Published: 2025-06-20

Table of Contents

Table of Contents

I to VII

ಲಂಬಾಣಿ ಒಗಟುಗಳಲ್ಲಿ ಸಾಮಾಜಿಕ ಸಂವೇದನೆ

ಅಣ್ಣಪ್ಪ ಎನ್. ಮಳೀಮಠ್

01 to 08

ಜನಪದ ಸಾಹಿತ್ಯ ಜನರ ಜೀವನಾಡಿಯಿಂದ ಬಂದ ಮೌಖಿಕ ಪರಂಪರೆ. ಭಾರತವು ಬಹು ಸಂಸ್ಕೃತಿಯನ್ನು ಹೊಂದಿರುವ ದೇಶ. ಇಲ್ಲಿ ಎಲ್ಲಾ ಜನಾಂಗಗಳು ತಮ್ಮದೇ ಆದ ಆಚಾರ, ವಿಚಾರ, ಸಂಸ್ಕೃತಿ, ಪರಂಪರೆಯನ್ನು ತಮ್ಮದೇ ರೀತಿಯಲ್ಲಿ ಆಚರಿಸಿಕೊಂಡು ಬಂದಿರುವುದನ್ನು ನೋಡಬಹುದು. ಜನಪದ ಸಾಹಿತ್ಯವು ಮನರಂಜನೆಯ ಭಾಗವಾಗಿ ಆರಂಭದಲ್ಲಿ ಬಂದರೂ ಅವುಗಳಲ್ಲಿ ಸಾಮಾಜಿಕ ಸಂವೇದನೆಗಳು, ನೆಲ ಸಂಸ್ಕೃತಿಯ ಮೂಲ ಬೇರುಗಳು, ಸಹಬಾಳ್ವೆಯ ಬದುಕು ಇರುವುದನ್ನು ವಿದ್ವಾಂಸರು ಗುರುತಿಸಿದರು. ಇಂತಹ ನೆಲಮೂಲ ಸಂಸ್ಕೃತಿಯನ್ನು ತನ್ನಲ್ಲಿ ಇಟ್ಟುಕೊಂಡು ಬಂದ ಜನಾಂಗಗಳಲ್ಲಿ ಲಂಬಾಣಿ ಸಮುದಾಯವು ಒಂದು. ಆ ಸಮುದಾಯದಲ್ಲಿನ ಒಗಟುಗಳನ್ನು ಪ್ರಾತಿನಿಧಿಕವಾಗಿ ಆಯ್ಕೆಮಾಡಿಕೊಂಡು, ಅವುಗಳಲ್ಲಿನ ಸಾಮಾಜಿಕ ಸಂವೇದನೆಯನ್ನು ವಿವೇಚಿಸುವುದು ಈ ಲೇಖನದ ಉದ್ದೇಶ. 
ಒಗಟುಗಳ ಕಾರ್ಯ ಕುಶಲತೆಯು ಜನಾಂಗದಿಂದ ಜನಾಂಗಕ್ಕೆ ಭಿನ್ನವಾಗಿ ಕಂಡುಬಂದರು ಅವುಗಳ ಉದ್ದೇಶ ಮಾತ್ರ ಒಂದೇ ಆಗಿ ಮೇಲ್ನೋಟಕ್ಕೆ ಕಂಡುಬರುತ್ತದೆ. ಅದು ಆ ಸಮುದಾಯದ ಜೀವನಾಡಿಯಾಗಿ ತಲೆಮಾರಿನಿಂದ ತಲೆಮಾರಿಗಿ ಹರಿದು ಬಂದಿರುತ್ತದೆ. ಅಂತೆಯೇ ಹಿಂದುಳಿದ ಹಾಗೂ ಗಿರಿಜನ ವರ್ಗಗಳಲ್ಲಿ ಒಂದಾದ ಲಂಬಾಣಿಗರ ಭಾಷೆಯಲ್ಲಿ ಹಾಡು, ಕಥೆ, ಗಾದೆಗಳಂತೆಯೇ ಒಗಟುಗಳು ಕೂಡ ಅಪಾರ ಪ್ರಮಾಣದಲ್ಲಿ ಇವೆ. ಇವು ಒಂದು ಸಮುದಾಯದ ಜನಾಂಗಿಕ ವೈಶಿಷ್ಟ್ಯವನ್ನು, ಸಂಸ್ಕೃತಿಯ ಮೂಲ ಭೇರುಗಳನ್ನು ದಟ್ಟವಾಗಿ ಗರ್ಭಿಕರಿಸಿಕೊಂಡಿವೆ. ಅವುಗಳನ್ನು ಸಾಂಸ್ಕೃತಿಕ ಒಗಟುಗಳು, ಒಗಟು ಕಥೆಗಳು, ಸವಾಲುಗಳು, ಗೌಪ್ಯ ಸಂಭಾಷಣೆಗಳು ಮುಂತಾಗಿ ಈ ಒಗಟುಗಳನ್ನು ವರ್ಗಿಕರಿಸಿ ಅಧ್ಯಯನ ಮಾಡಲಾಗಿದೆ. 
ಲಂಬಾಣಿ ಒಗಟುಗಳು ಆ ಸಮುದಾಯದ ನಿಗೂಢ ಲೋಕವನ್ನು ಹಾಗೂ ಅದರ ಅಂತರ್ಯದಲ್ಲಿರುವ ಸಮಾಜದ ಹಲವು ನೆಲೆಗಳನ್ನು, ನೆಲ ಸಂಸ್ಕೃತಿಯ ಬೇರುಗಳನ್ನು ತೆರೆದಿಡುತ್ತವೆ. ಹೀಗೆ ಒಂದು ಜನಾಂಗದ ಮೌಖಿಕ ಸಂಸ್ಕೃತಿಯ ಜಗತ್ತನ್ನು ಆಪ್ಯವಾಗಿ ತೆರೆದಿಡುವ ಕರ್ಯವನ್ನು ಈ ಒಗಟುಗಳು ನಿರ್ವಹಿಸುತ್ತವೆ. 

Read More »

ಧಾರ್ಮಿಕ ಸಾಮರಸ್ಯ ಹಾಗೂ ವೈಚಾರಿಕ ವಿಚಾರಗಳು

ಅಶೋಕ ಜಿ. ಎಸ್.

09 to 15

ಯುವಕರು ಪ್ರತಿಯೊಂದು ಧರ್ಮವನ್ನು ಸಮಾನ ದೃಷ್ಟಿಯಿಂದ ನೋಡು ಬೇಕು. ಎಲ್ಲರೂ ಎಲ್ಲ ಧರ್ಮವನ್ನು ಗೌರವಿಸಬೇಕು. ಗೌರವ ಎಂದರೆ ಬೇರೆ ಧರ್ಮವನ್ನು ಗೌರವಿಸಿದರೆ ನಮ್ಮ ಧರ್ಮವನ್ನೆ ಗೌರವಿಸಿದಂತಾಗುತ್ತದೆ ಎಂದು ಕುವೆಂಪು ಹೇಳುತ್ತಾರೆ
ವಿದ್ಯಾರ್ಥಿಗಳು, ಯುವಕರು ‘ಭತ್ತ ಬೆಳೆಯುವ ಗದ್ದೆಗಳಾಗಬೇಕು’ ಭತ್ತ ತುಂಬುವ ಚೀಲಗಳಾಗಬಾರದು’ ಎಂದು ಕುವೆಂಪು ಹೇಳುತ್ತಾರೆ. ಇಂದು ರಾಜಕೀಯ ಪ್ರೇರಿತವಾಗಿ ವಿಧ್ಯಾರ್ಥಿಗಳು ಯಾವುದೇ ಸಾಹಿತ್ಯ, ಇತಿಹಾಸ ಓದದೇ, ಯಾವುದೇ ಗ್ರಂಥಗಳನ್ನು ಓದದೆ ಭತ್ತ ಬೆಳೆಯುವ ಗದ್ದೆಗಳೂ ಆಗಿಲ್ಲ, ಭತ್ತ ತುಂಬುವ ಚೀಲಗಳೂ ಆಗಿಲ್ಲ ಬರಿ ಸೋರುವ ಚೀಲಗಳಾಗಿವೆ. ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಬಿಡುವ ಪರಿಸ್ಥಿತಿಯುಂಟಾಗಿವೆ. ವಿದ್ಯಾರ್ಥಿಗಳು ರಾಜಕೀಯ ಸಹಭಾಗಿತ್ವದಿಂದ ದೂರವಿರಬೇಕೆಂದು 1948ರಲ್ಲಿ ರಾಧಕೃಷ್ಣನ್ ಆಯೋಗದಲ್ಲಿ ಉಲ್ಲೇಖವಿದೆ. ‘ವಿದ್ಯಾರ್ಥಿಗಳು ರಾಜಕೀಯ ಸಹಭಾಗಿತ್ವದಿಂದ ದೂರವಿರಬೇಕು’ ಏಕೆಂದರೆ ರಾಜಕಾರಣ ರಾಜಕೀಯ ಜೀವನ ಸರಿಯಾಗಿಲ್ಲ. ಅದು ವಿದ್ವತ್ತುಗಳಿಸುವ ಬದಲು ವಿದ್ವತ್ತುನ್ನು ಹಾಳುಮಾಡುತ್ತದೆ. 
ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಬೇಕು 1948 ರಾಧಕೃಷ್ಣನ್ ಆಯೋಗ, ಮೊದಲಿಯಾರ್ ಆಯೋಗ 1956, ಕೋಠಾರಿ ಆಯೋಗ 1966, 1984 ರಾಷ್ಟ್ರೀಯ ಶಿಕ್ಷಣ ನೀತಿ ಹೀಗೆ ಎಲ್ಲಾ ಆಯೋಗಗಳು ಪಠ್ಯತರ ಚಟುವಟಿಕೆ ಶೇಕಡ 70 ಭಾಗ ಇರಬೇಕು ಪಠ್ಯ ಚಟುವಟಿಕೆ ಶೇಕಡ 30 ಭಾಗ ಇರಬೇಕು ಎಂದು ಹೇಳಿವೆ. ಇದನ್ನು ಕುರಿತು ತಮ್ಮ ಅಭಿಪ್ರಾಯವನ್ನು ಕುವೆಂಪು ಅವರು ವ್ಯಕ್ತಪಡಿಸಿದ್ದಾರೆ. ಯುವಕರು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದು ಕುವೆಂಪು ಹೇಳುತ್ತಾರೆ. 
ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಪ್ರತಿಯೊಂದು ಆಯೋಗಗಳನ್ನು ಅವಲೋಕಿಸಿದಾಗ ಕಂಡುಬರುವುದು ಪಠ್ಯೇತರ ಚಟುವಟಿಕೆಯಲ್ಲಿ ಕಡಿಮೆ ಅವಕಾಶ ಸಿಗುತ್ತಿರುವುದು ಕಂಡು ಬರುತ್ತದೆ. ವಿದ್ಯಾರ್ಥಿಗಳು ಅದರಲ್ಲೂ ಯುವಜನಾಂಗ ರಾಜಕೀಯ ಮತ್ತು ಗುಂಪುಗಾರಿಕೆಯಿಂದ ದೂರವಿರಬೇಕು. ಇವರ ನಡತೆ ಸತ್ಯ ಮತ್ತು ಮೌಲ್ಯಯುತವಾಗಿರಬೇಕು. ಆದರೆ ಇಂದು ಪಠ್ಯವನ್ನೇ ಶೇಕಡ 100 ರಷ್ಟಾಗಿ ಮಾಡಿಕೊಂಡು ವಿದ್ಯಾರ್ಥಿಗಳು ಪುಸ್ತಕದ ಹುಳುಗಳಾಗುತ್ತಿದ್ದಾರೆ. ಈಗ ಪುಸ್ತಕವನ್ನು ಬಿಟ್ಟು ಯಂತ್ರರ್ಷೀ ಹುಳುವಾಗುತ್ತಿದ್ದಾರೆ ಎಂದು ಕುವೆಂಪು ಅಭಿಪ್ರಾಯ ಪಡುತ್ತಾರೆ. 

Read More »

ಸಮಾಜದ ಮೇಲೆ ಸಿನಿಮಾದ ಪ್ರಭಾವ

ಅಸ್ಮತ್

16 to 22

ಮನುಷ್ಯ ತನ್ನ ಬದುಕಿನ ಪಯಣದಲ್ಲಿ ಅದ್ಬುತವಾದ ವಸ್ತು, ವಿಷಯಗಳನ್ನು ಸೃಷ್ಠಿಸಿಕೊಂಡಿದ್ದಾನೆ. ಅವನ ಕಲ್ಪನಾ ಶಕ್ತಿ, ಪ್ರತಿಭೆ ಇದೆಲ್ಲವು ಜೊತೆಗೂಡಿ ಹುಟ್ಟಿಕೊಂಡ ಮತ್ತೊಂದು ಅದ್ಬುತವೆಂದರೆ ಅದು ಸಿನಿಮಾ. ಮನರಂಜನೆಯ ಉದ್ದೇಶದಿಂದ ಹುಟ್ಟಿಕೊಂಡ ಸಿನಿಮಾವೆಂಬುವುದು ಅದರ ಪರಿಧಿಯನ್ನು ವಿಸ್ತರಿಸಿಕೊಂಡು ಒಂದು ಕಾಲಘಟ್ಟದ ದಾಖಲೆಯಾಗಿ ಸಮಕಾಲೀನ ಪ್ರಜ್ಞೆಯನ್ನು ನಮ್ಮ ಮುಂದಿಡುತ್ತಿದೆ. ಇದರೊಂದಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಮಾಜವನ್ನು ಪ್ರತಿಬಿಂಬಿಸುವ ಮತ್ತು ರೂಪಿಸುವ ಸಾಂಸ್ಕೃತಿಕ ಕಲಾಕೃತಿಯಾಗಿದೆ. ಒಂದು ತಲೆಮಾರನ್ನು ಎಚ್ಚರಿಸುತ್ತಲೇ ಸಮಾಜದ ಬದಲಾವಣೆಗೆ ಸಹಾಯಕವಾಗಿ ಒಂದಷ್ಟು ಪಿಡುಗುಗಳನ್ನು ತೊಲಗಿಸುವ ವೇದಿಕೆಯಾಗಿ ಮಾರ್ಪಾಡಾಗಿದೆ. ಬಹಳ ಮುಖ್ಯವಾಗಿ ಯುವ ಸಮೂಹದ ಮೇಲೆ ಸಿನಿಮಾ ಬೀರುತ್ತಿರುವ ಪ್ರಭಾವವೇನು? ಸಿನಿಮಾ ಕೇವಲ ಮನರಂಜನೆಯ ಮಾಧ್ಯಮವಾಗಿ ಮಾತ್ರ ಉಳಿದಿದೆಯಾ? ನಟ ನಟಿಯರು ಕಲಾವಿದರಾಗಿ ತಮ್ಮ ಜವಬ್ದಾರಿಗಳನ್ನು ಸರಿಯಾಗಿ ನಿರ್ವಹಿಸುತ್ತಿರುವರೇ? ಎಂಬ ವಿಚಾರಗಳ ಜೊತೆಗೆ ಸಿನಿಮಾ ಸಮಾಜದ ಮೇಲೆ ಬೀರುತ್ತಿರುವ ಸಕಾರಾತ್ಮಕ ಮತ್ತು ನಕಾರಾತ್ಮಕ ವಿಚಾರಗಳ ಬಗ್ಗೆ ವಿವರಿಸಲಾಗಿದೆ. 

Read More »

ಕನ್ನಡ ಕಲಾ ಸಿನೆಮಾ ಪರಂಪರೆ: ಸಾಹಿತ್ಯಕ-ಸಾಮಾಜಿಕ ಬದ್ಧತೆ

ಕುಮಾರ ಎಂ.

23 to 31

ಸಿನೆಮಾ ಆರಂಭದಿಂದಲೂ ಒಂದು ಪ್ರಭಾವಿಶಾಲಿಯಾದ ಮಾಧ್ಯಮವಾಗಿದೆ. ಇದಕ್ಕೆ ಅದು ಒಳಗೊಳ್ಳುವ ಕಲೆಯ ಹಲವು ಸಂಗತಿಗಳು ಕಾರಣವಾಗಿವೆ. ಹೀಗಾಗಿ ಸಿನೆಮಾ ಜನರ ಬದುಕನ್ನು ಪ್ರಭಾವಿಸಬಲ್ಲ ಮಾಧ್ಯಮ ಎನಿಸಿದೆ ಮತ್ತು ಆಕರ್ಷಣೆಗೆ ಪಾತ್ರವಾಗಿದೆ. ಈ ಹಿನ್ನೆಲೆಯಲ್ಲಿ ಸಾಹಿತ್ಯದಂತೆ ಇದನ್ನು ಸಹ ಸಮಾಜದ ʼಪ್ರತಿ ಬಿಂಬʼ ಇಲ್ಲವೆ ʼಗತಿಬಿಂಬʼ ಎನ್ನಬಹುದಾಗಿದೆ. ಅಂದರೆ ಒಂದು ಸಾಹಿತ್ಯ ಕೃತಿ ಓದುಗನ ಮೇಲೇ ಪ್ರಭಾವವನ್ನು ಬೀರು ವಂತೆ, ಪ್ರೇಕ್ಷಕನು ಕೂಡ ಒಂದು ಸಿನೆಮಾದ ವೀಕ್ಷಣೆಯಿಂದ ಪ್ರಭಾವಿತನಾಗುವನೆಂದು ಭಾವಿಸಬಹುದಾಗಿದೆ. ಆದರೂ ಇವೆರಡು ಭಿನ್ನ ಮಾಧ್ಯಮಗಳು ಎಂಬ ತಿಳುವಳಿಕೆ ಅಗತ್ಯ. ಏಕೆಂದರೆ ಸಾಹಿತ್ಯ ಕೃತಿಯೊಂದು ಸಿನೆಮಾ ಮಾಧ್ಯಮಕ್ಕೆ ಬಂದಾಗ ಅದು ತನ್ನ ಸ್ವರೂಪ ದಲ್ಲಿ ಪರಿವರ್ತನೆ ಹೊಂದಿ ʼಚಿತ್ರಕಥೆʼ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತದೆ. ಹೀಗೆ ಸಾಹಿತ್ಯದ ರೂಪವೊಂದು ಚಿತ್ರಕಥೆಯಾಗಿ ಸಿನೆಮಾ ಮಾಧ್ಯಮದ ಮೂಲಕ ಅಭಿವ್ಯಕ್ತಿ ಗೊಳ್ಳುವಾಗ ಅದು ಒಳಗೊಳ್ಳುವ ಸಾಹಿತ್ಯಕ-ಸಾಮಾಜಿಕ ಬದ್ಧತೆಯನ್ನು ಕನ್ನಡದ ʼಕಲಾ ಸಿನೆಮಾʼ, ʼಪರ್ಯಾಯ ಸಿನೆಮಾʼ, ʼಸಮಾನಾಂತರ ಸಿನೆಮಾʼಗಳು ಎಂದು ಕರೆಸಿಕೊಳ್ಳುವ ಚಿತ್ರಗಳ ಪರಂಪರೆಯನ್ನು ಆಧರಿಸಿ ವಿಶ್ಲೇಷಿಸುವುದು ಈ ಲೇಖನದ ಪ್ರಮುಖ ಉದ್ದೇಶ ವಾಗಿರುತ್ತದೆ. 

Read More »

ಹಸಿವಿನ ವೇದನೆ

ಮಂಜುನಾಥ ಎಂ.ಎಂ.

32 to 36

ಆರ್ಥಿಕ ಶೋಷಣೆ, ನಿರುದ್ಯೋಗ, ಭ್ರಷ್ಟಾಚಾರ, ಬೆಲೆ ಏರಿಕೆ ಮುಂತಾದ ಅಂಶಗಳು ಬಡವರ ಹಸಿವಿನ ಉಲ್ಬಣಕ್ಕೆ ಕಾರಣವಾಗಿವೆ. ಆಹಾರ ಉತ್ಪಾದನೆಯ ಏರಿಕೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಜನಸಂಖ್ಯೆ ಏರುತ್ತಾ ಹೋಗಿರುವುದರಿಂದ ಭೂಮಾಲಿಕರು ಮತ್ತು ಬಂಡವಾಳಶಾಹಿಗಳು ಕೂಲಿಕಾರರನ್ನು ಮತ್ತು ಕಾರ್ಮಿಕರನ್ನು ಶೋಷಣೆ ಮಾಡಿದ್ದರಿಂದಲೇ ಬಡತನ ಮತ್ತು ಹಸಿವಿನ ಪ್ರಮಾಣ ಹೆಚ್ಚಾಗಲು, ಬೇರೂರಲು ಕಾರಣವಾಯಿತು. 

Read More »

ಚಲನಚಿತ್ರದಲ್ಲಿನ ಲಿಂಗ ಸಂಬಂಧಿತ ಸಮಸ್ಯೆಗಳು

ಎಸ್.ಯು. ಪ್ರಜ್ವಲಾ

37 to 43

ಚಲನಚಿತ್ರವು ಸಮಾಜದ ಜೀವನಶೈಲಿ ಸಂಸ್ಕೃತಿಯ ಪ್ರತಿಬಿಂಬ. ಹಾಗೂ ಸಮಾಜದ ಮೇಲೆ ಪ್ರಭಾವ ಬೀರುವ ಶಕ್ತಿಯುತವಾದ ಮಾಧ್ಯಮವಾಗಿದೆ. ಆದರೆ ಇದರಲ್ಲಿ ಲಿಂಗ ಸಂಬಂಧಿತ ಅಸಮಾನತೆ ಹಾಗೂ ಸವಾಲುಗಳು ಹೆಚ್ಚಿವೆ. ಈ ಪ್ರಬಂಧವು ಸಿನಿಮಾ ಮಾಧ್ಯಮದಲ್ಲಿ ಲಿಂಗಗಳ ಆಧಾರದ ಮೇಲೆ ನಡೆಯುತ್ತಿರುವ ತಾರತಮ್ಯ ಹಾಗೂ ತುಳಿತ ಮತ್ತು ಸಂವೇದನೆ ಸಂಬಂಧಿತ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತದೆ. ಚಿತ್ರೋದ್ಯಮವು ಒಂದು ಸಾರ್ವಜನಿಕ ಅರಿವು, ವಿನೋದ ಹಾಗೂ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಒಂದು ಪ್ರಧಾನವಾದ ಮಾಧ್ಯಮವಾಗಿದೆ. ಅದರಲ್ಲಿ ನಡೆಯುವ ಮಹಿಳಾ ಪಾತ್ರಗಳ ಚಿತ್ರಣ, ಲಿಂಗ ಅಸಮಾನತೆ, ಶೋಷಣೆ, ದೇಹ ಸೌಂದರ್ಯವನ್ನು ಪ್ರಧಾನವಾಗಿರಿಸಿ ಚಿತ್ರಿಸುವುದು ಹಾಗೂ ಲೈಂಗಿಕ ಶೋಷಣೆಗಳು ಮತ್ತು ಲಿಂಗಗಳ ಆಧಾರದ ಮೇಲೆ ನಡೆಯುವ ಭತ್ಯೆ ವಿತರಣೆಯು ಸೇರಿದ ಸಮಸ್ಯೆಗಳಾಗಿವೆ. 
ಸಿನಿಮಾ ಕ್ಷೇತ್ರದಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಗಳು, ಕೌಶಲ್ಯ ಹೊಂದಿದ ಅಥವಾ ಹೊಂದಿರದ ಸಂವೇದನಶೀಲ ಪಾತ್ರಗಳ ಕೊರತೆ, ಜಾಹೀರಾತುಗಳಲ್ಲಿ ಸ್ತ್ರೀಯರನ್ನು ತೊಡಗಿಸಿಕೊಳ್ಳುವ ರೀತಿ ಇವು ಸಮಾಜದ ಮೇಲೆ ಬೀರುತ್ತಿರುವ ಪರಿಣಾಮಗಳು ಈ ಪ್ರಬಂಧದ ಪ್ರಮುಖ ಚಿಂತನೆಗಳಾಗಿವೆ. ಜೊತೆಗೆ ಭಾರತೀಯ ಹಾಗೂ ಕನ್ನಡ ಚಿತ್ರರಂಗ ಉದ್ಯಮದಲ್ಲಿ ಲಿಂಗ ಅಸಮಾನತೆಯ ಶ್ರೇಣಿಗಳನ್ನು ವಿಶ್ಲೇಷಿಸಲಾಗಿದ್ದು, ಸಮಾಜದಲ್ಲಿ ಸಮಾನವಾದ ಲಿಂಗ ಭಾವನೆಗಳು ಚಿತ್ರ ಮಾಧ್ಯಮದಲ್ಲಿ ಹೇಗೆ ಬಳಸಬೇಕು ಎಂದು ವಿವರಿಸಲಾಗಿದೆ. 

Read More »

ಕನ್ನಡ ಸಿನಿಮಾದಲೊಂದು ಎದೆಯ ಭಾಷೆ

ಕೆ. ಶ್ರೀಪತಿ ಹಳಗುಂದ

44 to 51

ಕನ್ನಡ ಚಲನ ಚಿತ್ರಗೀತೆಗಳಿಗೆ ಶತಮಾನದ ಇತಿಹಾಸವಿದೆ. ಅಲ್ಲಿ ಪ್ರೀತಿ, ಪ್ರೇಮ, ಪ್ರಣಯ, ಸರಸ, ವಿರಸ, ವೇದನೆ, ಸಂವೇದನೆ, ನಿವೇದನೆ, ಆಲಾಪನೆ, ಎಲ್ಲವೂ ಇದೆ. ಅದರಲ್ಲೂ ನಾಡು, ನುಡಿಗೆ ಸಂಬಂಧಿಸಿದಂತೆ ನೂರಾರು ಸಿನಿಮಾಗಳು, ಗೀತೆಗಳು ಬಂದಿವೆ. ಭಾಷ ಶಾಸ್ತ್ರಜ್ಞರ ಪ್ರಕಾರ ಪ್ರತಿ ಹನ್ನೆರಡರಿಂದ ಹದಿನೈದು ಕಿಲೋಮೀಟರ್ ಗೆ ಭಾಷೆ ಸೂಕ್ಷ್ಮವಾಗಿ ಬದಲಾಗುತ್ತಿರುತ್ತದೆ. ಕನ್ನಡದ ಸಾಮ್ರಾಟ ಎಂಬ ಚಿತ್ರದಲ್ಲಿ ನಮ್ಮಕಡೆ ಶಿರಾ ಅಂದರೆ ಕೇಸರಿಬಾತ್ ಅಂತಾರೆ, ಎಂಬ ಗೀತೆ ಈ ವಾಸ್ತವವನ್ನು ನಮ್ಮ ಮುಂದೆ ತೆರದಿಡುತ್ತದೆ. ಹೌದು ವಿನೋದ ಭಾವೆ ಹೇಳುವಂತೆ ಕನ್ನಡ ಲಿಪಿಗಳ ರಾಣಿ. ಈ ಗೀತೆಯೊಳಗಿನ ಸಾರವೂ ಇದೇ ಆಗಿದೆ. ಕನ್ನಡ ಭಾಷೆ, ಸಂಸ್ಕೃತಿ ಉಳಿಸುವಲ್ಲಿ ಚಲನಚಿತ್ರಗೀತೆಗಳ ಪಾತ್ರ ಗಮನರ್ಹವಾಗಿದೆ. 

Read More »

ಮಹಿಳಾ ಸಬಲೀಕರಣದಲ್ಲಿ ಕನ್ನಡ ನಿಯತಕಾಲಿಕೆಗಳ ಪಾತ್ರ

ಸುಜೀಶ್ ಎಸ್.

52 to 56

ಭಾರತೀಯ ಸಮಾಜ ಪುರುಷ ಪ್ರಧಾನವಾದುದು. ಶತಶತಮಾನಗಳಿಂದಲೂ ಹೆಣ್ಣನ್ನು ಎರಡನೇಯ ದರ್ಜೆಯ ಪ್ರಜೆಯನ್ನಾಗಿ ನಡೆಸಿಕೊಂಡು ಬಂದಿರುವುದನ್ನು ಕಾಣಬಹುದಾಗಿದೆ. ಈ ಬಗೆಯ ಸಾಮಾಜಿಕ ವ್ಯವಸ್ಥೆಯಿಂದ ಶೋಷಣೆಗೆ ಗುರಿಯಾದ ಹೆಣ್ಣು ಆ ಶೋಷಣೆಯಿಂದ ಹೊರಬರಲು ನಿರಂತರವಾದ ಪ್ರಯತ್ನ ಮಾಡಿದ ಫಲವೆಂಬಂತೆ ಇಂದು ಆಕೆಯ ಸಾಮಾಜಿಕ ಸ್ಥಿತಿ-ಗತಿಯಲ್ಲಿ ಕೊಂಚ ಸುಧಾರಣೆಯನ್ನು ಕಾಣಲು ಸಾಧ್ಯವಾಗುತ್ತಿದೆ. ಈ ಬಗೆಯ ಸುಧಾರಣೆಯಲ್ಲಿ ಸಮೂಹ ಮಾಧ್ಯಮಗಳ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. 
ಸಮೂಹ ಮಾಧ್ಯಮಗಳು ಸುಂದರ ಸಮಾಜ ನಿರ್ಮಾಣದಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಪ್ರಸ್ತುತ ಸಮೂಹ ಮಾಧ್ಯಮಗಳು ಹಣ ಗಳಿಕೆಯ ಭರದಲ್ಲಿ ತನ್ನ ನೈತಿಕ ಮೌಲ್ಯವನ್ನು ಮರೆತಂತಿದೆ. ಆದಾಗಿಯೂ ಕೆಲವು ಸಮೂಹ ಮಾಧ್ಯಮಗಳು ತಮ್ಮ ಸಾಮಾಜಿಕ ಜವಾಬ್ದಾರಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿರುವುದು ಸಹ ಪ್ರಶಂಸನೀಯ ಸಂಗತಿಯಾಗಿದೆ. ಸಮೂಹ ಮಾಧ್ಯಮಗಳಲ್ಲಿ ನಿಯತಕಾಲಿಕೆಯೂ ಸಹ ಒಂದಾಗಿದೆ. ಆಧುನೀಕರಣದ ಆವಿಷ್ಕಾರದಿಂದಾಗಿ ನಿಯತಕಾಲಿಕೆಗಳು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿರುವ ಪ್ರಸ್ತುತ ದಿನಮಾನಗಳಲ್ಲಿಯೂ ಸಹ ಕೆಲವು ನಿಯತಕಾಲಿಕೆಗಳು ಸಾಮಾಜಿಕ ಜವಬ್ದಾರಿಯನ್ನು ಹೊತ್ತು ಕಾರ್ಯನಿರ್ವಹಿಸುತ್ತ ಬರುತ್ತಿವೆ. 
ಈ ನಿಯತಕಾಲಿಕೆಗಳು ಸಮಾಜಮುಖಿಯಾದ ವಸ್ತುವನ್ನು ಆಯ್ಕೆ ಮಾಡಿಕೊಂಡು ಲೇಖನ, ಕಥೆ, ಕವನಗಳನ್ನು ಪ್ರಕಟಿಸುವ ಮೂಲಕ ಸಮಾಜವನ್ನು ತಿದ್ದುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿವೆ. ಈ ನೆಲೆಯಲ್ಲಿ ಕನ್ನಡ ನಿಯತಕಾಲಿಕೆಗಳು ಮಹಿಳೆಯರ ಸಬಲೀಕರಣದಲ್ಲಿ ಬೀರಿರುವ ಪ್ರಭಾವವನ್ನು ಗುರುತಿಸುವ ಪ್ರಯತ್ನವನ್ನು ಈ ಲೇಖನದ ಮೂಲಕ ಮಾಡಲಾಗಿದೆ. 

Read More »

ಕನ್ನಡ ಚಲನಚಿತ್ರಗಳಲ್ಲಿ ಚದುರಂಗ ಮತ್ತು ತ. ರಾ. ಸು. ಅವರ ಕಾದಂಬರಿಗಳು

ಉಮಾಶಂಕರ ಓ.ಎಂ.

57 to 63

ಸಾಹಿತ್ಯ ಮತ್ತು ಸಿನಿಮಾ ಸದಭಿರುಚಿಯ ಸೃಜನಾತ್ಮಕ ಕಲೆಗಳಾಗಿವೆ. ಒಂದು ಅಕ್ಷರ ರೂಪವಾಗಿದ್ದರೆ ಮತ್ತೊಂದು ದೃಶ್ಯ ರೂಪದ್ದಾಗಿದೆ. ಜಗತ್ತಿನ ಬಹುತೇಕ ಭಾಷೆಯ ಸಿನಿಮಾ ರಂಗಗಳು ಸಾಹಿತ್ಯ ಕ್ಷೇತ್ರದ ಕಥೆ, ಕಾದಂಬರಿ ಹಾಗೂ ಭಾವಗೀತೆಗಳನ್ನು ಆಶ್ರಯಿಸಿ ಬೆಳೆದಿವೆ. ಇಂತಹ ಪಯಣಕ್ಕೆ ದೀರ್ಘವಾದ ಇತಿಹಾಸವಿದೆ. ಕನ್ನಡ ಚಲನಚಿತ್ರ ಕ್ಷೇತ್ರದ ಇತಿಹಾಸವನ್ನು ಗಮನಿಸಿದಾಗ ಪ್ರಗತಿಶೀಲ ಸಾಹಿತ್ಯ ಪಂಥದ ಸಾಹಿತಿಗಳು ರಚಿಸಿದ ಕಥೆ, ಕಾದಂಬರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಚಲನಚಿತ್ರಗಳಾಗಿರುವುದು ಕಂಡುಬರುತ್ತದೆ. ಇಲ್ಲಿ ಕೆಲವೊಮ್ಮೆ ಸಾಹಿತ್ಯ ಗೆದ್ದು ಸಿನಿಮಾ ಸೋತಿರುವ ನಿದರ್ಶನಗಳಿವೆ. ಕೆಲವು ಸಿನಿಮಾಗಳ ಕಥೆ ಸೋತು ಹಾಡುಗಳಿಂದಾಗಿ ಜನಪ್ರಿಯಗೊಂಡ ಪ್ರಸಂಗಗಳಿವೆ. 

Read More »

ಹಾನಗಲ್ಲ ಪರಿಸರದ ಎರಡು ಅಪ್ರಕಟಿತ ಪೆಣ್ಬುಯಲ್ ಶಾಸನಗಳು

ದೇವರಡ್ಡಿ ಹದ್ಲಿ

64 to 70

ಪ್ರಾಚೀನ ಕರ್ನಾಟಕದಲ್ಲಿ ವೀರ ಮೌಲ್ಯವು 10ನೇ ಶತಮಾನದ ಯುಗ ಧರ್ಮವಾಗಿತ್ತು ಅಂತೆಯೇ ಪಂಪ ರನ್ನ ಜನ್ನ ಮೊದಲಾದ ಕವಿಪುಂಗವರು ತಮ್ಮ ಕಾವ್ಯಗಳಲ್ಲಿ ಅಂದಿನ ಸಾಮಾಜಿಕ ಪರಿಸರದಲ್ಲಿ ಪ್ರಚಲಿತದಲ್ಲಿದ್ದ ಆಚರಣೆ- ಸಂಸ್ಕೃತಿಯನ್ನು ಸಮದಂಡಿಯಾಗಿ; ಸಂದರ್ಭ ಸಿಕ್ಕಾಗಲೆಲ್ಲ ಉಲ್ಲೇಖಿಸಿದ್ದಾರೆ. ಅಂಥ ಪ್ರಸಂಗಗಳಲ್ಲಿ ಅಂದಿನ ಸಮಾಜದ ಧ್ಯೇಯ-ಧೋರಣೆಗಳು ಏನಾಗಿದ್ದವು ಎಂಬುದರ ಸ್ಪಷ್ಟವಾದ ಪರಿಕಲ್ಪನೆ ನಮಗೆ ದೊರಕುತ್ತದೆ. ಪಾನುಂಗಲ್ಲಯ್ನೂಱು ಪರಿಸರದ ಶಾಸನಗಳು ಇಂಥ ಅನೇಕ ಪ್ರಸಂಗಗಳನ್ನು ಉಲ್ಲೇಖಿಸಿವೆ. ಪ್ರಸ್ತುತ ಅಂಥ ಸಾಮಾಜಿಕ ದುರ್ಭರ ಪರಿಸ್ಥಿತಿಯಲ್ಲಿ ಹೋರಾಡಿ ‘ಸ್ತ್ರೀಯರ ಮಾನ’ ರಕ್ಷಣೆ ಮಾಡಿ ಹೋರಾಡಿ ಮಡಿದ ಇಬ್ಬರೂ ಯೋಧರ ಅಪ್ರಕಟಿತ ವೀರಗಲ್ಲಗಳನ್ನು ಇಲ್ಲಿ ಪ್ರಕಟಿಸುತ್ತಿದ್ದೇನೆ. 

Read More »