ಕುವೆಂಪು ಬೇಂದ್ರೆ: ಆಧ್ಯಾತ್ಮ ಚಿಂತನೆಗಳ ಒಳಹೊರಗು

Main Article Content

ಇಮ್ತಿಯಾಜ ಖಾನ್
ಡಾ. ಹೊಂಬಯ್ಯ

Abstract

ಕನ್ನಡ ಸಾಹಿತ್ಯದ ದಿಗ್ಗಜರಾದ ಕುವೆಂಪು ಮತ್ತು ದ. ರಾ. ಬೇಂದ್ರೆಯವರ ಸಾಹಿತ್ಯದಲ್ಲಿನ ಆಧ್ಯಾತ್ಮಿಕ ದರ್ಶನವನ್ನು ಈ ವಿಶ್ಲೇಷಣೆ ಪರಿಶೀಲಿಸುತ್ತದೆ. ಕುವೆಂಪುರವರ ‘ಜಲಗಾರ’, ‘ಯಮನ ಸೋಲು’ ಮತ್ತು ‘ಮಹಾರಾತ್ರಿ’ ನಾಟಕಗಳಲ್ಲಿನ ಅಧ್ಯಾತ್ಮವು ಪ್ರಕೃತಿ ಪ್ರೇಮ, ಮಾನವತಾವಾದ ಹಾಗೂ ಪ್ರೇಮದ ಶಕ್ತಿಯ ಮೂಲಕ ವ್ಯಕ್ತವಾಗಿದೆ. ಮತ್ತೊಂದೆಡೆ, ಬೇಂದ್ರೆಯವರ ‘ನಾಕುತಂತಿ’ ಮತ್ತು ‘ಹಕ್ಕಿ ಹಾರುತಿದೆ’ ಕವಿತೆಗಳಲ್ಲಿನ ತಾತ್ವಿಕತೆ ಹಾಗೂ ಕಾಲದ ಚಲನಶೀಲತೆಯು ವೈದಿಕ ಮತ್ತು ಅರವಿಂದರ ದರ್ಶನಗಳ ಹಿನ್ನೆಲೆಯಲ್ಲಿ ವಿವರಿಸಲಾಗಿದೆ. ಇಬ್ಬರು ಕವಿಗಳೂ ತಮ್ಮ ಕೃತಿಗಳ ಮೂಲಕ ಆಧ್ಯಾತ್ಮಿಕತೆಯನ್ನು ಕೇವಲ ಧಾರ್ಮಿಕ ಚೌಕಟ್ಟಿನಲ್ಲಿ ಬಂಧಿಸದೆ, ಅದನ್ನು ಬದುಕಿನ ಸಮಗ್ರ ಚೇತನ ಹಾಗೂ ದಾರ್ಶನಿಕ ನೆಲೆಯಲ್ಲಿ ಪ್ರತಿಪಾದಿಸಿರುವುದನ್ನು ಅವಲೋಕಿಸುವುದು ಈ ಲೇಖನದ ಮುಖ್ಯ ಆಶಯವಾಗಿದೆ.

Article Details

Section

Research Articles

Author Biographies

ಇಮ್ತಿಯಾಜ ಖಾನ್

ಸಂಶೋಧನಾರ್ಥಿ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಡಾ. ಹೊಂಬಯ್ಯ

ಮಾರ್ಗದರ್ಶಕರು, ಶ್ರೀಮತಿ ಕುಸುಮಾವತಿ ಮಿರ್ಜಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬೇಡಕಿಹಾಳ, ಚಿಕ್ಕೋಡಿ ತಾಲೂಕು.

How to Cite

ಇಮ್ತಿಯಾಜ ಖಾನ್, & ಹೊಂಬಯ್ಯ,. (2026). ಕುವೆಂಪು ಬೇಂದ್ರೆ: ಆಧ್ಯಾತ್ಮ ಚಿಂತನೆಗಳ ಒಳಹೊರಗು. ಅಕ್ಷರಸೂರ್ಯ (AKSHARASURYA), 16(02), 08 to 15. https://aksharasurya.com/index.php/latest/article/view/2142

References

ಕುವೆಂಪು, (2003), ಜಲಗಾರ, ಮೈಸೂರು: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ.

ಕುವೆಂಪು, (2003), ಯಮನಸೋಲು, ಮೈಸೂರು: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ.

ಕುವೆಂಪು, (2003), ಮಹಾರಾತ್ರಿ, ಮೈಸೂರು: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ.

ಬೇಂದ್ರೆ ದ.ರಾ., (1964), ನಾಕುತಂತಿ, ಧಾರವಾಡ: ಸಮಾಜ ಪುಸ್ತಕಾಲಯ.

ಬೇಂದ್ರೆ ದ.ರಾ., (1932), ಹಕ್ಕಿಹಾರುತಿದೆ ನೋಡಿದಿರಾ?, ಧಾರವಾಡ: ಮನೋಹರ ಗ್ರಂಥಮಾಲೆ.

ನರಹಳ್ಳಿ ಬಾಲಸುಬ್ರಮಣ್ಯ, (2004), ಬಾ ಕುವೆಂಪು ದರ್ಶನಕೆ, ಬೆಂಗಳೂರು: ಅಭಿನವ ಪ್ರಕಾಶನ.

ವಾಮನ ಬೇಂದ್ರೆ, (1974), ಸಾಹಿತ್ಯದ ವಿರಾಟ ಸ್ವರೂಪ, ಧಾರವಾಡ: ಸಮಾಜ ಪುಸ್ತಕಾಲಯ.