ಬಿ. ಆರ್. ಲಕ್ಷ್ಮಣರಾವ್ ಅವರ ಸಾಹಿತ್ಯದ ಒಂದು ಪಕ್ಷಿನೋಟ
Main Article Content
Abstract
ನವ್ಯೋತ್ತರ ಕನ್ನಡ ಕಾವ್ಯದ ಪ್ರಮುಖ ಕವಿ ಬಿ. ಆರ್. ಲಕ್ಷ್ಮಣರಾವ್. ಇವರು ಬೌದ್ಧಿಕ ಸಂಕೀರ್ಣತೆಯಿಂದ ಕಾವ್ಯವನ್ನು ಮುಕ್ತಗೊಳಿಸಿ ಜನಸಾಮಾನ್ಯರಿಗೆ ಹತ್ತಿರವಾಗಿಸಿದವರು. ಮಧ್ಯಮ ವರ್ಗದ ಬದುಕಿನ ವಾಸ್ತವತೆ, ಆಡುಭಾಷೆಯ ಸೊಗಡು, ಪ್ರೇಮದ ಲವಲವಿಕೆ ಮತ್ತು ತೀಕ್ಷ್ಣವಾದ ಹಾಸ್ಯ-ವಿಡಂಬನೆಗಳು ಇವರ ಸಾಹಿತ್ಯದ ಜೀವಾಳ. ‘ಗೋಪಿ ಮತ್ತು ಗಾಂಡಲೀನ’, ‘ಲಿಲ್ಲಿ ಪುಟ್ಟಿಯ ಹಂಬಲ’ ಮೊದಲಾದ ಕೃತಿಗಳ ಮೂಲಕ ಇವರು ಕನ್ನಡ ಕಾವ್ಯ ಲೋಕದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಕವಿತೆಗಳಷ್ಟೇ ಅಲ್ಲದೆ, ಸುಗಮ ಸಂಗೀತ ಕ್ಷೇತ್ರದಲ್ಲೂ ಸಿ. ಅಶ್ವತ್ಥ್ ಅವರೊಂದಿಗೆ ಕೈಜೋಡಿಸಿ ಕ್ರಾಂತಿಕಾರಿ ಕೊಡುಗೆ ನೀಡಿದ್ದಾರೆ. ಕಾವ್ಯವನ್ನು ಸಂವಾದದ ಮಾಧ್ಯಮವಾಗಿಸಿದ ಲಕ್ಷ್ಮಣರಾವ್ ಅವರ ಸಾಹಿತ್ಯ ಪಯಣವು ಕನ್ನಡ ಸಾಂಸ್ಕೃತಿಕ ಇತಿಹಾಸದ ಒಂದು ಪ್ರಮುಖ ಭಾಗವಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
How to Cite
References
ವೆಂಕಟೇಶ್‌ಮೂರ್ತಿ ಎಚ್.ಎಸ್., ನರಹಳ್ಳಿ ಬಾಲಸುಬ್ರಹ್ಮಣ್ಯ ಮತ್ತು ಕಮಲ ಎಂ. ಆರ್., (2006), ಚಿಂತಾಮಣಿ, ಬೆಂಗಳೂರು: ಸಿ.ವಿ.ಜಿ. ಪಬ್ಲಿಕೇಷನ್ಸ್.
ಸತ್ಯನಾರಾಯಣ ಎಚ್.ಎಸ್. ಮತ್ತು ರಾಮನಾಥ್ ಎನ್., (2021), ಗೆಳೆಯ ಲಕ್ಷ್ಮಣ, ಬೆಂಗಳೂರು: ತೇಜು ಪಬ್ಲಿಕೇಷನ್ಸ್.