ಸಮಾಜದ ಮೇಲೆ ಸಿನಿಮಾದ ಪ್ರಭಾವ

Main Article Content

ಅಸ್ಮತ್

Abstract

ಮನುಷ್ಯ ತನ್ನ ಬದುಕಿನ ಪಯಣದಲ್ಲಿ ಅದ್ಬುತವಾದ ವಸ್ತು, ವಿಷಯಗಳನ್ನು ಸೃಷ್ಠಿಸಿಕೊಂಡಿದ್ದಾನೆ. ಅವನ ಕಲ್ಪನಾ ಶಕ್ತಿ, ಪ್ರತಿಭೆ ಇದೆಲ್ಲವು ಜೊತೆಗೂಡಿ ಹುಟ್ಟಿಕೊಂಡ ಮತ್ತೊಂದು ಅದ್ಬುತವೆಂದರೆ ಅದು ಸಿನಿಮಾ. ಮನರಂಜನೆಯ ಉದ್ದೇಶದಿಂದ ಹುಟ್ಟಿಕೊಂಡ ಸಿನಿಮಾವೆಂಬುವುದು ಅದರ ಪರಿಧಿಯನ್ನು ವಿಸ್ತರಿಸಿಕೊಂಡು ಒಂದು ಕಾಲಘಟ್ಟದ ದಾಖಲೆಯಾಗಿ ಸಮಕಾಲೀನ ಪ್ರಜ್ಞೆಯನ್ನು ನಮ್ಮ ಮುಂದಿಡುತ್ತಿದೆ. ಇದರೊಂದಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಮಾಜವನ್ನು ಪ್ರತಿಬಿಂಬಿಸುವ ಮತ್ತು ರೂಪಿಸುವ ಸಾಂಸ್ಕೃತಿಕ ಕಲಾಕೃತಿಯಾಗಿದೆ. ಒಂದು ತಲೆಮಾರನ್ನು ಎಚ್ಚರಿಸುತ್ತಲೇ ಸಮಾಜದ ಬದಲಾವಣೆಗೆ ಸಹಾಯಕವಾಗಿ ಒಂದಷ್ಟು ಪಿಡುಗುಗಳನ್ನು ತೊಲಗಿಸುವ ವೇದಿಕೆಯಾಗಿ ಮಾರ್ಪಾಡಾಗಿದೆ. ಬಹಳ ಮುಖ್ಯವಾಗಿ ಯುವ ಸಮೂಹದ ಮೇಲೆ ಸಿನಿಮಾ ಬೀರುತ್ತಿರುವ ಪ್ರಭಾವವೇನು? ಸಿನಿಮಾ ಕೇವಲ ಮನರಂಜನೆಯ ಮಾಧ್ಯಮವಾಗಿ ಮಾತ್ರ ಉಳಿದಿದೆಯಾ? ನಟ ನಟಿಯರು ಕಲಾವಿದರಾಗಿ ತಮ್ಮ ಜವಬ್ದಾರಿಗಳನ್ನು ಸರಿಯಾಗಿ ನಿರ್ವಹಿಸುತ್ತಿರುವರೇ? ಎಂಬ ವಿಚಾರಗಳ ಜೊತೆಗೆ ಸಿನಿಮಾ ಸಮಾಜದ ಮೇಲೆ ಬೀರುತ್ತಿರುವ ಸಕಾರಾತ್ಮಕ ಮತ್ತು ನಕಾರಾತ್ಮಕ ವಿಚಾರಗಳ ಬಗ್ಗೆ ವಿವರಿಸಲಾಗಿದೆ. 

Article Details

Section

Research Articles

Author Biography

ಅಸ್ಮತ್

ಉಪನ್ಯಾಸಕರು, ಕನ್ನಡ ವಿಭಾಗ, ಶ್ರೀ ಜೆ. ಸಿ. ಬಿ. ಎಂ ಕಾಲೇಜು, ಶೃಂಗೇರಿ, ಚಿಕ್ಕಮಗಳೂರು. 

References

ಪುಟ್ಟಸ್ವಾಮಿ ಕೆ. , (2009), ಸಿನಿಮಾ ಯಾನ, ಹಸಿರು ಪ್ರಕಾಶನ, ಬೆಂಗಳೂರು.

ವಿಠ್ಠಲ್‌ರಾವ್, (2022), ಕನ್ನಡ ಸಿನಿಮಾ ಹೊಸ ಅಲೆ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು.

ಶಂಕರ್ ಎನ್. ಎಸ್., (2018), ಚಿತ್ರಕಥೆ ಹಾಗೆಂದರೇನು? ಕರ್ನಾಟಕ ಚಲನಚಿತ್ರ ಅಕಾಡೆಮಿ, ಬೆಂಗಳೂರು.