ಗಾಂಧಿ ಬಂದ: ಸಾಮಾನ್ಯರ ಬದುಕಿನಲ್ಲೊಂದು ಮನ್ವಂತರ

Main Article Content

ಡಾ. ಶಿಲ್ಪಶ್ರೀ ಹೆಚ್.ವಿ.

Abstract

ಡಾ. ಎಚ್. ನಾಗವೇಣಿ ಅವರ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ‘ಗಾಂಧಿ ಬಂದ’ ಕಾದಂಬರಿಯು ಸ್ವಾತಂತ್ರ್ಯ ಚಳವಳಿಯ ಕಾಲಘಟ್ಟದಲ್ಲಿ ತುಳುನಾಡಿನ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಧಾರ್ಮಿಕ ಪಲ್ಲಟಗಳನ್ನು ಅತ್ಯಂತ ನೈಜವಾಗಿ ಚಿತ್ರಿಸಿದೆ. ಮಂಗಳೂರಿಗೆ ಗಾಂಧೀಜಿಯವರು ನೀಡಿದ ಮೂರು ಭೇಟಿಗಳ ಹಿನ್ನೆಲೆಯಲ್ಲಿ ಈ ಕೃತಿ ರೂಪುಗೊಂಡಿದೆ. ಕರಾವಳಿಯ ಜನಜೀವನ, ಕಂಬಳ ಮತ್ತು ಭೂತಕೋಲದಂತಹ ಸಾಂಪ್ರದಾಯಿಕ ಆಚರಣೆಗಳ ನಡುವೆ ಗಾಂಧಿವಾದವು ಸಾಮಾನ್ಯ ಜನರ ಬದುಕಿನಲ್ಲಿ ಹೇಗೆ ಕ್ರಾಂತಿಕಾರಿ ಸಂಚಲನ ಮೂಡಿಸಿತು ಎಂಬುದನ್ನು ಇದು ಸೂಕ್ಷ್ಮವಾಗಿ ವಿವರಿಸುತ್ತದೆ. ಸನಾತನ ಕಂದಾಚಾರಗಳ ನಡುವೆಯೂ ಅಸಹಕಾರ ಚಳವಳಿ, ವಿಧವಾ ವಿವಾಹ, ಹಾಗೂ ಅಸ್ಪೃಶ್ಯತಾ ನಿವಾರಣೆಯಂತಹ ಸುಧಾರಣೆಗಳು ಹೇಗೆ ಬೇರೂರಿದವು ಎನ್ನುವುದನ್ನು ದ್ರೌಪದಿ, ಅದ್ರಾಮ, ಮಾರಪ್ಪ ಮತ್ತು ಐತುವಿನಂತಹ ಪಾತ್ರಗಳ ಮೂಲಕ ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ.

Article Details

Section

Research Articles

Author Biography

ಡಾ. ಶಿಲ್ಪಶ್ರೀ ಹೆಚ್.ವಿ.

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆ.ಆರ್. ಸಾಗರ, ಶ್ರೀರಂಗಪಟ್ಟಣ, ಮಂಡ್ಯ.

How to Cite

ಶಿಲ್ಪಶ್ರೀ ಹೆಚ್.ವಿ. (2026). ಗಾಂಧಿ ಬಂದ: ಸಾಮಾನ್ಯರ ಬದುಕಿನಲ್ಲೊಂದು ಮನ್ವಂತರ. ಅಕ್ಷರಸೂರ್ಯ (AKSHARASURYA), 16(02), 87 to 94. https://aksharasurya.com/index.php/latest/article/view/2139

References

ನಾಗವೇಣಿ ಎಚ್., (2000), ಗಾಂಧಿ ಬಂದ, ಬೆಂಗಳೂರು: ಅಭಿನವ ಪ್ರಕಾಶನ.

ರಾಮಚಂದ್ರನ್ ಸಿ.ಎನ್., (2006), ಕಾದಂಬರಿ ಮತ್ತು ಸಮಾಜ, ಬೆಂಗಳೂರು: ಅಂಕಿತ ಪುಸ್ತಕ.

ವಿವೇಕ ರೈ ಬಿ.ಎ., (1985), ತುಳು ಜಾನಪದ ಸಾಹಿತ್ಯ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.

ರಹಮತ್ ತರೀಕೆರೆ, (2001), ಕರ್ನಾಟಕದಲ್ಲಿ ಗಾಂಧಿ, ಹೆಗ್ಗೋಡು: ಅಕ್ಷರ ಪ್ರಕಾಶನ.

ಗಿರಡ್ಡಿ ಗೋವಿಂದರಾಜ, (2004), ಹೊಸಗನ್ನಡ ಕಾದಂಬರಿಗಳ ಆಶಯ, ಧಾರವಾಡ: ಸಮಾಜ ಪುಸ್ತಕಾಲಯ.