತ್ತಿನಲ್ಲಿ ಹೃದಯದ ಬಿಂಬವೂ ಆಗಿರುವ ಮೊಹರಂ ಜನರ ಬದುಕನ್ನು ಸದಾ ಎಚ್ಚರಿಸುತ್ತಲೇ ಇರುತ್ತದೆ. ಬದುಕಿನ ವಿಕೃತಿಗಳನ್ನು ಗುರುತಿಸುವ ವಾಸ್ತವಿಕ ದೃಷ್ಟಿ, ಮತ್ತು ಅಸ್ತಿತ್ವದ ಸೂಕ್ಷ್ಮ ಸ್ತರಗಳ ಅನಾವರಣಗೊಳಿಸುವ ತೀಕ್ಷ್ಣ ಒಳನೋಟದ ದಾಖಲೆಯಾಗಿಯೂ ಈ ಹಬ್ಬ ನಮ್ಮ ಮುಂದಿದೆ. ಉಡುವ ಬಟ್ಟೆ, ಉಣ್ಣುವ ಊಟ, ನಡೆದಾಡುವ ಕಾಲ ಎಲ್ಲವೂ ರಾಜಕಾರಣಗೊಳ್ಳುತ್ತಿರುವ ಈ ದೇಶದಲ್ಲಿ ಬಹುತ್ವ ತನ್ನತನ ಕಳೆದುಕೊಳ್ಳದೆ ಕರ್ನಾಟಕ ಬಹುತ್ವದ ನಾಡಾಗಿಯೇ ಉಳಿಯಬೇಕೆಂಬ ಆಶಾವಾದ ನನ್ನದು. ನೂರಾರು ವರ್ಷಗಳಿಂದ ಗ್ರಾಮೀಣ ಭಾರತದಲ್ಲಿ ನಡೆದುಕೊಂಡು ಬಂದಿರುವ ಹಿಂದೂ-ಮುಸ್ಲಿಂ ಸೌಹಾರ್ದತೆಯ ನೆಲೆಗಳನ್ನು ಹುಡುಕುವುದು ಪ್ರಸ್ತುತವಾಗಿದೆ. ಮುಸ್ಲಿಂ ಬಾಂಧವರೇ ಇಲ್ಲದ ಹಳ್ಳಿಗಳಲ್ಲಿ ಹಿಂದೂಗಳೇ ಮೊಹರಂ ಹಬ್ಬವನ್ನು ಮುಂಚೂಣಿಯಲ್ಲಿ ನಿಂತು ಆಚರಿಸುವ ಅಪರೂಪದ ಸಂಪ್ರದಾಯವನ್ನು ವಿಶ್ಲೇಷಿಸುವುದು ಈ ಅಧ್ಯಯನದ ಮುಖ್ಯ ಆಶಯವಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ಶೇಖ್ ಅಲಿ, (2004), ಭಾರತದಲ್ಲಿ ಇಸ್ಲಾಂ ಮತ್ತು ಸೂಫಿ ಪಂಥದ ಇತಿಹಾಸ, ಬೆಂಗಳೂರು: ನವಕರ್ನಾಟಕ ಪ್ರಕಾಶನ.
ಪರಮಶಿವಯ್ಯ ಜಿ.ಎಸ್., (1982), ಕರ್ನಾಟಕ ಜನಪದ ಸಾಹಿತ್ಯ ಮತ್ತು ಸಂಸ್ಕೃತಿ, ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ.
ಸಿದ್ದಲಿಂಗ ಇಮ್ರಾಪುರ, (1979), ನಮ್ಮ ಜನಪದ ರಿವಾಯತ್ ಪದಗಳು, ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ.
ಕಲಬುರ್ಗಿ ಎಂ.ಎಂ., (1999), ಕರ್ನಾಟಕದ ಸೂಫಿ ಸಂತರು ಮತ್ತು ಸಾಂಸ್ಕೃತಿಕ ಸಾಮರಸ್ಯ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ಸಯ್ಯದ್ ಜಫರ್ ಖಾದ್ರಿ, ಕರಬಲದ ಮಹಾ ಬಲಿದಾನ ಮತ್ತು ಸೂಫಿ ನೆಲೆಗಳು, ಬೆಂಗಳೂರು: ನವಕರ್ನಾಟಕ ಪ್ರಕಾಶನ.
ಕರ್ನಾಟಕ ಗ್ಯಾಸೆಟಿಯರ್, ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗಳ ವರದಿಗಳು, ಬೆಂಗಳೂರು: ಕರ್ನಾಟಕ ಸರ್ಕಾರ.
ಪ್ರಹ್ಲಾದ್ ಕಲಾವೀರ್, (2010), ಕರ್ನಾಟಕದ ಮೊಹರಂ ಜಾನಪದ ಸಂಸ್ಕೃತಿ, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ಪೋತೆ ಹೆಚ್.ಟಿ., (2003) ಮೊಹರಂ ಪದಗಳು ಮತ್ತು ಆಚರಣೆ, ಕಲಬುರಗಿ: ಚೇತನ ಪ್ರಕಾಶನ.
ಕಲಬುರ್ಗಿ ಎಂ.ಎಂ., (1974), ಧಾರವಾಡ ಜಿಲ್ಲೆಯ ಸಾಂಸ್ಕೃತಿಕ ಇತಿಹಾಸ, ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ.
ಚಂದ್ರಶೇಖರ ಕಂಬಾರ, (1982), ಕರ್ನಾಟಕದ ಜನಪದ ರಂಗಭೂಮಿ ಮತ್ತು ಆಚರಣೆಗಳು, ಸಾಗರ: ಅಕ್ಷರ ಪ್ರಕಾಶನ.
ಭಾಸ್ಕರ್ ಟಿ.ಎಂ. ಮತ್ತು ರಾಜಶೇಖರ ಹತಗುಂದಿ, (2005), ಕಲಬುರ್ಗಿ ಜಿಲ್ಲಾ ದರ್ಶನ, ಗುಲಬರ್ಗಾ: ಪ್ರಸಾರಾಂಗ, ಗುಲಬರ್ಗಾ ವಿಶ್ವವಿದ್ಯಾಲಯ.